ಆತ್ಮನಿರ್ಭರ್ ವುಮೆನ್; ಓಲಾ ಸ್ಕೂಟರ್‌ನಿಂದ 10,000 ಮಹಿಳಾ ಉದ್ಯೋಗಿ ನೇಮಕಾತಿ ಆರಂಭ!

Suvarna News   | Asianet News
Published : Sep 13, 2021, 03:38 PM ISTUpdated : Sep 13, 2021, 06:38 PM IST
ಆತ್ಮನಿರ್ಭರ್ ವುಮೆನ್; ಓಲಾ ಸ್ಕೂಟರ್‌ನಿಂದ 10,000 ಮಹಿಳಾ ಉದ್ಯೋಗಿ ನೇಮಕಾತಿ ಆರಂಭ!

ಸಾರಾಂಶ

ದೇಶದಲ್ಲಿ ಸಂಚಲನ ಮೂಡಿಸಿದ ಓಲಾ  ಎಲೆಕ್ಟ್ರಿಕ್ ಸ್ಕೂಟರ್  ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಘಟಕದಲ್ಲಿ ನೇಮಕಾತಿ ಆರಂಭ 10,000 ಮಹಿಳಾ ಉದ್ಯೋಗಿಗಳ ನೇಮಕ್ಕೆ ಚಾಲನೆ

ಬೆಂಗಳೂರು(ಸೆ.13): ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಸಂಚಲನ ಮೂಡಿಸಿರುವ ಓಲಾ S1 ಹಾಗೂ S1 ಪ್ರೋ ಎಸೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 121 ಕಿ.ಮೀ ಪ್ರಯಾಣದ ರೇಂಜ್ ನೀಡಬಲ್ಲ ಈ ಸ್ಕೂಟರ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದೀಗ ಓಲಾ ಮುಂದಿನ ಹಂತದ ಸ್ಕೂಟರ್ ಉತ್ಪಾದನೆಗೆ ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದೆ.

ಒಂದೇ ದಿನಕ್ಕೆ 1 ಲಕ್ಷ ಬುಕಿಂಗ್; ದಾಖಲೆ ಬರೆದ ಓಲಾ ಎಲೆಕ್ಟ್ರಿಕ್ ಸ್ಕೂಟರ್!

ಓಲಾ ವಿಶ್ವದಲ್ಲೇ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಘಟಕ ಹೊಂದಿದೆ. ಓಲಾ ಸ್ಕೂಟರ್ ಉತ್ಪಾದನೆಗೆ ವೇಗ ಹೆಚ್ಚಿಸಲು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ ಉದ್ಯೋಗಿಗಳ ನೇಮಕ ಮಾಡಿ, ಬೈಕ್ ನಿರ್ಮಾಣಕ್ಕೆ ಹೊಸ ವೇಗ ನೀಡಲು ಮುಂದಾಗಿದೆ. ಆತ್ಮನಿರ್ಭರ್ ಭಾರತ್ ಬಲಪಡಿಸಲು ಆತ್ಮನಿರ್ಭರ್ ಮಹಿಳೆ ಅವಶ್ಯಕತೆ ಇದೆ. ಓಲಾ 10,000 ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡುತ್ತಿದೆ. ಈ ಕುರಿತು ಓಲಾ ಸಿಇಒ ಭವಿಶ್ ಅಗರ್ವಾಲ್ ಘೋಷಿಸಿದ್ದಾರೆ.

 

ಆತ್ಮನಿರ್ಭರ್ ಭಾರತಕ್ಕೆ ಆತ್ಮನಿರ್ಭರ್ ಮಹಿಳೆಯರ ಅಗತ್ಯವಿದೆ. ಓಲಾ ಫ್ಯೂಚರ್ ಫ್ಯಾಕ್ಟರಿಯನ್ನು ಸಂಪೂರ್ಣವಾಗಿ ಮಹಿಳೆಯರಿಂದ ನಡೆಸಲಾಗುವುದು. ಇದಕ್ಕಾಗಿ 10,000 ಮಹಿಳಾ ಉದ್ಯೋಗಿಗಳ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದು ವಿಶ್ವದ ಅತೀ ದೊಡ್ಡ ಮಹಿಳಾ ಕಾರ್ಖಾನೆಯಾಗಲಿದೆ. ಇದರ ಮೊದಲ ಮಹಿಳಾ ಬ್ಯಾಚ್ ಭೇಟಿ ಮಾಡಿದೆ. ಅವರ ಉತ್ಸಾಹವೇ ನನಗೆ ಸ್ಪೂರ್ತಿಯಾಗಿದೆ ಎಂದು ಭವಿಶ್ ಅಗರ್ವಾಲ್ ಟ್ವೀಟ್ ಮೂಲಕ ಹೇಳಿದ್ದಾರೆ.

ಮತ್ತೊಂದು ಗುಡ್‌ನ್ಯೂಸ್ ನೀಡಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್; 10 ಆಕರ್ಷಕ ಬಣ್ಣಗಳಲ್ಲಿ ಲಭ್ಯ!

ಓಲಾ S1 ಹಾಗೂ S1 ಪ್ರೋ ಸ್ಕೂಟರ್ ಸೆಪ್ಟೆಂಬರ್ 8 ರಿಂದ ವಿತರಣೆ ಆರಂಭಗೊಂಡಿದೆ. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಸೆಪ್ಟೆಂಬರ್ 15 ರಿಂದ ಡೆಲಿವರಿ ಆರಂಭಗೊಳ್ಳಲಿದೆ. ಓಲಾ S1 ಸ್ಕೂಟರ್ ಬೆಲೆ 99,999 ರೂಪಾಯಿ. ಇನ್ನು S1 ಪ್ರೋ ಸ್ಕೂಟರ್ ಬೆಲೆ 1,29,999 ರೂಪಾಯಿ. ಈ ಬೆಲೆ ಎಕ್ಸ್ ಶೋ ರೂಂ ಬೆಲೆ ಆಗಿವೆ. ಓಲಾ ಸ್ಕೂಟರ್ ಕೇವಲ 499 ರೂಪಾಯಿ ಬುಕ್ ಮಾಡಬಹುದು. ಓಲಾ S1 ಸ್ಕೂಟರ್ ಪ್ರತಿ ತಿಂಗಳ ಕಂತು 2,999 ರೂಪಾಯಿ ಹಾಗೂ S1 ಪ್ರೋ ಸ್ಕೂಟರ್ ಪ್ರತಿ ತಿಂಗಳ ಕಂತು 3,199 ರೂಪಾಯಿ. ಓಲಾ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 121 ಕಿ.ಮೀ ಮೈಲೇಜ್ ನೀಡಲಿದೆ.   
 

PREV
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್