ದೇಶದ ಪ್ರಮುಖ ದ್ವಿಚಕ್ರವಾಹನ ಉತ್ಪಾದನಾ ಕಂಪನಿಯಾಗಿರುವ ಬಜಾಜ್ ತನ್ನ ಇವಿ ಸ್ಕೂಟರ್ ಚೇತಕ್ ಮಾರಾಟವನ್ನು ಹೆಚ್ಚಿಸುವುದಕ್ಕಾಗಿ ತೆಲಂಗಾಣ ಮತ್ತು ತಮಿಳುನಾಡಿನ ಹೈದ್ರಾಬಾದ್ ಹಾಗೂ ಚೆನ್ನೈನಲ್ಲಿ ಡೀಲರ್‌ಶಿಫ್ ಆರಂಭಿಸಿದೆ. ಈ ಮೊದಲು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಆರಂಭಿಸಿತ್ತು. ಇತ್ತೀಚಿನ ದಿನಗಳಲ್ಲಿ ಇವಿ ಸ್ಕೂಟರ್ ಮಾರಾಟ ಹೆಚ್ಚಾಗುತ್ತಿದ್ದು, ಆ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದೆ.
ಭಾರತದಲ್ಲೀಗ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಭರಾಟೆ ಜೋರಾಗಿದೆ. ಬಹಳಷ್ಟು ಇವಿ ಟೂವ್ಹೀಲರ್ ಉತ್ಪಾದನಾ ಕಂಪನಿಗಳು ಹುಟ್ಟಿಕೊಂಡಿದ್ದು ಸಾಕಷ್ಟು ಆಯ್ಕೆಗಳಲ್ಲಿ ದ್ವಿಚಕ್ರವಾಹನಗಳನ್ನು ಮಾರಾಟ ಮಾಡುತ್ತಿವೆ. ಇದರ ಮಧ್ಯೆಯೇ, ದ್ವಿಚಕ್ರವಾಹನ ಉತ್ಪಾದನೆಯ ದೈತ್ಯ ಕಂಪನಿಗಳಾದ ಬಜಾಜ್, ಟಿವಿಎಸ್‌ಗಳೂ ಕೂಡ ಹಿಂದೆ ಬಿದ್ದಿಲ್ಲ. ಈ ಕಂಪನಿಗಳು ಉತ್ಕೃಷ್ಟ ಇವಿ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.
ಭಾರತೀಯರ ಅಚ್ಚುಮೆಚ್ಚಿನ ಸ್ಕೂಟರ್ ಎನಿಸಿಕೊಂಡಿದ್ದ ಬಜಾಜ್‌ನ ಚೇತಕ್ ಮತ್ತೆ ಇವಿ ಸ್ಕೂಟರ್ ರೂಪದಲ್ಲೀಗ ರಸ್ತೆ ಇಳಿದಿದೆ. ಕಂಪನಿಯು ಈ ಇವಿ ಸ್ಕೂಟರ್ ದೇಶದ ಹಲವು ನಗರಗಳಲ್ಲಿ ಮಾರಾಟಕ್ಕೆ ತೆರೆದಿದೆ. ಕಂಪನಿಯು ಚೇತಕ್ ಎಲೆಕ್ಟ್ರಿಕ್ಸ್ ರಿಟೇಲ್ ಟಚ್ ಪಾಯಿಂಟ್‌ಗಳನ್ನು ಬೇರೆ ಬೇರೆ ನಗರಗಳಲ್ಲಿ ಓಪನ್ ಮಾಡುತ್ತಿದೆ. ಇದೀಗ ತಮಿಳುನಾಡಿನ ಚೆನ್ನೈ ಮತ್ತು ತೆಲಂಗಾಣದ ಹೈದ್ರಾಬಾದ್ ನಗರದಲ್ಲಿ ಬಜಾಜ್ ಚೇತಕ್ ಇವಿ ಸ್ಕೂಟರ್ ಖರೀದಿಸಬಹುದು.
undefined
1,81,754 ಸಿಯಾಜ್, ಎರ್ಟಿಗಾ, ವಿಟಾರಾ ಬ್ರೆಜಾ, ಎಸ್ ಕ್ರಾಸ್, ಎಕ್ಸ್ಎಲ್6 ಕಾರ್ ರಿಕಾಲ್ ಮಾಡಿದ ಮಾರುತಿ ಸುಜುಕಿ!
ಕಂಪನಿಯು ಹೈದರಾಬಾದ್‌ನಲ್ಲಿ ಕುಕಟಪಲ್ಲಿ ಮತ್ತು ಕಾಚಿಗುಡಾ ಸ್ಥಳದಲ್ಲಿ ಇಬ್ಬರು ಡೀಲರ್‌ಗಳನ್ನು ನಿಯೋಜಿಸಿದ್ದು, ಚೆನ್ನೈನಲ್ಲಿ ಚೇತಕ್ ಎಲೆಕ್ಟ್ರಿಕ್ ಡೀಲರ್‌ಶಿಪ್‌ಗಳನ್ನು ಕೊಳತ್ತೂರು ಮತ್ತು ಅಣ್ಣಾ ಸಲೈ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಈ ಮೂಲಕ ಈ ಎರಡೂ ನಗರಗಳಲ್ಲಿ ಚೇತಕ್ ಮಾರಾಟಕ್ಕೆ ವೇದಿಕೆ ಸಜ್ಜಾಗಿದೆ.
ತಮಿಳುನಾಡು ಮತ್ತು ತೆಲಂಗಾಣ ಹೊರತುಪಡಿಸಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಮುಖ ನಗರಗಳಲ್ಲಿ ಬಜಾಜ್ ಚೇತಕ್ ಇವಿ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದೆ. ಪುಣೆ ಮೂಲದ ದ್ವಿಚಕ್ರವಾಹನ ತಯಾರಿಕಾ ಕಂಪನಿ ಬಜಾಜ್ ಆಟೋ, ನಿಧಾನವಾಗಿ ತನ್ನ ಇವಿ ಸ್ಕೂಟರ್ ಅನ್ನು ಬೇರೆ ಬೇರೆ ನಗರಗಳಿಗೆ ತಲುಪಿಸುತ್ತಿದೆ. 2022ರ ಹೊತ್ತಿಗೆ ಬಜಾಜ್ ದೇಶದ 22 ನಗರಗಳಿಗೆ ಚೇತಕ್ ಇವ ಮಾರಾಟ ಮಾಡುವ ಗುರಿಯನ್ನು ಹಾಕಿಕೊಂಡಿದೆ.
ಬಜಾಜ್ ಚೇತಕ್ ಇವಿ ಎರಡು ಮಾದರಿಗಳಲ್ಲಿ ಮಾರಾಟಕ್ಕ ಸಿಗಲಿದೆ. ಅರ್ಬನ್ ಮತ್ತ ಪ್ರೀಮಿಯಂ ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ಕಡಿಮೆ ವಿಶೇಷತೆಗಳನ್ನ ಹೊಂದಿರುವ ಅರ್ಬನ್ ಚೇತಕ್ ಬೆಲೆ 1.42 ಲಕ್ಷ ರೂಪಾಯಿ ಇದ್ದರೆ, ಪ್ರೀಮಿಯಂ ಮಾದರಿ ಬೆಲೆ 1.44 ಲಕ್ಷ ರೂಪಾಯಿಯಾಗಿದೆ. ಈ ಎರಡೂ ಮಾದರಿ ಬೆಲೆಗಳು ಪುಣೆ ಶೋರೂಮ್ ಬೆಲೆಯಾಗಿದೆ ಎಂಬುದನ್ನು ಗಮನಿಸಬೇಕು.
ರಾಯಲ್ ಎನ್‌ಫೀಲ್ಡ್ ಹೊಸ ಕ್ಲಾಸಿಕ್ 350 ಬುಲೆಟ್ ಲಾಂಚ್
ನಾನ್ ರಿಮೋವೇಬಲ್ 3kWh IP67 ಲಿಥಿಯಮ್ ಐಯಾನ್ ಬ್ಯಾಟರಿ ಜತೆಗೆ 3.8 ಕಿಲೋ ವ್ಯಾಟ್ ಮೋಟಾರ್ ಅನ್ನು ಚೇತಕ್ ಹೊಂದಿದೆ. ಈ ಇವಿ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಒಮ್ಮೆ ಚಾರ್ಜ್ ಮಾಡಿದರೆ, ಇದು ಗಂಟೆಗೆ 70 ಕಿ.ಮೀ. ಓಡಬಲ್ಲದು. ಹಾಗೆಯೇ ಇಕೋ ಮೋಡ್‌ನಲ್ಲಿ 95 ಕಿ.ಮೀ.ವರೆಗೂ ಹೋಗಬುಹದು. ನೀವು ಇದನ್ನು ಸಾಂಪ್ರದಾಯಿಕ 5ಎ ಪವರ್ ಸಾಕೆಟ್ ಬಳಸಿಕೊಂಡೇ ಚಾರ್ಜ್ ಮಾಡಬಹುದು.
ಫುಲ್ ಎಲ್ಇಡಿ ಲೈಟನಿಂಗ್, ಇಲ್ಯುಮಿನೇಟೆಡ್ ಸ್ವಿಚ್‌ಗಿಯರ್, ಬ್ಲೂಟೂತ್ ಎನೇಬಲ್ಡ್ ಇನ್ಸುಟ್ರುಮೆಂಟ್ ಕನ್ಸೋಲ್, ಸ್ಮಾರ್ಟ್‌ಫೋನ್ ಆಪ್ ಆಯ್ಕೆ ಸೇರಿದಂತೆ ಅನೇಕ ವಿಶೇಷತೆಗಳನ್ನು ಇದು ಹೊಂದಿದೆ. ಬಜಾಜ್ ಚೇತಕ್ ಇವಿ, ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್ ಮತ್ತು ಎತೇರ್ 450ಎಕ್ಸ್ ಇವಿ ಸ್ಕೂಟರ್‌ಗಳಿಗೆ ತೀವ್ರ ಪೈಪೋಟಿ ನೀಡುವ ಸಾಮರ್ಥ್ಯವನ್ನು ಹೊಂದಿದೆ.
ರೆನೋಗೆ 10 ವರ್ಷ: ಹೊಸ 2021 ಕ್ವಿಡ್ ಲಾಂಚ್, ವಿಶೇಷ ಆಫರ್ಸ್!
ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಸಾಕಷ್ಟ ಲಾಭಗಳಿವೆ. ಹಾಗಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವಿ ವಾಹನಗಳ ಬಳಕೆಗೆ ಸಾಕಷ್ಟು ಯೋಜನೆಗಳನ್ನ ಜಾರಿಗೊಳಿಸುತ್ತಿವೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸಿ ಆ ಮೂಲಕ ಮಾರಾಟ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಇವಿ ವಾಹನಗಳ ಬಳಕೆಯಿಂದ ತೈಲ ಅವಲಂಬನೆ ತಗ್ಗಿಸುವುದು ಮಾತ್ರವಲ್ಲದೇ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು.