ಹೊಸೂರು(ಅ.09) TVS ಮೋಟರ್ ಕಂಪನಿಯು ಇಂದುTVS ಜ್ಯುಪಿಟರ್ 125 ಸ್ಕೂಟರ್ ಬಿಡುಗಡೆ ಮಾಡಿದೆ. 125 ಸಿಸಿ ಎಂಜಿನ್ ಹೊಂದಿರುವ VS ಜ್ಯುಪಿಟರ್ ಹೆಚ್ಚು ಪವರ್, ಹೆಚ್ಚಿನ ಸ್ಥಳಾವಕಾಶ ಹಾಗೂ ಹಲವು ಅತ್ಯಾಧುನಿಕ ಫೀಚರ್ಸ್ ಹೊಂದಿದೆ. ಆಕರ್ಷಕ ವಿನ್ಯಾಸದೊಂದಿಗೆ ನೂತನ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದೆ. ನೂತನ TVS ಜ್ಯುಪಿಟರ್ 125 ಸ್ಕೂಟರ್ ಬೆಲೆ 73,400 ರೂಪಾಯಿ(ಎಕ್ಸ್ ಶೋರೂಂ).
ದಸರಾ ಮುನ್ನ ಟಿವಿಎಸ್‌ನಿಂದ ಮತ್ತೊಂದು ಹೊಸ ಸ್ಕೂಟರ್: ಅದು Jupiter 125 ನಾ?ವಿನ್ಯಾಸ:
TVS ಜ್ಯುಪಿಟರ್ 125 ಸ್ಕೂಟರ್ ಪ್ರಗತಿಶೀಲ ವಿನ್ಯಾಸವಿದೆ. ಕ್ರೋಂ ವರ್ಣವು ಪ್ರೀಮಿಯಂ ನೋಟವನ್ನು ನೀಡಲಿದೆ. ಸ್ಕೂಟರ್‌ನಲ್ಲಿ ಆಕರ್ಷಕ LED ಹೆಡ್‌ಲ್ಯಾಂಪ್, ಫ್ರಂಟ್ ಲೈಟ್ ಗೈಡ್ಸ್ ಮತ್ತು ಆಕರ್ಷಕ ಹಿಂಬದಿಯ ಲ್ಯಾಂಪ್ ಮತ್ತು ರೇಲ್ ರಿಫ್ಲೇಕ್ಟರ್ ಒಳಗೊಂಡಿದೆ. TVS ಜ್ಯುಪಿಟರ್ 125 ವಾಹನದಲ್ಲಿ 3ಡಿ ಎಂಬ್ಲೆಮ್ ಮತ್ತು ಪ್ರೀಮಿಯಂ ಪೇಂಟ್‌ನ ಒಳಾಂಗಣ ಪ್ಯಾನೆಲ್ ಇದೆ. ಡಿಸ್ಕ್ ಮಾದರಿಯಲ್ಲಿ ಡೈಮಂಡ್ ಕಟ್ ಅಲಾಯ್ ಚಕ್ರಗಳಿದ್ದು, ಇದು ಸ್ಕೂಟರ್‌ನ ಒಟ್ಟಾರೆ ನೋಟವನ್ನು ಹೆಚ್ಚಿಸಲಿದೆ.
undefined
ಸಾಮರ್ಥ್ಯ:
ಸ್ಕೂಟರ್‌ನಲ್ಲಿ ಅತ್ಯಧಿಕ ಸಾಮರ್ಥ್ಯದ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್ 124.8 ಸಿಸಿ ಎಂಜಿನ್ ಹೊಂದಿದೆ. ಸೆಮಿ ಡಿಜಿಟಲ್ ಸ್ಪೀಡೊಮೀಟರ್, ಸ್ಮಾರ್ಟ್ ಅಲರ್ಟ್ಸ್, ಮೈಲೇಜ್ ಇಂಡಿಕೇಟರ್ ಒಳಗೊಂಡಿದೆ. TVS ಜ್ಯುಪಿಟರ್ 125 ಇದರ ಜೊತೆಗೆ ಬಾಡಿ ಬ್ಯಾಲೆನ್ಸ್ ಟೆಕ್ನಾಲಜಿ ಹೊಂದಿದ್ದು, ಸವಾರರಿಗೆ ಸುಲಲಿತ ಸಂಚಾರದ ಅನುಭವ ನೀಡಲಿದೆ. ಮುಂಭಾಗದ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ೩ ಸ್ಟೆಪ್ ಹೊಂದಾಣಿಕೆಯ ಹಿಂಬದಿ ಶಾಕ್ಸ್ನಿಂದಾಗಿ ಸರಾಗ ಚಾಲನೆ ಅನುಭವ ಸಿಗಲಿದೆ. ಇದರಲ್ಲಿ ಮೊನೊಟ್ಯೂಬ್ ಕ್ಯಾನಿಸ್ಟರ್ ಗ್ಯಾಸ್ ಚಾರ್ಜಡ್ ಶಾಕ್ಸ್ ಒಳಗೊಂಡಿದೆ.
ಅನುಕೂಲತೆ ಮತ್ತು ಆರಾಮದಾಯಕತೆ:
ನೂತನ TVS ಜ್ಯುಪಿಟರ್ 125 ಗ್ರಾಹಕರ ಅನುಕೂಲತೆ, ಆರಾಮದಾಯಕ ಅನುಭವವನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಲಾಗಿದೆ. ಸ್ಕೂಟರ್‌ನಲ್ಲಿ ಅತಿ ದೊಡ್ಡದಾದ, ಸೀಟಿನಡಿಯ33 ಲೀಟರ್ ಸಾಮರ್ಥ್ಯದ ಸಂಗ್ರಹಣಾ ಸ್ಥಳ ನೀಡಲಾಗಿದೆ. ಎರಡು ಹೆಲ್ಮೆಟ್‌ಗಳನ್ನು ಆರಾಮದಾಯಕವಾಗಿ ಇಡಬಹುದಾಗಿದೆ. ದೊಡ್ಡ ಸೀಟು ಇದ್ದು, ಮುಂದೆ ಆರಾಮದಾಯಕವಾಗಿ ಕಾಲು ಚಾಚಬಹುದಾಗಿದೆ. ಅತ್ಯುತ್ತಮ ಇಂಧನ ಮಿತವ್ಯಯವು ಇದರ ದೊಡ್ಡ ಲಕ್ಷಣವಾಗಿದೆ. ಎಕೊಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನವು ಉನ್ನತ ಮೈಲೇಜ್, ಅತ್ಯುತ್ತಮ ಸ್ಥಿರತೆ, ದೃಢತೆಯನ್ನು ಒಳಗೊಂಡಿದೆ.
ಟಿವಿಎಸ್ ಮೋಟರ್ ಕಂಪನಿಯು ಎಂದಿಗೂ ಮುಖ್ಯವಾಗಿ ನಾಲ್ಕು ಅಂಶಗಳತ್ತ ಗಮನಹರಿಸಲಿದೆ. ಅವುಗಳೆಂದರೆ, ಸ್ಕೂಟರೀಕರಣ, ಪ್ರೀಮಿಯಮೈಸೇಶನ್, ಬ್ರಾಂಡ್‌ನಲ್ಲಿ ಹೂಡಿಕೆ ಮತ್ತು ಹೊಸ ಅನ್ವೇಷಣೆ. 20212ರಲ್ಲಿ ಸ್ಥಾಪನೆಯಾದಗಿನಿಂದ TVS ಜ್ಯುಪಿಟರ್ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿರುವ ವಾಹನವಾಗಿದೆ. ಉದ್ಯಮದಲ್ಲಿಯೇ ಪ್ರಥಮದ್ದಾಗಿ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ ಎಂದು TVS ಮೋಟರ್ ಕಂಪನಿಯ ನಿರ್ದೇಶಕ ಮತ್ತು ಸಿಇಒ ಕೆ.ಎನ್. ರಾಧಾಕೃಷ್ಣನ್ ಹೇಳಿದರು.
ಟಿವಿಎಸ್ ಜ್ಯುಪಿಟರ್ ದೇಶದಲ್ಲಿಯೇ ಹೆಚ್ಚು ಪ್ರೀತಿ ಪಾತ್ರ ಸ್ಕೂಟರ್ ಆಗಿದೆ. ಉದ್ಯಮದಲ್ಲಿಯೇ ಮೊದಲು ಸೀಟಿನಡಿಯ ವಿಶಾಲವಾದ ಎರಡು ಹೆಲ್ಮೆಟ್ ಇಡಬಹುದಾದಷ್ಟು ಸಂಗ್ರಹಣಾ ಸ್ಥಳಾವಕಾಶ, ಅತಿದೊಡ್ಡದಾದ ಸೀಟು, ಉನ್ನತ ಮೈಲೇಜ್ ನೀಡಿದ ಹೆಗ್ಗಳಿಕೆಗೆ ಪಾತ್ರಾವಾಗಿದೆ. ಪ್ರಗತಿಶೀಲವಾದ ನೂತನ ಆಕರ್ಷಕ ವಿನ್ಯಾಸ ಮತ್ತು ಸೌಲಭ್ಯಗಳು ಗ್ರಾಹಕರಿಗೆ ಸಂಚಾರದ ಪ್ರೀಮಿಯಂ ಅನುಭವ ನೀಡಲಿವೆ ಎಂದು ಟಿವಿಎಸ್ ಹಿರಿಯ ಉಪಾಧ್ಯಕ್ಷ ಅನಿರುದ್ಧ ಹಲ್ದಾರ್ ಹೇಳಿದರು.