ಹಬ್ಬದ ಸಂಭ್ರಮ ಡಬಲ್ ಮಾಡಲು ಹೀರೋ X ಪಲ್ಸ್ 200 4 ವೇಲ್ವ್ ಬೈಕ್ ಬಿಡುಗಡೆ!

By Suvarna News  |  First Published Oct 8, 2021, 10:10 PM IST
  • ಹಬ್ಬದ ಸಂಭ್ರಮದಲ್ಲಿ ಹೀರೋ ಮೊಟೋಕಾರ್ಪ್ ಬೈಕ್
  • ಹೀರೋ X ಪಲ್ಸ್ 200 4 ವೇಲ್ವ್ ಬೈಕ್ ಬಿಡುಗಡೆ
  • ಭಾರತದ ಕೈಗೆಟುವ ಬೆಲೆಯ ಅಡ್ವೆಂಚರ್ ಬೈಕ್

ಬೆಂಗಳೂರು(ಅ.08):  ಹಬ್ಬದ ಸಂಭ್ರಮ ಇಮ್ಮಡಿ ಮಾಡಲು ಹೀರೋ ಮೋಟೋಕಾರ್ಪ್ ಹೊಚ್ಚ ಹೊಸ ಹೀರೋ X ಪಲ್ಸ್ 200 4 ವೇಲ್ವ್ ಬೈಕ್ ಬಿಡುಗಡೆ ಮಾಡಿದೆ. ಭಾರತದ ಮೊತ್ತ ಮೊದಲ 200 ಸಿಸಿ ಅಡ್ವೆಂಚರ್ ಬೈಕ್ ಇದಾಗಿದೆ. ಆಫ್ ರೋಡ್ ಬೈಕ್, ಅತ್ಯಾಧುನಿಕ ತಂತ್ರಜ್ಞಾನ, ಭಿನ್ನ ಸ್ಟೈಲ್‌ನೊಂದಿಗೆ  ಹೀರೋ X ಪಲ್ಸ್ 200 4 ವೇಲ್ವ್ ಬೈಕ್ ಬಿಡುಗಡೆಯಾಗಿದೆ.

ಕಡಿಮೆ ಬೆಲೆ, ಅತ್ಯಾಧುನಿಕ ತಂತ್ರಜ್ಞಾನದ ಗ್ಲಾಮರ್ XTEC ಬೈಕ್ ಪರಿಚಯಿಸಿದ ಹೀರೋ!

Tap to resize

Latest Videos

undefined

ಆಧುನಿಕ ತಂತ್ರಜ್ಞಾನದ  ಸಾಹಸ ಅನುಭವದ ಅದರ DNA ಮೇಲೆ ನಿರ್ಮಾಣಗೊಂಡಿರುವ ಈ ಹೊಸ ಮೋಟಾರುಸೈಕಲ್,200 CC ಆಯಿಲ್ ಕೂಲ್ಡ್  ಇಂಜಿನ್ ಹೊಂದಿದೆ. ಶೇಕಡಾ 6 ಅಧಿಕ ಶಕ್ತಿ ಮತ್ತು 5% ವರ್ಧಿತ ಟಾರ್ಕ್ ನೀಡುವ ಮೂಲಕ ಅತಿವೇಗದಲ್ಲೂ ಸುಖಮಯವಾದ ಮತ್ತು ಒತ್ತಡರಹಿತ ಸವಾರಿ ಒದಗಿಸುತ್ತದೆ.

ಇದರ ಜೊತೆಗೆ, ನವೀಕೃತಗೊಂಡ ಆಯಿಲ್ ಕೂಲಿಂಗ್  ಸಿಸ್ಟಮ್, ಸುಧಾರಿತ ಆಸನ ಪ್ರೊಫೈಲ್, ಮತ್ತು ನವೀಕರಣಗೊಂಡ ಎಲ್‌ಇಡಿ ಹೆಡ್‌ಲೈಟ್‌ಗಳು, ಅಪರಿಚಿತ ಪ್ರದೇಶಗಳನ್ನು ಶೋಧಿಸುವ ಸಮಯದಲ್ಲೇ ಮೋಟಾರುಸೈಕಲನ್ನು  ಹೆಚ್ಚು ನಿಖರವಾದ ಸವಾರ ಸಂಗಾತಿಯಾಗಿಸುತ್ತದೆ. ನೂತನ ಹೀರೋ X ಪಲ್ಸ್ 200 4 ವೇಲ್ವ್ ಬೈಕ್ 1,28,150 ರೂಪಾಯಿ(ಎಕ್ಸ್ ಶೋ ರೂಂ)  

ಕಾರಿನಂತೆ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಹೊಸ ಮಾಸ್ಟ್ರೋ ಎಡ್ಜ್ 125 ಬಿಡುಗಡೆ!
 
ಕಾರ್ಯಕ್ಷಮತೆ-ನಿರ್ದೇಶಿತ, ತಂತ್ರಜ್ಞಾನ ಚಾಲಿತ ಹಾಗೂ ಯುವಜನತೆ ಕೇಂದ್ರೀಕೃತವಾದ ವರ್ಗವಾಗಿರುವ ಪ್ರೀಮಿಯಮ್ ಮೋಟಾರುಸೈಕಲ್ ವರ್ಗದಲ್ಲಿ ಅತ್ಯುನ್ನತವಾಗಿದೆ.  ಕಡಿಮೆ ಅವದಿಯಲ್ಲಿ ಗ್ರಾಹಕರ ಅತ್ಯುತ್ತಮ ಹಾಗೂ ಕೈಗೆಟುಕುವ ಬೆಲೆಯ ಅಡ್ವೆಂಚರ್ ಬೈಕ್ ಎನಿಸಿಕೊಂಡಿದೆ. 
 
ಅತ್ಯಾಧುನಿಕ ತಂತ್ರಜ್ಞಾನದ ಸಾಹಸ 
ಇತ್ತೀಚಿನ ತಂತ್ರಜ್ಞಾನದೊಡನೆ ಸಜ್ಜಾಗಿರುವ ಹೀರೋ X ಪಲ್ಸ್ 200 4 ವೇಲ್ವ್ ಬೈಕ್, ಹೆಚ್ಚಿನ ದೂರಕ್ಕಾಗಿ ಆರಾಮದಾಯಕ ಸವಾರಿಯನ್ನು ಖಾತರಿಪಡಿಸುತ್ತದೆ. ವರ್ಧಿತ LED ಹೆಡ್‌ಲೈಟ್,  ರಾತ್ರಿಯಲ್ಲಿ ಉತ್ತಮ ಬೆಳಕಿನ ಮೂಲಕ ಸಂಚಾರ ಸುಗಮವಾಗಿಸುತ್ತದೆ. 

ಭಾರತದ ಅತ್ಯಂತ ಕಡಿಮೆ ಬೆಲೆ ಬೈಕ್ ಹೀರೋ HF 100 ಬಿಡುಗಡೆ!
 
ನೂತ ಬೈಕ್ ಸ್ಮಾರ್ಟ್‌ಫೋನ್ ಕನೆಕ್ಟ್ ಹೊಂದಿದೆ.  ಸಂಪೂರ್ಣ  ಡಿಜಿಟಲ್ ಎಲ್‌ಸಿಡಿ ಕ್ಲಸ್ಟರ್, ನ್ಯಾವಿಗೇಶನ್, ಗೇರ್ ಇಂಡಿಕೇಟರ್, ಎಕೊ ಮೋಡ್ ಹಾಗೂ ಎರಡು ಟ್ರಿಪ್ ಮೀಟರ್‌ಗಳು ಮತ್ತುಸಿಂಗಲ್ ಚಾನೆಲ್ ಎಬಿಎಸ್ ಮುಂತಾದ ವರ್ಗದಲ್ಲೇ ಮೊಟ್ಟಮೊದಲನೆಯದಾದ ಅಂಶಗಳನ್ನು ಸಾಮಾನ್ಯ ಅಳವಡಿಕೆಗಳನ್ನಾಗಿ ಹೊಂದಿದೆ.

ಆನ್/ಆಫ್-ರೋಡ್ ಸಿದ್ಧತೆ
ದ್ವಂದ್ವೋದ್ದೇಶದ ಟೈರ್‌ಗಳು,  ಮಾನೋ-ಶಾಕ್ ಸಸ್ಪೆನ್ಶನ್, 825 MM ಸೀಟಿನ ಎತ್ತರ,ಮತ್ತು 220MM ಅಧಿಕ ಗ್ರೌಂಡ್ ಕ್ಲಿಯರೆನ್ಸ್, ಸಾಹಸಯಮಯ ಸವಾರರಿಗೆ ಸರ್ವಾಂಗೀಣ  ಪ್ಯಾಕೇಜ್ ಒದಗಿಸುತ್ತದೆ. 

ಹಗಲೂ  ರಾತ್ರಿ ಸವಾರಿ ಮಾಡಿ
ವರ್ಧಿತ ಪ್ರಯಾಣ  ಸಾಮರ್ಥ್ಯಕ್ಕಾಗಿ ಮೋಟಾರುಸೈಕಲ್, ಪಿಲಿಯನ್ ಸವಾರರು ಕುಳಿತಿದ್ದರೂ, ಲಗೇಜ್ ಹೊರುವುದಕ್ಕೆ ಬಂಗೀ ಹುಕ್ಸ್ ಇರುವ ಲಗೇಜ್ ಪ್ಲೇಟ್ ಒದಗಿಸುತ್ತದೆ. ಸುಧಾರಿತ ಸೀಟ್ ಕಂಫರ್ಟ್ ಪ್ರತಿಯೊಂದು ಕಿಲೋಮೀಟರ್ ಹೆಚ್ಚು  ವಿಶ್ರಾಂತವಾಗಿ ಮತ್ತು ಪ್ರಯಾಸರಹಿತವನ್ನಾಗಿ ಮಾಡುತ್ತದೆ. ರಕ್ಷಣೆ ನೀಡುವ ವಿಂಡ್‌ಶೀಲ್ಡ್ ಉತ್ತಮ ಗಾಳಿ ಮತ್ತು ಹವಾಮಾನ ರಕ್ಷಣೆ ಒದಗಿಸುವುದರ ಜೊತೆಗೆ  ಒಟ್ಟಾರೆ ಸವಾರಿ ಸುಖವನ್ನೂ ನೀಡುತ್ತದೆ. ಯುಎಸ್‌ಬಿ  ಚಾರ್ಜರ್,  ಮುಂಬದಿ ಹಾಗೂ ಹಿಂಬದಿಯ  ಪೆಟಲ್ ಡಿಸ್ಕ್  ಬ್ರೇಕ್‌ಗಳು ಸಮರ್ಥವಾಗಿ ಬ್ರೇಕ್ ಹಾಕಲು ನೆರವಾಗುತ್ತವೆ.

click me!