TVS iQube ಹೊಸ ಫೀಚರ್ಸ್, ಗರಿಷ್ಠ ಮೈಲೇಜ್, ಟಿವಿಎಸ್ iಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

By Suvarna News  |  First Published May 19, 2022, 3:39 PM IST
  • ಒಂದು ಚಾರ್ಜ್‌ನಲ್ಲಿ 140 ಕಿ.ಮೀ ಮೈಲೇಜ್ ರೇಂಜ್
  • 11ಬಣ್ಣಗಳಲ್ಲಿ ಮತ್ತು 3ಚಾರ್ಜಿಂಗ್ ಆಯ್ಕೆಗಳಲ್ಲಿ ಲಭ್ಯ
  • ನೂತನ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ

ಬೆಂಗಳೂರು(ಮೇ.19): ಟಿವಿಎಸ್ ಮೋಟಾರ್ ಇಂದು ಮೂರು ಅವತಾರಗಳಲ್ಲಿ ಹೊಸ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಇದು ಒಂದೇ ಚಾರ್ಜ್‌ನಲ್ಲಿ 140  ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ.  ಅದು 7 ಇಂಚುಗಳ ಟಿಎಫ್‌ಟಿ ಟಚ್ ಸ್ಕ್ರೀನ್ ಮತ್ತು ಕ್ಲೀನ್ UI, ಇನ್ಫಿನಿಟಿ ಥೀಮ್ ವೈಯಕ್ತೀಕರಣ, ಧ್ವನಿ ಸಹಾಯ ಮತ್ತು ಟಿವಿಎಸ್ ಐಕ್ಯೂಬ್ ಅಲೆಕ್ಸಾ ಸ್ಕಿಲ್ ಸೆಟ್, ಅರ್ಥಗರ್ಭಿತ ಮ್ಯೂಸಿಕ್ ಪ್ಲೇಯರ್ ಕಂಟ್ರೋಲ್, ಔಖಿಂ ಅಪ್‌ಡೇಟ್‌ಗಳು, ಪ್ಲಗ್ ಅಂಡ್ ಪ್ಲೇ ಕ್ಯಾರಿ ಚಾರ್ಜರ್, ಜೊತೆಗೆ ವೇಗದ ಚಾರ್ಜಿಂಗ್, ವಾಹನದ ಆರೋಗ್ಯ ಮತ್ತು ಸುರಕ್ಷತೆ ಅಧಿಸೂಚನೆಗಳು, ಬಹು ಬ್ಲೂಟೂತ್ ಮತ್ತು ಕ್ಲೌಡ್ ಕನೆಕ್ಟಿವಿಟಿ ಸಂಪರ್ಕಿತ ಆಯ್ಕೆ, 32ಲೀಟರ್ ಶೇಖರಣಾ ಸ್ಥಳ ಮತ್ತಿತರ ವೈಶಿಷ್ಟ್ಯಗಳನ್ನು ಹೊಂದಿದೆ. 

ಟಿವಿಎಸ್ ಐಕ್ಯೂಬ್ ಮತ್ತು ಟಿವಿಎಸ್ ಐಕ್ಯೂಬ್ S ನ ಮೂರು ರೂಪಾಂತರಗಳು ಆಕರ್ಷಕ ಬೆಲೆಯಲ್ಲಿ ಅಂದರೆ ಕ್ರಮವಾಗಿ ರೂ 98,564 ಮತ್ತು ರೂ. 1,08,690 (ಆನ್-ರೋಡ್ ದೆಹಲಿ, ಫೇಮ್ ಮತ್ತು ರಾಜ್ಯ ಸಬ್ಸಿಡಿ ಸೇರಿದಂತೆ) ಗೆ ಲಭ್ಯ. ಟಿವಿಎಸ್ ಐಕ್ಯೂಬ್ ಸರಣಿಯು 11ಬಣ್ಣಗಳಲ್ಲಿ ಮತ್ತು 3ಚಾರ್ಜಿಂಗ್ ಆಯ್ಕೆಗಳಲ್ಲಿ 3 ರೂಪಾಂತರಗಳ ಆಯ್ಕೆಯನ್ನು ನೀಡುತ್ತದೆ.

Latest Videos

undefined

ಐಕ್ಯೂಬ್‌ ಎಂಬ ಸುತ್ತೂರು ಸುಂದರಿ: 75 km ಸುತ್ತಾಡಿಸಲಿಕ್ಕೆ ಸ್ಕೂಟರ್‌ ಸನ್ನದ್ಧ!

ಹೊಸ ಟಿವಿಎಸ್ ಐಕ್ಯೂಬ್ ST 7 ಇಂಚುಗಳ ಟಚ್ ಸ್ಕ್ರೀನ್ ಆಧಾರಿತ ಆಕರ್ಷಕ ಯುಐ ಮತ್ತು ವೈಯಕ್ತೀಕರಿಸಿದ ಥೀಮ್‌ಗಳು, ಮ್ಯೂಸಿಕ್ ಪ್ಲೇಯರ್ ಕಂಟ್ರೋಲ್, ವಾಯ್ಸ್ ಅಸಿಸ್ಟ್ ಮತ್ತು ಟಿವಿಎಸ್ ಐಕ್ಯೂಬ್ ಅಲೆಕ್ಸಾ ಸ್ಕಿಲ್‌ಸೆಟ್, ವಾಹನದ ಆರೋಗ್ಯ ಮತ್ತು ಭದ್ರತೆ, OTA ಅಪ್‌ಡೇಟ್‌ಗಳು, ವೇಗದ ಚಾರ್ಜಿಂಗ್‌ಗಾಗಿ ವರ್ಗದಲ್ಲೇ ಪ್ರಮುಖ ಎನಿಸಿದ 1.5 kW ಆಫ್- ಬೋರ್ಡ್ ಪ್ಲಗ್- ಅಂಡ್ - ಪ್ಲೇ ಚಾರ್ಜರ್‌ನ ಆಯ್ಕೆಯೊಂದಿಗೆ ಸಂಪರ್ಕಿತ ವೈಶಿಷ್ಟ್ಯಗನ್ನು ಹೊಂದಿದೆ.

ದೃಢವಾದ ಮತ್ತು ವಿಶ್ವಾಸಾರ್ಹವಾದ ಟಿವಿಎಸ್ ಮೋಟರ್‌ನ ಇಂಜಿನಿಯರಿಂಗ್ ಸಾಮರ್ಥ್ಯಗಳಿಂದ ಬೆಂಬಲಿತವಾಗಿರುವ ಟಿವಿಎಸ್ ಐಕ್ಯೂಬ್ ದೃಢವಾದ ಪರೀಕ್ಷೆಯ ಫಲವಾಗಿದ್ದು, ಉತ್ತಮವಾಗಿ ನೆಲೆಗೊಂಡಿರುವ ನೆಟ್‌ವರ್ಕ್ ಬೆಂಬಲ, ಸಂಬಂಧ ವ್ಯವಸ್ಥಾಪಕ ಮತ್ತು ಸಮಗ್ರ ಡಿಜಿಟಲ್ ಪರಿಸರ ವ್ಯವಸ್ಥೆಯಿಂದ ಪೂರಕವಾಗಿದೆ.

ಹೊಸ ಟಿವಿಎಸ್ ಐಕ್ಯೂಬ್ ಬಿಡುಗಡೆಯು ಹಿಂದೆAದೂ ಇಲ್ಲದ ಬುದ್ಧಿವಂತ ಮತ್ತು ವೈಯಕ್ತಿಕಗೊಳಿಸಿದ ಸಂಪರ್ಕದ ಅನುಭವದೊಂದಿಗೆ ವಿಶ್ವದರ್ಜೆಯ ಇವಿ ತಂತ್ರಜ್ಞಾನವನ್ನು ನೀಡುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಟಿವಿಎಸ್ ಮೋಟಾರ್ ಈಗ ಹತ್ತು ವರ್ಷಗಳಿಂದ ಎಲೆಕ್ಟ್ರಿಕ್ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತಿದೆ ಮತ್ತು ಟಿವಿಎಸ್ ಐಕ್ಯೂಬ್ ನಮ್ಮ ಸಾವಿರಾರು ಗ್ರಾಹಕರಿಗೆ ಸಾಟಿಯಿಲ್ಲದ ಎಲೆಕ್ಟ್ರಿಕ್ ವಾಹನ ಸವಾರಿ ಅನುಭವವನ್ನು ಒದಗಿಸಿದೆ. ಟಿವಿಎಸ್ ಮೋಟಾರ್ ನಮ್ಮ ನಾವೀನ್ಯತೆಗಳು ಮತ್ತು ಸುಧಾರಿತ ತಂತ್ರಜ್ಞಾನದ ಕೊಡುಗೆಗಳೊಂದಿಗೆ ಸಂಪರ್ಕಿತ ಚಲನಶೀಲತೆ ಮತ್ತು ಇವಿ ಯಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸುವುದನ್ನು ಮುಂದುವರಿಸುತ್ತದೆ ಎಂದು  ಟಿವಿಎಸ್ ಮೋಟಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಸುದರ್ಶನ್ ವೇಣು ಹೇಳಿದರು.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

"ಅತ್ಯಾಕರ್ಷಕ ಎಲ್ಲಾ ಹೊಸ ಟಿವಿಎಸ್ ಐಕ್ಯೂಬ್ ಸರಣಿಯು ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ಒದಗಿಸುತ್ತದೆ. ಹೊಸ ಟಿವಿಎಸ್ ಐಕ್ಯೂಬ್ ಸರಣಿಯು ಹೆಚ್ಚಿನ ಶ್ರೇಣಿಯ ಜೊತೆಗೆ ಬಹು ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ ಮತ್ತು ವರ್ಗದಲ್ಲೇ ಪ್ರಮುಖ ಎನಿಸಿದ ಡಿಸ್‌ಪ್ಲೇ ಮತ್ತು ಯುಐ ಆಯ್ಕೆಗಳೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ, ಇದು ಹೊಸ ಯುಗದ ಸಂಪರ್ಕಿತ ವೈಶಿಷ್ಟ್ಯಗಳು, ಅಪ್ಲಿಕೇಶನ್‌ಗಳು ಮತ್ತು ಸಂಪರ್ಕಿತ ಸಾಧನದ ಅನುಭವದೊಂದಿಗೆ ಲೋಡ್ ಆಗಿದೆ. ಟಿವಿಎಸ್ ಮೋಟರ್‌ನ ಗುಣಮಟ್ಟದ ಭರವಸೆಯನ್ನು ಇನ್ನಷ್ಟು ಬಲಪಡಿಸಲು ನಮ್ಮ ವ್ಯಾಪಕವಾದ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಮೌಲ್ಯೀಕರಣ ಪ್ರಕ್ರಿಯೆಯ ಮೂಲಕ ನಾವು ಹೊಸ ಟಿವಿಎಸ್ ಐಕ್ಯೂಬ್ ಅನ್ನು ಅಭಿವೃದ್ಧಿಪಡಿಸಿದ್ದೇವೆ. ದೂರಗಾಮಿ ನೆಟ್‌ವರ್ಕ್ ಮತ್ತು ಪರಿಸರ ವ್ಯವಸ್ಥೆಯೊಂದಿಗೆ ನಾವು ಉತ್ತಮ ಗ್ರಾಹಕ ತೃಪ್ತಿ ಮತ್ತು ಭರವಸೆಯನ್ನು ನೀಡುತ್ತೇವೆ ಎಂದು ನಾವು ದೃಢವಾಗಿ ನಂಬುತ್ತೇವೆ ಎಂದು ಟಿವಿಎಸ್ ಮೋಟಾರ್  ಉಪಾಧ್ಯಕ್ಷ ಮನು ಸಕ್ಸೇನಾ ಹೇಳಿದರು.

ಟಿವಿಎಸ್ ಐಕ್ಯೂಬ್  ST
ಟಾಪ್- ಆಫ್- ಲೈನ್ ರೂಪಾಂತರ ಎನಿಸಿದ  ಟಿವಿಎಸ್ ಐಕ್ಯೂಬ್  ST, ಟಿವಿಎಸ್ ಮೋಟಾರ್ ವಿನ್ಯಾಸಗೊಳಿಸಿದ    5.1 kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ ಮತ್ತು ವರ್ಗದಲ್ಲೇ ಅತ್ಯುತ್ತಮ ಎನಿಸಿದ ಪ್ರತಿ ಚಾರ್ಜ್ಗೆ 140 ಕಿಲೋಮೀಟರ್ ಆನ್- ರೋಡ್ ಶ್ರೇಣಿಯನ್ನು ನೀಡುತ್ತದೆ.

ಟಿವಿಎಸ್ ಐಕ್ಯೂಬ್ ST ಹಿಂದೆದೂ ಲಭ್ಯವಿರದ ಇಂಟೆಲಿಜೆಂಟ್ ರೈಡ್ ಕನೆಕ್ಟಿವಿಟಿ ಸೌಲಭ್ಯಗಳನ್ನು ಹೊಂದಿದ್ದು, ಜಾಯ್‌ಸ್ಟಿಕ್ ಇಂಟರಾಕ್ಟಿವಿಟಿ, ಸಂಗೀತ ನಿಯಂತ್ರಣ, ವಾಹನ ಆರೋಗ್ಯ, 4ಜಿ ಟೆಲಿಮ್ಯಾಟಿಕ್ಸ್ ಮತ್ತು  ST  ಅಪ್‌ಡೇಟ್‌ಗಳನ್ನು ಒಳಗೊಂಡ 7 ಇಂಚುಗಳ ಟಿಫ್‌ಟಿ ಟಚ್  ಸ್ಕ್ರೀನ್,  ಪೂರ್ವಭಾವಿ ಅಧಿಸೂಚನೆಗಳನ್ನು ನೀಡುತ್ತದೆ. ಸ್ಕೂಟರ್ ಅನಂತ ಥೀಮ್ ವೈಯಕ್ತೀಕರಣ, ಧ್ವನಿ ಸಹಾಯ ಮತ್ತು ಟಿವಿಎಸ್ ಐಕ್ಯೂಬ್ ಅಲೆಕ್ಸಾ ಸ್ಕಿಲ್ ಸೆಟ್ ಆಯ್ಕೆಯನ್ನೂ ನೀಡುತ್ತದೆ.

ಟಿವಿಎಸ್ ಐಕ್ಯೂಬ್  S ನಾಲ್ಕು ಹೊಸ ಅಲ್ಟ್ರಾ- ಪ್ರೀಮಿಯಂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ ಮತ್ತು 5.1 kWವೇಗದ ಚಾರ್ಜಿಂಗ್ ಮತ್ತು 32  ಲೀಟರ್‌ನ ಉದಾರವಾದ ಎರಡು- ಹೆಲ್ಮೆಟ್ ಸೀಟಿನ ಕೆಳಗಡೆ ಸಂಗ್ರಹಣೆ ಅವಕಾಶದೊಂದಿಗೆ ಬರುತ್ತದೆ.

ಟಿವಿಎಸ್ ಐಕ್ಯೂಬ್ S
ಟಿವಿಎಸ್ ಐಕ್ಯೂಬ್ S ರೂಪಾಂತರವು ಟಿವಿಎಸ್ ಮೋಟಾರ್ ವಿನ್ಯಾಸದ3.4 kWh ಬ್ಯಾಟರಿ ನಿರ್ದಿಷ್ಟತೆಯೊಂದಿಗೆ ಬರುತ್ತದೆ ಮತ್ತು ಪ್ರತಿ ಚಾರ್ಜ್‌ಗೆ ಪ್ರಾಯೋಗಿಕ ಎನಿಸಿದ 100 ಕಿ.ಮೀ, ಆನ್- ರೋಡ್ ಶ್ರೇಣಿಯನ್ನು ನೀಡುತ್ತದೆ.

ಟಿವಿಎಸ್ ಐಕ್ಯೂಬ್ S ವಾಹನವು ಸಂವಹನ, ಸಂಗೀತ ನಿಯಂತ್ರಣ, ಥೀಮ್ ವೈಯಕ್ತೀಕರಣ, ವಾಹನ ಆರೋಗ್ಯ ಸೇರಿದಂತೆ ಪೂರ್ವಭಾವಿ ಅಧಿಸೂಚನೆಗಳಿಗಾಗಿ ಅರ್ಥಗರ್ಭಿತ 5ವೇ ಜಾಯ್‌ಸ್ಟಿಕ್‌ನೊಂದಿಗೆ 7 ಇಂಚುಗಳ ಟಿಎಫ್‌ಟಿ ಸೌಲಭ್ಯವನ್ನು ಹೊಂದಿದೆ.

ಟಿವಿಎಸ್ ಐಕ್ಯೂಬ್ S ನಾಲ್ಕು ಹೊಸ ಬಣ್ಣ ರೂಪಾಂತರಗಳಲ್ಲಿ ಲಭ್ಯವಿದೆ.

ಟಿವಿಎಸ್ ಐಕ್ಯೂಬ್
ಟಿವಿಎಸ್ ಐಕ್ಯೂಬ್ ಬೇಸ್ ಆವೃತ್ತಿಯು ಟಿವಿಎಸ್ ಮೋಟಾರ್ ವಿನ್ಯಾಸಗೊಳಿಸಿದ 3.4 kWhಬ್ಯಾಟರಿ ನಿರ್ದಿಷ್ಟತೆಯನ್ನು ಹೊಂದಿದೆ ಮತ್ತು ಪ್ರತಿ ಚಾರ್ಜ್ಗೆ ಪ್ರಾಯೋಗಿಕ ಎನಿಸಿದ 100 ಕಿ.ಮೀ. ಆನ್- ರೋಡ್ ಶ್ರೇಣಿಯನ್ನು ನೀಡುತ್ತದೆ, 5 ಇಂಚುಗಳ ಟಿಎಫ್‌ಟಿ ಜೊತೆಗೆ ಟರ್ನ್- ಬೈ- ಟರ್ನ್ ನ್ಯಾವಿಗೇಷನ್ ಸಹಾಯವನ್ನು ನೀಡುತ್ತದೆ.

ಟಿವಿಎಸ್ ಐಕ್ಯೂಬ್ ಬೇಸ್ ರೂಪಾಂತರವು ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಟಿವಿಎಸ್ SMARTXONNECT ಪ್ಲಾಟ್‌ಫಾರ್ಮ್ ಅನ್ನು ಸುಧಾರಿತ ನ್ಯಾವಿಗೇಷನ್ ಸಿಸ್ಟಮ್, ಟೆಲಿಮ್ಯಾಟಿಕ್ಸ್ ಯುನಿಟ್, ಕಳ್ಳತನ ನಿಗ್ರಹ, ಮತ್ತು ಜಿಯೋಫೆನ್ಸಿಂಗ್ ವೈಶಿಷ್ಟ್ಯಗಳೊಂದಿಗೆ ವರ್ಧಿಸಲಾಗಿದೆ. ಟಿವಿಎಸ್ ಐಕ್ಯೂಬ್ ಅಲೆಕ್ಸಾ ಸ್ಕಿಲ್ ಸೆಟ್ ನಮ್ಮ ಗ್ರಾಹಕರು ಪ್ರಮುಖ ಮಾಹಿತಿಯನ್ನು ಪಡೆಯಲು ಧ್ವನಿ ಆಜ್ಞೆಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ.

click me!