ಜೈಪುರ(ಮೇ.14): ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ರಿವರ್ಸ್ ಗೇರ್‌ನಿಂದ ಮತ್ತೊಂದು ದುರ್ಘಟನೆ ಸಂಭವಿಸಿದ್ದು, ಓಲಾ ಮತ್ತಷ್ಟುವಿವಾದಗಳ ಸುಳಿಗೆ ಸಿಲುಕಿಕೊಂಡಿದೆ. ರಿವರ್ಸ್‌ಗೇರ್‌ನಲ್ಲಿ ಅತ್ಯಂತ ವೇಗವಾಗಿ ಸ್ಕೂಟರ್ ಚಲಿಸಿದ ಕಾರಣ ನಿಯಂತ್ರಣ ತಪ್ಪಿ ಬಿದ್ದು 65 ವರ್ಷದ ವೃದ್ಧರೊಬ್ಬರ ತಲೆಗೆ ಪೆಟ್ಟು ಬಿದ್ದ ಘಟನೆ ರಾಜಸ್ಥಾನದ ಜೋಧ್‌ಪುರ್‌ನಲ್ಲಿ ನಡೆದಿದೆ.
ವೃದ್ಧನ ತಲೆಗೆ ಗಂಭೀರ ಗಾಯಗಳಾಗಿದ್ದು, 10 ಹೊಲಿಗೆಗಳನ್ನು ಹಾಕಲಾಗಿದೆ. ‘ಓಲಾ ಎಲೆಕ್ಟ್ರಕ್ ಸ್ಕೂಟರ್‌ನ ಸಾಫ್‌್ಟವೇರ್ ಸಮಸ್ಯೆಯಿಂದಾಗಿ ಹಿಮ್ಮುಖವಾಗಿ ವೇಗವಾಗಿ ಚಲಿಸಿದ್ದರಿಂದ ನನ್ನ ತಂದೆಗೆ ಗಂಭೀರ ಗಾಯವಾಗಿದೆ. ಅವರ ಎಡಭುಜ ಮುರಿದುಹೋಗಿದೆ’ ಎಂದು ಅವರ ಮಗ ಹೇಳಿದ್ದಾರೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ರಿವರ್ಸ್ ಗೇರ್‌ನಲ್ಲಿ ಒಮ್ಮೊಮ್ಮೆ ವೇಗವಾಗಿ ಚಲಿಸುತ್ತದೆ ಎಂದು ಬಹಳಷ್ಟುಜನರು ದೂರು ಸಲ್ಲಿಸಿದ್ದಾರೆ.
ಭವಿಷ್ಯದಲ್ಲಿ ಓಲಾ ಸ್ಕೂಟರ್‌ಗೆ ಬೆಂಕಿ ಸಾಧ್ಯತೆ ಇದೆ, ಆದರೆ ವಿರಳ: ಕಂಪನಿ
ಓಲಾ ಸ್ಕೂಟರ್‌ಗೆ ಕತ್ತೆ ಕಟ್ಟಿಮೆರವಣಿಗೆ!
ಹೊಸ ಓಲಾ ಇ-ಸ್ಕೂಟರ್ ಖರೀದಿಸಿದ ಒಂದು ವಾರದೊಳಗೆ ಸ್ಥಗಿತಗೊಂಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಹಾರಾಷ್ಟ್ರ ಮೂಲದ ಸಚಿನ್ ಗಿಟ್ಟೆಎಂಬುವವನು ಓಲಾ ವಾಹನಕ್ಕೆ ಕತ್ತೆಯನ್ನು ಕಟ್ಟಿಮೆರವಣಿಗೆ ನಡೆಸಿದ್ದಾನೆ.
ಇತ್ತೀಚೆಗೆ ಓಲಾ ಸ್ಕೂಟರ್‌ವೊಂದಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಹೀಗಾಗಿ 1441 ವಾಹನಗಳನ್ನು ಓಲಾ ಹಿಂಪಡೆದಿತ್ತು. ಈ ನಡುವೆ, ಕತ್ತೆಯು ಓಲಾ ವಾಹನವನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಓಲಾ ವಾಹನದ ಮೇಲೆ ‘ಈ ಕಂಪನಿಯನ್ನು ನಂಬಬೇಡಿ. ಓಲಾ ವಾಹನ ಖರೀದಿಸಬೇಡಿ’ ಎಂದು ಪೋಸ್ಟರ್ ಅಂಟಿಸಲಾಗಿದೆ.
‘ಓಲಾ ಇ-ವಾಹನ ಖರೀದಿಸಿದ 6 ದಿನಗಳಲ್ಲೇ ಸ್ಥಗಿತಗೊಂಡಿದೆ. ಈ ಬಗ್ಗೆ ಕಂಪನಿಗೆ ತಿಳಿಸಿದಾಗಲೂ ಗ್ರಾಹಕ ಸೇವಾ ವಿಭಾಗದವರು ಯಾವುದೇ ಪರಿಹಾರ ನೀಡಲು ಮುಂದಾಗಿಲ್ಲ’ ಎಂದು ಸಚಿನ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಓಲಾ ಕಂಪನಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಚಿನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಅಲ್ಲದೇ ಗ್ರಾಹಕ ರಕ್ಷಣಾ ವೇದಿಕೆಗೂ ದೂರು ನೀಡಿದ್ದಾರೆ.
ಓಲಾ ಸ್ಕೂಟರ್ ಬಗ್ಗೆ ಅಸಮಾಧಾನ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಾಲೀಕ
ಹೊಸ ಇ-ಸ್ಕೂಟರ್ ಬಿಡುಗಡೆಗೆ ಕೇಂದ್ರ ತಡೆ
ಇತ್ತೀಚೆಗೆ ವಿದ್ಯುತ್ ಚಾಲಿತ ವಾಹನಗಳಲ್ಲಿ ಬೆಂಕಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸದ್ಯದ ಮಟ್ಟಿಗೆ ದ್ವಿಚಕ್ರ ವಾಹನ ಉತ್ಪಾದಕರಿಗೆ ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಏಕೆ ಈ ಬೆಂಕಿ ಪ್ರಕರಣ ಸಂಭವಿಸುತ್ತಿವೆ ಎಂಬುದರ ತನಿಖೆ ಪೂರ್ಣಗೊಳ್ಳುವವರೆಗೆ ವಾಹನ ಬಿಡುಗಡೆ ಮಾಡದಂತೆ ತಾಕೀತು ಮಾಡಲಾಗಿದೆ.
ಕಳೆದ ಸೋಮವಾರ ಇ-ವಾಹನ ಉತ್ಪಾದಕರ ಸಭೆಯನ್ನು ಸರ್ಕಾರ ನಡೆಸಿದ್ದು, ಅದರಲ್ಲಿ ಈ ಸೂಚನೆ ನೀಡಲಾಗಿದೆ. ಒಂದು ವೇಳೆ ಒಂದು ಬ್ಯಾಚ್‌ನಲ್ಲಿನ ವಾಹನಕ್ಕೆ ಬೆಂಕಿ ತಗುಲಿದರೂ ಆ ಬ್ಯಾಚ್‌ನ ಎಲ್ಲ ವಾಹನ ಹಿಂಪಡೆಯಲು ಸೂಚಿಸಲಾಗಿದೆ. ವಾಹನ ಉತ್ಪಾದನೆಯಲ್ಲಾದ ತಪ್ಪು ಸರಿಪಡಿಸಬೇಕು. ಗ್ರಾಹಕರಿಗೆ ವಾಹನ ಚಾಜ್‌ರ್ ಹೇಗೆ ಮಾಡಬೇಕು ಎಂಬ ತಿಳುವಳಿಕೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಕಳೆದ ಕೆಲ ದಿನಗಳಲ್ಲಿ ಓಲಾ ಸೇರಿದಂತೆ ವಿವಿಧ ಕಂಪನಿಗಳ 26 ಇ-ಸ್ಕೂಟರ್‌ಗಳಿಗೆ ಬೆಂಕಿ ತಗುಲಿತ್ತು