ಆಧುನಿಕ-ರೆಟ್ರೋ ಶೈಲಿಯ TVS ರೋನಿನ್ ಬೈಕ್ ಬಿಡುಗಡೆ!

By Suvarna NewsFirst Published Jul 6, 2022, 11:23 PM IST
Highlights
  • ಅತ್ಯಾಕರ್ಷಕ ರೋನಿನ್ ಬೈಕ್ ಬಿಡುಗಡೆ ಮಾಡಿದ ಟಿವಿಎಸ್
  • ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸದ ರೋನಿನ್
  • ಜುಲೈ 22 ರಿಂದ ದೇಶಾದ್ಯಂತ ರೋನಿನ್ ಬೈಕ್ ಲಭ್ಯ

ಗೋವಾ(ಜು.06): ಟಿವಿಎಸ್ ಮೋಟಾರ್ ಕಂಪನಿಯು ಉದ್ಯಮದ ಮೊದಲ ‘ಆಧುನಿಕ-ರೆಟ್ರೋ' ಮೋಟಾರ್‍ಸೈಕಲ್ - ಟಿವಿಎಸ್ ರೋನಿನ್   ಬಿಡುಗಡೆ ಮಾಡಿದೆ. ವಿನ್ಯಾಸಗೊಳಿಸಿದ ಗ್ರೌಂಡ್ ಅಪ್ ಹೊಂದಿದ ಟಿವಿಎಸ್ ರೋನಿನ್ ಆಧುನಿಕ, ಹೊಸ ಯುಗದ ಸವಾರರಿಂದ ಸ್ಫೂರ್ತಿ ಪಡೆದಿದೆ. ಟಿವಿಎಸ್ ರೋನಿನ್ ಅವರ್ಣನೀಯ ಜೀವನಶೈಲಿಯನ್ನು ಉತ್ತೇಜಿಸಲು ಶೈಲಿ, ತಂತ್ರಜ್ಞಾನ ಮತ್ತು ವಿಶೇಷ ಸವಾರಿ ಅನುಭವದೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಟಿವಿಎಸ್ ಮೋಟರ್ 110 ವರ್ಷಗಳ ಬಲವಾದ ಪರಂಪರೆ ಮತ್ತು ಪ್ರಮುಖ ತಂತ್ರಜ್ಞಾನ ಮತ್ತು ನಾವೀನ್ಯತೆ, ಇದೀಗ ಹೊಸ ಜೀವನ ವಿಧಾನವಾದ ಟಿವಿಎಸ್ ರೋನಿನ್‍ಅನ್ನು ಪ್ರಾರಂಭಿಸುವುದರೊಂದಿಗೆ ಇದನ್ನು ಮುಂದಕ್ಕೆ ಕೊಂಡೊಯ್ಯಲಾಗುತ್ತದೆ. ಪ್ರೀಮಿಯಂ ಲೈಫ್‍ಸ್ಟೈಲ್ ಮೋಟಾರ್‍ಸೈಕ್ಲಿಂಗ್‍ನ ವಿಭಾಗಕ್ಕೆ ಕಂಪನಿಯ ಪ್ರವೇಶವನ್ನು ಗುರುತಿಸುವ ಮೂಲಕ ಮೋಟಾರ್‍ಸೈಕಲ್ ಹೊಸ ರೈಡಿಂಗ್ ವಿಧಾನವನ್ನು ತರುವ ಬದ್ಧತೆಯ ವಿಸ್ತರಣೆಯಾಗಿದೆ. ಟಿವಿಎಸ್ ರೋನಿನ್‍ನ ಬಹುಮುಖ ವೈಶಿಷ್ಟ್ಯಗಳು, ವಿಶಿಷ್ಟ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಭೂಪ್ರದೇಶಗಳಾದ್ಯಂತ ಒತ್ತಡ ಮುಕ್ತ ಸವಾರಿ ಅನುಭವಗಳನ್ನು ಖಚಿತಪಡಿಸುತ್ತದೆ. ಡ್ಯುಯಲ್- ಚಾನೆಲ್ ಎಬಿಎಸ್, ಧ್ವನಿ ನೆರವು ಮತ್ತು ವರ್ಧಿತ ಸಂಪರ್ಕದಂತಹ ಪ್ರಭಾವಶಾಲಿ ತಂತ್ರಜ್ಞಾನ ಮತ್ತು ಅನುಕೂಲತೆಯ ವೈಶಿಷ್ಟ್ಯಗಳೊಂದಿಗೆ ಮೋಟಾರ್‍ಸೈಕಲ್ ಪ್ರಪ್ರಥಮ ಎನಿಸಿದೆ. ಇನ್ನೊಂದು ಪ್ರಥಮ ವೈಶಿಷ್ಟ್ಯವೆಂದರೆ, ಟಿವಿಎಸ್ ರೋನಿನ್ ಬ್ರ್ಯಾಂಡೆಡ್ ವಿಶ್ವ ದರ್ಜೆಯ ಸರಕುಗಳು ಮತ್ತು ವಿಶೇಷ ಅಗತ್ಯತೆಗೆ ಅನುಗುಣವಾಗಿ ರೂಪಿಸಿದ ಬಿಡಿಭಾಗಗಳು, ಕಾನ್ಫಿಗರೇಟರ್ ಮತ್ತು ಮೀಸಲಾದ ಅನುಭವ ಕಾರ್ಯಕ್ರಮದ ವಿಶೇಷ ಶ್ರೇಣಿ.

Latest Videos

 

ಗರಿಷ್ಠ ಮೈಲೇಜ್ , ಹೊಸ ತಂತ್ರಜ್ಞಾನ, ಹೊಚ್ಚ ಹೊಸ ಟಿವಿಎಸ್ ರೆಡಿಯಾನ್ ರಿಫ್ರೆಶ್ ಲಾಂಚ್!

ವಿನೂತನ ವಾಹನ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಿವಿಎಸ್ ಮೋಟಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುದರ್ಶನ್ ವೇಣು, "ಹೊಸ ಟಿವಿಎಸ್ ರೋನಿನ್ ಬಿಡುಗಡೆಯು ಟಿವಿಎಸ್ ಮೋಟಾರ್‍ಗೆ ಮಹತ್ವದ ಮೈಲಿಗಲ್ಲು. ಟಿವಿಎಸ್ ರೋನಿನ್ ಮೋಟಾರ್‍ಸೈಕಲ್ ಅನ್ನು ಖಾಲಿ ಕ್ಯಾನ್ವಾಸ್‍ನಿಂದ ವಿನ್ಯಾಸಗೊಳಿಸಲಾಗಿದ್ದು, ಇಂದಿನ ಸ್ವಾಭಾವಿಕ, ದ್ರವ, ಮತ್ತು ಬಹುಮುಖಿ ಯುವ ರೈಡರ್‍ನ ಪ್ರತಿಬಿಂಬವಾಗಿದೆ. ಇದು ಪ್ರಯಾಸವಿಲ್ಲದ ಮತ್ತು ಅವರ್ಣನೀಯ ಸವಾರಿ ಅನುಭವವನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ. ಟಿವಿಎಸ್ ಬ್ರ್ಯಾಂಡ್‍ಗೆ ನಿಜವಾಗಿ ಇದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಪರ್ಕವನ್ನು ಹೊಂದಿದೆ. ಟಿವಿಎಸ್ ರೋನಿನ್ ಜೀವನಶೈಲಿ ಪಾಲುದಾರರಾಗಿದ್ದು, ವಿಶೇಷ ಶ್ರೇಣಿಯ ಸರಕುಗಳು ಮತ್ತು ಪರಿಕರಗಳು, ಸವಾರಿ ಸಮುದಾಯ ಮತ್ತು ಪ್ರಯಾಸವಿಲ್ಲದ ಗ್ರಾಹಕೀಕರಣ ಪ್ರಕ್ರಿಯೆಯೊಂದಿಗೆ ಪೂರ್ಣಗೊಂಡಿದೆ" ಎಂದು ವಿವರ ನೀಡಿದರು.

ಟಿವಿಎಸ್ ಮೋಟಾರ್ ಕಂಪನಿಯ ಶ್ರೀ ವಿಮಲ್ ಸುಂಬ್ಲಿ, ಹೆಡ್ ಬ್ಯುಸಿನೆಸ್ - ಪ್ರೀಮಿಯಂ ಅವರು ಪ್ರತಿಕ್ರಿಯಿಸಿ, "ಜಾಗತಿಕ ಮಟ್ಟದಲ್ಲಿ ಮೋಟಾರ್‍ಸೈಕ್ಲಿಂಗ್ ಬದಲಾಗುತ್ತಿದೆ. ಇದು ಕ್ರಿಯಾತ್ಮಕ ಉದ್ದೇಶದಿಂದ ಸ್ವಯಂ ಅಭಿವ್ಯಕ್ತಿ, ಸ್ವಾತಂತ್ರ್ಯ ಮತ್ತು ಅನ್ವೇಷಿಸುವ ಇಚ್ಛೆಯನ್ನು ಸಕ್ರಿಯಗೊಳಿಸಲು ಚಲಿಸುತ್ತಿದೆ. ನಮ್ಮ ಗ್ರಾಹಕರು ಅವರ್ಣನೀಯ ಪ್ರಯಾಣಗಳನ್ನು ಪಟ್ಟಿ ಮಾಡುವ ಅಗತ್ಯದಿಂದ ಪ್ರೇರಿತರಾಗಿ, ಟಿವಿಎಸ್ ರೋನಿನ್ ಸ್ಟೀರಿಯೊ ಟೈಪ್‍ಗಳು, ದಿನಾಂಕದ ಕೋಡ್‍ಗಳು ಮತ್ತು ಪರಂಪರೆಯ ಸಾಮಾನು ಸರಂಜಾಮುಗಳಿಂದ ಮುಕ್ತವಾದ ಉದಯೋನ್ಮುಖ ಜೀವನಶೈಲಿಯ ಆಧಾರದ ಮೇಲೆ ಹೊಸ ವಿಭಾಗವನ್ನು ರೂಪಿಸಿದೆ. ಈ ಮೂಲಕ ಪ್ರೀಮಿಯಮೀಕರಣವನ್ನು ಹೆಚ್ಚು ಹೆಚ್ಚು ವೈಯಕ್ತೀಕರಣವಾಗಿ ಪರಿವರ್ತಿಸಿ, ದ್ವಿಚಕ್ರ ವಾಹನ ವಿಭಾಗದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ. ಮೋಟಾರ್‍ಸೈಕಲ್ ನಮ್ಮ ಗ್ರಾಹಕರಿಗೆ ಪ್ರೀಮಿಯಂ ಜೀವನಶೈಲಿಯ ಅನುಭವವನ್ನು ತರುತ್ತದೆ, ವಿಭಿನ್ನ ಬ್ರಾಂಡ್ ಪರಿಸರ ವ್ಯವಸ್ಥೆಯನ್ನು ನೀಡುತ್ತದೆ. ನಮ್ಮ ಗ್ರಾಹಕರು ಈ ಮೋಟಾರ್‍ಸೈಕಲ್‍ನ ವಿಶಿಷ್ಟ ರೈಡಿಂಗ್ ಪಾತ್ರವನ್ನು ಮೆಚ್ಚುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ಅಭಿಪ್ರಾಯಪಟ್ಟರು.

TVS iQube ಹೊಸ ಫೀಚರ್ಸ್, ಗರಿಷ್ಠ ಮೈಲೇಜ್, ಟಿವಿಎಸ್ iಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಟಿವಿಎಸ್ ರೋನಿನ್ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ - ಟಿವಿಎಸ್ ರೋನಿನ್ SS, ಟಿವಿಎಸ್ ರೋನಿನ್ ಆS ಮತ್ತು ಉನ್ನತ ರೂಪಾಂತರವಾದ ಟಿವಿಎಸ್ ರೋನಿನ್ ಖಿಆ. ಇದು ಜುಲೈ 2022 ರಿಂದ ದೇಶಾದ್ಯಂತ ಆಯ್ದ ಡೀಲರ್‍ಶಿಪ್‍ಗಳಲ್ಲಿ ಲಭ್ಯವಿರುತ್ತದೆ.

ಹೊಸ ಟಿವಿಎಸ್ ರೋನಿನ್‍ನ ಮುಖ್ಯಾಂಶಗಳು
* ಭೂಪ್ರದೇಶದಾದ್ಯಂತ ಆರಾಮದಾಯಕ ಸವಾರಿ ಅನುಭವ
* ಟಿವಿಎಸ್ ರೋನಿನ್ ಕಲ್ಟ್ - ಅಲ್ಲಿ ಸಂಸ್ಕøತಿ, ಜೀವನಶೈಲಿ ಮತ್ತು ಪ್ರಯಾಣವು ಜೀವಂತವಾಗಿದೆ
 
ವಿಶೇಷವಾದ ಮಚರ್ಂಡೈಸ್ ಮತ್ತು ಪರಿಕರಗಳು
* ವ್ಯಾಪಕ ಶ್ರೇಣಿಯ ಸರಕುಗಳು ಮತ್ತು ಸವಾರಿ ಗೇರ್
* ವಿಶೇಷ ಪರಿಕರಗಳೊಂದಿಗೆ ಕ್ಯುರೇಟೆಡ್ ಕಿಟ್‍ಗಳು

ಹೊಸ ಟಿವಿಎಸ್ ರೋನಿನ್‍ನ ಪ್ರಮುಖ ಲಕ್ಷಣಗಳು
* ಎಲ್ಲ ಎಲ್‍ಇಡಿ ಲ್ಯಾಂಪ್‍ಗಳು
* ವಿಶೇಷ ಟಿ - ಆಕಾರದ ಪೈಲಟ್ ದೀಪ
* ಅಸಮವಾದ ಸ್ಪೀಡೋಮೀಟರ್
* ಎಕ್ಸಾಸ್ಟ್ ಮತ್ತು ಮಫ್ಲರ್ ವಿನ್ಯಾಸ
* ಚೈನ್ ಕವರ್
* 9 ಸ್ಪೋಕ್ ಅಲಾಯ್ ವೀಲ್ಸ್
* ಬ್ಲಾಕ್ ಟ್ರೆಡ್ ಟೈರ್‍ಗಳು

ತಂತ್ರಜ್ಞಾನದ ಸ್ಥಿತಿ
* ಡಿಜಿಟಲ್ ಕ್ಲಸ್ಟರ್ (ಆಖಿಇ- ಖಾಲಿ ಆಗಲು ಅಂತರ, ಇಖಿಂ- ಆಗಮನದ ಅಂದಾಜು ಸಮಯ, ಗೇರ್ ಶಿಫ್ಟ್ ಅಸಿಸ್ಟ್, ಸೈಡ್ ಸ್ಟ್ಯಾಂಡ್ ಇಂಜಿನ್ ಇನ್ಹಿಬಿಟರ್, ಸರ್ವಿಸ್ ಡ್ಯು ಸೂಚನೆ, ಕಡಿಮೆ ಬ್ಯಾಟರಿ ಸೂಚಕ)
* ವಾಯ್ಸ್ ಅಸಿಸ್ಟ್
* ಟರ್ನ್ ಬೈ ಟರ್ನ್ ನ್ಯಾವಿಗೇಷನ್
* ಒಳಬರುವ ಕರೆ ಎಚ್ಚರಿಕೆ / ಸ್ವೀಕರಣೆ
* ಕಸ್ಟಮ್ ವಿಂಡೋ ಅಧಿಸೂಚನೆ
* ಟಿವಿಎಸ್ Smಚಿಡಿಣಘಿoಟಿಟಿeಛಿಣ ಅಪ್ಲಿಕೇಶನ್‍ನಲ್ಲಿ ಸವಾರಿ ವಿಶ್ಲೇಷಣೆ

ಪ್ರಯಾಸವಿಲ್ಲದ ಅನುಭವ ಸವಾರಿ
* ಮಳೆ ಮತ್ತು ನಗರ ಎಬಿಎಸ್ ವಿಧಾನಗಳು
* ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISಉ) - ಕಡಿಮೆ ಶಬ್ದದ ಗರಿ ಸ್ಪರ್ಶ ಪ್ರಾರಂಭ
* ಅಪ್‍ಸೈಡ್ ಡೌನ್ ಫ್ರಂಟ್ ಫೋರ್ಕ್ (USಆ)
* ಹಿಂದಿನ ಬದಿಯ ಮೊನೊಶಾಕ್
* ಗ್ಲೈಡ್ ಥ್ರೂ ಟೆಕ್ನಾಲಜಿ (ಉಖಿಖಿ)
* ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್
* 3-ಹಂತದ ಹೊಂದಾಣಿಕೆ ಮಾಡಬಹುದಾದ ಲಿವರ್

click me!