TVS ಸ್ಟಾರ್ ಸಿಟಿ ಪ್ಲಸ್ ಬೈಕ್ ಟೀಸರ್‌; ಗ್ರಾಹಕರಲ್ಲಿ ಹೆಚ್ಚಿದ ಕುತೂಹಲ

By Suvarna NewsFirst Published Feb 26, 2021, 4:20 PM IST
Highlights

ಟಿವಿಎಸ್ ಮೋಟಾರ್ ಕಂಪನಿ ಹೊಸ ದ್ವಿಚಕ್ರವಾಹನದ ಬಿಡುಗಡೆಗೆ ಸಜ್ಜಾಗಿದೆಯಾ? ಈಗಾಗಲೇ ಚಾಲ್ತಿಯಲ್ಲಿರುವ ಸ್ಟಾರ್ ಸಿಟಿ ಪ್ಲಸ್ ರೀತಿಯಂತೆ ಕಾಣುವ ಹೊಸ ಮೋಟಾರ್ ಸೈಕಲ್‌ನ ಟೀಸರ್ ಅನ್ನು ಕಂಪನಿ ಬಿಡುಗಡೆ ಮಾಡಿದೆ. ಸಂಪೂರ್ಣ ಕಪ್ಪ ವರ್ಣಮಯವಾಗಿರುವ ಈ ಮೋಟಾರ್ ಸೈಕಲ್ ಸ್ಟಾರ್ ಸಿಟಿ ಪ್ಲಸ್‌ನ ಸ್ಪೆಷಲ್ ಎಡಿಷನ್ ಆಗಿರಬಹುದಾ?

ದ್ವಿಚಕ್ರವಾಹನ ತಯಾರಿಕೆಯ ದೇಶಿ ಕಂಪನಿಗಳ ಪೈಕಿ ಟಿವಿಎಸ್ ಮೋಟಾರ್ ಕಂಪನಿ ಪ್ರಮುಖವಾದದ್ದು. ಈ ಕಂಪನಿಯ ಐಕಾನಿಕ್ ದ್ವಿಚಕ್ರವಾಹನ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಇದೀಗ ಮತ್ತೆ ಸುದ್ದಿಯಲ್ಲಿದೆ. ಕಂಪನಿಯು ಹೊಸ  ಮೋಟಾರ್ ಸೈಕಲ್ ಟೀಸರ್ ಬಿಡುಗಡೆ ಮಾಡಿದ್ದು, ನಿಮಗೊಂದು ಆಶ್ಚರ್ಯ ಕಾದಿದೆ ಎಂದು ಹೇಳಿಕೊಂಡಿದೆ.

ಇನ್ಸ್‌ಗ್ರಾಮ್‌ನಲ್ಲಿ ಟೀಸರ್ ಬಿಡುಗಡೆ ಮಾಡಿರುವ ಈ ಮೋಟಾರ್‌ಸೈಕಲ್ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.  ಈ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಮೋಟಾರ್ ಸ್ಪೆಷಲ್ ಎಡಿಷನ್ ಆಗಿದೆಯಾ ಅಥವಾ ಪೂರ್ತಿಯಾಗಿ ಕಪ್ಪು ಬಣ್ಣದ ಆಯ್ಕೆಯಲ್ಲಿ ಮಾರಾಟಕ್ಕೆ ಸಿಗಲಿದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಸರ್ಕಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳು ಕಡ್ಡಾಯ?!

ಟೀಸರ್‌ನಲ್ಲಿ ತೋರಿಸಲಾಗಿರುವ ದ್ವಿಚಕ್ರವಾಹನವು ಈ ಹಿಂದೆ ಕಂಪನಿ 2020ರ ಜನವರಿಯಲ್ಲಿ ಬಿಡುಗಡೆ ಮಾಡಿದ ಮೋಟಾರ್ ಸೈಕಲ್‌ ಅನ್ನು ಹೋಲುತ್ತದೆ. ಬಿಎಸ್6 ಇಂಧನ ನಿಯಮಗಳ ಜೊತೆಗೆ ಹಲವು ಅಪ್‌ಡೇಟ್‌ಗಳನ್ನು ಈ ಮೋಟಾರ್ ಸೈಕಲ್ ಕಂಡಿತ್ತು. ಇದೀಗ ಕಂಪನಿಯ ಟೀಸರ್ ಶೀಘ್ರವೇ ಹೊಸ ಟಿವಿಎಸ್ ಸ್ಟಾರ್ ಪ್ಲಸ್ ಸಿಟಿ ದ್ವಿಚಕ್ರವಾಹನ ಬಿಡುಗಡೆಯಾಗಲಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ಸ್ಟಾರ್ ಸಿಟಿ ಮೋಟಾರ್ ಸೈಕಲ್ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷ ಬಿಡುಗಡೆಯಾದ ಈ ದ್ವಿಚಕ್ರವಾಹನವು ಹಲವು ವಿಶೇಷತೆಗಳನ್ನು ಹೊಂದಿತ್ತು. ಫೀಚರ್‌ಗಳ ವಿಷಯಕ್ಕೆ ಹೇಳುವುದಾದರೆ ಈಗ ಚಾಲ್ತಿಯಲ್ಲಿರುವ ದ್ವಿಚಕ್ರವಾಹನ ಮಾದರಿಯಲ್ಲಿ ಸ್ಟೈಲಿಶ್ ಸರೌಂಡಿಂಗ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್, ಟಿವಿಎಸ್ ಬ್ರಾಂಡಿಂಗ್ ಇರುವ ಉದ್ದನೆಯ ಮೋತಿಯನ್ನು ಕಾಣಬಹುದು. ಹಾಗೆಯೇ ಕಪ್ಪು ಕನ್ನಡಿ, ಸ್ಪಷ್ಟವಾಗಿ ಕಾಣುವ ಇಂಡಿಕೇಟರ್ಸ್‌, ಉದ್ದನೆಯ ಏಕ ಸೀಟು ಮತ್ತು ಗ್ರ್ಯಾಬ್ ರೇಲ್‌ಗಳನ್ನು ಕಾಣಬಹುದು. ಈ ಎಲ್ಲ ಫೀಚರ್‌ಗಳನ್ನು ನೀವು ಈಗಾಗಲೇ ಚಾಲ್ತಿಯಲ್ಲಿರುವ ಮಾದರಿಯಲ್ಲೂ ಕಾಣಬಹುದಾಗಿದೆ. ಹಾಗಾಗಿ, ಈ ಟೀಸರ್‌ನಲ್ಲಿ ಕಂಡಿರುವ ಮೋಟಾರ್ ಸೈಕಲ್, ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ನ ಸ್ಪೆಷಲ್ ಎಡಿಷನ್ ಆಗಿರುವ ಸಾಧ್ಯತೆಯೂ ಇದೆ.

ಇಷ್ಟು ಫೀಚರ್‌ಗಳು ಮಾತ್ರವಲ್ಲದೇ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ದ್ವಿಚಕ್ರವಾಹವನವು ಕೆಲವು ಸ್ಮಾರ್ಟ್‌ಫೀಚರ್‌ಗಳನ್ನು ಹೊಂದಿದೆ. ಅನ್‌ಲಾಗ್ ಕಾನ್ಸೂಲ್‌ನೊಂದಿಗೆ ಡಿಜಿಟಲ್  ಪಾರ್ಟ್, ಯುಎಸ್‌ಬಿ ಚಾರ್ಜರ್ ಮತ್ತು ಐದು ಹಂತದ ಹೊಂದಾಣಿಕೆಗೆ ಅವಕಾಶ ನೀಡಬಲ್ಲ ಶಾಕ್‌ ಆಬ್ಸರ್ಬರ್ಸ್ ಹಿಂಬದಿಯಲ್ಲಿ ನೀಡಲಾಗಿದೆ.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್‌ ಮೋಟಾರ್ ಸೈಕಲ್‌ನ ಮುಂಭಾಗದಲ್ಲಿ ಆಯಲೀ ಡ್ಯಾಂಪ್ಡ್ ಟೆಲೆಸ್ಕೋಪಿಕ್ ಫೋರ್ಕ್‌ಗಳನ್ನು ನೀಡಲಾಗಿದೆ. 5 ಸ್ಪೋಕ್ ಅಲಾಯ್ ವ್ಹೀಲ್‌ಗಳಿದ್ದು, ಮುಂದಿನ ಚಕ್ರಕ್ಕೆ 130 ಎಂಎಂ ಡ್ರಮ್ ಬ್ರೇಕ್ ಇದ್ದರೆ,  ಹಿಂಬದಿಯ ಚಕ್ರಕ್ಕೆ 110 ಡ್ರಮ್ ಬ್ರೇಕ್ ನೀಡಲಾಗಿದೆ. ಬಹುಶಃ ಈ ಎಲ್ಲ ಫೀಚರ್‌ಗಳು ಮುಂಬರುವ ಹೊಸ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ದ್ವಿಚಕ್ರವಾಹನದಲ್ಲೂ ಕಂಪನಿ ಉಳಿಸಿಕೊಳ್ಳುವ ಸಾಧ್ಯತೆಗಳಿವೆ.

ಹೊಸ ಬಜಾಜ್ ಪಲ್ಸರ್ 180 ಬಿಡುಗಡೆಯಾಗಿದೆ, ಹೀಗಿದೆ ನೋಡಿ

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಮೋಟಾರ್‌ ಸೈಕಲ್‌ನ ಎಂಜಿನ್ 4 ಸ್ಪೀಡ್ ಗಿಯರ್ ಬಾಕ್ಸ್ ಒಳಗೊಂಡಿದ್ದು,  ಪ್ರತಿ ಗಂಟೆಗೆ ದ್ವಿಚಕ್ರವಾಹನವು 90 ಸ್ಪೀಡ್‌ನಲ್ಲಿ ಹೋಗುತ್ತದೆ.  ಎಲ್ಲಕ್ಕಿಂತ ಹೆಚ್ಚಾಗಿ ಕಂಪನಿಯು ಈ ದ್ವಿಚಕ್ರವಾಹನದಲ್ಲಿ ಟಿಟಿಎಫ್ಐ(ಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ಟೆಕ್ನಾಲಜಿ) ತಂತ್ರಜ್ಞಾನ ಆಧರಿತ ಎಂಜಿನ್ ಬಳಸಲಾಗಿರುವುದರಿಂದ ಇಂಧನ ದಕ್ಷತೆಯು ಶೇ.15ರಷ್ಟು ಹೆಚ್ಚಳವಾಗುವುದನ್ನು ಕಾಣಬಹುದು.

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ರನ್ನಿಂಗ್ ಮಾಡೆಲ್‌ ಮೋಟಾರ್ ಸೈಕಲ್ ಪವರ್ ಫುಲ್ ಎಂಜಿನ್ ಹೊಂದಿದೆ. ಈ ಮೋಟಾರ್ ಸೈಕಲ್ 109 ಸಿಸಿ ಬಿಎಸ್6 ನಿಯಮಗಳನ್ನಾಧರಿಸಿದ ಎಂಜಿನ್‌ನೊಂದಿಗೆ ಬಂದಿದೆ. ಈ ಮೋಟಾರ್‌ ಸೈಕಲ್‌ನಲ್ಲಿರುವ ಎಂಜಿನ್, 7,350 ಆರ್‌ಪಿಎಂನಲ್ಲಿ ಗರಿಷ್ಠ 8.08 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಹಾಗೆಯೇ, 4,500 ಆರ್‌ಪಿಎಂ ಸ್ಪೀಡ್‌ನಲ್ಲಿ ಎಂಜಿನ್ 8.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

Indian Chief: ಭಾರತದಲ್ಲಿ ಬಿಡುಗಡೆಯಾಗಲಿದೆ ಇಂಡಿಯನ್ ಚೀಫ್ ಬೈಕ್

ದೇಶದ ಕೆಲವೇ ಮೋಟಾರ್ ಸೈಕಲ್ ‌ ಉತ್ಪಾದನಾ ಕಂಪನಿಗಳ ಪೈಕಿ ಒಂದಾಗಿರುವ ಹೊಸೂರು ಬೇಸ್ಡ್  ಟಿವಿಎಸ್ ಮೋಟಾರ್ ಕಂಪನಿಯು ಹೊಸ ಮೋಟಾರ್ ಸೈಕಲ್‌ನ ಟೀಸರ್ ಮೂಲಕ ಗ್ರಾಹಕರಲ್ಲಿ ಕುತೂಹಲವಂತೂ ಹೆಚ್ಚಿಸಿದೆ. ಬಹುಶಃ ಮುಂದಿನ ಕೆಲವು ವಾರಗಳಲ್ಲಿ ಈ ಬಗ್ಗೆ ಕಂಪನಿ ಪೂರ್ಣ ಮಾಹಿತಿಯನ್ನು ನೀಡಬಹುದು. ಈಗಿರುವ ಸ್ಟಾರ್ ಸಿಟಿ ಪ್ಲಸ್‌ನ ಸ್ಪೆಷಲ್ ಎಡಿಷನ್ ಆಗಿರಲಿದೆಯಾ ಅಥವಾ ಹೊಸ ಮೋಟಾರ್ ಸೈಕಲ್ ಎಂಬುದಕ್ಕೆ ಉತ್ತರ ಸಿಗಬಹುದು.

click me!