ಟಿವಿಎಸ್ ಐಕ್ಯೂಬ್ ಮಿಲಿಯನ್ಆರ್ ಎಡಿಶನ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಬೆಲೆ ಎಷ್ಟು?

Published : Aug 26, 2026, 01:29 PM IST
TVS iQube S

ಸಾರಾಂಶ

TVS ಐಕ್ಯೂಬ್ ಮಿಲಿಯನ್ ಆರ್ ಹೊಸ ಎಡಿಶನ್ ಇವಿ ಬಿಡುಗಡೆಯಾಗಿದೆ. ವಿಶೇಷ ಅಂದರೆ ಹಲವು ಹೊಸತನ ಹಾಗೂ ಅತ್ಯಂತ ಆಕರ್ಷಕ ಸ್ಕೂಟರ್ ಇದಾಗಿದೆ. ಹೊಸ ಇವಿ ಸ್ಕೂಟರ್ ಬೆಲೆ ಎಷ್ಟು? ಏನಿದರ ವಿಶೇಷತೆ ?

ಬೆಂಗಳೂರು (ಆ.26) ಭಾರತದಲ್ಲಿ ಹಲವು ಇವಿ ಸ್ಕೂಟರ್ ಲಭ್ಯವಿದೆ. ಜೊತೆಗೆ ಹೊಸ ಹೊಸ ಇವಿ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಈ ಪೈಕಿ ಟಿವಿಎಸ್ ಬಿಡುಗಡೆ ಮಾಡಿರುವ ಐಕ್ಯೂಬ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಟಿವಿಎಸ್ ಐಕ್ಯೂಬ್ ಮಿಲಿಯನ್ಆರ್ ಸ್ಕೂಟರ್ ಅತ್ಯಂತ ಆಕರ್ಷಕ ಬಣ್ಣ, ಆಕರ್ಷಕ ವಿನ್ಯಾಸ ಹಾಗೂ ಹೆಚ್ಚುವರಿ ಫೀಚರ್ಸ್ ಜೊತೆ ಬಿಡುಗಡೆಯಾಗಿದೆ.

ಹೊಸ ಸ್ಕೂಟರ್ ಬೆಲೆ

ಟಿವಿಎಸ್ ಮಿಲಿಯನ್ಆರ್ ಎಡಿಶನ್ ಸ್ಕೂಟರ್ ಬೆಲೆ 1.40 ಲಕ್ಷ ರೂಪಾಯಿ. ಈ ಸ್ಪೆಷಲ್ ಎಡಿಶನ್ ಸ್ಕೂಟರ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಮಾಣಿತ 3.5kWh ವೇರಿಯೆಂಟ್‌ಗಿಂತ ಕೇವಲ 3,551 ರೂಪಾಯಿ ಹೆಚ್ಚಿನ ಬೆಲೆಯಲ್ಲಿ ಲಭ್ಯವಿದೆ. ಈ ಸಣ್ಣ ಹೆಚ್ಚುವರಿ ಮೊತ್ತಕ್ಕೆ ಗ್ರಾಹಕರು 3.5 ಲೀಟರ್‌ಗಳ ಹೆಚ್ಚುವರಿ ಸ್ಟೋರೇಜ್ ಸ್ಪೇಸ್ ಮತ್ತು USB Type-C ಪೋರ್ಟ್ ಪಡೆಯುತ್ತಾರೆ. ಹೆಚ್ಚಿನ ಪ್ರಾಯೋಗಿಕತೆ ಬಯಸುವ ಖರೀದಿದಾರರಿಗೆ ಇದು ಉತ್ತಮ ಆಯ್ಕೆಯಾಗಿದೆ.

10 ಲಕ್ಷ ಗ್ರಾಹಕರ ಮೈಲಿಗಲ್ಲು

TVS iQube ಸ್ಕೂಟರ್ 10 ಲಕ್ಷ ಗ್ರಾಹಕರನ್ನು ತಲುಪಿದ ಸಾಧನೆಯನ್ನು ಆಚರಿಸಲು ಈ MillionR ಎಡಿಷನ್ ಅನ್ನು ಪರಿಚಯಿಸಲಾಗಿದೆ. 2016ರಲ್ಲಿ TVS Jupiter ಸ್ಕೂಟರ್ 10 ಲಕ್ಷ ಮಾರಾಟವಾದಾಗ ಅದನ್ನು ಆಚರಿಸಲು MillionR ಬ್ಯಾಡ್ಜ್ ಅನ್ನು ನೀಡಲಾಗಿತ್ತು. ಅದೇ ರೀತಿ ಈಗ iQubeಗೂ ಈ ವಿಶೇಷ ಗೌರವ ನೀಡಲಾಗಿದೆ.

ಬ್ಯಾಟರಿ ಮತ್ತು ಪರ್ಫಾರ್ಮೆನ್ಸ್, ಹೊಸತನ

MillionR ಎಡಿಷನ್‌ನಲ್ಲಿ ಬ್ಯಾಟರಿ, ಮೋಟಾರ್ ಮತ್ತು ಪರ್ಫಾರ್ಮೆನ್ಸ್ ವಿವರಗಳು ಪ್ರಮಾಣಿತ ಮಾದರಿಯಂತೆಯೇ ಇವೆ. ಯಾವುದೇ ಬದಲಾವಣೆಗಳಿಲ್ಲ. 3.5 ಲೀಟರ್ ಹೆಚ್ಚುವರಿ ಸ್ಟೋರೇಜ್ ಸ್ಪೇಸ್ ನೀಡಲಾಗಿದೆ. USB Type-C ಪೋರ್ಟ್ ಸೇರಿದಂತೆ ಕೆಲ ಹೊತನಗಳೂ ಇದರಲ್ಲಿದೆ.

ಮಿಲಿಯನ್ ಆರ್ ಬ್ಯಾಡ್ಜಿಂಗ್ ನೀಡಲಾಗಿದೆ. ಹೊಸ ಸ್ಕೂಟರ್ ಬುಕಿಂಗ್ ಆರಂಭಗೊಂಡಿದ್ದು, ಗ್ರಾಹಕರು ಅಧಿಕೃತ ಡೀಲರ್‌ಗಳಲ್ಲಿ ಖರೀದಿಸಲು ಸಾಧ್ಯ

PREV
Read more Articles on
click me!

Recommended Stories

ಎಲ್ಲರೂ ಕಾರ್ ತಗೊಳ್ತಿದ್ರೆ ಕನ್ನಡಿಗರ ನೆಚ್ಚಿನ ಗಾಯಕಿ ತಗೊಂಡ್ರು ಎಲೆಕ್ಟ್ರಿಕ್ ಬೈಕ್: ಅರ್ಚನಾ ಉಡುಪ ಬಾಲ್ಯದ ಕನಸು ನನಸು!
ಫ್ಯಾಮಿಲಿಗಾಗಿ ಬಂತು ಉದ್ದನೆಯ ಸೀಟಿನ ಹೊಸ ಏಥರ್ ಇವಿ ಸ್ಕೂಟರ್: ಮೆಟಲ್ ಬಾಡಿ, 200 ಕಿ.ಮೀ ರೇಂಜ್!