ನವದೆಹಲಿ(ಡಿ.20): ಭಾರತದ ಅತ್ಯಂತ ಜನಪ್ರಿಯ ಬೈಕ್ ರಾಯಲ್ ಎನ್‌ಫೀಲ್ಡ್(Royal Enfield) ಇದೀಗ ತನ್ನ ಕ್ಲಾಸಿಕ್ 350 ಬೈಕ್ ಹಿಂಪಡೆದಿದೆ. ಬ್ರೇಕ್ ಸಮಸ್ಯೆ ಕಾರಣ ಸೆಪ್ಟೆಂಬರ್ 1 ರಿಂದ ಡಿಸೆಂಬರ್ 5ರ ವರೆಗೆ ಉತ್ಪಾದನೆಯಾದ ರಾಯಲ್ ಎನ್‌ಫೀಲ್ಡ್ 350 ಕ್ಲಾಸಿಕ್ ಬೈಕ್(Royal Enfield Classic 350) ವಾಪಸ್ ಪಡೆದಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಯಲ್ ಎನ್‌ಫೀಲ್ಡ್, ಬ್ರೇಕ್ ಸಮಸ್ಯೆ ಸರಿಪಡಿಸಲು ವಾಪಸ್ ಪಡೆಯುವುದಾಗಿ ಹೇಳಿದೆ.
ನೂತನ ಕ್ಲಾಸಿಕ್ 350 ಬೈಕ್ ಖರೀದಿಸಿದ ಹಲವರು ಬ್ರೇಕ್ ಸಮಸ್ಯೆ ಕುರಿತು ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ರಾಯಲ್ ಎನ್‌ಫೀಲ್ಡ್ ಕಂಪನಿ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನ್ಯುಫ್ಯಾಕ್ಚರ್ಸ್ ಅಸೋಸಿಯೇಶನ್(SIAM) ಹಾಗೂ ರಸ್ತೆ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯಕ್ಕೆ(Morth) ಮಾಹಿತಿ ನೀಡಿ, ನೂತನ ಬೈಕ್ ವಾಪಸ್ ಪಡೆದಿದೆ.
Royal Enfield record sales: 2 ನಿಮಿಷದಲ್ಲಿ 120 ಬೈಕ್ ಮಾರಾಟ, ರಾಯಲ್ ಎನ್‌ಫೀಲ್ಡ್ ಹೊಸ ದಾಖಲೆ
ನೂತನ ರಾಯಲ್ ಎನ್‌ಫೀಲ್ಡ್ 350 ಬೈಕ್ ಹಿಂಬದಿ ಬ್ರೇಕಿಂಗ್‌ನಲ್ಲಿ ಕೆಲ ತಾಂತ್ರಿಕ ಸಮಸ್ಯೆ ಇದೆ. ಬ್ರೇಕಿಂಗ್ ಅನ್ವಯಿಸಿದಾಗ ಹೆಚ್ಚಿನ ಲೋಡ್ ತಡೆದುಕೊಳ್ಳಲಾಗದೆ ಅಸಾಮಾನ್ಯವಾದ ಬ್ರೇಕಿಂಗ್ ಶಬ್ದ ಬರುತ್ತಿದೆ. ಇದರಿಂದ ತುರ್ತು ಪರಿಸ್ಥಿತಿಗಳಲ್ಲಿ ಬ್ರೇಕಿಂಗ್ ಸಮಸ್ಯೆಯಿಂದ ಅಪಘಾತಕ್ಕೆ ಕಾರಣವಾಗಬಹುದು. ಹೆಚ್ಚಿನ ಲೋಡ್ ತಡೆಯಲಾಗದೆ ಸಮಸ್ಯೆಗೆ ಕಾರಣವಾಗುತ್ತಿದೆ. ಹೀಗಾಗಿ ಬೈಕ್ ವಾಪಸ್ ಪಡೆದು ಬ್ರೇಕಿಂಗ್ ಸಮಸ್ಯೆ ಸರಿಪಡಿಸುವುದಾಗಿ ರಾಯಲ್ ಎನ್‌ಫೀಲ್ಡ್ ಹೇಳಿದೆ.
ರಾಯಲ್ ಎನ್‌ಫೀಲ್ಡ್ ಗ್ರಾಹಕರು ಅಧಿಕೃತ ವೆಬ್‌ಸೈಟ್‌ಗೆ ಬೇಟಿ ನೀಡಿ ಬೈಕ್ ಉತ್ಪಾದನೆ ದಿನಾಂಕವನ್ನು ಪತ್ತೆ ಹಚ್ಚಬಹುದು. VIN(vehicle identification number) ನಂಬರ್ ಮೂಲಕ ವಾಹನ ಉತ್ಪಾದನೆ ದಿನಾಂಕ ಪತ್ತೆ ಹಚ್ಚಲು ಸಾಧ್ಯವಿದೆ. ಅಥವಾ ಹತ್ತಿರದ ರಾಯಲ್ ಎನ್‌ಫೀಲ್ಡ್ ಶೋ ರೂಂ ಸಂದರ್ಶಿಸಲು ರಾಯಲ್ ಎನ್‌ಫೀಲ್ಡ್ ಮನವಿ ಮಾಡಿದೆ. ಸಮಸ್ಯೆಯನ್ನು ಅತೀ ಶೀಘ್ರದಲ್ಲಿ ಬಹೆಹರಿಸಿ ಗ್ರಾಹಕರಿಗೆ ಬೈಕ್ ನೀಡಲಾಗುವುದು ಎಂದು ರಾಯಲ್‌ಎನ್‌ಫೀಲ್ಡ್ ಹೇಳಿದೆ.
Royal Enfield bikes 2022:ಮುಂದಿನ ವರ್ಷ ರಾಯಲ್ ಎನ್‌ಫೀಲ್ಡ್ ಹೊಸ ಮಾಡೆಲ್‌ಗಳು ರೆಡಿ, ಯಾವೆಲ್ಲ ಇವೆ ಗೊತ್ತಾ?
ಸೆಪ್ಟೆಂಬರ್ 1 ರಿಂದ ಡಿಸೆಂಬರ್ 5ರ ವರೆಗೆ ಉತ್ಪಾದನೆಯಾದ 26,300 ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್ ಇದೀಗ ಗ್ರಾಹಕರ ಕೈಯಲ್ಲಿದೆ. ಗ್ರಾಹಕರ ಕೈಯಿಂದ ಬೈಕ್ ವಾಪಸ್ ಪಡೆದು ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿರುವ ತಾಂತ್ರಿಕ ದೋಷ ನಿವಾರಿಸಿ ಬೈಕ್ ಗ್ರಾಹಕರಿಗೆ ಹಸ್ತಾಂತರಿಸಲಿದೆ.
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350
ನೂತನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬೆಲೆ 1.84 ಲಕ್ಷ ರೂಪಾಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. 346cc, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, EFI ಎಂಜಿನ್ ಹೊಂದಿದೆ. 19.1bhp ಗರಿಷ್ಠ ಪವರ್ ಹಾಗೂ 28Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಅನಾಲಾಗ್ ಸ್ಪೀಡೋ ಹಾಗೂ ಡಿಜಿಟಲ್ ಡಿಸ್‌ಪ್ಲೇ ಹೊಂದಿದೆ. ಅಲೋಯ್ ವ್ಹೀಲ್, ಟ್ಯೂಬ್ಲೆಸ್ ಟೈರ್, ಸಿಂಗಲ್ ಚಾನೆಲ್ ABS ಹಾಗೂ ಡ್ಯುಯೆಲ್ ಚಾನೆಲ್ ABS ಹೊಂದಿದೆ.
ಸಮಸ್ಯೆ ಇದ್ದ ರಾಯಲ್ ಎನ್‌ಫೀಲ್ಡ್ ಗ್ರಾಹಕರು ತಕ್ಷಣವೇ ಸಮೀಪದ ಅಧಿಕೃತ ಶೋ ರೂಂಗೆ ಭೇಟಿ ನೀಡಿ ಪರಿಶೀಲಿಸಬಹುದು. ಇಷ್ಟೇ ಅಲ್ಲ ತಾಂತ್ರಿಕ ದೋಷವನ್ನು ಆದಷ್ಟು ಬೇಗ ಬಗೆಹರಿಸುವುದಾಗಿ ಕಂಪನಿ ಹೇಳಿದೆ. ಆದರೆ ನಿಗದಿತ ಸಮಯವ್ನು ಹೇಳಿಲ್ಲ.