ನಗರಕ್ಕೂ ಸೈ, ಲಾಂಗ್ ರೈಡ್‍ಗೂ ಜೈ. ಪುರುಷರಿಗೂ ಒಕೆ, ಮಹಿಳೆಯರಿಗೂ ಸುಲಭ. ಇದು ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್. ತೂಕ ಕಡಿಮೆ, ಗಾತ್ರದಲ್ಲೂ ಚಿಕ್ಕದು ಪ್ರಮುಖವಾಗಿ ಬೆಲೆಯೂ ಕಡಿಮೆ. ರಾಯಲ್ ಎನ್‌ಪೀಲ್ಡ್ ಬೈಕ್‌ಗಳ ಪೈಕಿ ಇದು ಅತೀ ಕಡಿಮೆ ಬೆಲೆಯ ಬೈಕ್. ನೂತನ ಬೈಕ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ.
ಬೆಂಗಳೂರು(ಆ.22): ಮಧ್ಯಮ ಗಾತ್ರದ ಮೋಟಾರ್‌ಸೈಕಲ್ ವಲಯದಲ್ಲಿ ಜಾಗತಿಕ ನಾಯಕನಾಗಿ ಗುರುತಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಹೊಚ್ಚ ಹೊಸ ಹಂಟರ್ 350 ಬೈಕ್ ಬಿಡುಗಡೆ ಮಾಡಿದೆ. ಅತ್ಯಂತ ಆಕರ್ಷಕ, ಕಡಿಮೆ ತೂಕ, ಬೆಲೆಯೂ ಕಡಿಮೆ. ಇದು ಸ್ಟೈಲಿಷ್ ಹಾಗೂ ಕಾಂಪಾಕ್ಟ್ ಮೋಟಾರ್‌ಸೈಕಲ್ ಆಗಿದೆ. ನಗರದ ರಸ್ತೆಗಳಿಗೂ, ಹೈವೇ ಹಾಗೂ ಲಾಂಗ್ ರೈಡ್‌ಗೂ ನೂತನ ರಾಯಲ್ ಎನ್‌ಫೀಲ್ಡ್ ಹಂಟರ್ ಹೇಳಿಮಾಡಿಸಿದ ಬೈಕ್. 350 ಸೆಗ್ಮೆಂಟ್‌ನಲ್ಲಿ ಹಂಟರ್ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಬೈಕ್ ಆಗಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಪೈಕಿಯೂ ಹಂಟರ್ ಕಡಿಮೆ ಬೆಲೆಯ ಬೈಕ್ ಆಗಿದೆ. ಈ ಬೈಕನ್ನು ಮಹಿಳೆಯರು ಸುಲಭವಾಗಿ ರೈಡ್ ಮಾಡಬಹುದು. ಯುವ ಸಮೂಹವನ್ನು ಗಮನದಲ್ಲಿಟ್ಟು ಅತ್ಯಂತ ಸ್ಟೈಲಿಷ್, ರೋಮಾಂಚಕ ಬೈಕನ್ನು ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಿದೆ. ಕಾಂಪ್ಯಾಕ್ಟ್, ಹಗುರ, ಸದೃಢ ಮತ್ತು ಕಾರ್ಯ ನಿರ್ವಹಣೆಯ ತಾಜಾತನದ ಓಲ್ಡ್ ಸ್ಕೂಲ್‌ನ ಕೂಲ್ ಹಾಗೂ ರಾಯಲ್ ಎನ್‌ಫೀಲ್ಡ್ ಡಿಎನ್‌ಎ ಬಿಂಬಿಸುತ್ತದೆ. ರಾಯಲ್ ಎನ್‌ಫೀಲ್ಡ್ ಹಂಟರ್350 ಕರ್ನಾಟಕ ರಾಜ್ಯದ ತನ್ನ ಎಲ್ಲ 100ಕ್ಕೂ ಹೆಚ್ಚು ಟಚ್ ಪಾಯಿಂಟ್‌ಗಳಲ್ಲಿ ಲಭ್ಯ ವಿದೆ.
ನೂತನ ಹಂಟರ್ ಬೈಕ್ ಫ್ಯಾಕ್ಟರಿ ಸೀರಿಸ್, ಡ್ಯಾಪರ್ ಸೀರಿಸ್, ರೆಬಲ್ ಸೇರಿಸ್‌ಗಳಲ್ಲಿ ಲಭ್ಯವಿದೆ. ಹಂಟರ್ ಫ್ಯಾಕ್ಟರಿ ಸೀರೀಸ್ ಬೈಕ್ ಬೆಲೆ 1,49,900 ರೂಪಾಯಿ(ಎಕ್ಸ್ ಶೋ ರೂಂ), ಡ್ಯಾಪ್ಪರ್ ಸೀರೀಸ್‌ಗೆ 1,57,004 ರೂಪಾಯಿ(ಎಕ್ಸ್ ಶೋ ರೂಂ) ಹಾಗೂ ರೆಬೆಲ್ ಸೀರೀಸ್‌ಗೆ 1,63,622 ರೂಪಾಯಿ(ಎಕ್ಸ್ ಶೋ ರೂಂ) ಹಂಟರ್ 350 ರೆಬೆಲ್ ಬ್ಲೂ, ರೆಬೆಲ್ ರೆಡ್, ರೆಬೆಲ್ ಬ್ಲಾಕ್, ಡ್ಯಾಪ್ಪರ್, ಆಶ್, ಡ್ಯಾಪ್ಪರ್ ವೈಟ್, ಡ್ಯಾಪ್ಪರ್ ಗ್ರೇ, ಫ್ಯಾಕ್ಟರಿ ಬ್ಲಾಕ್ ಮತ್ತು ಫ್ಯಾಕ್ಟರಿ ಸಿಲ್ವರ್ ಎಂಟು ಆಕರ್ಷಕ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
undefined
ಬೆಂಗಳೂರಿನಲ್ಲಿ ರಾಯಲ್ ಎನ್‌ಫೀಲ್ಡ್ ಅತ್ಯಾಕರ್ಷಕ MS ಕಸ್ಟಮ್ಸ್ ಬೈಕ್ ಅನಾವರಣ!
ಹಂಟರ್ 350 ರಾಯಲ್ ಎನ್‌ಫೀಲ್ಡ್ ಸರಣಿಯಲ್ಲಿ ಅನನ್ಯ ವಿಶಿಷ್ಟತೆಯನ್ನು ಹೊಂದಿದೆ. ಪ್ರಶಸ್ತಿ ಪುರಸ್ಕೃತ 350 ಸಿಸಿ ಜೆ-ಸೀರೀಸ್ ಪ್ಲಾಟ್‌ಫಾರಂನಲ್ಲಿ ನಿರ್ಮಾಣವಾಗಿದ್ದು ಅತ್ಯಂತ ಚುರುಕಿನ ಹ್ಯಾರಿಸ್ ಪರ್ಫಾರ್ಮೆನ್ಸ್ ಚಾಸಿಸ್ ಹೊಂದಿರುವ ಹಂಟರ್ ನಗರದ ರಸ್ತೆಗಳಲ್ಲಿ ದುರ್ಬಲತೆ ತೋರದೆ ಸದೃಢತೆ ನೀಡುತ್ತದೆ. ಮುಕ್ತ ರಸ್ತೆಯಲ್ಲಿ ಮುಗುಳುನಗೆ ಮೂಡಿಸುವ ಆನಂದ ನೀಡುತ್ತದೆ. ಕಿರಿದಾದ ದಾರಿಗಳಲ್ಲಿ ರೈಡ್ ಅದರ ಕಾಂಪ್ಯಾಕ್ಟ್ ಜ್ಯಾಮಿತಿಯು ಚುರುಕಿನ ಸ್ಟೀರಿಂಗ್ ಮತ್ತು ವಿಶ್ವಾಸಪೂರ್ವಕ ಬ್ರೇಕಿಂಗ್‌ನಿಂದ ನೆರವಾಗುತ್ತದೆ. ಹೆದ್ದಾರಿ, ಲಾಂಗ್ ರೈಡ್‌ಗಳಲ್ಲಿ ರೀಮಿಕ್ಸ್ಡ್ ರೋಡ್‌ಸ್ಟರ್ ವಿಸ್ತಾರ ಅಲಾಯ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳಿಂದ ನಿಮ್ಮನ್ನು ಸರಾಗವಾಗಿ ಕರೆದೊಯ್ಯುತ್ತದೆ. ನಂತರ ತಿರುವುಗಳಲ್ಲಿ ಅದರ ದೃಢವಾದ ಮತ್ತು ಅತ್ಯಂತ ಪ್ರತಿಕ್ರಿಯಾತ್ಮಕ ಚಾಸಿಗಳು ಮತ್ತು ಟಾರ್ಕ್ 350ಸಿಸಿ ಎಂಜಿನ್ ನಿಮ್ಮ ಭಾವನೆಗಳಿಗೆ ಬೆಳಕು ನೀಡುತ್ತದೆ.
ಹಂಟರ್350 ವಿಶ್ವದಾದ್ಯಂತ ಹಲವಾರು ವರ್ಷಗಳ ಒಳನೋಟಗಳು ಹಾಗೂ ಗ್ರಾಹಕರ ಅಧ್ಯಯನಗಳ ಫಲಿತಾಂಶವಾಗಿದೆ. ಇದು ದೊಡ್ಡ ನಗರಗಲ್ಲಿ ಮನೆಯಲ್ಲಿರುವಂತೆ ಭಾವಿಸುವ ಮೋಟಾರ್‌ಸೈಕಲ್ ಆಗಿದೆ ಮತ್ತು ಅನುಭವಿ ರೈಡರ್‌ಗೆ ಉತ್ಸಾಹಕರ ಮತ್ತು ಹೊಸ ರೈಡರ್‌ಗೆ ಸುಲಭ ಮತ್ತು ಬಳಸಬಲ್ಲದಾಗಿದೆ. ಇದರ ಕಿರಿದಾದ ವ್ಹೀಲ್‌ಬೇಸ್, ಹೆಚ್ಚು ಕಾಂಪ್ಯಾಕ್ಟ್ ಜ್ಯಾಮಿತಿ ಹಾಗೂ ಹಗುರ ತೂಕದಿಂದ ಇದನ್ನು ನಗರದ ಸನ್ನಿವೇಶದಲ್ಲಿ ಹೆಚ್ಚು ಚುರುಕು ಮತ್ತು ಕುಶಲತೆಯ ಚಾಲನೆಗೆ ಅನುಕೂಲ ಕಲ್ಪಿಸಿದೆ. ಈ ಹೊಸ ಮರು ಕಲ್ಪಿಸಿದ ರೋಡ್‌ಸ್ಟರ್ ನಮ್ಮ ಶುದ್ಧ ಮೋಟಾರ್‌ಸೈಕ್ಲಿಂಗ್ ವಿಶ್ವದಲ್ಲಿ ಸಂಪೂರ್ಣ ಹೊಸ ಜಾಗತಿಕ ಗ್ರಾಹಕರ ಸಮೂಹವನ್ನು ಹುಟ್ಟುಹಾಕಲಿದೆ ಎಂಬ ವಿಶ್ವಾಸ ನಮ್ಮದು” ಎಂದು ಹಂಟರ್ 350 ಬಿಡುಗಡೆ ಕುರಿತು ಇಂಡಿಯಾ ಬಿಸಿನೆಸ್ ಹೆಡ್ ವಿ. ಜಯಪ್ರದೀಪ್ ಹೇಳಿದ್ದಾರೆ.
Test Ride Review ಎತ್ತರ, ಭಾರ,ಬೆಲೆ ಕಡಿಮೆ, ಇದು ಹಿಮಾಲಯನ್ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411!
ಇದು ಎರಡು ವಿಶಿಷ್ಟ ಆವೃತ್ತಿಗಳಲ್ಲಿ ಬಂದಿದೆ- ರೆಟ್ರೊ ಹಂಟರ್ ಮತ್ತು ಮೆಟ್ರೊ ಹಂಟರ್- ಎರಡೂ ಟ್ರೆಂಡ್‌ಗೆ ಅನುಗುಣವಾಗಿ ಬ್ಲಾಕ್ಡ್-ಔಟ್ ಎಂಜಿನ್‌ಗಳು ಮತ್ತು ಬಿಡಿಭಾಗಗಳೊಂದಿಗೆ ರೂಪಿಸಲಾಗಿದೆ. ರೆಟ್ರೊ ಹಂಟರ್17 ಸ್ಪೋಕ್‌ನ ಚಕ್ರಗಳನ್ನು ಹೊಂದಿದೆ ಮತ್ತು 300 MM ಫ್ರಂಟ್ ಡಿಸ್ಕ್ ಬ್ರೇಕ್ , ರಿಯರ್ ಡ್ರಮ್ ಬ್ರೇಕ್, ಸಿಂಗಲ್ ಚಾನೆಲ್ ಎಬಿಎಸ್, ಡಿಜಿಟಲ್ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸರಿಯಾದ ಪ್ರಮಾಣದ ಅಗತ್ಯ ಮಾಹಿತಿಯನ್ನು ಪ್ರದರ್ಶಿಸುತ್ತದೆ ಹಾಗೂ ಎರಡು ಕ್ಲಾಸಿಕಲ್, ಒಂದು ಬಣ್ಣದ ಟ್ಯಾಂಕ್‌ಗಳ ಆಯ್ಕೆ ನೀಡುತ್ತದೆ.
ಮೆಟ್ರೊ ಹಂಟರ್ ಹೆಚ್ಚು ಸಮಕಾಲೀನ ನೋಟವನ್ನು ಡ್ಯುಯಲ್-ಕಲರ್ ಲಿವರೀಸ್, ಕಾಸ್ಟ್ ಅಲಾಯ್ ವ್ಹೀಲ್ಸ್, ಅಗಲವಾದ ಟ್ಯೂಬ್‌ಲೆಸ್ ಟೈರ್ ರೆಟ್ರೋ ಹೆಡ್‌ಲೈಟ್ ಹೊಂದಿದೆ. ಮೆಟ್ರೊ ಹಂಟರ್‌ನ ಎರಡು ಆವೃತ್ತಿಗಳಲ್ಲಿ ಐದು ಬಣ್ಣಗಳಿವೆ. ಮೂರು ಆಕರ್ಷಕ ಟ್ಯಾಂಕ್ ಬಣ್ಣ ಮತ್ತು ಗ್ರಾಫಿಕ್ಸ್ ಆಯ್ಕೆ ಒಂದು ಆವೃತ್ತಿಯಲ್ಲಿದೆ ಮತ್ತು ಈ ಶ್ರೇಣಿಯ ಮುಂಚೂಣಿಯ ಆವೃತ್ತಿಯನ್ನು ರಾಯಲ್ ಎನ್‌ಫೀಲ್ಡ್ನಲ್ಲಿ ಹಿಂದೆಂದೂ ಕಾಣದ ಮೂರು ಅತ್ಯಂತ ಅನನ್ಯ ಮತ್ತು ಸಂಚಲನಾತ್ಮಕ ಪೆಟ್ರೋಲ್ ಟ್ಯಾಂಕ್ ವಿನ್ಯಾಸಗಳ ಆಯ್ಕೆಯೊಂದಿಗೆ ತರಲಾಗಿದೆ. ಇದು ರಾಯಲ್ ಎನ್‌ಫೀಲ್ಡ್ಸ್ ಪ್ರಶಂಸನೀಯ ಟ್ರಿಪ್ಪರ್ ಟಿಬಿಟಿ ನ್ಯಾವಿಗೇಷನ್‌ಗೆ ಹೊಂದಿಕೊಳ್ಳುತ್ತಿದ್ದು ಅದು ಅಧಿಕೃತ ಮೋಟಾರ್‌ಸೈಕಲ್ ಅಕ್ಸೆಸರಿಯಾಗಿ ಲಭ್ಯವಿದೆ.
ಎಲ್‌ಇಡಿ ಟೈಲ್ ಲ್ಯಾಂಪ್ ಮತ್ತು ಪ್ರೀಮಿಯಂ ಡಿಜಿಟಲ್ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಓಡೊಮೀಟರ್, ಟ್ರಿಪ್‌ಮೀಟರ್, ಗೇರ್ ಇಂಡಿಕೇಟರ್, ಫ್ಯೂಯೆಲ್ ಗ್ರಾಫ್ ಬಾರ್ ಅನ್ನು ಕಡಿಮೆ ಇಂಧನದ ಎಚ್ಚರಿಕೆಯೊಂದಿಗೆ, ಗಡಿಯಾರ ಮತ್ತು ಸರ್ವೀಸ್ ರಿಮೈಂಡರ್ ಅನ್ನು ಸ್ಟೈಲಿಷ್ ಪ್ಯಾಕೇಜ್‌ನಲ್ಲಿ ನೀಡುತ್ತದೆ. ಎಲ್ಲ ಹಂಟರ್ ಆವೃತ್ತಿಗಳೂ ಗೊಂದಲವಿಲ್ಲದ ಹ್ಯಾಂಡಲ್‌ಬಾರ್ ನಿಯಂತ್ರಣಗಳನ್ನು ಹೊಂದಿದ್ದು ಅವುಗಳ ತಿರುಗುವ ಶಕ್ತಿ ಮತ್ತು ಲೈಟ್‌ಗಳ ಸ್ವಿಚ್‌ಗಳು ಹಿಂದಿನ ಆವೃತ್ತಿಗೆ ನವಿರಾದ ನಮನ ನೀಡುತ್ತವೆ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ನೊಂದಿಗೆ ಜೋಡಿಸಲ್ಪಟ್ಟಿವೆ. ರಾಯಲ್ ಎನ್‌ಫೀಲ್ಡ್ ಚೀಫ್ ಆಫ್ ಡಿಸೈನ್ ಮಾರ್ಕ್ ವೆಲ್ಸ್, “ರಾಯಲ್ ಎನ್‌ಫೀಲ್ಡ್ಗೆ ವಿಶ್ವದಲ್ಲಿ ಅತ್ಯಂತ ಸಹಜ ಅಂಶವೆಂದರೆ ವಿನೋದದ, ಹಗುರ ಮತ್ತು ಹೆಚ್ಚು ಚುರುಕಿನ 30 ರೋಡ್‌ಸ್ಟರ್ ಅಭಿವೃದ್ಧಿಪಡಿಸುವುದಾಗಿದೆ.