ಕೈಗೆಟುಕುವ ದರ, 236 ಕಿ.ಮೀ ಮೈಲೇಜ್: ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮೇ.23ಕ್ಕೆ ಲಾಂಚ್!

By Suvarna NewsFirst Published May 6, 2023, 12:41 PM IST
Highlights

ಬೆಂಗಳೂರು ಮೂಲದ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಸಿಂಪಲ್ ಒನ್ ಬಿಡುಗಡೆಗೆ ಸಜ್ಜಾಗಿದೆ. ವಿಶೇಷ ಅಂದರೆ ಅದು ಅತ್ಯಧಿಕ ಮೈಲೇಜ್ ನೀಡಬಲ್ಲ ಸ್ಕೂಟರ್ ಆಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 236 ಕಿ.ಮೀ ಮೈಲೇಜ್ ನೀಡಲಿದೆ. ಇಷ್ಟೇ ಅಲ್ಲ ಕೈಗೆಟುಕುವ ದರದಲ್ಲಿ ಸ್ಕೂಟರ್ ಲಭ್ಯವಾಗಲಿದೆ. ಬೆಲೆ, ಹಾಗೂ ವಿಶೇಷತೆ ಇಲ್ಲಿದೆ.

ಬೆಂಗಳೂರು(ಮೇ.06): ಭಾರತದಲ್ಲಿ ಈಗಾಗಲೇ ಹಲವು ಎಲೆಕ್ಟ್ರಿಕ್ ಸ್ಕೂಟರ್ ಭಾರಿ ಸಂಚಲನ ಸೃಷ್ಟಿಸಿದೆ.  ಇದೀಗ ಬೆಂಗಳೂರು ಮೂಲದ ಮತ್ತೊಂದು ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ.ಹಲವು ವಿಶೇಷತೆಗಳ ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮೇ.23ಕ್ಕೆ ಬಿಡುಗಡೆಯಾಗಲಿದೆ. ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಗರಿಷ್ಠ ಮೈಲೇಜ್ ನೀಡಬಲ್ಲ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಸಿಂಪಲ್ ಒನ್ ಪಾತ್ರವಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 236 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದರ ಬೆಲೆ ಸ್ಟಾಂಡರ್ಡ್ ಮಾಡೆಲ್ ಸ್ಕೂಟರ್‌ಗೆ 1 .10 ಲಕ್ಷ ರೂಪಾಯಿ ಹಾಗೂ ಟಾಪ್ ಮಾಡೆಲ್ ಬೆಲೆ 1.45 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಸದ್ಯ ಲಭ್ಯವಿರುವ ಸ್ಕೂಟರ್ ಪೈಕಿ ಕಡಿಮೆ ಬೆಲೆಯಲ್ಲಿ ಗರಿಷ್ಠ ಮೈಲೇಜ್ ನೀಡಬಲ್ಲ ಸ್ಕೂಟರ್ ಇದಾಗಿದೆ. ಬಿಡುಗಡೆ ಬೆನ್ನಲ್ಲೇ ಸಿಂಪಲ್ ಒನ್ ಬುಕಿಂಗ್ ಮಾಡಿದ ಗ್ರಾಹಕರಿಗೆ ವಿತರಣೆ ಮಾಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. 4.8kWh ಬ್ಯಾಟರಿ ಪ್ಯಾಕ್ ಹೊಂದಿರುವ ಸಿಂಪಲ್ ಒನ್ 0-40 ಕಿಲೋಮೀಟರ್ ವೇಗವನ್ನು ಕೇವಲ 2.7 ಸೆಕೆಂಡ್ ತೆಗೆದುಕೊಳ್ಳಲಿದೆ. LED ಲೈಟಿಂಗ್, ಬ್ಲೂಟೂಥ್ ಕನೆಕ್ಷನ್, ವೈಫ್, ಟಿಎಫ್‌ಟಿ ಡಿಸ್‌ಪ್ಲೇ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.

Simple E car ಸಿಂಪಲ್ ಒನ್ ಸ್ಕೂಟರ್ ರೀತಿ, ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಲಾಂಚ್!

ಸಿಂಪಲ್ ಒನ್ ಸ್ಕೂಟರ್ 4 ಮೂಡ್‌ಗಳಲ್ಲಿ ರೈಡಿಂಗ್ ಲಭ್ಯವಿದೆ. ಇಕೋ , ರೈಡ್,ಡ್ಯಾಶ್ ಹಾಗೂ ಸೋನಿಕ್ ಮೊಡ್ ರೈಡಿಂಗ್ ಹೊಂದಿದೆ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ರೇರ್ ಮೊನೋ ಶಾಕ್ಸ್ ಸಸ್ಪೆಶನ್ ಹೊಂದಿದೆ. 12 ಇಂಚಿನ ಅಲೋಯ್ ವೀಲ್ ಹೊಂದಿದ್ದು, ಎರಡು ಡಿಸ್ಕ್ ಬ್ರೇಕ್ ಹೊಂದಿದೆ. ನೂತನ ಸಿಂಪಲ್ ಒನ್ ಒಲಾ ಎಸ್1, ಎಥರ್ 450, ಬಜಾಜ್ ಚೇತಕ್, ಟಿವಿಎಸ್ ಐಕ್ಯೂಬ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿದೆ.

ಬೆಂಗಳೂರು ಅತೀ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ ನಗರವಾಗಿದೆ. ಹೀಗಾಗಿ ಮೂಲಭೂತ ಸೌಕರ್ಯ ಹೆಚ್ಚಿಸಲು ಸರ್ಕಾರ ಚಾರ್ಜಿಂಗ್ ಸ್ಟೇಶನ್ ಅಳವಡಿಕೆ ಮಾಡುತ್ತಿದೆ.  ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿನ 15 ಹೆದ್ದಾರಿಗಳಲ್ಲಿ ಒಟ್ಟು 19 ಫಾಸ್ಟ್‌ ಚಾರ್ಜಿಂಗ್‌ ಇ.ವಿ. ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಭಾರತ್‌ ಪೆಟ್ರೋಲಿಯಂ ಕಾರ್ಪೋರೇಶನ್‌ ಲಿಮಿಟೆಡ್‌(ಬಿಪಿಸಿಎಲ್‌) ಘೋಷಿಸಿದೆ.

ಪ್ರತಿ 100 ಕಿ.ಮೀ. ಅಂತರದಲ್ಲಿ ಚಾರ್ಜಿಂಗ್‌ ಸ್ಟೇಶನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಕೇವಲ 30 ನಿಮಿಷಗಳಲ್ಲಿ ಪೂರ್ತಿಯಾಗಿ ಚಾಜ್‌ರ್‍ ಮಾಡಿಕೊಳ್ಳುವ ಸೌಲಭ್ಯ ಒದಗಿಸಲಾಗಿದೆ. ಒಟ್ಟಾರೆ ಬಿಪಿಸಿಎಲ್‌ನ 110 ಇಂಧನ ಸ್ಟೇಶನ್‌ಗಳನ್ನು ಗುರುತಿಸಿದ್ದು, ಇವುಗಳ ನಡುವೆ 19 ಚಾರ್ಜಿಂಗ್‌ ಸ್ಟೇಶನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಕರ್ನಾಟಕದಲ್ಲಿ 6, ಕೇರಳದಲ್ಲಿ 3 ಮತ್ತು ತಮಿಳುನಾಡಿನಲ್ಲಿ 10 ಇ.ವಿ. ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಬಿಪಿಸಿಎಲ್‌ನ ದಕ್ಷಿಣದ ಮುಖ್ಯಸ್ಥ ಪುಷ್‌್ಪ ಕುಮಾರ್‌ ನಾಯರ್‌ ಹೇಳಿದ್ದಾರೆ.

Simple Scooter ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ದಿನಾಂಕ ಪ್ರಕಟ, 30 ಸಾವಿರ ಬುಕಿಂಗ್!

ಬಿಪಿಸಿಎಲ್‌ನ ಈ ಇ.ವಿ. ಕಾರಿಡಾರ್‌ಗಳು ಆಂಧ್ರಪ್ರದೇಶದಲ್ಲಿನ ತಿರುಪತಿ, ಕರ್ನಾಟಕದಲ್ಲಿನ ಬಂಡಿಪುರ ರಾಷ್ಟ್ರೀಯ ಉದ್ಯಾನವನ, ಕೇರಳದ ಗುರುವಾಯೂರು, ಕದಂಪುಳ ದೇಗುಲ, ಕನ್ಯಾಕುಮಾರಿ, ಮಧುರೈನ ಮೀನಾಕ್ಷಿ ದೇವಸ್ಥಾನಗಳನ್ನು ಸಂಪರ್ಕಿಸಲಿದೆ ಎಂದು ಅವರು ಹೇಳಿದ್ದಾರೆ.

click me!