
ಚೆನ್ನೈ (ಅ.08) ರಾಯಲ್ ಎನ್‌ಫೀಲ್ಡ್ ಬೈಕ್ ಎಲ್ಲಾ ವರ್ಗದವರಿಗೆ ಅಚ್ಚು ಮೆಚ್ಚು. ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಸುದೀರ್ಘ ಇತಿಹಾಸವಿದೆ. ಈಗಲೂ ರಾಯಲ್ ಎನ್‌ಫೀಲ್ಡ್ ಬೈಕ್ ಅದೇ ಗತ್ತು ಉಳಿಸಿಕೊಂಡಿದೆ. ರೆಟ್ರೋ ಶೈಲಿಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಭಾರತೀಯ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿದೆ. ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದ್ದು, ಹೊಸ 250 ಸಿಸಿ ಬೈಕ್ ಬಿಡುಗಡೆ ಮಾಡುತ್ತಿದೆ. ರಾಯಲ್ ಎನ್‌ಫೀಲ್ಡ್ ಎಂಟ್ರಿ ಲೆವೆಲ್ 350 ಸಿಸಿಯಿಂದ ಆರಂಭಗೊಳ್ಳುತ್ತಿದೆ. ಇದೀಗ 250 ಸಿಸಿನಿಂದ ಎಂಟ್ರಿ ಲೆವೆಲ್ ಬೈಕ್ ಆರಂಗೊಳ್ಳಲಿದೆ.
ರಾಯಲ್ ಎನ್‌ಫೀಲ್ಡ್ 250 ಸಿಸಿ ಬೈಕ್ ಬೆಲೆ 1.25 ರಿಂದ 1.50 ಲಕ್ಷ ರೂಪಾಯಿವರೆಗೆ (ಎಕ್ಸ್ ಶೋ ರೂಂ) ಇರಲಿದೆ ಎಂದು ಹೇಳಲಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಜೆ ಸೀರಿಸ್ ಪ್ಲಾಟ್‌ಫಾರ್ಮ ಅಡಿಯಲ್ಲಿ ಬೈಕ್ ಉತ್ಪಾದನೆ ಮಾಡಲಾಗಿದ್ದು, ಇದೀಗ ಹಲವರ ಕುತೂಹಲಕ್ಕೆ ಕಾರಣವಾಗಿದೆ. ಬೇಸ್ ಡ್ರಮ್ ವೇರಿಯೆಂಟ್ ಬೈಕ್ ಬೆಲೆ 1.25 ಲಕ್ಷ ರೂಪಾಯಿಯಿಂದ (ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಇನ್ನು ಎಬಿಎಸ್ ವೇರಿಯೆಂಟ್ ಬೈಕ್ ಬೆಲೆ 1.50 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ರಾಯಲ್ ಎನ್‌ಫೀಲ್ಡ್ 350 ಸಿಸಿ ಹಾಗೂ ಅದಕ್ಕಿಂತ ಮೇಲಿನ ಬೈಕ್ ಮಾರುಕಟ್ಟೆ ಬಿಡುಗಡೆ ಮಾಡುತ್ತಿದ್ದ ಕಾರಣ ಇತರ ಪ್ರತಿಸ್ಪರ್ಧಿಗಳು 150 ಸಿಸಿಯಿಂದ 250 ಸಿಸಿವರೆಗೆ ಅಧಿಪತ್ಯ ಸಾಧಿಸಿದ್ದರು. ಈ ಪೈಕಿ ಬಜಾಜ್ ಅವೆಂಜರ್ 220, ಹೊಂಡಾ ಸಿಬಿ200 ಎಕ್ಸ್ ಸೇರಿದಂತೆ ಹಲವು ಪ್ರತಿಸ್ಪರ್ಧಿ ಬೈಕ್‌ಗಳು ಮಾರುಕಟ್ಟೆಯಲ್ಲಿ ಅಬ್ಬರಿಸಿತ್ತು. ಇದೀಗ ಈ ಎಲ್ಲಾ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ರಾಯಲ್ ಎನ್‌ಫೀಲ್ಡ್ 250 ಬೈಕ್ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ.
ರಾಯಲ್ ಎನ್‌ಫೀಲ್ಡ್ 250 ಬೈಕ್ ಉತ್ತಮ ಪರ್ಫಾಮೆನ್ಸ್ ಹೊಂದಿದೆ. ಕಾರಣ 249 ಸಿಸಿ ಎಂಜಿನ್, ಸಿಂಗಲ್ ಸಿಲಿಂಡರ್ ಬಿಎಸ್6 ಎಂಜಿನ್ ಹೊಂದಿದೆ. 14 bhp ಪವರ್ (7,000 ಆರ್‌ಪಿಎಂ) ಹಾಗೂ 19 ಎನ್ಎಂ ಟಾರ್ಕ್ (5000 ಆರ್‌ಪಿಎಂ) 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. 145 ಕಿಲೋಮೀಟರ್ ಗರಿಷ್ಠ ಸ್ಪೀಡ್ ಹೊಂದಿದೆ. ಇನ್ನು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ , ರೇರ್ ಟ್ವಿನ್ ಶಾಕ್ಸ್ ಸಸ್ಪೆಶನ್ ಹೊಂದಿದೆ.ಹೀಗಾಗಿ ಹೆದ್ದಾರಿ ಹಾಗೂ ಗುಂಡಿ ಬಿದ್ದ ರಸ್ತೆಗಳಲ್ಲಿ ಸವಾರಿಗೆ ಉತ್ತಮವಾಗಿದೆ.
ಹೊಸ ರಾಯಲ್ ಎನ್‌ಫೀಲ್ಡ್ ಬೈಕ್ 2,000 ಎಂಎಂ ಉದ್ದ, 780 ಎಂಎಂ ಅಘಲ ಹಾಗೂ 1,100 ಎಂಎಂ ಎತ್ತರವಿದೆ. ಇದರ ವೀಲ್‌ಹೇಸ್ 1,350 ಎಂಎಂ. 145ಕೆಜಿ ಕರ್ಬ್ ತೂಕ ಹೊಂದಿದೆ. 170 ಎಂಎಂ ಗ್ರೌಂಡ್ ಕ್ಲೀಯರೆನ್ಸ್ ಹೊಂದಿದೆ. ಟೀಯರ್‌ಡ್ರಾಪ್ ಪೆಟ್ರೋಲ್ ಟ್ಯಾಂಕ್ ವಿನ್ಯಾಸ, ರೌಂಡ್ ರೆಟ್ರೋ ಶೈಲಿಯ ಹೆಡ್‌ಲ್ಯಾಂಪ್ಸ್, ಎಲ್‌ಇಡಿ ಟೈಲ್‌ಲೈಟ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ ಇನ್ನು ಕಪ್ಪು, ಡಾರ್ಕ್ ಗ್ರೀನ್ ಸೇರಿದಂತೆ ಹಲವು ಬಣ್ಣಗಳಲ್ಲಿ ಬೈಕ್ ಲಭ್ಯವಿದೆ.