ಭಾರತದ ಮೊದಲ ಹೈಪರ್ ಸ್ಪೋರ್ಟ್ಸ್ ಸ್ಕೂಟರ್ ಲಾಂಚ್, ಕಡಿಮೆ ಬೆಲೆಯಲ್ಲಿ ಟಿವಿಎಸ್ Nಟಾರ್ಕ್ 150

Published : Sep 08, 2025, 05:49 PM IST
TVS Ntorq150

ಸಾರಾಂಶ

ಟಿವಿಎಸ್ ಮೋಟಾರ್ ಕಂಪನಿಯು ಟಿವಿಎಸ್ ಎನ್‌ಟಾರ್ಕ್ 150 ಬಿಡುಗಡೆ ಮಾಡಿದೆ. ಭಾರತದ ಅತ್ಯಂತ ವೇಗದ ಮತ್ತು ಮೊದಲ ಹೈಪರ್ ಸ್ಪೋರ್ಟ್ ಸ್ಕೂಟರ್ ಇದಾಗಿದ್ದು, ಜಿಎಸ್‌ಟಿ ಕಡಿತದಿಂದ ಸ್ಕೂಟರ್ ಬೆಲೆ ಮತ್ತಷ್ಟು ಅಗ್ಗವಾಗಿದೆ.

ಬೆಂಗಳೂರು (ಸೆ.08) ಟಿವಿಎಸ್ ಮೋಟಾರ್ ಕಂಪನಿ (ಟಿವಿಎಸ್‌ಎಂ), ಭಾರತದ ಅತ್ಯಂತ ವೇಗದ ಹೈಪರ್ ಸ್ಪೋರ್ಟ್ ಸ್ಕೂಟರ್ ಟಿವಿಎಸ್ ಎನ್‌ಟಾರ್ಕ್ 150 ಬಿಡುಗಡೆ ಮಾಡಿದೆ. 149.7cc ರೇಸ್-ಟ್ಯೂನ್ಡ್ ಎಂಜಿನ್‌ನಿಂದ, ಸ್ಟೆಲ್ತ್ ಏರ್‌ಕ್ರಾಫ್ಟ್ ವಿನ್ಯಾಸದಿಂದ ಪ್ರೇರಿತವಾದ ಈ ಸ್ಕೂಟರ್, ಹೊಸ ಜನರೇಶನ್ ಸವಾರರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಬೈಕ್ ರೀತಿಯ ಪವರ್, 20ಕ್ಕೂ ಹೆಚ್ಚು ಹೊಸ ಫೀಚರ್ಸ್, ಕೈಗೆಟುಕುವ ಬೆಲೆ, ಅತ್ಯಾಕರ್ಷಕ ವಿನ್ಯಾಸ ಸೇರಿದಂತೆ ಹಲವು ವಿಶೇಷತೆ ಈ ಸ್ಕೂಟರ್‌ನಲ್ಲಿದೆ. ಈ ಸ್ಕೂಟರ್ ಬೆಲೆ 119,000 (ಎಕ್ಸ್-ಶೋರೂಂ).ಸೆಪ್ಟೆಂಬರ್ 22ರ ಬಳಿಕ ಬೆಲೆ ಮತ್ತಷ್ಟುಇಳಿಕೆಯಾಗಲಿದೆ.

TVS NTORQ ಹೊಸ ಸ್ಕೂಟರ್ ಹಲವು ವಿಶೇಷತೆ ಹೊಂದಿದೆ. ಇದರ ಮಲ್ಟಿಪಾಯಿಂಟ್‍ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ವೈಜ್ಞಾನಿಕ ವಿಂಗ್‌ಲೆಟ್‌ಗಳು, ಬಣ್ಣದ ಮಿಶ್ರಲೋಹದ ಚಕ್ರಗಳು ಮತ್ತು ಸಿಗ್ನೇಚರ್ ಮಫ್ಲರ್ ನೋಟ್ ಅದರ ರೇಸಿಂಗ್ ಡಿಎನ್‌ಎಯನ್ನು ಎತ್ತಿ ತೋರಿಸುತ್ತದೆ, ಆದರೆ ಅಲೆಕ್ಸಾ ಮತ್ತು ಸ್ಮಾರ್ಟ್‌ವಾಚ್ ಏಕೀಕರಣ, ಲೈವ್ ಟ್ರ್ಯಾಕಿಂಗ್, ನ್ಯಾವಿಗೇಷನ್ ಮತ್ತು ಒಟಿಎ ನವೀಕರಣಗಳು ಸೇರಿದಂತೆ 50+ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿರುವ ಹೈ-ರೆಸ್ ಖಿಈಖಿ ಕ್ಲಸ್ಟರ್ ಇದನ್ನು ಅದರ ವರ್ಗದಲ್ಲಿ ಅತ್ಯಂತ ಮುಂದುವರಿದ ಸ್ಕೂಟರ್ ಅನ್ನಾಗಿಸಿದೆ.

ಕೈಗೆಟುಕುವ ದರದಲ್ಲಿ ಸ್ಪೋರ್ಟ್ ಬೈಕ್, ಹೊಸ ಟಿವಿಎಸ್ ಅಪಾಚೆ 160 ಬೈಕ್ ಲಾಂಚ್

ವಿಭಾಗದಲ್ಲಿ ಮೊದಲ ವೈಶಿಷ್ಟ್ಯಗಳು

* ವೇಗವರ್ಧನೆ (0-60 ಕಿಮೀ ಗಂಟೆಗೆ)- 6.3 ಸೆಕೆಂಡುಗಳು

* ಎಬಿಎಸ್ & ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ‌ ಮಲ್ಟಿ ಪಾಯಿಂಟ್‌ ಲ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು

* ಸ್ಟೈಲಿಶ್ ಫ್ರಂಟ್ ಕಾಂಬಿನೇಶನ್ ಲ್ಯಾಂಪ್‌ಗಳು

* ರೇಸ್ & ಸ್ಟ್ರೀಟ್ ಮೋಡ್

* iGo ಅಸಿಸ್ಟ್

* ISS – ಸ್ಟ್ರೀಟ್ ಮೋಡ್

* ಬೂಸ್ಟ್ – ರೇಸ್ ಮೋಡ್

* ಸಿಗ್ನೇಚರ್ ಮಫ್ಲರ್ ನೋಟ್

* ನೇಕೆಡ್ ಹ್ಯಾಂಡಲ್‌ಬಾರ್

* ಏರೋಡೈನಾಮಿಕ್ ವಿಂಗ್ಲೆಟ್‌ಗಳು

* 50+ ಸಂಪರ್ಕಿತ ವೈಶಿಷ್ಟ್ಯಗಳೊಂದಿಗೆ ಹೈ-ರೆಸ್ ಟಿಎಫ್‌ಟಿ ಕ್ಲಸ್ಟರ್

* 4-ವೇ ನ್ಯಾವಿಗೇಷನ್ ಸ್ವಿಚ್‌ಗಳು

* ಅಲೆಕ್ಸಾ ಇಂಟಿಗ್ರೇಷನ್

* ಸ್ಮಾರ್ಟ್‌ವಾಚ್ ಇಂಟಿಗ್ರೇಷನ್

* ವಾಹನ ಲೈವ್ ಟ್ರ್ಯಾಕಿಂಗ್

ಕಾರ್ಯಕ್ಷಮತೆ

ಟಿವಿಎಸ್ ಎನ್‌ಟಾರ್ಕ್ 150 149.7 ಸಿಸಿ, ಏರ್-ಕೂಲ್ಡ್, O3CTech ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಇದು 7,000 ಆರ್‌ಪಿಎಂನಲ್ಲಿ 13.2 ಪಿಎಸ್ ಮತ್ತು 5,500 ಆರ್‌ಪಿಎಂನಲ್ಲಿ 14.2 ಎನ್‌ಎಂ ಟಾರ್ಕ್ ಅನ್ನು ನೀಡುತ್ತದೆ. ಕೇವಲ 6.3 ಸೆಕೆಂಡುಗಳಲ್ಲಿ ಗಂಟೆಗೆ 0–60 ಕಿಮೀ ವೇಗವನ್ನು ಹೆಚ್ಚಿಸುವ ಮತ್ತು ಗಂಟೆಗೆ 104 ಕಿಮೀ ವೇಗವನ್ನು ತಲುಪುವ ಇದು ತನ್ನ ವರ್ಗದಲ್ಲಿ ಅತ್ಯಂತ ವೇಗದ ಸ್ಕೂಟರ್ ಆಗಿ ಹೊರಹೊಮ್ಮಿದೆ.

 

PREV
Read more Articles on
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್