650 ಸಿಸಿಯ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ನಿನ್ನೆ ಒಂದೇ ದಿನ ದೇಶಾದ್ಯಂತ ಕೇವಲ 120 ಕ್ಷಣಗಳಲ್ಲಿ ಅಂದರೆ ಎರಡು ನಿಮಿಷದಲ್ಲಿ 120 ಬೈಕುಗಳು ಮಾರಾಟವಾಗಿವೆ.
ನವದೆಹಲಿ(ಡಿ.07): ಮಧ್ಯಮ-ಗಾತ್ರದ ಮೋಟಾರ್ ಸೈಕಲ್ ವಲಯ ಅಂದರೆ 250 ಸಿಸಿಯಿಂದ 750 ಸಿಸಿ (CC) ವರೆಗಿನ ಬೈಕುಗಳ ವಲಯದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್(Royal enfield), ತನ್ನ 120ನೇ ವರ್ಷದ ವಾರ್ಷಿಕೋತ್ಸವದ (Anniversary) ಅಂಗವಾಗಿ 650 ಸಿಸಿಯ ಎರಡು ಮಾದರಿಯ ಟ್ವಿನ್ ಮೋಟಾರ್‌ಸೈಕಲ್‌ಗಳ ಲಿಮಿಟೆಡ್ ಎಡಿಷನ್ (limited edition) ಅನ್ನು ಬಿಡುಗಡೆಗೊಳಿಸಿದೆ. ಈ ವಾಹನಗಳ ಬೇಡಿಕೆ ಎಷ್ಟಿದೆಯೆಂದರೆ, ಜನರು ಇದರ ಬಿಡುಗಡೆ ಘೋಷಣೆಯಾಗುತ್ತಿದ್ದಂತೆ ಖರೀದಿಗೆ ಮುಗಿಬಿದ್ದಿದ್ದಾರೆ. ಕೇವಲ 120 ಕ್ಷಣಗಳು ಅಂದರೆ ಕೇವಲ 2 ನಿಮಿಷಗಳಲ್ಲಿ ಲಭ್ಯವಿದ್ದ 120 ವಾಹನಗಳು ಮಾರಾಟವಾಗಿವೆ (sold out))
ಡಿಸೆಂಬರ್ 6ರಂದು ರಾಯಲ್ ಎನ್‌ಫೀಲ್ಡ್‌ನ ಅಪರೂಪದ ವಾಹನಗಳಾದ ಇಂಟರ್‌ಸೆಪ್ಟರ್ ಐಎನ್‌ಟಿ (Intercepter INT 650) ಮತ್ತು ಕಾಂಟಿನೆಂಟಲ್ ಜಿಟಿ-650ಯ (Continental GT-650) ಆನ್‌ಲೈನ್ ಮಾರಾಟ ಆರಂಭಗೊಂಡಿತ್ತು. ಇದಕ್ಕಾಗಿ ಕಾದಿದ್ದವರಂತೆ ಜನರು 60 ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟರ್ ಜಿಟಿ 650 ಅನ್ನು ಖರೀದಿಸಿದ್ದಾರೆ. ಈ ಬೈಕುಗಳಿಗೆ ಕಾಯ್ದಿರಿಸುವ ಅವಕಾಶ ಕಲ್ಪಿಸಿರಲಿಲ್ಲ. ಬದಲಿಗೆ, ಮೊದಲು ಬಂದವರಿಗೆ ಆದ್ಯತೆ ಮೇರೆಗೆ ವಾಹನ ಮಾರಾಟ ಮಾಡಲಾಗುತ್ತಿದೆ.
Royal Enfield bikes 2022:ಮುಂದಿನ ವರ್ಷ ರಾಯಲ್ ಎನ್‌ಫೀಲ್ಡ್ ಹೊಸ ಮಾಡೆಲ್‌ಗಳು ರೆಡಿ, ಯಾವೆಲ್ಲ ಇವೆ ಗೊತ್ತಾ?
ಸೋಮವಾರ ರಾತ್ರಿ 7 ಗಂಟೆಗೆ ಮಾರಾಟ ಪ್ರಕ್ರಿಯೆ ಆರಂಭಿಸಲಾಗಿತ್ತು. ಮತ್ತು ದಾಖಲೆಯ (Record) ಸಮಯದಲ್ಲಿ ಕ್ಷಣಕ್ಕೊಂದರಂತೆ ಬೈಕುಗಳು ಮಾರಾಟವಾದವು.
ಈ ಅವಳಿ ವಾಹನಗಳ ಬಿಡುಗಡೆಯನ್ನು ರಾಯಲ್ ಎನ್‌ಫೀಲ್ಡ್ 2021ರಲ್ಲಿ ಮಿಲಾನ್‌ನಲ್ಲಿ ನಡೆದ ಇಐಸಿಎಂಎ (EICMA) ನಲ್ಲಿ ಘೋಷಿಸಿತ್ತು. ವಾರ್ಷಿಕೋತ್ಸವದ ಸ್ಮರಣಾರ್ಥ 650 ಸಿಸಿಯ ಎರಡು ಮಾದರಿಯ ಒಟ್ಟು 480 ವಾಹನಗಳು ವಿಶ್ವಾದ್ಯಂತ ಲಭ್ಯವಿದೆ. ಈ ಪೈಕಿ 120 ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.
ರಾಯಲ್ ಎನ್‌ಫೀಲ್ಡ್ ಹೊಸ ಕ್ಲಾಸಿಕ್ 350 ಬುಲೆಟ್ ಲಾಂಚ್
ಇವುಗಳು ಸಮೃದ್ಧ ಕಪ್ಪು ಬಣ್ಣದ ಕ್ರೋಮ್ ಬಣ್ಣಗಳೊಂದಿಗೆ (Crome color) ಬಂದಿವೆ. ಜೊತೆಗೆ, ಕಂಚಿನ ಟ್ಯಾಂಕ್ ಬ್ಯಾಡ್ಜ್ ಗಳು ರಾಯಲ್ ಎನ್‌ಫೀಲ್ಡ್ ಕಂಪನಿ 120 ವರ್ಷದ ಪಯಣವನ್ನು ಪ್ರತಿನಿಧಿಸುತ್ತವೆ. ವಾರ್ಷಿಕೋತ್ಸವದ ಅಂಗವಾಗಿ ಈ ಬೈಕುಗಳು ವಿಶೇಷವಾದ ಕಪ್ಪು ಬಣ್ಣದ ಹೆಲ್ಮೆಟ್, ಜರ್ಕಿನ್, ಗ್ಲೌಸ್‌ಗಳು ಸೇರಿದಂತೆ ಎಲ್ಲಾ ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್‌ನ ಪರಿಕರಗಳನ್ನು ಒಳಗೊಂಡಿದೆ. ವಿಶೇಷವೆಂದರೆ, ಇವುಗಳು 120 ವರ್ಷದ ವಾರ್ಷಿಕೋತ್ಸವದ ಬ್ಯಾಡ್ಜ್ (badge) ಹೊತ್ತು ಬರಲಿವೆ.
ಜೊತೆಗೆ, 3 ವರ್ಷದ ನಂತರ 4 ಮತ್ತು 5ನೇ ವರ್ಷಗಳಲ್ಲಿ ಕೂಡ ಅಸಲಿ ಉಪಕರಣಗಳ ತಯಾರಿಕೆ (ಒಇಎಂ) ವಾರಂಟಿ ನೀಡಲಾಗಿದೆ. ಇದರ ಲಿಮಿಟೆಡ್ ಎಡಿಷನ್ ಮೋಟಾರ್‌ಸೈಕಲ್‌ಗಳು ಶೀಘ್ರದಲ್ಲೇ ಗ್ರಾಹಕರಿಗೆ ಆಗ್ನೇಯ ಏಷಿಯಾ, ಅಮೆರಿಕ ಮತ್ತು ಯೂರೋಪಿಯನ್ ರಾಷ್ಟ್ರಗಳಲ್ಲಿ ದೊರೆಯಲಿದೆ.
ಈ ಲಿಮಿಟೆಡ್ ಮೋಟಾರ್‌ಸೈಕಲ್‌ಗಳ ವಿನ್ಯಾಸ, ತಾಂತ್ರಿಕ ಅಂಶಗಳಲ್ಲಿ ಯಾವುದೇ ಹೊಸ ಸೇರ್ಪಡೆ ಮಾಡಲಾಗಿಲ್ಲ. ಇದರ ಮೂಲ ವಾಹನಗಳಲ್ಲಿನ ತಾಂತ್ರಿಕತೆಯನ್ನೇ ಇದರಲ್ಲಿ ಮುಂದುವರಿಸಲಾಗಿದೆ.
650 ಸಿಸಿಯ ಈ ಎರಡು ಬೈಕುಗಳನ್ನು ಮೊದಲು 2018ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಇದರಲ್ಲಿ ಇಂಟರ್‌ಸೆಪ್ಟರ್ 650 ಜಾಗತಿಕ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ.
ಕಳೆದ ನವೆಂಬರ್ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್ ವಾಹನಗಳ ಮಾರಾಟ 44,830ಕ್ಕೆ ಕುಸಿದಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ 59,084 ವಾಹನಗಳು ಮಾರಾಟವಾಗಿದ್ದವು.