ಮಹಿಳಾ ಸಬಲೀಕರಣಕ್ಕೆ TVS ಮೋಟಾರ್ ಒನ್ ಡ್ರೀಮ್ ಒನ್ ರೈಡ್‌ಗೆ ಭಾರಿ ಬೆಂಬಲ!

Published : Apr 17, 2021, 02:59 PM ISTUpdated : Apr 17, 2021, 03:05 PM IST
ಮಹಿಳಾ ಸಬಲೀಕರಣಕ್ಕೆ  TVS ಮೋಟಾರ್ ಒನ್  ಡ್ರೀಮ್ ಒನ್ ರೈಡ್‌ಗೆ ಭಾರಿ ಬೆಂಬಲ!

ಸಾರಾಂಶ

ಟಿವಿಎಸ್ ಅಪಾಚೆ ರೈಡರ್ ಮಿಸ್. ಗಾಯತ್ರಿ ಪಟೇಲ್ ಅವರ ಒನ್  ಡ್ರೀಮ್ ಒನ್ ರೈಡ್:   ಇಂದು ಟಿವಿಎಸ್ ಮೋಟಾರ್ ಕಂಪನಿಗೆ ತಲುಪಿದೆ. ಮಹಿಳಾ ಸಬಲೀಕರಣ ರೈತ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಂಗಳೂರು(ಏ.17): ಮಹಿಳಾ ಸಬಲೀಕರಣ ಕುರಿತು ಒನ್ ಡ್ರೀಮ್ ಒನ್ ರೈಡ್ ವಿಶೇಷ ಮೋಟಾರ್‌ಸೈಕಲ್ ಅಭಿಯಾನ ಭಾರಿ ಯಶಸ್ಸು ಪಡೆದಿದೆ. ಟಿವಿಎಸ್ ಅಪಾಚೆ ರೈಡರ್ ಮಿಸ್. ಗಾಯತ್ರಿ 18 ವಿಶ್ವ ಪಾರಂಪರಿಕ ತಾಣಗಳಿಗೆ ಭೇಟಿ ನೀಡುವ ಈ ರೈಡ್ ಇದೀಗ ಟಿವಿಎಸ್ ಮೋಟಾರ್ ಕಂಪನಿ ತಲುಪಿದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ TVS ಆಟೋ ಸವಾರಿ ಅಭಿಯಾನ; ಬೆಂಗಳೂರಲ್ಲಿ ಚಾಲನೆ!

ಗಾಯತ್ರಿ, ತನ್ನ ಒನ್ ಡ್ರೀಮ್ ಒನ್ ರೈಡ್: ಇಂಡಿಯನ್ ಒಡಿಸ್ಸಿ ರೈಡ್ ಅಂಗವಾಗಿ ತನ್ನ ಟಿವಿಎಸ್ ಅಪಾಚೆRTR 200 4V ಬೈಕ್ ಮೂಲಕ 30,000ಕ್ಕೂ ಅಧಿಕ ಕಿ.ಮೀ.ಸಂಚರಿಸಿ, 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳಲ್ಲಿನ 18 ವಿಶ್ವ ಪಾರಂಪರಿಕ ತಾಣಗಳಿಗೆ ಭೇಟಿ ನೀಡಲಿದ್ದಾರೆ.

ಈ ಬೈಕ್ ರೈಡ್ ಅನ್ನು ಡಿಸೆಂಬರ್ 2020ರಲ್ಲಿ ಕೊಲ್ಹಾಪುರದಲ್ಲಿ ಆರಂಭಿಸಿದ್ದು, ಇದುವರೆಗೂ 23,000 ಕಿ.ಮೀ ಗಿಂತಲೂ ಹೆಚ್ಚು ದೂರ ಸಂಚರಿಸಿದ್ದಾರೆ. ಇವರು ತನ್ನ ದೇಶಾದ್ಯಂತದ ಸವಾರಿಯ ಮೂಲಕ, ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಗಾಗಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದಾರೆ. ಇವರು 2021ರ ಜೂನ್ ತಿಂಗಳಲ್ಲಿ ಕೊಲ್ಹಾಪುರದಲ್ಲಿ ತಮ್ಮ ಸವಾರಿಯನ್ನು ಮುಕ್ತಾಯಗೊಳಿಸಲಿದ್ದಾರೆ

PREV
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್