ಭಾರತದಲ್ಲಿ ಹೀರೋ ಡೆಸ್ಟಿನಿ 125 ಪ್ಲಾಟಿನಂ ಎಡಿಶನ್ ಬಿಡುಗಡೆ

By Suvarna News  |  First Published Apr 6, 2021, 3:54 PM IST

ಕೆಲ ಬದಲಾವಣೆ, ಹೆಚ್ಚು ಆಕರ್ಷಕ, ಹೊಸ ಫೀಚರ್ಸ್‌ನೊಂದಿಗೆ ಹೀರೋ ಮೋಟಾರ್ ನೂತನ ಡೆಸ್ಟಿನಿ 125 ಪ್ಲಾಟಿನಂ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ನವದೆಹಲಿ(ಎ.06):  ಡೆಸ್ಟಿನಿ 125 ಪ್ಲಾಟಿನಂ ಸ್ಕೂಟರ್ ಹೀರೋ ಮೋಟೋಕಾರ್ಪ್‌ನಿಂದ ಬಿಡುಗಡೆಯಾಗಿದೆ. ಮ್ಯಾಸ್ಟ್ರೋ ಎಡ್ಜ್ 125ಯನ್ನು ಸ್ವಲ್ಪಮಟ್ಟಿಗೆ ಹೋಲುವ ಸ್ಕೂಟರ್ ಇದು. 125 ಸಿಸಿ BS 6 ಎಂಜಿನ್ ಜೊತೆಗೆ ಎಕ್ಸ್ ಸೆನ್ಸ್ ಟೆಕ್ನಾಲಜಿ ಅಳವಡಿಸಲಾಗಿದೆ. ಇದರಿಂದ ಸ್ಕೂಟರ್‌ನ ಸಾಮರ್ಥ್ಯ ಹೆಚ್ಚಲಿದೆ ಎಂದು ಕಂಪೆನಿ ಹೇಳಿದೆ. 7000 RPM, 9 BHP ಹೊಂದಿದೆ. ಟಾರ್ಕ್ 10.4 NM, 5500 RMP ಇದೆ. ಸ್ಮಾರ್ಟ್ ಟೆಕ್ನಾಲಜಿ ಅಳವಡಿಸಿರುವ ಕಾರಣ ಐಡ್ಲ್, ಸ್ಟಾರ್ಟ್, ಸ್ಟಾಪ್ ಇನ್ನಷ್ಟು ಸರಳವಾಗಿದೆ ಎಂದು ಕಂಪೆನಿ ತಿಳಿಸಿದೆ.

ಹೀರೋ ಮೊಟೊಕಾರ್ಪ್ 100 ಮಿಲಿಯನ್ ಸಂಭ್ರಮಾಚರಣೆ; ವಿಶೇಷ ಆಫರ್ ಘೋಷಣೆ!

Tap to resize

Latest Videos

undefined

ನೂನತ ಸ್ಕೂಟರ್ಕಪ್ಪು ಮತ್ತು ಕ್ರೋಮ್ ಥೀಮ್‌ನೊಂದಿಗೆ ಶೀಟ್ ಮೆಟಲ್ ಬಾಡಿ ಹೊಂದಿದೆ. ಇದು ಹೊಸ ಕ್ರೋಮ್ ಕನ್ನಡಿ, ಕ್ರೋಮ್ ಹ್ಯಾಂಡಲ್‌ಬಾರ್ ತುದಿಗಳು, ಕ್ರೋಮ್ ಫೆಂಡರ್ , ಪ್ರೀಮಿಯಂ ಪ್ಲಾಟಿನಂ ಬ್ಯಾಡ್ಜಿಂಗ್, ಕ್ರೋಮ್ ಮಫ್ಲರ್ ಪ್ರೊಟೆಕ್ಟರ್ ಮತ್ತು ವೈಟ್ ರಿಮ್ ಟೇಪ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. 

ಸ್ಕೂಟರ್‌ನ ಒಳ ಫಲಕಗಳು ಕಂದು ಬಣ್ಣದ ಫಿನೀಶಿಂಗ್ ನೀಡಲಾಗಿದೆ.  ಅದರ ಡ್ಯುಯಲ್-ಟೋನ್ ಆಸನವು ಪ್ಲ್ಯಾಟಿನಮ್ ಹಾಟ್ ಸ್ಟ್ಯಾಂಪಿಂಗ್ ಅನ್ನು ಹೊಂದಿದೆ. ಡೆಸ್ಟಿನಿ 125 ಪ್ಲಾಟಿನಂ ಸ್ಕೂಟರ್ ಬೆಲೆ 72,050 ರೂಪಾಯಿ (ಎಕ್ಸ್ ಶೋ ರೂಂ). 

click me!