ಬೆಂಗಳೂರಿನ ಏದರ್ 450 X ಸ್ಕೂಟರ್ ದೆಹಲಿಯಲ್ಲಿ ವಿತರಣೆ ಆರಂಭ!

By Suvarna News  |  First Published Apr 6, 2021, 3:38 PM IST

ಬೆಂಗಳೂರು, ಚೆನ್ನೈ ಸೇರಿದಂತೆ ದೇಶದ ಪ್ರಮುಖಗಳಲ್ಲಿ ಲಭ್ಯವಿದ್ದ ಬೆಂಗಳೂರಿನ ಏದರ್ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ದೆಹಲಿಯಲ್ಲೂ ಲಭ್ಯವಿದೆ. ದೆಹಲಿಯಲ್ಲಿ ಸ್ಕೂಟರ್ ವಿತರಣೆಗೆ ಚಾಲನೆ ನೀಡಲಾಗಿದೆ


ನವದೆಹಲಿ(ಎ.06) :  ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಭಾರತದಲ್ಲಿ ಗರಿಷ್ಠ ಬೇಡಿಕೆ ಪಡೆದುಕೊಂಡಿರುವ ಬೆಂಗಳೂರಿನ ಏದರ್ ಸ್ಕೂಟರ್ ಇದೀಗ ದೆಹಲಿಯಲ್ಲೂ ಲಭ್ಯವಿದೆ. ಬೆಂಗಳೂರು, ಚೆನ್ನೈ, ಇದೀಗ ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಏದರ್ ಸ್ಕೂಟರ್ ಲಭ್ಯವಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಯಶಸ್ಸಿನ ಬೆನ್ನಲ್ಲೇ ಬೈಕ್ ಬಿಡುಗಡೆಗೆ ಎದರ್ ಸಿದ್ಧತೆ

Tap to resize

Latest Videos

ಹೀರೋ ಮೋಟೋಕಾರ್ಪ್‌ನ ಮುಖ್ಯಸ್ಥ ಪವನ್ ಮಂಜುಲ್ ಅವರಿಗೆ ಏದರ್ 450ಎಕ್ಸ್ ಸ್ಕೂಟರ್ ನೀಡುವ ಮೂಲಕ ಏದರ್ 450 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ನವದೆಹಲಿಯಲ್ಲಿ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿಗೆ ಚಾಲನೆ ಸಿಕ್ಕಿದೆ. 

ಹೊಸ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್‌ಗೆ ಸಿದ್ಧತೆ; ಬಜಾಜ್‌ಗಿಂತ ಕಡಿಮೆ ಬೆಲೆ!

ಏದರ್ ಎನರ್ಜಿ ಸಂಸ್ಥಾಪಕ ತರುಣ್ ಮೆಹ್ತಾ ಸ್ಕೂಟರ್ ವಿತರಿಸಿ ಮಾತನಾಡುತ್ತಾ, ‘ ಏದರ್ 450ಎಕ್ಸ್ ಸ್ಕೂಟರ್ ವಿತರಣೆಯನ್ನು ಕಿಕ್‌ಸ್ಟಾರ್ಟ್ ಮಾಡಲಾಗಿದೆ. ಶೀಘ್ರದಲ್ಲಿ ದೇಶದೆಲ್ಲೆಡೆ ಈ ಬೈಕ್  ಲಭ್ಯವಾಗಲಿದೆ  ಎಂದರು. ಹೀರೋ ಮಾಟೋಕಾರ್ಪ್, ಎದರ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಶೇ.34.58 ರಷ್ಟುಪಾಲು ಹೊಂದಿದೆ.

click me!