2022 KTM RC390 ಭಾರತದಲ್ಲಿ ಲಾಂಚ್:‌ ಬೆಲೆ ಎಷ್ಟು ನೋಡಿ

By Suvarna News  |  First Published May 7, 2022, 5:36 PM IST

ಹೊಸ 2022 KTM RC390 ಇತ್ತೀಚಿನ ನವೀಕರಣದೊಂದಿಗೆ ಗಮನಾರ್ಹವಾಗಿ ದುಬಾರಿಯಾಗಿದೆ
 


2022 KTM RC390: ಬಜಾಜ್ ಆಟೋ ಶನಿವಾರದಂದು ಹೊಸ 2022 KTM RC 390 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ ಸ್ಪೋರ್ಟ್ ಬೈಕ್‌ನ ಬೆಲೆ ₹3.14 ಲಕ್ಷ (ಎಕ್ಸ್-ಶೋರೂಂ) ಆಗಿದ್ದು,  ಇದರ ಹಿಂದಿನ ಮಾದರಿಗಿಂತ ₹36,000 ದುಬಾರಿಯಾಗಿದೆ. ನವೀಕರಿಸಿದ ಮೋಟಾರ್‌ಸೈಕಲ್ ಹೊಸ ಸ್ಟೈಲಿಂಗ್ ಜೊತೆಗೆ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ. 2022 KTM RC390ಗೆ ಹಲವಾರು ಪ್ರಮುಖ ಸ್ಟೈಲಿಂಗ್ ನವೀಕರಣಗಳನ್ನು ನೀಡಲಾಗಿದೆ. ಎಲ್‌ಇಡಿ ಲೈಟಿಂಗ್‌ನೊಂದಿಗೆ ಮುಂಭಾಗದಲ್ಲಿ ಸಂಪೂರ್ಣವಾಗಿ ಹೊಸ ಹೆಡ್‌ಲ್ಯಾಂಪ್ ಇದೆ. ಹೊಸ ಹೆಡ್‌ಲ್ಯಾಂಪ್ ಎಲ್‌ಇಡಿ ಇಂಡಿಕಟೇಟರ್‌ಗಳಿಂದ ಸುತ್ತುವರೆದಿದೆ, ಆದರೆ ಹಿಂದೆ ಇಂಡಿಕೇಟರ್‌ಗಳನ್ನು ಹಿಂಬದಿಯ ಕನ್ನಡಿಗಳ ಮೇಲೆ ಇರಿಸಲಾಗಿತ್ತು. 

ಇವುಗಳು ಈ ಹಿಂದೆ ಬಿಡುಗಡೆಯಾದ ಹೊಸ-ಜನ್ RC200 ಸ್ಪೋರ್ಟ್ ಬೈಕ್‌ಗೆ ಹೋಲುವ ವಿನ್ಯಾಸದ ನವೀಕರಣಗಳಾಗಿವೆ. ಇದಲ್ಲದೆ, ಬೈಕ್‌ಗೆ ಹೊಸ ಬಣ್ಣದ ಯೋಜನೆ ಮತ್ತು ಸೈಡ್ ಫೇರಿಂಗ್‌ಗಾಗಿ ವಿನ್ಯಾಸವನ್ನು ಸಹ ನೀಡಲಾಗಿದೆ. ಇದು 13.7-ಲೀಟರ್ ಇಂಧನ ಟ್ಯಾಂಕ್ ಜೊತೆಗೆ ಮರುವಿನ್ಯಾಸಗೊಳಿಸಲಾದ ಟೈಲ್ ಸೆಕ್ಷನ್ ಜೊತೆಗೆ ಸೈಡ್-ಸ್ಲಂಗ್ ಎಕ್ಸಾಸ್ಟನ್ನು ಸಹ ಪಡೆಯುತ್ತದೆ.

Latest Videos

undefined

ಇದನ್ನೂ ಓದಿಏಪ್ರಿಲ್ ತಿಂಗಳಲ್ಲಿ ರಾಯಲ್ ಎನ್ಫೀಲ್ಡ್ ಮಾರಾಟ ಶೇ.17ರಷ್ಟು ಏರಿಕೆ

ಜಾಗತಿಕ ಮಾದರಿಯಲ್ಲಿ ಕಂಡುಬರುವ ಹೊಸ ವೈಶಿಷ್ಟ್ಯಗಳೊಂದಿಗೆ ಹೊಸ RC390  ಆನ್‌ಲೈನ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದು ಹೊಸ 390 ಅಡ್ವೆಂಚರ್ ಮತ್ತು 390 ಡ್ಯೂಕ್‌ನಲ್ಲಿ ಕಂಡುಬರುವ ಹೊಸ TCS (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಕಾರ್ನರ್ ಕಾರ್ನರಿಂಗ್ ABS, ಕ್ವಿಕ್‌ಶಿಫ್ಟರ್, TFT-ಡಿಸ್ಪ್ಲೇ ಮತ್ತು ಮಲ್ಟಿಫಂಕ್ಷನ್ ಸ್ವಿಚ್‌ಗಿಯರನ್ನು ಒಳಗೊಂಡಿದೆ.

ಯಾಂತ್ರಿಕವಾಗಿ, ವಿವರಗಳು ಹೆಚ್ಚು ಅಥವಾ ಕಡಿಮೆ ಒಂದೇ ಆಗಿರುತ್ತವೆ, ಇದು ಅಸ್ತಿತ್ವದಲ್ಲಿರುವ ಮಾದರಿಯಲ್ಲಿ ಕಂಡುಬರುವ BS 6-ಕಂಪ್ಲೈಂಟ್ 373cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಉಳಿಸಿಕೊಳ್ಳುವುದನ್ನು ಮುಂದುವರಿಸುತ್ತದೆ. ಈ ಎಂಜಿನ್ ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ ಮತ್ತು 9,000rpm ನಲ್ಲಿ 42.9bhp ಗರಿಷ್ಠ ಶಕ್ತಿಯನ್ನು ಮತ್ತು 7,000rpm ನಲ್ಲಿ 37Nm ಗರಿಷ್ಠ ಟಾರ್ಕನ್ನು ಹೊರಹಾಕುತ್ತದೆ. ಇದು ಕವಾಸಕಿ ನಿಂಜಾ 300 ಮತ್ತು ಟಿವಿಎಸ್ ಅಪಾಚೆ RR310 BS 6 ನಂತಹ ಬೈಕ್‌ಗಳಿಗೆ ನೇರವಾಗಿ ಪ್ರತಿಸ್ಪರ್ಧಿಯಾಗಿದೆ.

click me!