ಒಂದೇ ದಿನಕ್ಕೆ 1 ಲಕ್ಷ ಬುಕಿಂಗ್; ದಾಖಲೆ ಬರೆದ ಓಲಾ ಎಲೆಕ್ಟ್ರಿಕ್ ಸ್ಕೂಟರ್!

By Suvarna News  |  First Published Jul 17, 2021, 4:12 PM IST
  • ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಕೌಂಟ್‌ಡೌನ್
  • ಒಂದೇ ದಿನಕ್ಕೆ 1 ಲಕ್ಷಕ್ಕೂ ಅಧಿಕ ಸ್ಕೂಟರ್ ಬುಕಿಂಗ್
  • ಕೇವಲ 499 ರೂಪಾಯಿ ಪಾವತಿಸಿ ಸ್ಕೂಟರ್ ಬುಕ್ ಮಾಡಿಕೊಳ್ಳೋ ಅವಕಾಶ

ಬೆಂಗಳೂರು(ಜು.17): ಭಾರಿ ಕುತೂಹಲ ಕೆರಳಿಸಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ದೇಶದ ಎಲೆಕ್ಟ್ರಿಕ್ ವಾಹನದಲ್ಲಿ ಹೊಸ ಅಧ್ಯಾಯ ಬರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಗರಿಷ್ಠ ಮೈಲೇಜ್, ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭಗೊಂಡಿದೆ. ಒಂದೇ ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಸ್ಕೂಟರ್ ಬುಕಿಂಗ್ ಆಗಿದ್ದು, ದಾಖಲೆ ಬರೆದಿದೆ.

499 ರೂಪಾಯಿ ಕೊಟ್ಟು Ola Electric ಸ್ಕೂಟರ್ ಬುಕ್ ಮಾಡ್ಕೊಳ್ಳಿ!

Latest Videos

undefined

ವಿಶ್ವದಲ್ಲೇ ಕನಿಷ್ಠ ಸಮಯದಲ್ಲಿ ಗರಿಷ್ಠ ಬುಕಿಂಗ್ ಆದ ಸ್ಕೂಟರ್ ಅನ್ನೋ ದಾಖಲೆಯನ್ನು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾಡಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಜುಲೈ 15ಕ್ಕೆ ಆರಂಭಿಸಲಾಗಿದೆ.  ಕೇವಲ ರೂ. 499 ಪಾವತಿಸಿ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. ಕಂಪನಿ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆಯನ್ನು ಕಾಣುತ್ತಿದ್ದು, ದಾಖಲೆ ಸಂಖ್ಯೆಯಲ್ಲಿ ಸ್ಕೂಟರ್ ಕಾಯ್ದಿರಿಸಲು ಗ್ರಾಹಕರು ವೆಬ್‍ಸೈಟ್‍ಗೆ ಭೇಟಿ ನೀಡುತ್ತಿದ್ದಾರೆ.

ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಗಕ್ಕೆ ಭಾರತದಾದ್ಯಂತ ಗ್ರಾಹಕರಿಂದ ಅದ್ಭುತ ಸ್ಪಂದನೆ ಬಂದಿರುವುದು ನನಗೆ ರೋಮಾಂಚನ ತಂದಿದೆ. ಈ ಅಭೂತಪೂರ್ವ ಬೇಡಿಕೆಯು, ಗ್ರಾಹಕರು ಎಲೆಕ್ಟ್ರಿಕ್ ವಾಹನಗಳಿಗೆ ವರ್ಗಾವಣೆಗೊಳ್ಳುತ್ತಿರುವ ಸ್ಪಷ್ಟ ಸೂಚಕವಾಗಿದೆ. ವಿಶ್ವವನ್ನು ಸುಸ್ಥಿರ ಸಂಚಾರಕ್ಕೆ ವರ್ಗಾಯಿಸುವ ನಮ್ಮ ದೂರದೃಷ್ಟಿಯಲ್ಲಿ ಇದು ದೊಡ್ಡ ಹೆಜ್ಜೆಯಾಗಿದೆ. ಓಲಾ ಸ್ಕೂಟರ್ ಕಾಯ್ದಿರಿಸಿ, ಇವಿ ಕ್ರಾಂತಿಯಲ್ಲಿ ಪಾಲ್ಗೊಂಡ ಎಲ್ಲ ಗ್ರಾಹಕರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಇದು ಕೇವಲ ಆರಂಭ ಮಾತ್ರ ಎಂದು ಓಲಾ ಸಮೂಹದ ಅಧ್ಯಕ್ಷ ಮತ್ತು ಸಮೂಹ ಸಿಇಓ ಭವಿಷ್ ಅಗರ್ವಾಲ್ ಹೇಳಿದ್ದಾರೆ.

ಓಲಾ ಸ್ಕೂಟರ್, ಓಲಾ ಎಲೆಕ್ಟ್ರಿಕ್‍ನ ಕ್ರಾಂತಿಕಾರಕ ಉತ್ಪನ್ನವಾಗಿದ್ದು, ಇಡೀ ವರ್ಗದಲ್ಲೇ ಅತ್ಯಧಿಕ ವೇಗ, ಅಭೂತಪೂರ್ವ ಶ್ರೇಣಿ, ದೊಡ್ಡ ಬೂಟ್ ಸ್ಥಳಾವಕಾಶ ಮತ್ತು ಅತ್ಯಾಧುನಿಕ ತಂತ್ರಜ್ಞಾನವನು ಇದು ಹೊಂದಿದೆ. ಈ ಮೂಲಕ ಗ್ರಾಹಕರು ಖರೀದಿಸಬಹುದಾದ ಅತ್ಯುತ್ತಮ ಸ್ಕೂಟರ್ ಎನಿಸಿದೆ. ಇದು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಆಕ್ರಮಣಕಾರಿ ಬೆಲೆ ನಿಗದಿಪಡಿಸಲಾಗುತ್ತಿದೆ. ಓಲಾ ಇದರ ವಿಶೇಷತೆಗಳು ಹಾಗೂ ಬೆಲೆಯನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಿದೆ.

ವಿಶ್ವದ ಅತೀ ದೊಡ್ಡ ಫ್ಯಾಕ್ಟರಿ; ಒಲಾ ಘಟಕದಲ್ಲಿ ಪ್ರತಿ 2 ನಿಮಿಷಕ್ಕೊಂಡು ಸ್ಕೂಟರ್ ನಿರ್ಮಾಣ!

ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸರಣಿಯಲ್ಲಿ ಮೊದಲನೆಯದಾದ ಓಲಾ ಸ್ಕೂಟರನ್ನು ಭಾರತದ ತಮಿಳುನಾಡಿನ 500 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ, ಅತ್ಯಾಧುನಿಕ ಮತ್ತು ಸುಸ್ಥಿರ ದ್ವಿಚಕ್ರವಾಹನ ಫ್ಯಾಕ್ಟರಿ ಎನಿಸಿದ ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗುತ್ತದೆ. ಓಲಾ ಸ್ಕೂಟರ್ ಫ್ಯಾಕ್ಟರಿಯ ಮೊದಲ ಹಂತ ವಾರ್ಷಿಕವಾಗಿ 20 ಲಕ್ಷ ವಾಹನಗಳ ಉತ್ಪಾದನಾ ಸಾಮಥ್ರ್ಯದೊಂದಿಗೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ಮುಂದಿನ ವರ್ಷದ ವೇಳೆಗೆ ಇದು ಪೂರ್ಣಪ್ರಮಾಣದಲ್ಲಿ ಸಜ್ಜಾದಾಗ ವಾರ್ಷಿಕ ಒಂದು ಕೋಟಿ ವಾಹನಗಳನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಲಿದೆ.

ಓಲಾ ಬಗ್ಗೆ
ಓಲಾ ಭಾರತದ ಅತಿದೊಡ್ಡ ಟ್ರಾನ್ಸ್‌ಫೋರ್ಟ್ ಪ್ಲಾಟ್‍ಫಾರಂ ಆಗಿದ್ದು, ವಿಶ್ವದ ಅತಿದೊಡ್ಡ ಸವಾರಿ ಸೌಲಭ್ಯ ಕಲ್ಪಿಸುವ ಕಂಪನಿಗಳಲ್ಲೊಂದಾಗಿದೆ. ಮೂರು ಖಂಡಗಳಲ್ಲಿ ನೂರು ಕೋಟಿಗೂ ಅಧಿಕ ಮಂದಿಗೆ ಬೇಡಿಕೆಗೆ ಅನುಸಾರವಾಗಿ ವಾಹನ ಪೂರೈಸುವ ಮೂಲಕ ನಗರ ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಉಂಟುಮಾಡಿದೆ. ಸವಾರಿ ಸೌಲಭ್ಯ ಕಲ್ಪಿಸುವ ಪ್ಲಾಟ್‍ಫಾರಂ ಹಾಗೂ ವಿಶ್ವದ ಅತಿದೊಡ್ಡ ಹಾಗೂ ಅತ್ಯಾಧುನಿಕ ಮತ್ತು ಸುಸ್ಥಿರ ದ್ವಿಚಕ್ರ ವಾಹನ ಉತ್ಪಾದಿಸುವ ಫ್ಯೂಚರ್ ಫ್ಯಾಕ್ಟರಿ ಮೂಲಕ ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನಗಳ ಮೂಲಕ ಇಂದು ಓಲಾ ವಿಶ್ವವನ್ನು ಸುಸ್ಥಿರ ಸಂಚಾರದತ್ತ ಮುನ್ನಡೆಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದೆ. ವಿಶ್ವವನ್ನು ಸುಸ್ಥಿರ ಸಂಚಾರ ವ್ಯವಸ್ಥೆಗೆ ವರ್ಗಾಯಿಸಲು ಓಲಾ ಬದ್ಧವಾಗಿದ್ದು, ನಾವು ಇಂದು ಕಾಣುವ ವಿಶ್ವವನ್ನು ಮತ್ತಷ್ಟು ಉತ್ತಮಗೊಳಿಸುವ ಪ್ರಯತ್ನ ನಡೆಸುತ್ತದೆ.

click me!