ಒಮ್ಮೆ ಚಾರ್ಜ್ ಮಾಡಿದ್ರೆ 100 ಕಿ.ಮೀ.ವರೆಗೆ ಓಡುವ ಇ- ಸೈಕಲ್ ರೋಡ್‌ಲರ್ಕ್ ಬಿಡುಗಡೆ!

By Suvarna News  |  First Published Apr 26, 2021, 1:59 PM IST

ನೆಕ್ಸ್‌ಜು ಮೊಬಿಲಿಟಿ ಕಂಪನಿಯ ಹೊಸ ಇ-ಸೈಕಲ್ ರೋಡ್‌ಲರ್ಕ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸೈಕಲ್ ಅನ್ನು ನೀವು ಒಮ್ಮೆ ಚಾರ್ಜ್ ಮಾಡಿದರೆ, ಅದು 100 ಕಿ.ಮೀ. ವ್ಯಾಪ್ತಿಯವರೆಗೆ ಓಡುತ್ತದೆ. ಇಷ್ಟೊಂದು ದಕ್ಷತೆಯನ್ನು ಒದಗಿಸುವ ಬೇರೆ ಯಾವುದೇ ಇ-ಸೈಕಲ್ ಭಾರತದಲ್ಲಿಲ್ಲ. ಇದರ ಬೆಲೆ 42 ಸಾವಿರ ರೂಪಾಯಿ ಮಾತ್ರ.


ಭಾರತದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಭರಾಟೆಯೇ ಜೋರಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ನಂಬರ್ 1 ಸ್ಥಾನಕ್ಕೇರಲಿದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ. ಇದರ ಮಧ್ಯೆಯೇ, ನಾನಾ ನಮೂನೆಯ ಎಲೆಕ್ಟ್ರಿಕ್ ವಾಹನಗಳು ಭಾರತೀಯ ರಸ್ತೆಗಳಿಗೆ ಇಳಿಯುತ್ತಿವೆ. ನಾವೀಗ ಇಲ್ಲಿ ಹೇಳಲು ಹೊರಟಿರುವುದು ಎಲೆಕ್ಟ್ರಿಕ್ ವೆಹಿಕಲ್ ಬದಲಿಗೆ ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಬೈಸಿಕಲ್!

ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಶೀಘ್ರ ಭಾರತ ನಂ.1: ಕೇಂದ್ರ ಸಚಿವ ಗಡ್ಕರಿ

Tap to resize

Latest Videos

undefined

ಹೌದು, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಸೈಕಲ್‌ಗಳ ಬಗ್ಗೆ ಆಸಕ್ತಿಯೂ ಹೆಚ್ಚಾಗುತ್ತಿದೆ. ಪರಿಣಾಮ ಅನೇಕ ಕಂಪನಿಗಳು ಎಲೆಕ್ಟ್ರಿಕ್ ಸೈಕಲ್‌ಗಳನ್ನು ರೋಡಿಗಿಳಿಸುತ್ತಿವೆ. ಇದೀಗ ನೆಕ್ಸ್‌ಜು ಮೊಬಿಲಿಟಿ ಕಂಪನಿಯ ವಿನೂತನ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಸಿಕಲ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 100 ಕಿ.ಮೀ.ವರೆಗೂ ಓಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇದು ಭಾರತದ ಮೊದಲ 100 ಕಿ.ಮೀ ವ್ಯಾಪ್ತಿಯ ಬೈಸಿಕಲ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ನೆಕ್ಸ್‌ಜು ಮೊಬಿಲಿಟಿ ಬಿಡುಗಡೆ ಮಾಡಿರುವ ಈ ವಿನೂತನ ಇ ಸೈಕಲ್ ಹೆಸರು ರೋಡ್‌ಲರ್ಕ್ ಎಲೆಕ್ಟ್ರಿಕ್ ಬೈಸಿಕಲ್. ನೆಕ್ಸ್‌ಜು ಮೊಬಿಲಿಟಿ ಕಂಪನಿಯ ಈ ರೋಡ್‌ಲರ್ಕ್ ಹೊಸ ಬೈಸಿಕಲ್ ಅನ್ನು ನೀವು ಒಮ್ಮೆ ಚಾರ್ಜ್ ಮಾಡಿದರೆ ನೂರು ಕಿಲೋ ಮೀಟರ್‌ವರೆಗೂ ಓಡಿಸಬಹುದು.

ಒಂದೇ ಟ್ರಾಕ್ಟರ್‌ನಿಂದಲೇ 3 ಟ್ರಾಕ್ಟರ್‌ಗಳ ಲಾಭ; ಸೊಲಿಸ್ ಹೈಬ್ರಿಡ್ 5015 ಟ್ರಾಕ್ಟರ್ ಬಿಡುಗಡೆ

ಈ ರೋಡ್‌ಲರ್ಕ್ ಎಲೆಕ್ಟ್ರಿಕ್ ಬೈಸಿಕಲ್ ಕೋಲ್ಡ್-ರೋಲ್ಡ್ ಸ್ಟೀಲ್ ಫ್ರೇಮ್, ಎರಡೂ ಕಡೆಯೂ ಡಿಸ್ಕ್ ಬ್ರೆಕ್‌ಗಳಿವೆ. ಇದರ ಜೊತೆಗೆ ನೀವು ಬ್ಯಾಟರಿಯನ್ನು ಬದಲಿಸಬಹುದು. ಅಂಥ ಫೀಚರ್ ಅನ್ನು ಈ ಬೈಸಿಕಲ್ ಒಳಗೊಂಡಿದೆ. ಈ ಇ ಸೈಕಲ್ ರೋಡ್‌ಲರ್ಕ್ ಅನ್ನು ನೆಕ್ಸ್‌ಜು ಮೊಬಿಲಿಟಿ ಕಂಪನಿಯೇ ಅಭಿವೃದ್ಧಿಪಡಿಸಿ, ಉತ್ಪಾದಿಸುತ್ತಿದೆ. ಒಮ್ಮೆ ಚಾರ್ಜಿಂಗ್ ಮಾಡಿದರೆ 100 ಕಿ.ಮೀ. ವರೆಗೆ ಓಡುವ ಭಾರತದ ಮೊದಲ ಇ-ಬೈಸಿಕಲ್ ಎಂಬ ಹೆಗ್ಗಳಿಕೆ ಇದರದ್ದಾಗಿದೆ.     

ಹೊಸ ಹಗುರವಾದ ಫ್ರೇಮ್ ವಿನ್ಯಾಸ, ಹೆಚ್ಚಿನ ದಕ್ಷತೆಯ ಪವರ್‌ಟ್ರೇನ್ ಮತ್ತು ಅತ್ಯಾಧುನಿಕ ಶಕ್ತಿ ಶೇಖರಣಾ ಪರಿಹಾರವನ್ನು ಸಂಯೋಜಿಸುವ ಮೂಲಕ ನಮ್ಮ ತಂಡವು ಈ ವ್ಯಾಪ್ತಿಯ ಬೈಸಿಕಲ್ ಅಭಿವೃದ್ಧಿಯನ್ನು ಸಾಧಿಸಿದೆ ಎಂದು ನೆಕ್ಸ್‌ಜು ಹೇಳುತ್ತದೆ. ರೋಡ್‌ಲರ್ಕ್  ಡ್ಯುಯಲ್ ಬ್ಯಾಟರಿ ಸಿಸ್ಟಮ್ ಒಳಗೊಂಡಿದೆ. ಪ್ರಾಥಮಿಕ 8.7 ಎಎಚ್ ಹಗುರವಾದ, ತೆಗೆಯಬಹುದಾದ ಬ್ಯಾಟರಿ ಮತ್ತು ದ್ವಿತೀಯ 5.2 ಎಎಚ್ ಇನ್-ಫ್ರೇಮ್ ಬ್ಯಾಟರಿಯನ್ನು ದೇಶೀಯ ಸಾಕೆಟ್‌ನಲ್ಲಿ ಚಾರ್ಜ್ ಮಾಡಬಹುದು.

ಪೆಡಲಿಕ್ ಮೋಡ್‌ನಲ್ಲಿ ಈ ರೋಡ್‌ಲರ್ಕ್ ಇ ಬೈಸಿಕಲ್ 100 ಕಿ.ಮೀ. ರೈಡಿಂಗ್ ವ್ಯಾಪ್ತಿಯನ್ನು ಒಳಗೊಂಡಿದೆ. ಈ ಇ ಬೈಸಿಕಲ್ ಪ್ರತಿ ಗಂಟೆಗೆ 25 ಕಿ.ಮೀ.ವರೆಗೂ ಓಡಬಲ್ಲದು. ಈ ರೋಡ್‌ಲರ್ಕ್ ಇ ಬೈಸಿಕಲ್ ಬೆಲೆ 42 ಸಾವಿರ ರೂಪಾಯಿಗೆ. ಗ್ರಾಹಕರು ನೇರವಾಗಿ ನೆಕ್ಸ್‌ಜು ಕಂಪನಿ 90ಕ್ಕೂ ಹೆಚ್ಚು ಟಚ್‌ಪಾಯಿಂಟ್ಸ್ ಇಲ್ಲವೇ ನೆಕ್ಸುಜು ಮೊಬಿಲಿಟಿ ಅಧಿಕೃತ ಜಾಲತಾಣದ ಮೂಲಕ ಖರೀದಿಸಬಹುದಾಗಿದೆ.

ಏಪ್ರಿಲ್ ತಿಂಗಳ ಸಖತ್ ಆಫರ್: ಕ್ವಿಡ್, ಟ್ರೈಬರ್, ಡಸ್ಟರ್ ಕಾರ್ ಖರೀದಿ ಮೇಲೆ 1 ಲಕ್ಷ ರೂ.ವರೆಗೆ ಲಾಭ

ಗ್ರಾಹಕ ಕೇಂದ್ರೀತ ಮೊಬಿಲಿಟಿ ಸಲ್ಯೂಷನ್ ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಎಂಜಿನಿಂಯರಿಂಗ್ ಮತ್ತು ವಿನ್ಯಾಸ ತಂಡವರು ಏಕಮನಸ್ಸಿನಿಂದ ಕೆಲಸ ಮಾಡಿದೆ ಮತ್ತು ಈ ಹೊಸ ರೋಡ್‌ಲರ್ಕ್‌ನೊದಿಂಗೆ  ಸ್ಕೂಟರ್‌ಗಳನ್ನು ಬದಲಿಸುವ ಸಾರಿಗೆ ಪ್ರಾಥಮಿಕ ಮಾರ್ಗವಾಗಿ ಕಾರ್ಯನಿರ್ವಹಿಸಬಲ್ಲ ಸೂಪರ್ ದೀರ್ಘ-ಶ್ರೇಣಿಯ ವಿದ್ಯುತ್ ಚಕ್ರವನ್ನು ನೀಡುವ ಮೂಲಕ ಗ್ರಾಹಕರನ್ನು ಸಂತೋಷಪಡಿಸಲು ನಾವು ಉತ್ಸುಕರಾಗಿದ್ದೇವೆ. ರೈಡಿಂಗ್ ಅಗತ್ಯಕ್ಕೆ ಅನುಗುಣವಾಗಿ ಚಾಲಕರು ಈ ಬೈಸಿಕಲ್‌ನಲ್ಲಿ ತಮಗೆ ಬೇಕಿರುವ ರೈಡಿಂಗ್ ಮೋಡ್ ಆರಿಸಿಕೊಳ್ಳಬಹುದು. ರೋಡ್‌ಲರ್ಕ್‌ನಲ್ಲಿ ನಿಮಗೆ ಕಂಪನಿ 6 ಬೇರೆ ಬೇರೆ ರೈಡಿಂಗ್ ಮೋಡ್‌ಗಳನ್ನು ಒದಗಿಸುತ್ತದೆ. ಎಲೆಕ್ಟ್ರಿಕ್ ಸೈಕಲ್‌ಗಳು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿವೆ ಎಂದು ಈಗಾಗಲೇ ಸಾಬೀತಾಗಿದೆ. ಗ್ರಾಹಕ ಕೇಂದ್ರೀತ, ಕಡಿಮೆ ವೆಚ್ಚ ಮತ್ತು ಕ್ಲೀನ್ ಮೊಬಿಲಿಟಿ ಸಲ್ಯೂಷನ್ ಅನ್ನು ಇ ಬೈಸಿಕಲ್ ಒದಗಿಸುತ್ತದೆ ಎಂಬುದು ನೆಕ್ಸ್‌ಜು ಮೊಬಿಲಿಟಿ ಕಂಪನಿಯ ಅಭಿಪ್ರಾಯವಾಗಿದೆ.

click me!