ಭಾರತದ ಅತ್ಯಂತ ಕಡಿಮೆ ಬೆಲೆ ಬೈಕ್ ಹೀರೋ HF 100 ಬಿಡುಗಡೆ!

By Suvarna News  |  First Published Apr 20, 2021, 2:42 PM IST

ಭಾರತದಲ್ಲಿ ಬೈಕ್ , ಸ್ಕೂಟರ್ ಸೇರಿದಂತೆ ಎಲ್ಲಾ ವಾಹನಗಳ ಬೆಲೆ ಹೆಚ್ಚಾಗಿದೆ. 60, 70 ಸಾವಿರ ರೂಪಾಯಿಗೆ ಸಿಗುತ್ತಿದ್ದ ಸ್ಕೂಟರ್ ಇದೀಗ 1 ಲಕ್ಷ ರೂಪಾಯಿ ಆಗಿದೆ. ಇದರ ನಡುವೆ ಭಾರತದ ಅತೀ ಕಡಿಮೆ ಬೆಲೆಯ ಬೈಕ್‌ನ್ನು ಹೀರೋ ಮೋಟಾರ್ ಬಿಡುಗಡೆ ಮಾಡಿದೆ. ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ನವದೆಹಲಿ(ಏ.20): ಭಾರತದಲ್ಲಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.  ಹೊಸ ಹೊಸ ಬೈಕ್, ಸ್ಕೂಟರ್ ಬಿಡುಗಡೆಯಾಗುತ್ತಿದೆ. ಆದರೆ ಎಲ್ಲಾ ವಾಹನಗಳ ಬೆಲೆ ಮಾತ್ರ ದುಬಾರಿಯಾಗಿದೆ. ಇದರ ನಡುವೆ ಹೀರೋ ಮೋಟಾರ್‌ಕಾರ್ಪ್ ಅತೀ ಕಡಿಮೆ ಬೆಲೆಯ ಬೈಕ್ ಬಿಡುಗಡೆ ಮಾಡಿದೆ. ಹೀರೋ HF 100 ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಇದರ ಬೆಲೆ 49,400 ರೂಪಾಯಿ(ಎಕ್ಸ್ ಶೋ ರೂಂ).

ಭಾರತದಲ್ಲಿ ಹೀರೋ ಡೆಸ್ಟಿನಿ 125 ಪ್ಲಾಟಿನಂ ಎಡಿಶನ್ ಬಿಡುಗಡೆ

Latest Videos

ಇದು ಭಾರತದ ಅತ್ಯಂತ ಕಡಿಮೆ ಬೆಲೆಯ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಲಾಕ್ ಹಾಗೂ ರೆಡ್ ಡ್ಯುಯೆಲ್ ಟೋನ್ ಬಣ್ಣದಲ್ಲಿ ಮಾತ್ರ ಈ ಬೈಕ್ ಲಭ್ಯವಿದೆ. ಹೀರೋ HF 100 ಬೈಕ್, ಬಜಾಜ್ ಸಿಟಿ 100 ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ. ಹೀರೋ ಮೋಟಾರ್‌ಕಾರ್ಪ್ ಕಂಪನಿಯ ಎಂಟ್ರಿ ಲೆವೆಲ್ ಬೈಕ್ ಇದಾಗಿದ್ದು, ಆಕರ್ಷಕ ವಿನ್ಯಾಸ ಹೊಂದಿದೆ.

ಹಬ್ಬದ ಸಂಭ್ರಮ ಡಬಲ್ ; ಹೊಚ್ಚ ಹೊಸ ಹೀರೋ ಸ್ಪ್ಲೆಂಡರ್+ ಬ್ಲಾಕ್ ಮತ್ತು ಆಕ್ಸೆಂಟ್ ಲಾಂಚ್!

ಹೀರೋ HF 100 ಬೈಕ್ ಸಿಂಗಲ್ ಸಿಲಿಂಡರ್ ಹೊಂದಿದೆ. ಏರ್‌ ಕೂಲ್ಡ್, 97.2 ಸಿಸಿ ಎಂಜಿನ್, ಹಾಗೂ ಫ್ಯುಯೆಲ್ ಇಂಜೆಕ್ಷನ್ ಟೆಕ್ನಾಲಜಿ ಹೊಂದಿದೆ.  8 bhp ಪವರ್ (8,000 rpm) ಹಾಗೂ 8 Nm (5,000 rpm) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 4 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಇನ್ನು ಟೆಲಿಸ್ಕೋಪಿಕ್ ಪೋರ್ಕ್ಸ್, 130mm ಡ್ರಮ್ ಬ್ರೇಕ್ ಹೊಂದಿದೆ.

click me!