ಮೊದಲ ನೋಟದಲ್ಲಿ ಲವ್, ಸ್ಟೈಲೀಶ್ ಕವಾಸಕಿ ವಲ್ಕನ್ ಎಸ್ ಬೈಕ್ ಭಾರತದಲ್ಲಿ ಬಿಡುಗಡೆ, ಬೆಲೆ ಎಷ್ಟು?

Published : Sep 15, 2026, 01:33 PM IST
Kawasaki Vulcan S Cruiser Bike Debuts

ಸಾರಾಂಶ

ಅತ್ಯಂತ ಆಕರ್ಷಕ ಲುಕ್ ಹಾಗೂ ರಸ್ತೆಯಲ್ಲಿ ತೆರಳುವಾಗ ಎಲ್ಲರೂ ಒಮ್ಮೆ ತಿರುಗಿ ನೋಡುವಂತ ಕವಾಸಕಿ ವಲ್ಕನ್ ಎಸ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಬೈಕ್ ಪರ್ಫಾಮೆನ್ಸ್, ಬೆಲೆ ಎಷ್ಟಿದೆ?

ಬೆಂಗಳೂರು (ಸೆ.15) ಭಾರತದಲ್ಲಿ ಅತೀ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಬೈಕ್ ಲಭ್ಯವಿದೆ. ರೆಟ್ರೋ ಸ್ಟೈಲ್, ಆಕರ್ಷಕ ಬೈಕ್ ಹಾಗೂ ಪರ್ಫಾಮೆನ್ಸ್ ನೀಡುವ ಬೈಕ್‌ಗೆ ಹೆಚ್ಚು ಬೇಡಿಕೆ ಇದೆ. ಇದರ ನಡುವೆ ಭಾರತದಲ್ಲಿ ಕವಾಸಕಿ ತನ್ನ ಅಪ್‌ಡೇಟೆಡ್ ವರ್ಶನ್ ಕವಾಸಕಿ ವಲ್ಕನ್ ಎಸ್ 2027 ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್‌ನಲ್ಲಿ ರೈಡ್ ಮಾಡಿದರೆ ಎಲ್ಲರೂ ಒಮ್ಮೆ ತಿರುಗಿ ನೋಡುತ್ತಾರೆ. ಅಷ್ಟರ ಮಟ್ಟಿಗೆ ಆಕರ್ಷಕ ಬೈಕ್ ಇದಾಗಿದೆ. ಮೋಸ್ಟ್ ಸ್ಟೈಲೀಶ್ ಬೈಕ್ ಕವಾಸಕಿ ವಲ್ಕನ್ ಎಸ್ ಬೈಕ್ ಹಲವು ವಿಶೇಷತೆ ಹೊಂದಿದೆ.

ವಲ್ಕನ್ ಎಸ್ ಬೈಕ್ ಬೆಲೆ

ಕವಾಸಿ ಬಿಡುಗಡೆ ಮಾಡಿರುವ ವಲ್ಕನ್ ಎಸ್ ಬೈಕ್ ಬೆಲೆ ಬರೋಬ್ಬರಿ 8.23 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಹೌದು ಇದು ದುಬಾರಿ ಬೈಕ್. ಕಾರಣ ಇದರ ಎಂಜಿನ್ ಸೇರಿದಂತೆ ಪರ್ಪಾಮೆನ್ಸ್ ಕಾರಿನಂತಿದೆ. ಮಾರುತಿ 800 ಕಾರಿನ ಎಂಜಿನ್ 796 ಸಿಸಿ ಹೊಂದಿದೆ. ಈ ಕವಾಸಕಿ ವಲ್ನ್ ಎಸ್ ಬೈಕ್ ಎಂಜಿನ್ 649 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್. ಭಾರತದ ದುಬಾರಿ ಬೈಕ್ ಸಾಲಿನಲ್ಲಿ ಕವಸಾಕಿ ವಲ್ಕನ್ ಎಸ್ ಕಾಣಿಸಿಕೊಂಡಿದೆ.

ವಲ್ಕನ್ ಎಸ್ ಬೈಕ್ ಪರ್ಫಾಮೆನ್ಸ್

ಕವಾಸಿಕ ವಲ್ಕನ್ ಎಸ್ ಬೈಕ್ 649ಸಿಸಿ ಎಂಜಿನ್ ಹೊಂದಿದೆ. ಈ ಬೈಕ್ 61hp ಪವರ್ ಹಾಗೂ 62.4Nm ಟಾರ್ಕ್ ಸಾಮರ್ಥ್ಯ ಹೊಂದಿದೆ. ಇದು ಸಣ್ಣ ಕಾರಿಗಿಂತ ಹೆಚ್ಚು ಪವರ್‌ಫುಲ್ ಆಗಿದೆ. ಮಾರುತಿ 800 ಕಾರಿನ ಪವರ್ 39.5 bhp ಹಾಗೂ 59 Nm ಟಾರ್ಕ್ ಹೊಂದಿದೆ. ಇದಕ್ಕಿಂತ ಹೆಚ್ಚಿನ ಪವರ್ ಹಾಗೂ ನ್ಯೂಟನ್ ಮೀಟರ್ ಟಾರ್ಕ್ ಸಾಮರ್ಥ್ಯ ಕವಾಸಕಿ ವಲ್ಕನ್ ಎಸ್ ಬೈಕ್‌ನಲ್ಲಿದೆ.

ಕ್ರೂಸರ್ ಸ್ಟೈಲ್ ಬೈಕ್

ಕವಾಸಕಿ ವಲ್ಕನ್ ಎಸ್ ಕ್ರೂಸರ್ ಸ್ಟೈಲ್ ಬೈಕ್. ಹೀಗಾಗಿ ಹೆಚ್ಚು ಆಕರ್ಷಕವಾಗಿದೆ. ವಿಶೇಷ ಅಂದರೆ ನಗರದ ರೈಡ್, ಲಾಂಗ್ ರೈಡ್ ಸೇರಿದಂತೆ ಯಾವುದೇ ರಸ್ತೆಗೂ ಸೈ ಎನಿಸಿಕೊಂಡಿದೆ. ಮೆಟಾಲಿಕ್ ಫ್ಲ್ಯಾಟ್ ಸ್ಪಾರ್ಕ್ ಬ್ಲಾಕ್ ಶೇಡ್, ಮೆಟಾಲಿಕ್ ಕಾರ್ಬನ್ ಗ್ರೇ , ಸಬ್ಟಲ್ ಬ್ಲೂಯಿಶ್ ಗ್ರೀನ್ ಸೇರಿದಂತೆ ಆಕರ್ಷಕ ಬಣ್ಣದಲ್ಲಿ ಬೈಕ್ ಲಭ್ಯವಿದೆ. ಸಣ್ಣ ಬದಲಾವಣೆ ಹೊರತು ಪಡಿಸಿದರೆ 2027ರ ಅಪ್‌ಡೇಟೆಡ್ ವಲ್ಕನ್ ಎಸ್ ಹಾಗೂ ಸದ್ಯ ಮಾರುಕಟ್ಟೆಯಲ್ಲಿರುವ ವಲ್ಕನ್ ಎಸ್ ಬೈಕ್ ಹೆಚ್ಚು ಕಡಿಮೆ ಸೇಮ್.

ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 650 ಬೈಕ್‌‌ಗೆ ಪ್ರತಿಸ್ಪರ್ಧಿಯಾಗಿದೆ. ಇದೀಗ ಕವಾಸಕಿ ವಲ್ಕನ್ ಎಸ್ ಬೈಕ್ ಬೇಡಿಕೆ ಪಡೆದುಕೊಳ್ಳುತ್ತಿದೆ.

PREV
Read more Articles on
click me!

Recommended Stories

TVS, Honda ಬೈಕ್‌ಗಳಿಗೆ ನಡುಕ: ಬ್ರ್ಯಾಂಡ್ ಲುಕ್‌ನಲ್ಲಿ ರಸ್ತೆಗಿಳಿಯಲು ಸಜ್ಜಾದ ಹೊಸ Xtreme 125R!
ಅಗ್ಗದ ಬೆಲೆಯಲ್ಲಿ ಎಬಿಎಸ್ ಇರೋ ಹೀರೋ ಗ್ಲಾಮರ್ ಬೈಕ್ ಲಾಂಚ್, ಏನಿದರ ವಿಶೇಷತೆ?