ಬರೋಬ್ಬರಿ 20 ಲಕ್ಷ ರೂ ಡುಕಾಟಿ F73 ಬೈಕ್ ಭಾರತಕ್ಕೆ ಬರುತ್ತಿದ್ದಂತೆ ಕೆಲ ಗಂಟೆಗಳಲ್ಲೇ ಸೋಲ್ಡ್ ಔಟ್

Published : Oct 23, 2026, 04:43 PM IST
Ducati Formula 73 Limited Edition

ಸಾರಾಂಶ

ಭಾರತದಲ್ಲಿ ಡುಕಾಟಿ ಫಾರ್ಮುಲಾ 73 ಲಿಮಿಟೆಡ್ ಎಡಿಶನ್ ಬೈಕ್ ಬಿಡುಗಡೆಯಾಗಿದೆ. ಆದರೆ ಈ ಬೈಕ್ ನೀವು ಖರೀದಿಸಲು ಸಾಧ್ಯವಿಲ್ಲ. ಕಾರಣ ಈ ಬೈಕ್ ಸೋಲ್ಡ್ ಔಟ್ ಆಗಿದೆ. ಇದರ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ.

ನವದೆಹಲಿ (ಅ.23) ಡುಕಾಟಿ ಫಾರ್ಮುಲಾ 73 ಲಿಮಿಟೆಡ್ ಎಡಿಶನ್ ಬೈಕ್ ಈ ವರ್ಷದ ಆರಂಭದಲ್ಲಿ ಜಾಗತಿಕ ಮಟ್ಟದಲ್ಲಿ ಅನಾವರಣಗೊಂಡಿತ್ತು. ಇದೀಗ ಭಾರತಕ್ಕೆ ಈ ಬೈಕ್ ಲ್ಯಾಂಡ್ ಆಗಿದೆ. ಬುಕಿಂಗ್‌ಗೆ ತಯಾರಿ ಮಾಡಿಕೊಳ್ಳುತ್ತಿದ್ದರೆ, ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಿದ್ದರೆ ಲೇಟ್ ಆಯಿತು. ಕಾರಣ ಈ ಲಿಮಿಟೆಡ್ ಎಡಿಶನ್ ಬೈಕ್ ಭಾರತದಲ್ಲಿ ಸೋಲ್ಡ್ ಆಗಿದೆ. ಭಾರತದ ಎಲ್ಲಾ ಬೈಕ್‌ಗಳು ಈಗಾಗಲೇ ಬುಕಿಂಗ್ ಆಗಿದೆ.ಸದ್ಯ ಬುಕಿಂಗ್ ಕೂಡ ನಿಲ್ಲಿಸಲಾಗಿದೆ. ಈ ಬೈಕ್ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ.

ಕೇವಲ 873 ಬೈಕ್ ಉತ್ಪಾದನೆ

ಡುಕಾಟಿ ಫಾರ್ಮುಲಾ 73 ಬೈಕ್ ರೆಟ್ರೋ ಲುಕ್ ಹೊಂದಿರುವ ಬೈಕ್. ಅತ್ಯಾಧುನಿಕ ತಂತ್ರಜ್ಞಾನದ ಈ ಬೈಕಿ ಲಿಮಿಟೆಡ್ ಎಡಿಶನ್ ಬೈಕ್. ಹೀಗಾಗಿ ಜಾಗತಿಕ ಮಟ್ಟದಲ್ಲಿ ಕೇವಲ 873 ಬೈಕ್ ಮಾತ್ರ ಉತ್ಪಾದನೆ ಮಾಡಲಾಗಿದೆ. ಹೀಗಾಗಿ ವಿಶ್ವಾದ್ಯಂತ ಇರುವ 873 ಬೈಕ್ ಪ್ರಿಯರಿಗೆ ಮಾತ್ರ ಈ ಬೈಕ್ ಖರೀದಿಸಲು ಸಾಧ್ಯ. ಇದರಲ್ಲಿ ಭಾರತಕ್ಕೆ ಅಲೋಟ್ ಮಾಡಿದ ಎಲ್ಲಾ ಬೈಕ್ ಬುಕಿಂಗ್ ಆಗಿ ಹೊಸ ದಾಖಲೆ ಬರೆದಿದೆ.

ಡುಕಾಟಿ 750 ಸೂಪರ್ ಸ್ಪೋರ್ಟ್ ಡೆಸ್ಮೋದಿಂದ ಪ್ರೇರಿತವಾಗಿರುವ ಡುಕಾಟಿ ಫಾರ್ಮುಲಾ 73 ಬೈಕ್ ಸಿಲ್ವರ್ ಹಾಗೂ ಅಕ್ವಾ ಗ್ರೀನ್ ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಅಲ್ಯುಮಿನಿಯಂ ಕಾಂಪೋನೆಂಟ್ಸ್, ಸ್ಟೀಲ್ ಟ್ರೆಲ್ಲಿಸ್ ಫ್ರೇಮ್, ರಿಝೋಮಾ ಫ್ಯುಯೆಲ್ ಕ್ಯಾಪ್ , 17 ಇಂಚಿನ್ ವ್ಹೀಲ್ ಹೊಂದಿದೆ. ಪ್ರತಿ ಬೈಕ್ ಸೀರಿಯಲ್ ನಂಬರ್ ಹಾಗೂ ಸ್ಟೀರಿಂಗ್ ಪ್ಲೇಟ್ ಹೊಂದಿದೆ. ಹೀಗಾಗಿ ಈ ಬೈಕ್ ಖರೀದಿಸಿದ ಮಾಲೀಕನಿಗೆ 873 ಬೈಕ್ ಪೈಕ್ ತನ್ನ ಬೈಕ್ ಎಷ್ಟನೇಯದು ಅನ್ನೋ ಸ್ಪಷ್ಟ ಚಿತ್ರಣ ಸಿಗಲಿದೆ.ಈ ಬೈಕ್ ಜೊತೆ ಅಧಿಕೃತ ಸರ್ಟಿಫಿಕೇಟ್, ಕೆಲ ಫೋಟೋಗಳು, ಡಿಸೈನ್ ಸ್ಕೆಚ್ ಸೇರಿದಂತೆ ಕಿಟ್ ಸಿಗಲಿದೆ.

ಸ್ಪೆಷಲ್ ಹಾಗೂ ಲಿಮಿಟೆಡ್ ಎಡಿಶನ್ ಬೈಕ್ 803 ಸಿಸಿ, ಎರ್ ಕೂಲ್ಡ್, ಎಲ್ ಟ್ವಿನ್ ಎಂಜಿನ್ ಹೊಂದಿದೆ. 73hp ಪವರ್ ಹಾಗೂ 65.2Nm ಟಾರ್ಕ್ ಸಾಮರ್ಥ್ಯ ಹೊಂದಿದೆ. ಮಾರುತಿ 800 ಸೇರಿದಂತೆ ಸಣ್ಣ ಕಾರುಗಳಿಂತ ಹೆಚ್ಚಿನ ಪವರ್‌ಫುಲ್ ಎಂಜಿನ್ ಹಾಗೂ ಪವರ್ ಹೊಂದಿದೆ.

ಡುಕಾಟಿ ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಕ್ವಿಕ್ ಶಿಫ್ಟ್, ಪವರ್ ಮೊಡ್ ಸೇರಿದಂತೆ ಹಲವು ಸುರಕ್ಷಾತ ಫೀಚರ್ಸ್ ಈ ಬೈಕ್‌ನಲ್ಲಿದೆ. 4.3 ಫುಲ್ ಟಿಎಫ್‌ಟಿ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್, ಡುಕಾಟಿ ಮಲ್ಟಿಮೀಡಿಯಾ ಸಿಸ್ಟಮ್, ಹೀಟೆಡ್ ಗ್ರಿಪ್ಸ್, ಟರ್ನ್ ಬೈ ಟರ್ನ್ ನ್ಯಾವಿಗೇಶನ್, ಆ್ಯಂಟಿ ಥೆಫ್ಟ್ ಸಿಸ್ಟಮ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿದೆ.

ಈ ಬೈಕ್ ಎಕ್ಸ್ ಶೋ ರೂಂ ಬೆಲೆ 20 ಲಕ್ಷ ರೂಪಾಯಿ. ಬೈಕ್‌ನ ವಿಮೆ, ಆರ್‌ಟಿ ಚಾರ್ಜಸ್ ಸೇರಿದಾಗ ಬೈಕ್ ಮತ್ತಷ್ಟು ದುಬಾರಿಯಾಗಲಿದೆ. ಐಷಾರಾಮಿ ಹಾಗೂ ದುಬಾರಿ ಬೈಕ್ ಆಗಿರುವ ಕಾರಣ ವಿಮೆ ಹಾಗೂ ರೋಡ್ ಟ್ಯಾಕ್ಸ್ ಸೇರಿದಂತೆ ಇತರ ತೆರಿಗೆ ದುಬಾರಿಯಾಗುತ್ತದೆ.

PREV
Read more Articles on
click me!

Recommended Stories

ದೇಶಾದ್ಯಂತ ಜಾವಾ ಯೆಜ್ಡಿ ಭಾರಿ ಜಾಲ ವಿಸ್ತರಣೆ, 2028 ರ ವೇಳೆಗೆ 700 ಶೋರೂಮ್‌ಗಳ ಬೃಹತ್ ಗುರಿ!
ಮಳೆ ನೀರಿನಲ್ಲಿ ಮುಳುಗಿದ ಕಾರು, ಬೈಕ್ ಸ್ಟಾರ್ಟ್ ಮಾಡ್ತಿದ್ದೀರಾ? ಲಕ್ಷಗಟ್ಟಲೆ ಖರ್ಚಾಗಬಹುದು, ಹುಷಾರ್!