1971ರ ಯುದ್ಧದ ಗೆಲುವಿಗೆ 50 ವರ್ಷ; ಖಾಕಿ ಮತ್ತು ಮಿಡ್‌ನೈಟ್ ಗ್ರೇ ಬಣ್ಣಗಳಲ್ಲಿ ಜಾವಾ ಬೈಕ್‌!

By Suvarna News  |  First Published Jul 15, 2021, 3:28 PM IST

ಪಾಕಿಸ್ತಾನದ ವಿರುದ್ಧ 1971ರ ಯುದ್ಧದ ಭಾರತದ ಗೆಲುವಿನ 50 ವರ್ಷಾಚರಣೆಯನ್ನು ಜಾವಾ ಮೋಟಾರ್‌ಸೈಕಲ್ ವಿಶಿಷ್ಟವಾಗಿ ಆಚರಿಸುತ್ತಿದೆ. ತನ್ನ ಮಾಡರ್ನ್ ಕ್ಲಾಸಿಕ್ ಬೈಕ್‌ಗಳನ್ನು ಕಂಪನಿಯು ಖಾಖಿ ಮತ್ತು ಮಿಡ್‌ನೈಟ್ ಗ್ರೇ ಬಣ್ಣಗಳಲ್ಲಿ ಬಿಡುಗಡೆ ಮಾಡುತ್ತಿದೆ. ಆ ಮೂಲಕ ಯುದ್ಧದ ಗೆಲುವಿಗೆ ಹೋರಾಡಿದವರಿಗೆ ನಮನ ಸಲ್ಲಿಸತ್ತಿದೆ. ಈ ಎರಡೂ ಬಣ್ಣಗಳಲ್ಲಿ ಜಾವಾ ಬೈಕ್ ವಿಶಿಷ್ಟವಾಗಿ ಕಾಣಿಸುತ್ತಿವೆ.


ಆಧುನಿಕ ಫೀಚರ್‌ ಮತ್ತು ರೆಟ್ರೋ ಶೈಲಿಯಲ್ಲಿ ಮರುವಿನ್ಯಾಸಗೊಂಡು ಭಾರತೀಯ ರಸ್ತೆಗಳಲ್ಲಿ ಮೆರೆದಾಡುತ್ತಿರುವ ಜಾವಾ ಈಗ ಹೊಸ ಬಣ್ಣಗಳಲ್ಲಿ ಮತ್ತಷ್ಟುಆಕರ್ಷಕವಾಗಿ ಕಂಗೊಳಿಸುತ್ತಿವೆ. ಒಂದು ಕಾಲದಲ್ಲಿ ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆದಿದ್ದ ಜಾವಾ ಇದೀಗ ಅದೇ ಖದರಿನೊಂದಿಗೆ ಮತ್ತೆ ಮರಳಿ, ಗ್ರಾಹಕರನ್ನು ಸೆಳೆಯುತ್ತಿದೆ.

ಪಾಕಿಸ್ತಾನದ ವಿರುದ್ಧದ 1971ರ ಯುದ್ಧ ಗೆದ್ದು 50 ವರ್ಷಗಳಾದವು. ಈ ಸವಿ ನೆನಪಿಗೆ ForeverHeroes ಉಪಕ್ರಮದ ಮೂಲಕ ಜಾವಾ ಮೋಟಾರಸೈಕಲ್ ಎರಡು ಹೊಸ ಬಣ್ಣಗಳಲ್ಲಿ ತನ್ನ ಮೋಟಾರ್‌ಸೈಕಲ್‌ಗಳನ್ನುಪರಿಚಯಿಸುತ್ತಿದೆ. ಕಂಪನಿಯು ತನ್ನ ಮಾಡರ್ನ್ ಕ್ಲಾಸಿಕ್ ಬೈಕ್‌ಗಳನ್ನು ಖಾಕಿ ಮತ್ತು ಮಿಡ್‌ನೈಟ್ ಗ್ರೇ ಬಣ್ಣಗಳಲ್ಲಿ ಬಿಡುಗಡೆ ಮಾಡುತ್ತಿದೆ. ಜಾವಾ ಖಾಕಿ ಮತ್ತು ಜಾವಾ ಮಿಡ್‌ನೈಟ್ ಗ್ರೇ ಬೆಲೆ ಈಗ 1,93,357 ರೂಪಾಯಿ. ಇದು ದಿಲ್ಲಿ ಎಕ್ಸ್‌ಶೋರೂಮ್ ಬೆಲೆಯಾಗಿದೆ.

Tap to resize

Latest Videos

undefined

ಬೆಂಗಳೂರು ಬೀದಿಯಲ್ಲಿ ‘ಓಲಾ ಎಲೆಕ್ಟ್ರಿಕ್ ಸ್ಕೂಟರ್’, ಸವಾರಿ ಮಾಡಿದ್ದು ಯಾರು?
 
ಮಹಿಂದ್ರಾ ಕಂಪನಿ ಒಡೆತನದ ಕ್ಲಾಸಿಕ್ ಲೆಜೆಂಡ್ 2018ರಲ್ಲಿ ಜಾವಾ ಮೋಟಾರ್‌ಸೈಕಲ್‌ಗಳನ್ನು ಮರು ವಿನ್ಯಾಸದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆ ಬಳಿಕ ನಿಧಾನವಾಗಿ ಈ ಬೈಕುಗಳ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗುತ್ತಿವೆ. ಇದೀಗ 1971ರ ಯುದ್ಧದ ಗೆಲುವಿನ 50 ವರ್ಷಾಚಾರಣೆಯನ್ನು ತನ್ನದೇ ವಿನೂತನ ರೀತಿಯಲ್ಲಿ ಜಾವಾ ಆಚರಿಸುತ್ತಿದೆ. 

ಜಾವಾ ಮೋಟರ್ ಸೈಕಲ್ಸ್ ಪ್ರಕಾರ, ಜಾವಾ ಖಾಕಿ ಸಮವಸ್ತ್ರದಲ್ಲಿರುವ ಪುರುಷರಿಂದ ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆಯ ಮನೋಭಾವವನ್ನು ಸೂಚಿಸುತ್ತದೆ. ಆದರೆ ಜಾವಾ ಮಿಡ್ನೈಟ್ ಗ್ರೇ ಲಾಂಗ್ವಾಲಾ ಕದನದಿಂದ ಸ್ಫೂರ್ತಿ ಪಡೆದಿದೆ. ಎರಡೂ ಬಣ್ಣ ಆಯ್ಕೆಗಳು ಇಂಧನ ಟ್ಯಾಂಕ್ ಮೇಲೆ  1971 ರ ಯುದ್ಧದಲ್ಲಿ ದೇಶದ ವಿಜಯವನ್ನು ಸಂಕೇತಿಸುವ 'ಲಾರೆಲ್ ಮಾಲೆ'ಯಿಂದ ಸುತ್ತುವರೆದಿರುವ ಭಾರತೀಯ ಸೇನೆಯ ಚಿಹ್ನೆಯನ್ನು ತೋರಿಸುತ್ತದೆ.  ಬೈಕ್‌ನಲ್ಲಿ ಇದನ್ನು ಮಾಡಲು ಅನುಮತಿಸಿದ ಮೊದಲ ತಯಾರಕರು ಎಂದು ಜಾವಾ ಮೋಟಾರ್‌ಸೈಕಲ್ಸ್ ಹೇಳಿಕೊಂಡಿದೆ.

ಡಟ್ಸನ್ ಕಾರು ಖರೀದಿಸಲಿದ್ದೀರಾ? 40 ಸಾವಿರ ರೂ.ವರೆಗೆ ಗರಿಷ್ಠ ಆಫರ್!

ಜಾವಾ ಖಾಕಿ ಮತ್ತು ಜಾವಾ ಮಿಡ್‌ನೈಟ್ ಗ್ರೇಗಳೆರಡೂ ಮ್ಯಾಟ್ ಫಿನಿಶ್‌ ಮತ್ತು ಆಪ್ ಬ್ಲ್ಯಾಕ್‌ ಥೀಮ್‌ನೊಂದಿಗೆ ಬರುತ್ತವೆ. ಈ ಎರಡೂ ಬೈಕ್‌ಗಳ ರಿಮ್‌ಗಳು ಕಪ್ಪು ಬಣ್ಣಕ್ಕೆ ತಿರುಗಿವೆ. ಸೀಟ್ ಪ್ಯಾನ್ ಮರುವಿನ್ಯಾಸ ಮಾಡಲಾಗಿದೆ. ಅದೇ ರೀತಿ ಸಸ್ಪೆನ್ಷನ್‌ಗಳನ್ನು ರಿಟ್ಯೂನ್ ಮಾಡಲಾಗಿದೆ. ಟ್ರಿಪ್ ಮೀಟರ್ ಮತ್ತು ಎಕ್ಸಾಸ್ಟ್‌ಗಳನ್ನು ರಿಟ್ಯೂನ್ ಮಾಡಲಾಗಿದೆ.  ಆದರೆ, ಎಂಜಿನ್‌ ಶಕ್ತಿ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.


ಜಾವಾ ಖಾಖಿ ಮತ್ತು ಜಾವಾ ಮಿಡ್‌ನೈಟ್ ಗ್ರೇ ಬೈಕ್‌ಗಳೆರಡೂ 293 ಸಿಸಿ, ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್‌ ಹೊಂದಿವೆ.  ಈ ಎಂಜಿನ್ ಗರಿಷ್ಠ 27.33 ಪಿಎಸ್ ಪವರ್ ಹಾಗೂ 27.07 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತವೆ. ಸಿಕ್ಸ್ ಸ್ಪೀಡರ್‌ ಗಿಯರ್ ಬಾಕ್ಸ್ ಎಂದಿನಂತೆ ಮುಂದುವರಿದಿದೆ. 

ಇಷ್ಟು ಮಾತ್ರವಲ್ಲದೇ ಹಲವು ವಿಶೇಷಗಳನ್ನು ಈ ಬೈಕುಗಳು ಹೊಂದಿವೆ. ಜಾವಾ ಖಾಕಿ ಮತ್ತು ಜಾವಾ ಮಿಡ್‌ನೈಟ್ ಗ್ರೇ ಬೈಕ್‌ಗಳು ಗ್ರಾಹಕರಿಗೆ ಡ್ಯುಯೆಲ್ ಚಾನೆಲ್ ಎಬಿಎಸ್‌ ಸೌಲಭ್ಯದೊಂದಿಗೆ ಸಿಗಲಿವೆ. ಸಿಂಗಲ್ ಚಾನೆಲ್ ಎಬಿಎಸ್ ವೆರಿಯೆಂಟ್‌ಗಳಲ್ಲಿ ಈ ಬೈಕ್‌ಗಳನ್ನು ಮಾರಾಟ ಮಾಡಲಾಗುತ್ತಿಲ್ಲ. ಆದರೆ ಸ್ಟ್ಯಾಂಡರ್ಡ್ ಜಾವಾ ಬೈಕುಗಳು ಸಿಂಗಲ್ ಚಾನೆಲ್ ಎಬಿಎಸ್ ಮತ್ತು ಡ್ಯುಯೆಲ್ ಚಾನೆಲ್ ಎಬಿಎಸ್ ಸೌಲಭ್ಯಗಳನ್ನು ಹೊಂದಿವೆ ಎಂದು ಹೇಳಬಹುದು.

ಬಿಎಂಡಬ್ಲೂ ಆರ್ 1250 ಜಿಎಸ್, 1250 ಜಿಎಸ್ ಅಡ್ವೆಂಚರ್ ಬೈಕ್‌ ಲಾಂಚ್, ಬೆಲೆ ಎಷ್ಟಿದೆ?

ಹೊಸ ಲುಕ್, ವಿನ್ಯಾಸ ಮತ್ತು ಹೊಸ ಎಂಜಿನ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಜಾವಾ ಬೈಕುಗಳು ನಿಧಾನವಾಗಿ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗುತ್ತಿವೆ. ಪ್ರೀಮಿಯಂ ಬೈಕುಗಳಾಗಿದ್ದರಿಂದ ಹೆಚ್ಚಿನ ಸೌಲಭ್ಯಗಳನ್ನು, ಫೀಚರ್‌ಗಳನ್ನು ನೀವು ಇವುಗಳಲ್ಲಿ ಕಾಣಬಹುದಾಗಿದೆ.

click me!