ಹೋಂಡಾದಿಂದ ಭಾರತದಲ್ಲಿ 2021 ಸಿಬಿಆರ್650ಆರ್ ಬಿಡುಗಡೆ ಮಾಡಿದೆ. ಮೊಟ್ಟಮೊದಲ ಬಾರಿಗೆ ನಿಯೊ ಸ್ಪೋಟ್ರ್ಸ್ ಕೆಫೆಯಿಂದ ಸ್ಫೂರ್ತಿ ಪಡೆದ CB650R ಬೈಕ್ ಬುಕಿಂಗ್ ಕೂಡ ಆರಂಭಗೊಂಡಿದೆ. ಬೈಕ್ ವಿಶೇಷತೆ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ಎ.01): ಮುಕ್ತ- ಉತ್ಸಾಹಭರಿತ ಸವಾರರಿಗೆ ಸಂಪೂರ್ಣ ನಿಯಂತ್ರಣ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಹೋಂಡಾ ಮೋಟರ್ ಸೈಕಲ್ & ಸ್ಕೂಟರ್ ಇಂಡಿಯಾ ಭಾರತದಲ್ಲಿ ಹೊಸ 2021 CBR650R ಮತ್ತು CB650R ಬಿಡುಗಡೆ ಮಾಡಿದೆ. CB650R ಬೈಕ್ ಬೆಲೆ 8.67 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಹಾಗೂ CBR650R ಬೈಕ್ ಬೆಲೆ 8.88 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಭಾರತದಲ್ಲಿ ಹೊಂಡಾ CB350RS ಬೈಕ್ ಡೆಲಿವರಿ ಆರಂಭ!
ಭಾರತಕ್ಕೆ ಚೊಚ್ಚಲ ಪದಾರ್ಪಣೆ ಮಾಡಿರುವ, ನಿಯೋ ಸ್ಪೋಟ್ರ್ಸ್ ಕೆಫೆಯಿಂದ ಸ್ಫೂರ್ತಿ ಪಡೆದ 2021 CB650R, ನಾಲ್ಕು ಸಿಲಿಂಡರ್ ಕ್ಷಮತೆ ಮತ್ತು ಲಘು, ವೈವಿಧ್ಯಮಯ, ನವೀಕೃತ ಚಾಸಿಸ್ ನಿರ್ವಹಣೆಯನ್ನು ಒಳಗೊಂಡಿದ್ದು, ಯುವಸವಾರರನ್ನು ಆಹ್ಲಾದಗೊಳಿಸಲಿದೆ. 2021 ಮಾದರಿಯಲ್ಲಿ, ಆರಾಮ, ಬಳಕೆ ಮತ್ತು ಪ್ರಾಯೋಗಿಕತೆ ವಿಸ್ತರಿಸುವ ಸಲುವಾಗಿ ಹಲವು ಸುಧಾರಣೆಗಳನ್ನು ಮಾಡಲಾಗಿದೆ.
ರೇಸಿಂಗ್, ಸಾಹಸ ಮತ್ತು ರೋಡ್‍ಸ್ಟಾರ್ ಶ್ರೇಣಿಯಿಂದ ವಿಶ್ವದ ಅತ್ಯುತ್ತಮ ದ್ವಿಚಕ್ರವಾಹನಗಳನ್ನು ಭಾರತೀಯ ಸವಾರರಿಗೆ ಒದಗಿಸಲು ಹೋಂಡಾ ಬದ್ಧವಾಗಿದೆ. ಎರಡು ಬಹು ನಿರೀಕ್ಷಿತ ಮಾದರಿಗಳಾದ 2021 ಸಿಬಿಆರ್650ಆರ್ ಹಾಗೂ ಸಿಬಿ650ಆರ್‍ಗಳನ್ನು ನಮ್ಮ ಪ್ರಿಮಿಯಂ ಮೋಟರ್‍ಸೈಕಲ್ ಉತ್ಪನ್ನ ಶ್ರೇಣಿಗೆ ಸೇರಿಸಲು ನಮಗೆ ಹೆಮ್ಮೆ ಎನಿಸುತ್ತಿದೆ ಎಂದು ಹೋಂಡಾ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅತ್ಸುಶಿ ಒಗಾಟಾ ಹೇಳಿದರು.
ಭಾರತದಲ್ಲಿ 2021 ಆಫ್ರಿಕಾ ಟ್ವಿನ್ ಅಡ್ವೆಂಚರ್ ಹೊಂಡಾ ಸ್ಪೋರ್ಟ್ಸ್ ಬೈಕ್ ಲಾಂಚ್!
ಬಿಡುಗಡೆಯಾದ ದಿನದಿಂದಲೂ ಸಿಬಿಆರ್650ಆರ್, ಯುವ ಮೋಟರ್‍ಸೈಕಲ್ ಉತ್ಸಾಹಿಗಳ ಹೃದಯದಲ್ಲಿ ಕಂಪನ ಸೃಷ್ಟಿಸಿದೆ. ನಮ್ಮ ಪ್ರಿಮಿಯಂ ಮೋಟರ್‍ಸೈಕಲ್ ಉತ್ಪನ್ನ ಶ್ರೇಣಿಯನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಸಿಬಿ650ಆರ್ ಪರಿಚಯಿಸಲು ಅತೀವ ಸಂತಸವೆನಿಸುತ್ತಿದೆ. ಇದು ಮಧ್ಯಮತೂಕದ ನೇಕೆಡ್ ಸ್ಪೋಟ್ರ್ಸ್ ವರ್ಗದಲ್ಲಿ ರೋಮಾಂಚನ ಎತ್ತರಿಸಲು ಅನುವು ಮಾಡಿಕೊಟ್ಟಿದೆ. 650 ಅವಳಿಗಳು ಸವಾರರಿಗೆ ರೋಮಾಂಚಕ ಅನುಭವ ನೀಡಲು ಸಜ್ಜಾಗಿವೆ ಎಂದು ಹೋಂಡಾ ಮೋಟರ್ ಸೈಕಲ್ & ಸ್ಕೂಟರ್ ಇಂಡಿಯಾ ಮಾರುಕಟ್ಟೆ ವಿಭಾಗದ ನಿರ್ದೇಶಕ ಯದುವೀಂದ್ರ ಸಿಂಗ್ ಗುಲೇರಿಯಾ ಹೇಳಿದರು.
ವಿನ್ಯಾಸ & ಶೈಲಿ
ಇದರ ಚೌಕಟ್ಟು ಅವಳಿ ನಳಿಕೆಯ ವಿಧಾನದ್ದಾಗಿದ್ದು, ಇದು ಅತ್ಯಂತ ದಕ್ಷ ಡೌನ್‍ಡ್ರಾಫ್ಟ್ ಇನ್‍ಟೇಕ್ ವಿನ್ಯಾಸವನ್ನು ಸಾಧ್ಯವಾಗಿಸಿದೆ. ಜತೆಗೆ ಉಕ್ಕಿನ ಪೂರಕ ಗುಣಲಕ್ಷಣಗಳನ್ನು ಹೊಂದಿದೆ. ಸ್ವಿಂಗ್ ಆರ್ಮ್ ಪೈವೋಟ್ ಮತ್ತು ಎಂಜಿನ್ ಹ್ಯಾಂಗರ್ ಸಂರಚನೆಯ ಸುತ್ತ, ತೂಕ ಉಳಿಕೆ ಮತ್ತು ದ್ರವ್ಯರಾಶಿಯ ಕೇಂದ್ರೀಕರಣವನ್ನು ಸಾಧಿಸಲಾಗಿದೆ.
ಹೋಂಡಾ ಹೈನೆಸ್ ಖರೀದಿಸಿ 43,000 ರೂಪಾಯಿವರೆಗೂ ಉಳಿಸಿ!
ಬಿಗಿಯಾಗಿ ಸುತ್ತಲ್ಪಟ್ಟ ಮತ್ತು ರಭಸದ CB650Rನ ನಿಯೋ ಸ್ಪೋಟ್ರ್ಸ್ ಕೆಫೆ ಶೈಲಿಯು ವಿಶಿಷ್ಟವಾದ, ಅಚ್ಚುಗಟ್ಟಾದ 'ಟ್ರೆಪೆಝೋಯ್ಡ್ ಪ್ರಮಾಣವನ್ನು ಸಂಕ್ಷಿಪ್ತವಾಗಿ ಸಆಧಿಸಿದ್ದು, ಮುಂಡು ಟೇಲ್ ಮತ್ತು ಗಿಡ್ಡ ಮೇಲಿನಿಂದ ಇಳಿಬಿಟ್ಟ ಮಾದರಿಯ ಹೆಡ್‍ಲೈಟ್ ಹೊಂದಿದೆ. ನೀಳವಾದ ಟ್ಯಾಂಕ್ ಈ ಕುಟುಂಬ ವಿನ್ಯಾಸದ ಆಲಂಕಾರಿಕ ಸಂಕೇತವೆನಿಸಿದೆ. ಇದರ ನಯವಾದ ಗೆರೆಗಳು ವಾಸ್ತವ ಲೋಹದ ಮೇಲ್ಮೈಯ ಗಟ್ಟಿತನವನ್ನು ವರ್ಧಿಸಿದ್ದು, ನಾಲ್ಕು ಸಿಲಿಂಡರ್ ಎಂಜಿನಿಯರಿಂಗ್‍ನ ಕಿರೀಟ ಎನಿಸಿದೆ. ಸಣ್ಣ ಬದಿಯ ಪ್ಯಾನೆಲ್‍ಗಳು ಕನಿಷ್ಠಗೊಳಿಸುವಿಕೆಯನ್ನು ವರ್ಧಿಸುವಂತೆ ಮಾಡಿದ್ದು, ಅಂತೆಯೇ ಹಿಂಬದಿಯ ಮಡ್‍ಗಾರ್ಡ್ ಸ್ಟೀಲ್‍ನಿಂದ ಮಾಡಲ್ಪಟ್ಟಿದೆ. ದುಂಡಗಿನ ಹೆಡ್‍ಲೈಟ್, ನಿಯೋ ಸ್ಪೋಟ್ರ್ಸ್ ಕೆಫೆ ವಿನ್ಯಾಸ ಭಾಷೆಯ ಪ್ರಮುಖ ಶಬ್ದವೆನಿಸಿದೆ.
ಇದರ ನಾಲ್ಕು ಸಿಲಿಂಡರ್ ಪವರ್ ಯುನಿಟ್, CBR650Rನಲ್ಲಿ ಸ್ಪಷ್ಟವಾಗಿ ಪ್ರದರ್ಶಿತಗೊಂಡಿದೆ ಹಾಗೂ ಇದು ಪರಿಶುದ್ಧ ಕ್ರೀಡಾನೋಟವನ್ನು ಹೊಂದುವಂತೆ ಮಾಡಿದೆ. ಅವಳಿ ಎಲ್‍ಇಡಿ ಹೆಡ್‍ಲೈಟ್ ಗುಚ್ಛವು ತೀಕ್ಷ್ಣ, ರಾಜಿಗೆ ಅವಕಾಶವಿಲ್ಲದ ದಿಟ್ಟಕಿರಣಗಳನ್ನು ಹೊರಸೂಸುತ್ತದೆ ಹಾಗೂ 2021 ತೀಕ್ಷ್ಣ ಹೊಸ ಪ್ರತಿಫಲನ ವ್ಯವಸ್ಥೆಯನ್ನು ಹೊಂದಿದೆ. ಮೇಲಿನ ಹಾಗೂ ಕೆಳಭಾಗದ ಫೇರಿಂಗ್‍ಗಳು ಶಕ್ತಿಶಾಲಿಯಾಗಿದ್ದು, ತೆಳ್ಳಗಿನ ಗೆರೆಗಳು ಮತ್ತು ಕೋನಗಳೊಂದಿಗೆ ಹೊಂದಿಕೆಯಾಗುತ್ತವೆ.
ಸೀಟ್‍ಯುನಿಟ್ ಚೊಕ್ಕದಾಗಿದ್ದು, ಯಂತ್ರದ ಹಿಂಭಾಗವನ್ನು ಸವರಿದಂತಿದೆ. ಇದು ಕಠಿಣ ಅಲಗಿನ ಭಾವನೆಯನ್ನು ಹುಟ್ಟಿಸುತ್ತದೆ. ಹಿಂಬದಿಯ ಸ್ಟೀಲ್ ಮಡ್‍ಗಾರ್ಡ್/ನಂಬರ್ ಪ್ಲೇಟ್ ಮೌಂಟ್‍ನಂತೆ ಹೊಸ ಸೈಡ್‍ಪ್ಯಾನೆಲ್‍ಗಳು ಕನಿಷ್ಠಗೊಳಿಸುವಿಕೆಯನ್ನು ವರ್ಧಿಸುವಂತೆ ಮಾಡಿದೆ. ರಭಸದ ಸವಾರಿ ಭಂಗಿಯು ಹ್ಯಾಂಡಲ್‍ಬಾರ್‍ಗಳ ಕ್ಲಿಪ್‍ನೊಂದಿಗೆ ಆರಂಭವಾಗುತ್ತದೆ ಹಾಗೂ ಇದು ಹಿಂಬದಿಯ ಫೂಟ್‍ಪೆಗ್‍ಗೆ ಹೊಂದಿಕೆಯಾಗುತ್ತವೆ.
ಶಕ್ತಿಶಾಲಿ & ಸ್ಪೋರ್ಟಿ
649 CC, DOHC 16 ವಾಲ್ವ್ ಎಂಜಿನ್‍ಗಳನ್ನು ಇನ್‍ಲೈನ್ ನಾಲ್ಕು ಸಿಲಿಂಡರ್ ಕ್ಷಮತೆಯ ಪರಿಪೂರ್ಣವಾಗಿ ಆಸ್ವಾದಿಸುವ ರೀತಿಯಲ್ಲಿ ಲಯಬದ್ಧಗೊಳಿಸಲಾಗಿದ್ದು, ಸಾಂಪ್ರದಾಯಿಕವಾದ ವೇಗದ ಪಿಕ್ ಅಪ್ ಅನ್ನು ರೇವ್ ರೇಂಜಿನಿಂದ ಸಾಧಿಸಲಾಗಿದ್ದು, ಅತ್ಯುನ್ನತ ವಾಹನವಾಗಿ ರೂಪಿಸಿದೆ. ಗರಿಷ್ಠ ಶಕ್ತಿ 64KW 12,000 RPMನಲ್ಲಿ ಲಭ್ಯವಾಗಲಿದ್ದು, ಗರಿಷ್ಠ ಟಾರ್ಕ್ 57.5NM( 8500RPM)ಲಭ್ಯ.
ಎರಡೂ ಮಾದರಿಗಳು ಅಸಿಸ್ಟ್/ಸ್ಲಿಪ್ಪರ್ ಕ್ಲಚ್ ಹೊಂದಿದ್ದು, ಇದು ಅಪ್‍ಶಿಫ್ಟ್‍ಗಳನ್ನು ಸುಉಲಿತಗೊಳಿಸುತ್ತದೆ ಹಾಗೂ ಕಠಿಣವಾದ ಕೆಳಮುಖಿ ಬದಲಾವಣೆಗಳನ್ನು ನಿರ್ವಹಿಸುತ್ತದೆ. ಅಸಿಸ್ಟ್ ವ್ಯವಸ್ಥೆಯು ಕ್ಲಚ್‍ಲಿವರ್ ಮೇಲಿನ ಕಾರ್ಯಾಚರಣೆ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಸ್ಲಿಪ್ಪರ್ ವ್ಯವಸ್ಥೆಯು ಹಿಂಬದಿಯ ಚಕ್ರ ಜಿಗಿಯುವುದನ್ನು ಕಡಿಮೆ ಮಾಡುತ್ತದೆ. ಇದು ದಿಢೀರ್ ಎಂಜಿನ್ ಬ್ರೇಕಿಂಗ್ ತಡೆಯುವ ಜತೆಗೆ ಆರಾಮದಾಯಕ ಮತ್ತು ಸುಲಲಿತ ಸವಾರಿಯನ್ನು ಒದಗಿಸುತ್ತದೆ. 4-1 ಸೈಡ್ ಸ್ವೆಪ್ಟ್ ಎಕ್ಸಾಸ್ಟ್‍ಗಳನ್ನು ಮೈಝುಮ್ಮೆನಿಸುವ ಮೇಲಕ್ಕೆ ಹತ್ತುವ ಶಕ್ತಿಯನ್ನು ನೀಡುವ ಸಲುವಾಗಿ ಒದಗಿಸಲಾಗಿದೆ.
ಪ್ರಿಮಿಯಂ ಸುರಕ್ಷೆ
ಹೊಸ ಸ್ಮಾರ್ಟ್ ಇಎಸ್‍ಎಸ್ (ಎಮರ್ಜೆನಿ ಸ್ಟಾಪ್ ಸಿಗ್ನಲ್) ತಂತ್ರಜ್ಞಾನವು ದಿಢೀರ್ ವೈಫಲ್ಯವನ್ನು ಪತ್ತೆ ಮಾಡುತ್ತದೆ ಹಾಗೂ ಸ್ವತಂಚಾಲಿತವಾಗಿ ಮುಂಬದಿ ಹಾಗೂ ಹಿಂಬದಿಯ ಅಪಾಯ ಸೂಚನೆಯ ದೀಪಗಳನ್ನು ಸಕ್ರಿಯಗೊಳಿಸುತ್ತದೆ. ಇದು ಅಕ್ಕಪಕ್ಕದ ಯಾವುದೇ ವಾಹನಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ. ಸವಾರರಿಗೆ ಮನಃಶ್ಯಾಂತಿ ನೀಡುವ ಹೋಂಡಾ ಇಗ್ನಿಶನ್ ಸೆಕ್ಯುರಿಟಿ ಸಿಸ್ಟಮ್ (ಎಚ್‍ಐಎಸ್‍ಎಸ್), ಎಲೆಕ್ಟ್ರಾನಿಕ್ ಕಳ್ಳತನ ತಡೆ ಸಾಧನವನ್ನು ಹೊಂದಿದ್ದು, ಇದು ಎಲೆಕ್ಟ್ರಾನಿಕ್ ನಿಯಂತ್ರಣದ ಮೂಲಕ ಎಂಜಿನ್ ಚಾಲನೆಗೊಳ್ಳುವುದನ್ನು ಸ್ವಯಂಚಾಲಿತವಾಗಿ ಸ್ಥಗಿತಗೊಳಿಸುವಂತೆ ಮಾಡುತ್ತದೆ.
ಸಕ್ರಿಯ ಸ್ಪಂದನೆ
ಹೋಂಡಾ ಸೆಲೆಕ್ಟೇಬಲ್ ತೊರಾಕ್ ಕಂಟ್ರೋಲ್ (ಎಸ್‍ಎಸ್‍ಟಿಸಿ) ವ್ಯಸ್ಥೆಯು, ರಭಸದ ಸವಾರಿ ಸ್ಥಿತಿಯಲ್ಲೂ ಮನಃಶ್ಯಾಂತಿಯನ್ನು ಖಾತರಿಪಡಿಸುತ್ತದೆ. ಈ ವ್ಯವಸ್ಥೆಯು ಎಂಜಿನ್ ಶಕ್ತಿಯನ್ನು ಗರಿಷ್ಠ ತೊರಾಕ್ ಹಿಂಬದಿ ಚಕ್ರದ ಮೇಲೆ ಬೀಳುವಂತೆ ಹೊಂದಾಣಿಕೆ ಮಾಡುತ್ತದೆ. ಹೀಗೆ ಹಿಂಬದಿಯ ಚಕ್ರ ಜಾರುವುದನ್ನು ತಡೆಯುತ್ತದೆ. ಎಡಬದಿಯ ಸ್ಟೀರಿಂಗ್ ವ್ಹೀಲ್‍ನಲ್ಲಿ ಹೊಂದಿರುವ ಸ್ವಿಚ್ ಮೂಲಕ ಸವಾರರು ಆನ್/ಆಫ್ ಸೆಟಿಂಗ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಎರಡೂ ಮಾದರಿಗಳ ಸುಧಾರಿತ ಎಂಜಿನ್ ಮತ್ತು ಸಸ್ಪೆಷನ್ ಕ್ಷಮತೆಗೆ ಹೊಂದಿಕೆಯಾಗುವಂತೆ, ಡ್ಯುಯಲ್ ರೇಡಿಯಲ್ ಮೌಂಟ್ ಫೋರ್ ಪೊಸಿಷನ್ ಬ್ರೇಕ್ ಕ್ಲಿಪ್ಪರ್‍ಗಳನ್ನು ಹೊಂದಿದೆ. ಇದು 79.2 ಚದರ ಸೆಂಟಿಮೀಟರ್ ಫ್ಲೋಟಿಂಗ್ ಡಿಸ್ಕ್‍ಗಳನ್ನು ಮುಂಭಾಗದಲ್ಲಿ ಮತ್ತು 25.4 ಚದರ ಸೆಂಟಿಮೀಟರ್ ಡಿಸ್ಕ್ ಅನ್ನು ಹಿಂಬದಿಯ ಹಿಡಿತ ಸಾಧಿಸಲು ಬಳಸುತ್ತದೆ. ಅವಳಿ ಚಾನಲ್ ಎಬಿಎಸ್, ಒದ್ದೆ ಹಾಗೂ ಒಳಗಿದ ಸ್ಥಿತಿಯಲ್ಲಿ ಕೂಡಾ ಸುಲಲಿತ ಬ್ರೇಕಿಂಗ್ ಅನುಭವ ಒದಗಿಸುತ್ತದೆ.
ಶೋವಾ ಸಪರೇಟ್ ಫಂಕ್ಷನ್ ಬಿಗ್ ಪಿಸ್ಟನ್ (ಎಸ್‍ಎಸ್‍ಎಫ್-ಬಿಪಿ) ಯುಎಸ್‍ಡಿ ಫೋರ್ಕ್‍ಗಳು, ವಿಶಿಷ್ಟ ವ್ಯವಸ್ಥೆ ಹೊಂದಿದ್ದು, ಎಡ ಹಾಗೂ ಬಲಭಾಗದ ಫೋರ್ಕ್‍ಗಳಲ್ಲಿ ಸ್ಪ್ರಿಂಗ್‍ಗಳನ್ನು ಹೊಂದಿದೆ. ಈ ವ್ಯವಸ್ಥೆಯು ಕಡಿಮೆ ತೂಕದ, ಉತ್ಕøಷ್ಟ ಕಠಿಣತೆ ಮತ್ತು ಒಟ್ಟಾರೆ ಅದ್ಭುತ ಕ್ಷಮತೆಯನ್ನು ಸ್ಪ್ರಿಂಗ್‍ಪ್ರಿಲೋಡ್‍ಗಳಿಗೆ ಹೊಂದಾಣಿಕೆ ಅವಕಾಶವನ್ನು ನೀಡುತ್ತದೆ. ಪ್ರಿಮಿಯಂ 5-ಸ್ಪೋಕ್ ವೈ ಆಕೃತಿಯ ಸ್ಪೋಕ್‍ಗಳನ್ನು ಹೊಂದಿದ ಅಲ್ಯೂಮೀನಿಯಂ ವ್ಹೀಲ್‍ಗಳು, ಅನಗತ್ಯ ತೂಕವನ್ನು ಕಡಿಮೆ ಮಾಡಲು ಕಾರಣವಾಗಿವೆ. ಲಘುತೂಕದ ಬಳಕೆಗಳು ಸಂಖ್ಯೆಗಳು ಸೂಚಿಸುವುದಕ್ಕಿಂತ ಹೆಚ್ಚಾಗಿ ನಿರ್ವಹಣೆ ಮೇಲೆ ಹೆಚ್ಚಿನ ಪರಿಣಾಮವನ್ನು ಹೊಂದಿವೆ.
ಸವ್ಯಸಾಚಿ ಎಲ್‍ಇಡಿ ಲೈಟಿಂಗ್
ಸಿಬಿಆರ್650ಆರ್ ಡ್ಯುಯೆಲ್ ಎಲ್‍ಇಡಿ ಹೆಡ್‍ಲೈಟ್‍ಗಳನ್ನು ಹೊಂದಿದ್ದು, ಹೊಸ ಪ್ರತಿಫಲನ ಸಾಧನವು ತೀವ್ರತರ ಕಡುನೀಲಿ ಬಣ್ಣದ ಟಿಂಟ್ ಹೊಂದಿದ ಕಿರಣದ ಬೆಳಕನ್ನು ನಿಮ್ಮ ದಾರಿಯತ್ತ ಪ್ರತಿಫಲಿಸುವಂತೆ ಮಾಡುತ್ತವೆ. ಎಲ್‍ಇಡಿ ಹಿಂಬದಿ ದೀಪಗಳು ಕೂಡ ಅಂದಗೊಳಿಸಿದ್ದು, ಕನಿಷ್ಠ ರೂಪದಲ್ಲಿವೆ.
ಸಿಬಿ650ಆರ್ ಬೈಕ್‍ನಲ್ಲಿ ವೃತ್ತಾಕಾರದ ಎಲ್‍ಜಿಡಿ ಹೆಡ್‍ಲೈಟ್‍ಗಳಿದ್ದು, ಇದು ತೀಕ್ಷ್ಣ ಕಪ್ಪು ಇಳಿಜಾರನ್ನು ಹೊಂದಿದ್ದು, ಸವಾರರು ಕಡುಗತ್ತಲ ಪ್ರದೇಶಗಳಲ್ಲಿ ಕೂಡಾತೀವ್ರ ನೀಲಿ ಟಿಂಡ್‍ನ ಕಿರಣಗಳ ಮೂಲಕ ಸವಾರಿ ಮಾಡಲು ಅನುವು ಮಾಡಿಕೊಟ್ಟಿದೆ. ಹಿಂಬದಿ ದೀಪವು ಸ್ಟೀಲ್ ನಂಬರ್ ಪ್ಲೇಟ್ ಮೌಂಟ್‍ನ ಜತೆಗಿದ್ದು, ಕನಿಷ್ಠದ ಶೈಲಿಯನ್ನು ಹೊಂದಿದೆ.
ಸವಾರಿ ನಡುವೆಯೇ ಅತ್ಯಾಧುನಿಕ ಮಾಹಿತಿ
ಡಿಜಿಟಲ್ ಎಲ್‍ಸಿಡಿ ಸಾಧನ ಗುಚ್ಛವು ಓದಲು ಸುಲಭವಾಗಿದೆ. ಅತ್ಯಾಧುನಿಕ ಮಾಹಿತಿಗಳಾದ ಗೇರ್ ಪೊಸಿಷನ್, ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್‍ಬಾರ್ ಗ್ರಾಫ್ ಟೆಕ್ನೋಮೀಟರ್, ಡ್ಯುಯೆಲ್ ಟ್ರಿಪ್ ಮಿಟರ್‍ಗಳು, ಡಿಜಿಟಲ್ ಇಂಧನ ಮಟ್ಟದ ಮಾಪನ ಮತ್ತು ಇಂಧನ ಬಳಕೆ ಮಾಪನ, ಡಿಜಿಟಲ್ ಗಂಟೆ, ನೀರಿನ ಉಷ್ಣತೆ ಮಾಪನ, ಗೇರ್ ಪೊಸಿಷನ್, ಶಿಫ್ಟ್ ಅಪ್ ಇಂಡಿಕೇಟರ್‍ಗಳು ಸವಾರರಿಗೆ ಸವಾರಿಯ ವೇಳೆಯೇ ಮಾಹಿತಿಗಳನ್ನು ಒದಗಿಸುತ್ತದೆ.