ಒಂದು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ರೈಡ್ ಮಾಡಲು ಸರ್ಕಸ್ ಮಾಡಬೇಕಿಲ್ಲ!

By Suvarna News  |  First Published Mar 26, 2021, 3:59 PM IST

ಎರಡು ಚಕ್ರದ ಬೈಕ್‌ ಅಥವಾ ಸ್ಕೂಟರ್ ರೈಡ್ ಮಾಡಲು ಬ್ಯಾಲೆನ್ಸ್ ಅಗತ್ಯ. ಆದರೆ ಕೆಲವರು ವೀಲಿಂಗ್ ಮಾಡುತ್ತಾ ಒಂದು ಚಕ್ರದಲ್ಲಿ ರೈಡ್ ಮಾಡುತ್ತಿರುವುದನ್ನು ಗಮಿನಿಸಿದ್ದೇವೆ. ಇದೀಗ ಒಂದೇ ಚಕ್ರದ ಬೈಕ್ ಬಿಡುಗಡೆಯಾಗಿದೆ. ವಿಶೇಷ ಅಂದರೆ ಇದು ಎಲೆಕ್ಟ್ರಿಕ್ ಬೈಕ್ ಆಗಿದ್ದು, ರೈಡ್ ಮಾಡಲು ಹೆಚ್ಚಿನ ಸರ್ಕಸ್ ಮಾಡಬೇಕಾದ ಅಗತ್ಯವಿಲ್ಲ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.


ಚೀನಾ(ಮಾ.26): ಬೈಕ್‌ನಲ್ಲಿ ಹೊಸ ವಿನ್ಯಾಸ, ಹೊಸ ಮಾಡೆಲ್, ಹೊಸ ತಂತ್ರಜ್ಞಾನ, ಹೆಚ್ಚುವರಿ ಫೀಚರ್ಸ್ ಸೇರಿದಂತೆ ಸಾಕಷ್ಟು ಬದಲಾವಣೆ ಆವಿಷ್ಕಾರಗಳು ನಡೆಯುತ್ತಿದೆ. ಇದರ ನಡುವೆ ಇದೀಗ ಹೊಸ ಬೈಕ್ ಬಿಡುಗಡೆಯಾಗಿದೆ. ಇದು ಕೇವಲ ಒಂದು ಚಕ್ರದ ಬೈಕ್. ಆರೇ ಇದನ್ನು ರೈಡ್ ಮಾಡಲು ಸರ್ಕಸ್ ಕಂಪನಿ ರೀತಿ ಬ್ಯಾಲೆನ್ಸ್ ಅಭ್ಯಾಸ ಮಾಡಬೇಕು ಅನ್ನೋ ಆತಂಕ ಬೇಡ. ದ್ವಿಚಕ್ರ ವಾಹನದ ರೀತಿಯಲ್ಲಿ ಸುಲಭ ರೀತಿಯಲ್ಲಿ ರೈಡ್ ಮಾಡಮಾಬಹುದು.

ವಿಶ್ವದ ಅತೀ ದೊಡ್ಡ ಫ್ಯಾಕ್ಟರಿ; ಒಲಾ ಘಟಕದಲ್ಲಿ ಪ್ರತಿ 2 ನಿಮಿಷಕ್ಕೊಂಡು ಸ್ಕೂಟರ್ ನಿರ್ಮಾಣ!

Latest Videos

undefined

ಒಂದು ಚಕ್ರದ ಬೈಕ್ ಬಿಡುಗಡೆ ಮಾಡಿ ವಿಶ್ವದ ಗಮನ ಸೆಳೆದಿರುವುದು ಚೀನಾದ ಇ ಕಾಮರ್ಸ್ ಕಂಪನಿ ಆಲಿಬಾಬಾ. ವಿಶೇಷ ಅಂದರೆ ಇದು ಎಲೆಕ್ಟ್ರಿಕ್ ಬೈಕ್ ಆಗಿದೆ. ಇದು ಒಂದು ಚಕ್ರವಾಗಿದ್ದು, ಬೈಕ್ ನೆಲಕ್ಕುರುಳುವ ಭೀತಿ ಇಲ್ಲ. ಸುಲಭವಾಗಿ ಹಾಗೂ ಸರಳವಾಗಿ ಈ ಬೈಕ್ ರೈಡ್ ಮಾಡಬಹುದಾಗಿದೆ. ಆದರೆ ಕೆಲ ಅಂಶಗಳ ಕುರಿತು ಗಮನ ಹಾಗೂ ಅಭ್ಯಾಸ ಮಾಡಬೇಕಿದೆ.

500 KM ಮೈಲೇಜ್, ಸರಿಸಾಟಿ ಇಲ್ಲದ ಬೆಂಗಳೂರಿನ ಪ್ರವೈಗ್ ಎಲೆಕ್ಟ್ರಿಕ್ ಕಾರು ಅನಾವರಣ!..

ಈ ಬೈಕ್ ಬೆಲೆ ಭಾರತೀಯ ರೂಪಾಯಿಗಳಲ್ಲಿ 1.34 ಲಕ್ಷ ರೂಪಾಯಿ. ಒಂದು ಬಾರಿ ಚಾರ್ಜ್ ಮಾಡಿದರೆ 60 ರಿಂದ 100 ಕಿ.ಮೀ ಮೈಲೇಜ್ ನೀಡಲಿದೆ. ಈ ಬೈಕ್ ಗರಿಷ್ಠ ವೇಗ 48 ಕಿ.ಮೀ ಪ್ರತಿ ಗಂಟೆಗೆ. ಸಂಪೂರ್ಣ ಚಾರ್ಜ್‌ಗೆ 3 ರಿಂದ 12 ಗಂಟೆ ಸಮಯ ತೆಗೆದುಕೊಳ್ಳಲಿದೆ. ಇನ್ನು ಸಾಮಾನ್ಯ ಬೈಕ್‌ನಂತೆ ಇಬ್ಬರಿಗೆ ಪ್ರಯಾಣ ಮಾಡಲು ಸಾಧ್ಯವಿಲ್ಲ. ಸದ್ಯ ಈ ಬೈಕ್ ಚೀನಾದಲ್ಲಿ ಮಾತ್ರ ಲಭ್ಯವಿದೆ.

 

click me!