
ಬೆಂಗಳೂರು (ಜೂ.8): ಭಾರತೀಯ ಸ್ಕೂಟರ್ ಮಾರುಕಟ್ಟೆಯಲ್ಲಿ ಸದ್ಯ ರಾಜನಂತೆ ಮೆರೆಯುತ್ತಿರುವ 'ಹೊಂಡಾ ಆಕ್ಟಿವಾ' (Honda Activa) ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಹೊಂಡಾ ಕಂಪನಿಯು ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ದಾಳ ಉರುಳಿಸಲು ಸಜ್ಜಾಗಿದೆ. ಸಾಂಪ್ರದಾಯಿಕ ಫ್ಯಾಮಿಲಿ ಸ್ಕೂಟರ್‌ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುವ ಹಾಗೂ ಪ್ರೀಮಿಯಂ ಲುಕ್ ಹೊಂದಿರುವ ಹೊಚ್ಚ ಹೊಸ ಸ್ಕೂಟರ್ ಅನ್ನು ಭಾರತದಲ್ಲಿ ಲಾಂಚ್ ಮಾಡಲು ಕಂಪನಿ ಬೃಹತ್ ಯೋಜನೆ ರೂಪಿಸಿದೆ.
ಹೊಂಡಾ ಕಂಪನಿಯು ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಪ್ರೀಮಿಯಂ ಮ್ಯಾಕ್ಸಿ ಸ್ಕೂಟರ್ 'ಹೊಂಡಾ ಎಡಿವಿ 160' (Honda ADV 160) ಅನ್ನು ಭಾರತೀಯ ರಸ್ತೆಗಳಿಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ವರದಿಗಳ ಪ್ರಕಾರ, ಕಂಪನಿಯು ಈ ಸ್ಕೂಟರ್‌ನ ಭಾರತೀಕರಣ (Localization) ಪ್ರಕ್ರಿಯೆಯ ಕೆಲಸಗಳಲ್ಲಿ ನಿರತವಾಗಿದೆ. ಆದರೆ, ಈ ಬಗ್ಗೆ ಕಂಪನಿಯು ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಸಾಮಾನ್ಯವಾಗಿ ಸಾಂಪ್ರದಾಯಿಕ ಸ್ಕೂಟರ್‌ಗಳನ್ನು ನಗರ ಪ್ರದೇಶದ ಸಂಚಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗುತ್ತದೆ. ಆದರೆ ಹೊಂಡಾ ಕಂಪನಿಯು ಈ 'ಎಡಿವಿ 160' ಅನ್ನು ಪಕ್ಕಾ 'ಅಡ್ವೆಂಚರ್ ಸ್ಕೂಟರ್' ಆಗಿ ಮಾರುಕಟ್ಟೆಗೆ ತರುತ್ತಿದೆ. ಈ ಹೊಂಡಾ ADV 160 ಸ್ಕೂಟರ್ ಪ್ರಸಕ್ತ ವರ್ಷದ (2026) ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಹೊಂಡಾದ ಈ ಹೊಸ ಸ್ಕೂಟರ್‌ನಲ್ಲಿ ಅತ್ಯಾಧುನಿಕ 156.9 ಸಿಸಿ ಲಿಕ್ವಿಡ್ ಕೂಲ್ಡ್ (Liquid-Cooled), ಸಿಂಗಲ್ ಸಿಲಿಂಡರ್ ಇಂಜಿನ್ ನೀಡಲಾಗಿದೆ. ಈ ಮೋಟಾರ್ 15.8 ಹೆಚ್‌ಪಿ (HP) ಪವರ್ ಮತ್ತು 14.7 ಎನ್‌ಎಮ್ (Nm) ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಸಿವಿಟಿ (CVT) ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಲಭ್ಯವಿರಲಿದೆ. ಇದರೊಂದಿಗೆ ADV 160 ಸ್ಕೂಟರ್‌ನಲ್ಲಿ ಹೊಂಡಾ ಕಂಪನಿಯ ಪ್ರಸಿದ್ಧ 'ಎಸಿಜಿ ಸ್ಟಾರ್ಟರ್ ಸಿಸ್ಟಮ್' (ACG Starter System) ಹಾಗೂ 'ಐಡಲ್ ಸ್ಟಾಪ್ ಟೆಕ್ನಾಲಜಿ' (Idle Stop Technology) ಕೂಡ ಇರಲಿದೆ.
ಈ ಸ್ಕೂಟರ್ ವಿನ್ಯಾಸದ ವಿಚಾರದಲ್ಲಿ ಅತ್ಯಂತ ಆಕರ್ಷಕವಾಗಿದ್ದು, ಪ್ರಮುಖವಾಗಿ ಈ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಉದ್ದವಾದ ವಿಂಡ್‌ಸ್ಕ್ರೀನ್, ಅಪರೈಟ್ ರೈಡಿಂಗ್ ಪೋಸಿಷನ್ (Upright Riding Position), ಉದ್ದವಾದ ಸಿಂಗಲ್ ಸೀಟ್, ಮಸ್ಕ್ಯುಲರ್ ಬಾಡಿವರ್ಕ್ ಮತ್ತು ಅತ್ಯಂತ ವಿಭಿನ್ನ ಶೈಲಿಯ ಫ್ರಂಟ್ ಸೆಕ್ಷನ್ ಇದರಲ್ಲಿದೆ. ಈ ಸ್ಕೂಟರ್ 165 ಎಂಎಂ (mm) ನಷ್ಟು ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದರಲ್ಲಿ 14 ಇಂಚಿನ ಫ್ರಂಟ್ ವೀಲ್ ಹಾಗೂ 13 ಇಂಚಿನ ರಿಯರ್ ವೀಲ್ಸ್ ನೀಡಲಾಗಿದ್ದು, ಇವು ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ (Tubeless Tyres) ಬರಲಿವೆ.
ಸ್ಕೂಟರ್‌ನ ಒಟ್ಟು ಉದ್ದ 1,950 ಎಂಎಂ, ಅಗಲ 763 ಎಂಎಂ ಮತ್ತು ಎತ್ತರ 1,196 ಎಂಎಂ ಇದೆ. ಇದು 1,324 ಎಂಎಂ ನಷ್ಟು ಉದ್ದದ ವೀಲ್‌ಬೇಸ್ ಹೊಂದಿದ್ದು, ಇದರ ಸೀಟ್ ಹೈಟ್ 780 ಎಂಎಂ ಆಗಿದೆ. ಈ ಸ್ಕೂಟರ್‌ನ ಒಟ್ಟು ತೂಕ (Kerb Weight) 133 ಕೆಜಿ ಇದೆ. ಇದರಲ್ಲಿ 8.1 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ನೀಡಲಾಗಿದ್ದು, ಇದು ಪ್ರತಿ ಲೀಟರ್‌ಗೆ ಸರಿಸುಮಾರು 45 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
ಮಾರುಕಟ್ಟೆಗೆ ಲಾಂಚ್ ಆದ ನಂತರ ಈ ಹೊಂಡಾ ಸ್ಕೂಟರ್ ಭಾರತದಲ್ಲಿ ಈಗಾಗಲೇ ಲಭ್ಯವಿರುವ ಹಾಗೂ ಬಿಡುಗಡೆಯಾಗಲಿರುವ ಹೀರೋ ಜೂಮ್ 160 (Hero Xoom 160), ಟಿವಿಎಸ್ ಎನ್‌ಟಾರ್ಕ್ 150 (TVS Ntorq 150) ಮತ್ತು ಯಮಹಾ ಏರಾಕ್ಸ್ 155 (Yamaha Aerox 155) ಸ್ಕೂಟರ್‌ಗಳಿಗೆ ನೇರ ಪೈಪೋಟಿ ನೀಡಲಿದೆ.
ಗ್ರಾಹಕರನ್ನು ಸೆಳೆಯಲು ಈ ಸ್ಕೂಟರ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಫೀಚರ್ಸ್‌ಗಳನ್ನು ತುಂರಲಾಗಿದೆ. ಪ್ರಮುಖವಾಗಿ ಫುಲ್ ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ (Full Digital LCD Instrument Cluster), ಕೀಲೆಸ್ ಸ್ಮಾರ್ಟ್ ಕೀ ಸಿಸ್ಟಮ್ (Keyless Smart Key System), ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ (USB Charging Socket), ಅಡ್ಜಸ್ಟಬಲ್ ವಿಂಡ್‌ಸ್ಕ್ರೀನ್ (Adjustable Windscreen) ಹಾಗೂ ಅತ್ಯಂತ ದೊಡ್ಡದಾದ ಅಂಡರ್ ಸೀಟ್ ಸ್ಟೋರೇಜ್ (Under-seat Storage) ವ್ಯವಸ್ಥೆ ಇರಲಿದೆ.