Honda 2Wheelers ವಿಶ್ವಮಾರುಕಟ್ಟೆಗೆ ದ್ವಿಚಕ್ರ ವಾಹನ ಪೂರೈಕೆಗೆ ಭಾರತದಲ್ಲಿ ಉತ್ಪಾದನೆ ಆರಂಭಿಸಿದ ಹೋಂಡಾ!

By Suvarna News  |  First Published Dec 14, 2021, 7:40 PM IST
  • ಅಮೆರಿಕ, ಕೆನಡಾ, ಯುರೋಪ್, ಜಪಾನ್ ಸೇರಿದಂತೆ ಹಲವು ರಾಷ್ಟ್ರಕ್ಕೆ ರಫ್ತು
  • ವಿದೇಶಗಳಿಗೆ ಎಂಜಿನ್ ಪೂರೈಸಲು ಹೋಂಡಾ ಉತ್ಪಾದನೆ ಆರಂಭ
  • ಅಹಮ್ಮದಾಬಾದ್‌ನಲ್ಲಿರುವ ಹೋಂಡಾ ಉತ್ಪಾದನಾ ಘಟಕದಲ್ಲಿ ಉತ್ಪಾದನೆ

ಅಹಮದಾಬಾದ್(ಡಿ.14): ಆಟೋಮೊಬೈಲ್ ಕ್ಷೇತ್ರದಲ್ಲಿ(Automobile Sector) ಭಾರತ ಹಬ್ ಆಗುತ್ತಿದೆ. ವಿಶ್ವದ ಇತರ ಮಾರುಕಟ್ಟೆಗಳಿಗೆ ಭಾರತದಿಂದ(India) ಇದೀಗ ಹಲವು ಆಟೋ ಕಂಪನಿಗಳು ವಾಹನಗಳು ರಫ್ತಾಗುತ್ತಿದೆ. ಇದೀಗ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಹೋಂಡಾ ಮಹತ್ವದ ಹೆಜ್ಜೆ ಇಟ್ಟಿದೆ. ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಇಂಡಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್(honda 2 wheeler), ಗುಜರಾತಿನ ಅಹಮದಾಬಾದ್ (Ahmedabad)ಜಿಲ್ಲೆಯ ವಿಠಲಪುರದಲ್ಲಿತನ್ನ 4ನೇ ಕಾರ್ಖಾನೆಯಿಂದ ಜಾಗತಿಕ ಮಾರುಕಟ್ಟೆಗೆ ಪೂರೈಸುವ ಎಂಜಿನ್‌ಗಳ ತಯಾರಿಕೆಯನ್ನು ಪ್ರಾರಂಭಿಸಿದೆ.

250ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ(Two wheeler) ಬಳಕೆಗೆ ಮೀಸಲಾಗಿರುವ ಎಂಜಿನ್ ತಯಾರಿಸುವ ಈ ವಿಭಾಗವು ಥೈಲ್ಯಾಂಡ್, ಅಮೆರಿಕ, ಕೆನಡಾ, ಯುರೋಪ್, ಜಪಾನ್, ಆಸ್ಟ್ರೇಲಿಯಾ ಮತ್ತು ಕೊಲ್ಲಿ ದೇಶಗಳಲ್ಲಿನ ಜಾಗತಿಕ ಮಾರುಕಟ್ಟೆಯ ಬೇಡಿಕೆ ಪೂರೈಸಲು ಸಜ್ಜುಗೊಳಿಸಲಾಗಿದೆ.

Tap to resize

Latest Videos

undefined

Honda Activa125 Premium: ಮತ್ತಷ್ಟು ಆಕರ್ಷಕ, ಹೋಂಡಾ ಆ್ಯಕ್ಟೀವಾ 125 ಪ್ರೀಮಿಯಂ ಸ್ಕೂಟರ್ ಬಿಡುಗಡೆ!

ಘಟಕ ಕಾರ್ಯಾರಂಭದ ಮೊದಲ ವರ್ಷದಲ್ಲಿ ಒಟ್ಟು50,000 ಎಂಜಿನ್‌ಗಳ ತಯಾರಿಕೆಗೆ ಗುರಿ ನಿಗದಿಪಡಿಸಲಾಗಿದೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಾಗುವುದು. ರೂ 135 ಕೋಟಿಗಿಂತ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ, ಕಂಪನಿಯು ತನ್ನ ಗುಜರಾತ್ ಘಟಕದಿಂದ ದೇಶೀಯ ಮತ್ತು ಅಂತರಾಷ್ಟ್ರಿಯ ಮಾರುಕಟ್ಟೆಗಳಿಗೆ ಮಧ್ಯಮ ಗಾತ್ರದ (Fun model) ಎಂಜಿನ್‌ಗಳನ್ನು ತಯಾರಿಸಲಿದೆ.

ದ್ವಿಚಕ್ರ ವಾಹನಗಳ ಬಳಕೆಯಲ್ಲಿ ಎಲ್ಲೆಡೆ ಹೆಚ್ಚಳ ಕಂಡುಬರುತ್ತಿದೆ. ಜಾಗತಿಕ ಮಟ್ಟದ ಬೇಡಿಕೆಯು ಏರುಗತಿಯಲ್ಲಿ ಇದೆ. ಪ್ರಪಂಚದಾದ್ಯಂತ ತನ್ನ ರಫ್ತು(Export) ಹೆಜ್ಜೆಗುರುತನ್ನು  ಮತ್ತಷ್ಟು ವಿಸ್ತರಿಸಲು ಹೋಂಡಾ ನಿರ್ಧರಿಸಿದೆ. ಭಾರತದಲ್ಲಿ ಮಾಲಿನ್ಯ ನಿಯಂತ್ರಣದ ಭಾರತ್ 6 ಮಾನದಂಡಗಳನ್ನು ಪರಿಚಯಿಸಿರುವುದರಿಂದ ಆ ಗುರಿ ಸಾಧಿಸಲು ನಾವು ಇನ್ನೂ ಒಂದು ಹೆಜ್ಜೆ ಮುಂದೆ ಇರಿಸಿದ್ದೇವೆ. ತಯಾರಿಕೆಯ ಜಾಗತಿಕ ಮಾನದಂಡಗಳಿಗೆ ಸಮನಾಗಿರುವ ಉತ್ಪನ್ನಗಳನ್ನು ತಯಾರಿಸುವ ಈ ಹೊಸ ವಿಸ್ತರಣೆಯು ಜಾಗತಿಕ ಮಾರುಕಟ್ಟೆಗೆ ಭಾರತದಲ್ಲಿ ತಯಾರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ‘ಎಚ್‌ಎಂಎಸ್‌ಐ’ಗೆ ಅನುವು ಮಾಡಿಕೊಡುತ್ತದೆ ಎಂದು  ಹೋಂಡಾ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಅತ್ಸುಶಿ ಒಗಾಟಾ  ಹೇಳಿದ್ದಾರೆ.

Bike launch: ಹೋಂಡಾ H’ness ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ, CB300R ಅನಾವರಣ!

ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ‘ಜಾಗತಿಕ ಮಾರುಕಟ್ಟೆಗೆ ಎಂಜಿನ್ ತಯಾರಿಕೆಗೆ ಇಂದು ಚಾಲನೆ ನೀಡುವುದರೊಂದಿಗೆ ‘ಎಚ್‌ಎಸ್‌ಎಂಐ’ ತನ್ನ ಸದ್ಯದ ರಫ್ತು ಸಾಮರ್ಥ್ಯವನ್ನು ಮಾರುಕಟ್ಟೆಗಳು ಮತ್ತು ಜಾಗತಿಕ ಗುಣಮಟ್ಟದ ಮಾನದಂಡಗಳ ವಿಷಯದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಈ ವಿಸ್ತರಣೆಯ ಭಾಗವಾಗಿ, ನಾವು ವಿವಿಧ ತಯಾರಿಕೆ ಹಂತಗಳಲ್ಲಿ ಯಂತ್ರಗಳ ಬಳಕೆ, ಎಂಜಿನ್ ಜೋಡಣೆ ಮತ್ತು ಸುಧಾರಿತ ಶೇಖರಣಾ ವ್ಯವಸ್ಥೆಗಳಂತಹ ಹೊಸ ಸೌಲಭ್ಯಗಳನ್ನು ಪರಿಚಯಿಸುತ್ತಿದ್ದೇವೆ. ಪರಿಣತ ಮಾನವಶಕ್ತಿಯೊಂದಿಗೆ ತಳಮಟ್ಟದಿಂದಲೇ, ಅತ್ಯುತ್ತಮ ದರ್ಜೆಯ ತಂತ್ರಜ್ಞಾನದ ಸಾಮರ್ಥ್ಯವನ್ನು ಒದಗಿಸುವುದು ಉತ್ತಮ ಗುಣಮಟ್ಟವನ್ನು ಖಚಿತಪಡಿಸುತ್ತದೆ. ಮೊದಲ ವರ್ಷದಲ್ಲಿ ಸುಮಾರು 50,೦೦೦ ಎಂಜಿನ್‌ಗಳನ್ನು ತಯಾರಿಸಲಾಗುವುದು. ನಂತರ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ತಯಾರಿಕೆಯ ಸಾಮರ್ಥ್ಯ ಹೆಚ್ಚಿಸುವುದು ನಮ್ಮ ಗುರಿಯಾಗಿದೆ ಎಂದು ಹೋಂಡಾ ಮೋಟರ್ ಸೈಕಲ್ ನಿರ್ದೇಶಕ ಇಚಿರೊ ಶಿಮೊಕಾವಾ ಹೇಳಿದ್ದಾರೆ.

ವಿಶ್ವ ದರ್ಜೆಯ ತಂತ್ರಜ್ಞಾನದೊಂದಿಗೆ ಗುಣಮಟ್ಟದ ಹೊಸ ಮಾನದಂಡಗಳ ಬಳಕೆ 
ಆಟೊಮೋಟಿವ್ ಸುರಕ್ಷತೆ, ಹೊಗೆ ಹೊರಸೂಸುವಿಕೆ ಮತ್ತು ಕಾರ್ಯಕ್ಷಮತೆಯ ಹೊಸ ಮಾನದಂಡಗಳನ್ನು  ಪರಿಚಯಿಸುವುದರೊಂದಿಗೆ ಈ  ಹೊಸ ಎಂಜಿನ್ ತಯಾರಿಕಾ ವಿಭಾಗವು ಜಾಗತಿಕ ವಾಹನ ತಯಾರಿಕೆ ಉದ್ಯಮದೊಂದಿಗೆ ಹೋಂಡಾದ ರಫ್ತು ಸಾಮರ್ಥ್ಯದ ಕೊಡುಗೆಗಳನ್ನು ಖಚಿತಪಡಿಸುತ್ತದೆ. ಎಂಜಿನ್ ತಯಾರಿಕೆೆ ಮತ್ತು ಜೋಡಣೆಯ ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡಿರುವ ಹೊಸ ಮೂಲಸೌಕರ್ಯವು ಸದ್ಯದ ದಿನಮಾನಗಳ ಸವಾಲುಗಳನ್ನು ಉತ್ತಮ ಕ್ರಮಗಳು ಮತ್ತು ಭವಿಷ್ಯಕ್ಕಾಗಿ ಪ್ರಮಾಣಿತ ತಂತ್ರಜ್ಞಾನಗಳ ಸಹಾಯದಿಂದ ಬಗೆಹರಿಸಲಿದೆ.

ಯಂತ್ರಗಳ ಪ್ರಕ್ರಿಯೆ: ‘ಲ್ಯಾಪಿಂಗ್ ಪ್ರಕ್ರಿಯೆಯಿಂದ ಸೂಪರ್‌ಫಿನಿಷಿಂಗ್, ಸರಿಸಾಟಿ ಇಲ್ಲದ ಖಚಿತತೆಗೆ ಡಿಜಿಟಲ್ ಗುಣಮಟ್ಟ ನಿರ್ವಹಣಾ ವ್ಯವಸ್ಥೆ, ಬಿಡಿಭಾಗಗಳು ಮತ್ತು ಸಂಸ್ಕರಣೆಗಾಗಿ ದಿನನಿತ್ಯದ ಕೆಲಸಗಳ ಆನ್‌ಲೈನ್ ವ್ಯವಸ್ಥೆ  ಅಳವಡಿಕೆ.

ಭಾರತದಲ್ಲಿ ದುಬಾರಿ ಹೊಂಡಾ ಗೋಲ್ಡ್ ವಿಂಗ್ ಟೂರ್ ಬಿಡುಗಡೆ; ಬುಕಿಂಗ್ ಆರಂಭ!

ಎಂಜಿನ್ ಜೋಡಣೆ ಪ್ರಕ್ರಿಯೆ: ಎಂಜಿನ್‌ಗೆ ನಿಖರತೆ ಆಧರಿಸಿದ ಲೇಸರ್ ಗುರುತು, ಶೇ 100ರಷ್ಟು ಟಾರ್ಕ್ ರೆಕಾರ್ಡಿಂಗ್ ಮತ್ತು ಎಂಜಿನ್ ಪರೀಕ್ಷೆಗಾಗಿ ಸುಧಾರಿತ ಫೈರಿಂಗ್ ಬೆಂಚ್, ಜೊತೆಗೆ ವರ್ಟಿಕಲ್ ಕರೋಸೆಲ್‌ಗಳನ್ನು ಆಧರಿಸಿದ ಸುಧಾರಿತ ಸಂಗ್ರಹ ವ್ಯವಸ್ಥೆ ಜೊತೆಗೆ ಸ್ಥಳಾವಕಾಶದ ಗರಿಷ್ಠ ಬಳಕೆ ಮತ್ತು ಶೇ 100ರಷ್ಟು ಪತ್ತೆಹಚ್ಚುವಿಕೆ.

ಈ ವಿಭಾಗದ ತಂತ್ರಜ್ಞಾನದಲ್ಲಿ ಅತ್ಯುತ್ತಮ: ಎಲ್ಲಾ ನಿರ್ಣಾಯಕ ಗುಣಮಟ್ಟದ ಮಾನದಂಡಗಳ ಪ್ರಕಾರ ಶೇ ೧೦೦ರಷ್ಟು  ದತ್ತಾಂಶ ದಾಖಲೆ ವ್ಯವಸ್ಥೆ, ಶೂನ್ಯ ದೋಷದ ಹೊರಹರಿವುಗಾಗಿ ಬಹು-ಹಂತದ ತಪಾಸಣೆಗಳು, ಇತ್ತೀಚಿನ ತಪಾಸಣೆ ತಂತ್ರಜ್ಞಾನಗಳೊAದಿಗೆ ಪರಸ್ಪರ ಸಂಪರ್ಕಿತ ಚುರುಕಿನ ಸಂವಹನ ಯಂತ್ರಗಳು ಜೊತೆಗೆ ಹೆಚ್ಚಿನ ದಕ್ಷತೆಗಾಗಿ ಸಹಾಯಕ ಕೌಶಲ ಅಭಿವೃದ್ಧಿಯ ಮೇಲೆ ವಿಶೇಷ ಗಮನ ಹೊಂದಿದೆ.

click me!