*150 ಕೋಟಿ ರೂ. ಮೌಲ್ಯದ ಪಾಲುದಾರಿಕೆ
* ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನ - ಆಪ್ಟಿಮಾ ಅನ್ನು ಬಿಡುಗಡೆ
* ವಾರ್ಷಿಕ ಒಂದು ಮಿಲಿಯನ್ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಗುರಿ
Auto Desk: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಹೊಸ ಸ್ಟಾರ್ಟ್ಅಪ್ಗಳ (Start up) ಪ್ರವೇಶ ಹೆಚ್ಚುತ್ತಿದ್ದು, ಬೃಹತ್ ಕಂಪನಿಗಳಿಗೆ ಸ್ಪರ್ಧೆ ಹೆಚ್ಚುತ್ತಿರುವ ಬೆನ್ನಲ್ಲೇ ಹೀರೋ ಎಲೆಕ್ಟ್ರಿಕ್ (Hero electric) ಮತ್ತು ಮಹೀಂದ್ರಾ ಗ್ರೂಪ್ (Mahindra group) ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ಪರಸ್ಪರ ಕೈಜೋಡಿಸಿವೆ. ಈ ಎರಡು ಕಂಪನಿಗಳು ಒಟ್ಟಾಗಿ ತಮ್ಮ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿ ಪಿತಾಮ್ಪುರ ಕಾರ್ಖಾನೆಯಿಂದ ತಮ್ಮ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನ – ಆಪ್ಟಿಮಾ (Optima) ಅನ್ನು ಬಿಡುಗಡೆಗೊಳಿಸಿವೆ.
ಈ ಎರಡೂ ಕಂಪನಿಗಳು ಕಳೆದ ತಿಂಗಳು ಸುಮಾರು 150 ಕೋಟಿ ರೂ. ಮೌಲ್ಯದ ಐದು ವರ್ಷಗಳ ಪಾಲುದಾರಿಕೆಯನ್ನು ಘೋಷಿಸಿದ್ದವು. ಮಹೀಂದ್ರಾ ಗ್ರೂಪ್ನ ಜಂಟಿ ಸಹಭಾಗಿತ್ವದ ಸಹಾಯದಿಂದ, ಹೀರೋ ಎಲೆಕ್ಟ್ರಿಕ್ ಈ ವರ್ಷದ ಅಂತ್ಯದ ವೇಳೆಗೆ ವಾರ್ಷಿಕ ಒಂದು ಮಿಲಿಯನ್ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: Auto Sales January 2022: ಮಹೀಂದ್ರಾ ಕಾರುಗಳ ಮಾರಾಟ ಶೇ.20ರಷ್ಟು ಹೆಚ್ಚಳ!
ಪಾಲುದಾರಿಕೆಯ ಅಡಿಯಲ್ಲಿ, ಎರಡೂ ಕಂಪನಿಗಳು ಜಂಟಿಯಾಗಿ ವಿದ್ಯುತ್ ದ್ವಿಚಕ್ರ ವಾಹನಗಳಿಗೆ ಪೂರೈಕೆ ಸರಪಳಿ ಮತ್ತು ಷೇರು ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲಿವೆ. ಮಹೀಂದ್ರಾ ಗ್ರೂಪ್, ಹೀರೋ ಎಲೆಕ್ಟ್ರಿಕ್ನ ಆಪ್ಟಿಮಾ ಮತ್ತು ಎನ್ವೈಎಕ್ಸ್ (NYX ) ಸ್ಕೂಟರ್ಗಳನ್ನು ತಯಾರಕರ ಪಿತಾಂಪುರ್ ಸೌಲಭ್ಯದಲ್ಲಿ ತಯಾರಿಸುತ್ತದೆ. ಈ ಜಂಟಿ ಸಹಭಾಗಿತ್ವದ ಅಡಿಯಲ್ಲಿ, ಎರಡೂ ಕಂಪನಿಗಳು ಮಹೀಂದ್ರಾ ಒಡೆತನದ ಪಿಯುಗಿಯೊ ಮೋಟೋಸೈಕಲ್ಗಳ ಪೋರ್ಟ್ಫೋಲಿಯೊದ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕೆಲಸ ಮಾಡಲಿದೆ.
ಕಳೆದ ತಿಂಗಳು ಮಹೀಂದ್ರಾ ಮತ್ತು ಮಹೀಂದ್ರಾದ ಆಟೋ ಮತ್ತು ಫಾರ್ಮ್ ವಲಯಗಳ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್, "ಪ್ಯೂಜಿಯೋ ಮೋಟೋಸೈಕಲ್ಸ್ ಪ್ರಪಂಚದ ಹಲವಾರು ಪ್ರದೇಶಗಳಲ್ಲಿ ಮತ್ತು ನಿರ್ದಿಷ್ಟವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಬೇಡಿಕೆ ಹೊಂದಿರುವ ಯೂರೋಪ್ನಂತಹ ದೇಶಗಳಲ್ಲಿ ಅತಿ ಹೆಚ್ಚಿನ ಜನರನ್ನು ತಲುಪುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದೆ" ಎಂದಿದ್ದರು.
ಭಾರತೀಯ ಹಾಗೂ ಜಾಗತಿಕ ಎಲೆಕ್ಟ್ರಿಕ್ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು, ಹೊಸ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ನಿರ್ಮಾಣಕ್ಕಾಗಿ ಸಂಶೋಧನಾ ಮತ್ತು ಅಭಿವೃದ್ಧಿ ತಂಡಗಳು (R&D) ನಡುವೆ ಸಂವಹನ ಹಾಗೂ ಜ್ಞಾನದ ಹಂಚಿಕೆ ಹೆಚ್ಚಿಸಲು ತಡೆರಹಿತ ಸಂವಹನ ಚಾನಲ್ ರಚಿಸುವ ಗುರಿಯನ್ನು ಈ ಎರಡೂ ಕಂಪನಿಗಳು ಹೊಂದಿವೆ.
ಇದನ್ನೂ ಓದಿ: ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್: ವೆಲ್‌ಕಮ್ ಟು ಫ್ಯಾಮಿಲಿ ಎಂದ ಆನಂದ್ ಮಹೀಂದ್ರಾ!
ಕಳೆದ ತಿಂಗಳು ಪಾಲುದಾರಿಕೆಯ ಘೋಷಣೆಯ ಸಂದರ್ಭದಲ್ಲಿ, ಹೀರೋ ಎಲೆಕ್ಟ್ರಿಕ್ನ ವ್ಯವಸ್ಥಾಪಕ ನಿರ್ದೇಶಕ ನವೀನ್ ಮುಂಜಾಲ್, “ಈ ಪಾಲುದಾರಿಕೆಯೊಂದಿಗೆ, ಬೇಡಿಕೆಯನ್ನು ಪೂರೈಸಲು ನಮ್ಮ ಉತ್ಪಾದನಾ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸಲು ಮತ್ತು ದೇಶದಲ್ಲಿ ಹೊಸ ಕೇಂದ್ರಗಳನ್ನು ತಲುಪಲು ಮಹೀಂದ್ರಾ ಗ್ರೂಪ್ನ ದೃಢವಾದ ಪೂರೈಕೆ ಸರಪಳಿಯನ್ನು ಬಳಸಿಕೊಳ್ಳಲು ನಾವು ಪ್ರಯತ್ನಿಸಲಿದ್ದೇವೆ” ಎಂದಿದ್ದರು.
ಇನ್ನೊಂದೆಡೆ, ಹೀರೋ ಎಲೆಕ್ಟ್ರಿಕ್ ಇತ್ತೀಚೆಗೆ 24*7 ರಸ್ತೆಬದಿಯ ನೆರವು ‘ಕಂಪನಿ ರೆಡಿ ಅಸಿಸ್ಟ್’ನೊಂದಿಗೆ ಕೈಜೋಡಿಸಿದ್ದು, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಸೇವೆಗಾಗಿ 20,000 ಮೆಕ್ಯಾನಿಕ್ಗಳಿಗೆ ತರಬೇತಿ ಮತ್ತು ಕೌಶಲ್ಯವನ್ನು ನೀಡುತ್ತಿದೆ. ಈ ಪಾಲುದಾರಿಕೆಯು ಇವಿ ತಯಾರಕರ ಖಾಸಗಿ ಗ್ಯಾರೇಜ್ ಮಾಲೀಕರ (PGO) ಉಪಕ್ರಮದ ಒಂದು ಭಾಗವಾಗಿದೆ.
ಈ ಹಿಂದೆ ಹೀರೋ ಎಲೆಕ್ಟ್ರಿಕ್, ತಮ್ಮ ನ್ಯಾಯಾಲಯದ ವ್ಯಾಜ್ಯದಿಂದ ಸುದ್ದಿಯಾಗಿತ್ತು. ಇವರ ಕುಟುಂಬ ಸದಸ್ಯರ ಇನ್ನೊಂದು ಕಂಪನಿಯಾದ ಹೀರೋ ಮೋಟೋಕಾರ್ಪ್ ತನ್ನ ಮುಂಬರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೀರೋ ಬ್ರ್ಯಾಂಡ್ ಹೆಸರನ್ನು ಬಳಸದಂತೆ ತಡೆಯಲು ಹೀರೋ ಎಲೆಕ್ಟ್ರಿಕ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಹೀರೋ ಮೋಟೋಕಾರ್ಪ್ ತನ್ನ ಮುಂಬರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೀರೋ ನಾಮಫಲಕವನ್ನು ಬಳಸುವ ಕುರಿತು ಯಾವುದೇ ಪ್ರಕಟಣೆ ಹೊರಡಿಸುವ ಮುನ್ನವೇಈ ವ್ಯಾಜ್ಯ ನ್ಯಾಯಾಲಯದ ಮೆಟ್ಟಿಲೇರಿದೆ.