ನವದೆಹಲಿ(ಮಾ.08): ಎಲೆಕ್ಟ್ರಿಕ್ ವಾನನ ಮಾರುಕಟ್ಟೆಯಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಹೊಸ ಹೊಸ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಪೈಪೋಟಿ ಕೂಡ ಹೆಚ್ಚಾಗುತ್ತಿದೆ. ಇದರ ನಡುವೆ ಹೀರೋ ಮೋಟೋಕಾರ್ಪ್ ಹೊಚ್ಚ ಹೊಸ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ ಮಾಡಿದೆ. ಮೊಬಿಲಿಟಿಗೆ ಭವಿಷ್ಯ ಸನ್ನದ್ಧವಾಗುವ ತನ್ನ ಧ್ಯೇಯವನ್ನು ಈಡೇರಿಸುವ ನಿಟ್ಟಿನಲ್ಲಿ ಹೀರೊ ಮೊಟೊಕಾರ್ಪ್ ಎ ವೀಡಾ’ ಅನಾವರಣಗೊಳಿಸಿದೆ.
ಹೊಸ ಬ್ರಾಂಡ್ ಲಾಂಛನ ಅನಾವರಣಗೊಳಿಸಿದ ಮತ್ತು ವೀಡಾ ಸ್ಕೂಟರ್ ಅನಾವರಣ ಮಾಡಿದ ಡಾ.ಪವನ್ ಮುಂಜಾಲ್, “ವೀಡಾ ಎಂದರೆ ಜೀವನ ಮತ್ತು ಬ್ರಾಂಡ್‌ನ ಏಕೈಕ ಉದ್ದೇಶ ವಿಶ್ವದ ಮೇಲೆ ಸಕಾರಾತ್ಮಕ ಪರಿಣಾಮ ಸೃಷ್ಟಿಸುವುದು ಎಂದರು. ನಮ್ಮ ಮಕ್ಕಳಿಗೆ ಹಾಗೂ ಮುಂದಿನ ತಲೆಮಾರಿಗೆ ನಾವು ನಿರ್ಮಿಸುತ್ತಿರುವುದಕ್ಕೆ ಈ ಹೆಸರು ಪರಿಪೂರ್ಣವಾಗಿದೆ ಎಂದು ನಾವು ನಂಬಿದ್ದೇವೆ. ಇದು ನಿಜಕ್ಕೂ ಒಂದು ವಿಶೇಷದ ಸೂರ್ಯೋದಯ. ಇಂದಿನಿಂದ 17 ವಾರಗಳ ನಂತರ ನಾವು ನಮ್ಮ ವೀಡಾ ಪ್ಲಾಟ್‌ಫಾರಂ, ಉತ್ಪನ್ನಗಳು ಮತ್ತು ಸೇವೆಗಳನ್ನು ಬಿಡುಗಡೆ ಮಾಡುವ ಮೂಲಕ ವಿಶ್ವವನ್ನು ಉತ್ತಮ ತಾಣವನ್ನಾಗಿಸಲಿದ್ದೇವೆ” ಎಂದರು.
Electrify India ಭಾರತವನ್ನು ಎಲೆಕ್ಟ್ರಿಫೈ ಮಾಡಲು ಹೀರೋ ಮೋಟೋಕಾರ್ಪ್ ಹಾಗೂ ಭಾರತ್ ಪೆಟ್ರೋಲಿಯಂ ಒಪ್ಪಂದ!
ನಮ್ಮ ಭವಿಷ್ಯದ ತಲೆಮಾರುಗಳನ್ನು ಅದರಲ್ಲಿಯೂ ನನ್ನ ಮೊಮ್ಮಕ್ಕಳನ್ನು ಕಂಡಾಗ ನಾನು ಆಶಾವಾದ, ಸಕಾರಾತ್ಮಕ ಶಕ್ತಿ, ಸ್ವಚ್ಛ ಹಾಗೂ ಪ್ರತಿಯೊಬ್ಬರಿಗೂ ನಿರೀಕ್ಷೆ ಮತ್ತು ಮತ್ತಷ್ಟು ದೊಡ್ಡ ಹಾಗೂ ಉತ್ತಮವಾದುದರಲ್ಲಿ ಭಾಗವಹಿಸುವ ಭವಿಷ್ಯವನ್ನು ನಿರ್ಮಿಸಲು ಬಯಸುತ್ತೇನೆ. `ವೀಡಾ’ ಸೃಷ್ಟಿಯೊಂದಿಗೆ ನಾವು ಪ್ರತಿಯೊಬ್ಬರಿಗೂ ಅವರು ಬಯಸಿದಂತೆ ಮುಂದುವರಿಯುವುದಲ್ಲದೆ ಬೆಳೆಯಲು, ಪ್ರಗತಿ ಸಾಧಿಸಲು ಮತ್ತು ಉತ್ತಮ ರೀತಿಯಲ್ಲಿ ಜೀವಿಸಲು ಅವಕಾಶವನ್ನು ನಾವು ಕಲ್ಪಿಸುತ್ತೇವೆ. ಈ ಉಪಕ್ರಮವನ್ನು ನಾನು ನೇತೃತ್ವ ವಹಿಸಲು ಬಯಸುತ್ತೇನೆ” ಎಂದು ಡಾ.ಮುಂಜಾಲ್ ಹೇಳಿದರು.
ಭವಿಷ್ಯ-ಸನ್ನದ್ಧ ಕಾರ್ಯತಂತ್ರದ ಆಧಾರ ಸ್ತಂಭವಾಗಿ ಡಾ.ಮುಂಜಾಲ್ ಹೊಸ ಬ್ರಾಂಡ್ ಅನ್ನು ವಿಶ್ವದಾದ್ಯಂತ ಮೊಬಿಲಿಟಿ ಪರಿಹಾರಗಳನ್ನು ಮುನ್ನಡೆಸಲು ಅನಾವರಣಗೊಳಿಸಿದರು. ವೀಡಾ ಹೀರೊ ವಿಸ್ತರಿಸುತ್ತಿರುವ ಮೊಬಿಲಿಟಿ ಪರಿಹಾರಗಳಿಗೆ ಹೀರೊ ಮೊಟೊಕಾರ್ಪ್ನ ಉಪಕ್ರಮಗಳ ಬ್ರಾಂಡ್ ಆಗಿದ್ದು ಅದರಲ್ಲಿ ಮೊದಲನೆಯದು ಎಲೆಕ್ಟ್ರಿಕ್ ವಾಹನವಾಗಿದ್ದು ಅದನ್ನು ಅಧಿಕೃತವಾಗಿ ಜುಲೈ 1,2022 ರಂದು ಬಿಡುಗಡೆ ಮಾಡಲಾಗುತ್ತದೆ. ಹೊಸ ವೀಡಾ ಮಾದರಿಯು ಹೀರೊ ಮೊಟೊಕಾರ್ಪ್ನ ಚಿತ್ತೂರಿನ `ಗ್ರೀನ್’ ಉತ್ಪಾದನಾ ಸೌಲಭ್ಯದಲ್ಲಿ ಉತ್ಪಾದನೆಯಾಗಲಿದೆ. 2022ರ ನಂತರ ಗ್ರಾಹಕರಿಗೆ ವಿತರಣೆಯಾಗಲಿದೆ.
ಹೀರೋ ಮೋಟಾರ್ಸ್, ಮಹೀಂದ್ರಾ ಪಾಲುದಾರಿಕೆಯಲ್ಲಿ ಮೊದಲ ಎಲೆಕ್ಟ್ರಿಕ್ ವಾಹನ ಬಿಡುಗಡೆ
ವಿನೂತನ ಕಾರ್ಬನ್ ನ್ಯೂಟ್ರಲ್ ಕಾರ್ಯಕ್ರಮದಲ್ಲಿ ಹೀರೊ ಮೊಟೊಕಾರ್ಪ್ ಅಧ್ಯಕ್ಷ ಮತ್ತು ಸಿಇಒ ಡಾ.ಪವನ್ ಮುಂಜಾಲ್ ಗ್ಲೋಬಲ್ ಸಸ್ಟೇನಬಿಲಿಟಿ ಫಂಡ್‌ಗೆ 100 ಮಿಲಿಯನ್ ಡಾಲರ್ ದೇಣಿಗೆ ಪ್ರಕಟಿಸಿದ್ದಾರೆ. ಸುಸ್ಥಿರತೆಗೆ ಆದ್ಯತೆ ನೀಡಿ ಮತ್ತು ಭವಿಷ್ಯದ ತಲೆಮಾರುಗಳಿಗೆ ಪ್ರವರ್ಧಮಾನದ, ಅರ್ಥಪೂರ್ಣ ವಿಶ್ವವನ್ನು ನೀಡುವ ಗುರಿಯೊಂದಿಗೆ ಡಾ.ಮುಂಜಾಲ್ ಕಾರ್ಯಕ್ರಮದಲ್ಲಿ ಅವರ ಗುರಿಗೆ ಜೀವ ತುಂಬುವ ಕ್ರಿಯಾ-ಅಂಶಗಳನ್ನು ಎತ್ತಿ ತೋರಿಸಿದರು.
ರಾಜ್ಯದಲ್ಲಿ ಶೀಘ್ರ 1190 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ
ರಾಜ್ಯದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ಪ್ರವಾಸಿ ಸ್ಥಳ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸೆಂಟರ್ ಸ್ಥಾಪಿಸಲಾಗುವುದು. 1190 ಚಾರ್ಜಿಂಗ್ ಸೆಂಟರ್ ಸ್ಥಾಪಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಇಂಧನ ಸಚಿವ ಸುನಿಲ್‌ಕುಮಾರ್ ತಿಳಿಸಿದ್ದಾರೆ. ಬಿಜೆಪಿ ಮುನಿರಾಜುಗೌಡ ಪಿ.ಎಂ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರ ಫೇಮ್-2 ಯೋಜನೆಯಡಿ ರಾಜ್ಯಕ್ಕೆ 172 ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಅನುಮತಿ ನೀಡಿದೆ. ಜೊತೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ 17 ಚಾರ್ಜಿಂಗ್ ಸೆಂಟರ್‌ಗಳ ಸ್ಥಾಪನೆಗೆ ಒಪ್ಪಿಗೆ ನೀಡಿದೆ ಎಂದರು. ರಾಜ್ಯ ಸರ್ಕಾರ ಇತ್ತೀಚೆಗೆ ಬೆಂಗಳೂರು ನಗರದಲ್ಲಿ 2 ಸ್ಟೊ್ರೕಕ್ ಆಟೋರಿಕ್ಷಾಗಳನ್ನು ಅನುಪಯುಕ್ತಗೊಳಿಸಿ, ಹೊಸ ವಿದ್ಯುತ್ ಆಟೋರಿಕ್ಷಾ ಖರೀದಿಸಿದ್ದಲ್ಲಿ ಪ್ರತಿ ಆಟೋರಿಕ್ಷಾಕ್ಕೆ 60 ಸಾವಿರ. ರು. ಧನ ಒದಗಿಸಲಿದೆ, ಇದಕ್ಕಾಗಿ 10 ಕೋಟಿ ರು. ಮೀಸಲು ಇಡಲಾಗಿದೆ ಎಂದರು. .