ಎಲೆಕ್ಟ್ರಿಕ್ ಸ್ಕೂಟರ್ ಬೇಕು, ಜಾಸ್ತಿ ರೇಂಜ್ ಇರಬೇಕು ಅಂತ ಆಶಿಸುವರಿಗೆ ಅಂತಲೇ ಟಿವಿಎಸ್‌ನವರು ಬಿಟ್ಟಿರುವ ಎಲೆಕ್ಟ್ರಿಕ್ ಸ್ಕೂಟರ್ ಹೆಸರು ಟಿವಿಎಸ್ ಐಕ್ಯೂಬ್ ಎಸ್‌ಟಿ.
ನವದೆಹಲಿ(ಮಾ.25) ಜನರು ಉತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಸ್ಕೂಟರ್ ಬಯಸುತ್ತಾರೆ. ಹೆಚ್ಚು ಮೈಲೇಜ್, ಕಡಿಮೆ ಬೆಲೆ ಸೇರಿದಂತೆ ಅತ್ಯಾಧುನಿಕ ಫೀಚರ್ಸ್ ಇರುವ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೇಡಿಕೆ ಹೆಚ್ಚು. ಇದೀಗ ಈ ಎಲ್ಲಾ ಗುಣಮಟ್ಟಗಳು, ಫೀಚರ್ಸ್ ಹೊಂದಿರುವ ಉತ್ತಮ ಸ್ಕೂಟರ್ ಪಟ್ಟಿಯಲ್ಲಿ ಟಿವಿಎಸ್ ಐಕ್ಯೂಬ್ ಎಸ್‌ಟಿ ಮುಂಚೂಣಿಯಲ್ಲಿದೆ. 3.4 ಕೆಡಬ್ಲ್ಯೂಎಚ್ ಮತ್ತು 5.1 ಕೆಡಬ್ಲ್ಯೂಎಚ್ ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳಲ್ಲಿ ಈ ಸ್ಕೂಟರ್ ಲಭ್ಯವಿದ್ದರೂ ಅತೀ ಹೆಚ್ಚು ರೇಂಜ್ ಒದಗಿಸುವುದು 5.1 ಕೆಡಬ್ಲ್ಯೂಎಚ್ ಸ್ಕೂಟರ್. ಈ ಸ್ಕೂಟರ್ ಹೇಗಿದೆ ಎಂಬುದನ್ನು ತಿಳಿಯಲು ಇತ್ತೀಚೆಗೆ ಟೆಸ್ಟ್ ರೈಡ್ ಮಾಡಿ ನೋಡಲಾಯಿತು.
ಪೆಟ್ರೋಲ್ ಸ್ಕೂಟರ್‌ಗಳಂತೆ ಜಾಸ್ತಿ ಸೌಂಡ್ ಮಾಡದ ಈ ಸ್ಕೂಟರ್ ಭಾರಿ ಸೈಲೆಂಟ್ ಆಸಾಮಿ. ಆಕ್ಸಲೇಟರ್ ಕೊಟ್ಟ ತಕ್ಷಣ ಸೊಂಯ್ ಅಂತ ಮುಂದೆ ಸಾಗುತ್ತದೆ. ಇಕೋ ಮತ್ತು ಪವರ್ ಎಂಬ ಎರಡು ಮೋಡ್‌ಗಳಿದ್ದು, ಆರಾಮಾಗಿ ಹೋಗುವವರು ಇಕೋ ಮೋಡ್ ಮತ್ತು ಸ್ಪೀಡಾಗಿ ಸಾಗುವವರು ಪವರ್ ಮೋಡ್ ಬಳಸಬಹುದು. ಇಕೋ ಮೋಡ್‌ನಲ್ಲಿ ಗರಿಷ್ಠ 150 ಕಿಮೀ ಸಾಗಬಹುದು ಎಂದು ಕಂಪನಿ ಹೇಳುತ್ತದೆ. ಆದರೆ ಅಷ್ಟೇ ರೇಂಜ್ ಸಿಗುತ್ತದೆ ಎಂದು ಭಾವಿಸಬಾರದು. ಇಲ್ಲಿನ ರಸ್ತೆ, ಅವರವರ ರೈಡಿಂಗ್ ಸ್ಕಿಲ್‌ಗಳಿಗೆ ಅನುಗುಣವಾಗಿ ರೇಂಜ್ ಸ್ವಲ್ಪ ಕಡಿಮೆ ಆಗಬಹುದು. ಏಳು ಇಂಚಿನ ಇನ್‌ಫೋಟೇನ್‌ಮೆಂಟ್ ಸಿಸ್ಟಮ್‌ನಲ್ಲಿ ಎಷ್ಟು ರೇಂಜ್ ಬಾಕಿ ಇದೆ ಎಂಬುದನ್ನು ಕ್ಷಣಕ್ಷಣವೂ ನೀವು ನೋಡಬಹುದು. ಇದರ ಡಿಸ್‌ಪ್ಲೇ ಟಚ್‌ಸ್ಕ್ರೀನ್ ಆಗಿದ್ದು, ಜಾಯ್‌ಸ್ಟಿಕ್ ಮೂಲಕವೂ ನಿರ್ವಹಣೆ ಮಾಡಬಹುದು. ಮ್ಯಾಪ್ ತೋರಿಸುವುದರಿಂದ ಹಿಡಿದು ಸಂಗೀತ ಕೇಳಿಸುವವರೆಗೆ ಹಲವಾರು ಅತ್ಯುತ್ತಮ ಫೀಚರ್‌ಗಳಿವೆ.
ಉತ್ತರವೋ, ದಕ್ಷಿಣ ಭಾರತವೋ? ಎಲೆಕ್ಟ್ರಿಕ್ ಕಾರು ಖರೀದಿಯಲ್ಲಿ ಯಾರ ಕೊಡುಗೆ ಎಷ್ಟು?
ಜೀರೋದಿಂದ 80 ಪರ್ಸೆಂಟ್ ಚಾರ್ಜಿಂಗ್ ಆಗಲು ನಾಲ್ಕೂವರೆ ಗಂಟೆ ಬೇಕಾಗುತ್ತದೆ. ಪೋರ್ಟೇಬಲ್ ಚಾರ್ಜರ್ ಇರುವುದರಿಂದ ಎಲ್ಲಾದರೂ ಪ್ಲಗ್ ಸಿಕ್ಕಿದರೆ ಸಾಕು ಚಾರ್ಜಿಂಗ್ ಮಾಡಿಕೊಳ್ಳಬಹುದು. ಸೀಟ್ ಕೆಳಗೆ 32 ಲೀಟರ್ ಸ್ಟೋರೇಜ್ ಸ್ಪೇಸ್ ಇದ್ದು, ಎರಡು ಹಾಫ್ ಹೆಲ್ಮೆಟ್‌ಗಳನ್ನು ಇಡಬಹುದು. ಫ್ಲೋರ್‌ಬೋರ್ಡ್ ಬಳಿ ಎರಡು ಹುಕ್‌ಗಳಿದ್ದು, ತರಕಾರಿ ಕವರ್‌ಗಳನ್ನು ಸುಲಭವಾಗಿ ನೇತಾಡಿಸಬಹುದು. ಫ್ಲೋರ್‌ಬೋರ್ಡ್ ವಿಶಾಲವಾಗಿರುವುದರಿಂದ ಎತ್ತರದ ಮಂದಿಯೂ ಸುಲಭವಾಗಿ ಕಾಲುಗಳನ್ನಿಡಬಹುದು.
ಎಲ್ಇಡಿ ಲೈಟ್‌ಗಳು ಇದರ ಅಂದವನ್ನು ಹೆಚ್ಚಿಸಿವೆ. ಬ್ರೇಕ್ ಹೋಲ್ಡರ್, ರಿವರ್ಸ್ ಸೌಲಭ್ಯ ಇತ್ಯಾದಿ ಫೀಚರ್‌ಗಳು ಅನುಕೂಲತೆ ಹೆಚ್ಚಿಸಿವೆ. ನಗರ ಸಾರಿಗೆಗೆ, ಕಚೇರಿಗೆ ಹೋಗಿ ಬರಲು, ಹೀಗೆ ಪ್ರತೀ ದಿನ ಸ್ಕೂಟರ್ ಬಳಸುವವರಿಗೆ ಈ ಸ್ಕೂಟರ್ ಉತ್ತಮ ಮೌಲ್ಯವನ್ನು ಒದಗಿಸುತ್ತದೆ.
ಇದರ ಬೆಲೆ ರೂ. 1,99,558 (ಎಕ್ಸ್ ಶೋರೂಮ್ ಬೆಂಗಳೂರು)
ಕಾರು ಮಾತ್ರವಲ್ಲ ಇದೀಗ ಭಾರತದ ಮೊದಲ ಹೈಬ್ರಿಡ್ ಬೈಕ್ ಯಮಹಾ FZ-S Fi ಬಿಡುಗಡೆ