ದೇಶದ ಪ್ರಖ್ಯಾತ ದ್ವಿಚಕ್ರವಾಹನ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ ಬಜಾಜ್ ಕಂಪನಿ, ಇತ್ತೀಚೆಗಷ್ಟೇ ತನ್ನ ಜನಪ್ರಿಯ ಪ್ಲಾಟಿನಾ ಬೈಕ್ ಅನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯ ಆಂಟಿ ಬ್ರೆಕಿಂಗ್ ಲಾಕ್ ಸಿಸ್ಟಮ್(ಎಬಿಎಸ್) ತಂತ್ರಜ್ಞಾನ ಅಳವಡಿಸಿರುವ ಬಜಾಜ್ ಪ್ಲಾಟಿನಾ 110 ಎಬಿಎಸ್ ದ್ವಿಚಕ್ರವಾಹನವನ್ನು ಮಾರುಕ್ಟಟೆಗೆ ಬಿಡುಗಡೆ ಮಾಡಿದೆ.
ಕಂಪನಿಯ ಹೇಳಿಕೆ ಪ್ರಕಾರ 110 ಸಿಸಿ ವಿಭಾಗದಲ್ಲಿ ಆಂಟಿ ಲಾಕ್ ಬ್ರೆಕಿಂಗ್(ಎಬಿಎಸ್) ಸಿಸ್ಟಮ್ ಇರುವ ಏಕೈಕ ದ್ವಿಚಕ್ರವಾಹನ ಇದಾಗಿದೆ. ಬಜಾಜ್‌ನ ಎಂಟ್ರಿ ಲೆವಲ್ ದ್ವಿಚಕ್ರವಾಹನ ವಿಭಾಗದಲ್ಲಿ ಪ್ಲಾಟಿನಾ ಬಹಳ ಜನಪ್ರಿಯ ಪಡೆದ ದ್ವಿಚಕ್ರವಾಹನವಾಗಿದೆ.
2006ರಲ್ಲಿ ಮೊದಲ ಬಾರಿಗೆ ಬಜಾಜ್ ಕಂಪನಿ ಬಜಾಜ್ ಪ್ಲಾಟಿನಾ ದ್ವಿಚಕ್ರವಾಹನವನ್ನು ಬಿಡುಗಡೆ ಮಾಡಿತ್ತು. ಆಗ ಇದು 100 ಸಿಸಿ ದ್ವಿಚಕ್ರವಾಹನವಾಗಿತ್ತು. 2006ರಲ್ಲಿ ದಿಲ್ಲಿ ಎಕ್ಸ್ ಶೋರೂಮ್ ಬೆಲೆ 35 ಸಾವಿರ ರೂಪಾಯಿ. ಈಗ ಇದರ ಬೆಲೆ ಹೆಚ್ಚಳವಾಗಿದೆ. ಬಜಾಜ್ ಪ್ಲಾಟಿನಾ ಬಿಡುಗಡೆಯಾದ ಮೊದಲ 8 ತಿಂಗಳಲ್ಲೇ 5 ಲಕ್ಷ ದ್ವಿಚಕ್ರವಾಹನಗಳು ಮಾರಾಟವಾಗಿದ್ದವು ಎಂದರೆ ನೀವು ಪ್ಲಾಟಿನಾ ಜನಪ್ರಿಯತೆಯನ್ನು ಎಷ್ಟಿತ್ತು ಎಂಬುದನ್ನು ಊಹಿಸಬಹುದು. ಪ್ಲಾಟಿನಾಗೆ ಬಳಸಿದ ಎಂಜಿನ್ ಅನ್ನು ಬಳಸಿಕೊಂಡು ಕಂಪನಿ 2008ರಲ್ಲಿ 125 ಡಿಟಿಎಸ್-ಎಸ್ಐ ವೆರಿಯೆಂಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ದ್ವಿಚಕ್ರವಾಹನವು ತಿಂಗಳಿಗೆ 30 ಸಾವಿರ ಯುನಿಟ್ಸ್ ಮಾರಾಟವಾಗುತ್ತಿತ್ತು. ಕಂಪನಿ ಈ ದ್ವಿಚಕ್ರವಾಹನ ಮಾರಾಟವನ್ನು ಸ್ಥಗಿತಗೊಳಿಸಿತು.
undefined
ಓಲಾ ಕ್ಯಾಬ್ ಗೊತ್ತಲ್ಲ, ಅದೇ ಕಂಪನಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಬರ್ತಾ ಇದೆ!
ಆದರೆ ಪ್ಲಾಟಿನಾ ದ್ವಿಚಕ್ರವಾಹನದ ಬೇಡಿಕೆಯೇನೂ ಕುಂದಿಲ್ಲ. ಗ್ರಾಮೀಣ ಭಾಗದಲ್ಲಿ ಪ್ಲಾಟಿನಾಗೆ ಅದರದ್ದೇ ಬೇಡಿಕೆಯ ವರ್ಗವಿದೆ. ಹಾಗಾಗಿಯೇ ಕಂಪನಿ ಆಗಾಗ ಅಪ್‌ಡೇಟ್ ಮಾಡುತ್ತಾ ಪ್ಲಾಟಿನಾ ಹೊಸ ಮಾಡೆಲ್ ಅನ್ನು ಬಿಡುಗಡೆ ಮಾಡುತ್ತದೆ. ಇದೀಗ ಕಂಪನಿ ಎಬಿಎಸ್ ತಂತ್ರಜ್ಞಾನದ ಪ್ಲಾಟಿನಾ 110 ಎಬಿಎಸ್ ಎಂಬ ಹೊಸ ಮಾಡೆಲ್ ಪ್ಲಾಟಿನಾ ದ್ವಿಚಕ್ರವಾಹನವನ್ನು ಬಿಡುಗಡೆ ಮಾಡಿದೆ.
ಹೊಸ ಬಜಾಜ್ ಪ್ಲಾಟಿನಾ 110 ಎಬಿಎಸ್ ದ್ವಿಚಕ್ರವಾಹನವು, 115 ಸಿಸಿ, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಏರ್ ಕೋಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್‌ಗೆ ಎಲೆಕ್ಟ್ರಾನಿಕ್ ಫ್ಯುಯೆಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಗರಿಷ್ಠ 8.6ಪಿಎಸ್ ಪವರ್ ಉತ್ಪಾದನೆಯಾಗುತ್ತದೆ ಮತ್ತು 9.81 ಎನ್ ಎಂ ಪೀಕ್ ಟಾರ್ಕ್ ಉತ್ಪಾದನೆಯಾಗುತ್ತದೆ. ಹಾಗೆಯೇ ಈ ದ್ವಿಚಕ್ರವಾಹನವು 5 ಸ್ಪೀಡ್ ಗಿಯರ್ ಬಾಕ್ಸ್ ಒಳಗೊಂಡಿದೆ.
ಹುಂಡೈ ಭರ್ಜರಿ ಆಫರ್: ಆಯ್ದ ಕಾರುಗಳ ಮೇಲೆ 1.5 ಲಕ್ಷ ರೂ.ವರೆಗೂ ಡಿಸ್ಕೌಂಟ್
ಟ್ಯುಬಲರ್ ಸಿಂಗಲ್ ಡೌನ್‌ಟ್ಯೂಬ್ ಚಾಸೀಸ್ ಆಧರಿತವಾಗಿರುವ ಬಜಾಜ್ ಪ್ಲಾಟಿನಾ 110 ಎಬಿಎಸ್ ದ್ವಿಚಕ್ರವಾಹನ ಮುಂಭಾಗದಲ್ಲಿ 135 ಎಂಎಂ ಟ್ರಾವೆಲ್‌ನೊಂದಿಗೆ ಟೆಲಿಸ್ಕಾಪಿಕ್ ಸಸ್ಪೆನ್ಷನ್ ಇದ್ದರೆ, ಹಿಂಭಾಗದಲ್ಲಿ 110 ಎಂಎಂ ಟ್ರಾವೆಲ್‌ನೊಂದಿಗೆ ನಿಟ್ರೋಕ್ಸ್ ಸ್ಪ್ರಿಂಗ್ ಆನ್ ಸ್ಪ್ರಿಂಗ್ ಸಸ್ಪೆನ್ಷನ್‌ಗಳಿವೆ. ಟ್ಯೂಬ್‌ಲೆಸ್ ಟಯರ್‌ಗಳೊಂದಿಗೆ 17 ಇಂಚ್ ಅಲಾಯ್ ಚಕ್ರಗಳಿವೆ. ಮುಂಬದಿ ಚಕ್ರಕ್ಕೆ 240 ಡಿಸ್ಕ್ ಬ್ರೇಕ್ ಸಿಸ್ಟಮ್ ಇದ್ದರೆ ಹಿಂಬದಿಯಲ್ಲಿ 110 ಎಂಎಂ ಡ್ರಮ್ ಬ್ರೇಕ್ ಇದೆ.
ಈ ಹೊಸ ಪ್ಲಾಟಿನಾ ಗ್ರಾಹಕರಿಗೆ ಚಾರ್ಕೋಲ್ ಬ್ಲಾಕ್, ವಾಲ್ಕಾನಿಕ್ ರೆಡ್ ಮತ್ತು ಬೀಚ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಡಿಆರ್‌ಎಲ್ ಅಂತರ್ಗತವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್ ಇದೆ. ಎಬಿಎಸ್ ಸೂಚಕವನ್ನು ಒಳಗೊಂಡಿರುವ ಅನ್ಲಾಗ್ ಸ್ಪೀಡ್ ಮೀಟರ್, ಮುಂದಕ್ಕೆ ಚೂಪಾದ ಆಕಾರ ಹೊಂದಿರುವ ಸೀಟ್, ಹ್ಯಾಂಡ್ ಗಾರ್ಡ್ ಸೇರಿ ಇನ್ನಿತರ ಫೀಚರ್‌ಗಳನ್ನು ಒಳಗೊಂಡಿದೆ.
ಮೇ ತಿಂಗಳಲ್ಲಿ ಮಾರುತಿಯ ಹೊಸ ಸೆಲೆರಿಯೋ ಕಾರು ಮಾರುಕಟ್ಟೆಗೆ?
ಬಜಾಜ್ ಪ್ಲಾಟಿನಾ 110 ಎಬಿಎಸ್ ದ್ವಿಚಕ್ರವಾಹನದ ಬೆಲೆ 65,926 ರೂಪಾಯಿ(ದಿಲ್ಲಿ ಎಕ್ಸ್ ಶೋರೂಮ್) ಆಗಿದೆ.
ಇದಕ್ಕೂ ಮೊದಲು ಕಂಪನಿ ಬಜಾಜ್ ಪ್ಲಾಟಿನಾ 100 ಇಎಸ್(ಎಲೆಕ್ಟ್ರಾನಿಕ್ ಸ್ಟಾರ್ಟ್) ದ್ವಿಚಕ್ರವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಬೈಕ್‌ನ ಬೆಲೆ 53,920 ರೂ.(ದಿಲ್ಲಿ ಶೋರೂಮ್). ಕಂಪನಿಯ ಪ್ರಕಾರ, ಎಲೆಕ್ಟ್ರಿಕ್ ಸ್ಟಾರ್ಟ್ ಎಂಜಿನ್ ವಿಭಾಗದಲ್ಲಿ ಪ್ಲಾಟಿನಾ 100 ಇಎಸ್ ಬೈಕ್ ಕೈಗೆಟುಕುವ ಬೈಕ್ ಆಗಿದೆ.