ಹುಬ್ಬಳ್ಳಿ(ಜ.24): ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ(Electric Scooter) ವಿಸ್ತಾರಗೊಳ್ಳುತ್ತಿದೆ. ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ದೇಶದಲ್ಲಿ ಬಜಾಜ್ ಆಟೋ(Bajaj Auto) ಐಕಾನಿಕ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್(Chetak Electric Scooter) ಬಿಡುಗಡೆ ಮಾಡಿದೆ. 2021ನೇ ವರ್ಷವನ್ನು ಯಶಸ್ವಿಯಾಗಿ ಮುಗಿಸಿದ ಬಜಾಜ್ ಇದೀಗ ಹೊಸ ವರ್ಷದಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಜಾಲ ವಿಸ್ತರಿಸಿದೆ. ಇದೀಗ ಹುಬ್ಬಳ್ಳಿಯಲ್ಲಿ(Hubli) ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭಿಸಿದೆ. ಆನ್‌ಲೈನ್ ಬುಕಿಂಗ್ ಅವಕಾಶ ಮಾಡಿಕೊಡಲಾಗಿದೆ. ಕೇವಲ 2,000 ರೂಪಾಯಿ ನೀಡಿ ಸ್ಕೂಟರ್ ಬುಕಿಂಗ್ ಮಾಡಿಕೊಳ್ಳಬಹುದು.
ಈವರೆಗೆ ಸುಮಾರು 6,000 ಕ್ಕೂ ಹೆಚ್ಚು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ(Indian Market) ವಿತರಣೆ ಮಾಡಲಾಗಿದೆ. ಹುಬ್ಭಳ್ಳಿಗೂ ಮೊದಲು ಕೊಚ್ಚಿ, ಕೋಝಿಕ್ಕೋಡ್, ಮಧುರೈ, ಕೊಯಮತ್ತೂರು, ಸೂರತ್ ಮತ್ತು ವಿಶಾಖಪಟ್ಟಣಂನಲ್ಲಿ ಚೇತಕ್ ಎಲೆಕ್ಟ್ರಿಕ್‌ಗಾಗಿ ಬುಕಿಂಗ್‌ಗಳನ್ನು(Scooter Booking) ತೆರೆಯಲಾಗಿದೆ. ಚೇತಕ್ ಈಗ ಲಭ್ಯವಿರುವ 20 ನಗರಗಳ ನೆಟ್‌ವರ್ಕ್‌ಗೆ ಇವುಗಳನ್ನು ಸೇರಿಸಿದೆ. ಇತರ ನಗರಗಳಲ್ಲಿ ಬುಕಿಂಗ್ ಪ್ರಾರಂಭಿಸಿದ ಕೇವಲ 72 ಗಂಟೆಯಲ್ಲಿ ಎಲ್ಲಾ ವಾಹನಗಳು ಬುಕ್ ಆದವು ಇದೇ ಉತ್ಸಾಹ ಹುಬ್ಬಳ್ಳಿಯಲ್ಲಿ ಕೂಡ ನಿರೀಕ್ಷಿಸಲಾಗಿದೆ.
ಪರಿಸರಕ್ಕೆ ಪೂರಕವಾದ ಮತ್ತು ಸ್ವಚ್ಛತೆಗಾಗಿ ನಿರ್ಮಿಸಲಾದ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗೆ 12,000 ಕಿಲೋಮೀಟರ್ ಅಥವಾ ಒಂದು ವರ್ಷ, ಮತ್ತು 3 ವರ್ಷ ಅಥವಾ 50,000 ಕಿಲೋಮೀಟರ್‌ಗಳ ಸೇವಾ ಮಧ್ಯಂತರದೊಂದಿಗೆ ಕನಿಷ್ಠ ನಿರ್ವಹಣೆಯ ಅಗತ್ಯವಿದೆ.
ಚೇತಕ್ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ - ಇಂಡಿಗೊ ಮೆಟಾಲಿಕ್, ವೆಲುಟ್ಟೊ ರೊಸ್ಸೊ, ಬ್ರೂಕ್ಲಿನ್ ಬ್ಲ್ಯಾಕ್ ಮತ್ತು ಹ್ಯಾಝೆಲ್‌ನಟ್. ಚೇತಕ್ ಇವಿಯು ಕೆಟಿಎಂ ಹುಬ್ಬಳ್ಳಿಯ ಚೇತಕ್ ವಲಯದಲ್ಲಿ ಪರೀಕ್ಷಾ ಸವಾರಿಗಾಗಿ ಲಭ್ಯವಿದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ 1,46,75 ರೂಪಾಯಿಂದ( ಎಕ್ಸ್ ಶೋ ರೂಂ) ಬೆಲೆಯಲ್ಲಿ ಪರಿಚಯಿಸಲಾಗಿದೆ.
ಚೆನ್ನೈ, ಹೈದ್ರಾಬಾದ್‌ನಲ್ಲೂ ಬಜಾಜ್ ಚೇತಕ್ ಇ ಸ್ಕೂಟರ್
ಚೇತಕ್ ಈಗಾಗಲೇ ಭಾರತದಾದ್ಯಂತ ಪ್ರಮುಖ ನಗರಗಳಲ್ಲಿ ಅದ್ಭುತ ಯಶಸ್ಸನ್ನು ಕಂಡಿದೆ. ಪ್ರತಿ ನಗರದಲ್ಲಿಯೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹುಬ್ಬಳ್ಳಿಗೆ ಕವಲೊಡೆಯುವ ವಿಶ್ವಾಸ ಮೂಡಿಸಿದೆ. ಚೇತಕ್ 'ಹಮಾರಾ ಕಲ್' - ಒಂದು ರೋಚಕ ಮತ್ತು ಜವಾಬ್ದಾರಿಯುತ ಭವಿಷ್ಯವನ್ನು ಒಳಗೊಂಡಿದೆ. ಬುಕಿಂಗ್‌ಗಳ ವಿರುದ್ಧ ಚೇತಕ್‌ನ ಮೊದಲ ಸಾಗಣೆಯು ಜನವರಿ 2022 ರಲ್ಲಿ ಪ್ರಾರಂಭವಾಗುತ್ತದೆ ಎಂದು ಬಜಾಜ್ ಆಟೋದ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದರು.
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ: