Electric Bike ಬೆಂಗಳೂರಿನ ಮತ್ತೊಂದು ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ರೆಡಿ, 200 ಕಿ.ಮೀ ಮೈಲೇಜ್ ನೀಡಲಿದೆ ಒಬೆನ್ ಇವಿ!

By Suvarna NewsFirst Published Jan 22, 2022, 9:45 PM IST
Highlights
  • ಬೆಂಗಳೂರು ಮೂಲದ ಒಬೆನ್ ಎಲೆಕ್ಟ್ರಿಕ್ ಬೈಕ್
  • ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಒಬೆನ್ ಎಲೆಕ್ಟ್ರಿಕ್ ಬೈಕ್
  • 2 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ ಬೈಕ್
  • ಹಲವು ವಿಶೇಷತೆಯ ಒಬೆನ್ ಬೈಕ್ ಹೆಚ್ಚಿನ ಮಾಹಿತಿ ಇಲ್ಲಿದೆ
     

ಬೆಂಗಳೂರು(ಜ.22): ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕ್ ಖರೀದಿಸಲು ಗ್ರಾಹಕನಿಗೆ ಹಲವು ಆಯ್ಕೆಗಳಿವೆ. ಪ್ರತಿ ದಿನ ಹೊಸ ಹೊಸ ಎಲೆಕ್ಟ್ರಿಕ್ ವಾಹನ(Electric Vehicle) ಬಿಡುಗಡೆಯಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ(Bengaluru) ಮತ್ತೊಂದು ಎಲೆಕ್ಟ್ರಿಕ್ ವಾಹನ ರಸ್ತೆಗಿಳಿಯಲು ಸಜ್ಜಾಗಿದೆ. ಒಬೆನ್ ಎಲೆಕ್ಟ್ರಿಕ್(Oben Electric) ವೆಹಿಕಲ್ ಪ್ರೈವೇಟ್ ಲಿಮಿಟೆಡ್ ಇದೀಗ ಒಬೆನ್ ಎಲೆಕ್ಟ್ರಿಕ್ ಬೈಕ್(Electric Bike) ಬಿಡುಗಡೆ ಮಾಡಲು ಸಜ್ಜಾಗಿದೆ.

ಬೆಂಗಳೂರು ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ(Electric Vehilce Hub) ದೇಶದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಎದರ್, ಸಿಂಪಲ್ ಒನ್, ಒಲಾ, ಬೌನ್ಸ್ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್ ಮೂಲ ಬೆಂಗಳೂರು. ಈ ಸಾಲಿಗೆ ಒಬೆನ್ ಸೇರಿಕೊಂಡಿದೆ. ಒಬೆನ್ ಎಲೆಕ್ಟ್ರಿಕ್ ಬೈಕ್ ಹಲವು ವಿಶೇಷತೆಗಳಿವೆ. ಈ ಬೈಕ್ ಮೈಲೇಜ್(Mileage) ಒಂದು ಬಾರಿ ಚಾರ್ಜ್ ಮಾಡಿದರೆ 200 ಕಿಲೋಮೀಟರ್. ಇದು ರಿವೋಲ್ಟ್, ಓಲಾ ಸೇರಿದಂತೆ ಮಾರುಕಟ್ಟೆಯಲ್ಲಿರುವ ಹಲವು ಸ್ಕೂಟರ್ ಹಾಗೂ ಬೈಕ್ ರೇಂಜ್‌ಗಿಂತ ಹೆಚ್ಚಾಗಿದೆ.

Electric Bike ಊಹೆಗೂ ಮೀರಿದ ಆಕರ್ಷಕ ಆರ್ಕ್ ವೆಕ್ಟರ್ ಎಲೆಕ್ಟ್ರಿಕ್ ಬೈಕ್ ಡೆಲಿವರಿ ಆರಂಭ, ಬೆಲೆ 91 ಲಕ್ಷ ರೂ!

ಒಬೆನ್ ಎಲೆಕ್ಟ್ರಿಕ್ ಬೈಕ್ ಚಾರ್ಜ್ ಸಯಮ(Bike Charging) ಕೂಡ ಕಡಿಮೆಯಾಗಿದೆ. ಕೇವಲ 2 ಗಂಟೆಯಲ್ಲಿ ಒಬೆನ್ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲಿದೆ. ಇದರ ಪ್ರತಿಸ್ಪರ್ದಿ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಚಾರ್ಜಿಂಗ್ ಸಮಯ 4 ರಿಂದ 5 ಗಂಟೆ. ಇತ್ತ ಒಬೆನ್ ಬೈಕ್‌ನಲ್ಲಿ ಮ್ಯಾಕ್ಸಿಮಂ ಹೀಟ್ ಎಕ್ಸ್‌ಚೇಂಜ್ ಟೆಕ್ನಾಲಜಿ ಬಳಸಲಾಗಿದೆ. ಇದರಿಂದ ಬೈಕ್ ಅದೆಷ್ಟೇ ವೇಗದಲ್ಲಿ ಚಲಾಯಿಸಿದರೂ ಅಥವಾ ಸಿಂಗಲ್ ಚಾರ್ಜ್‌(Single Charge) ಸಂಪೂರ್ಣ ಬಳಕೆ ಮಾಡಿದರೂ ಬೈಕ್ ಬ್ಯಾಟರಿ ಬಿಸಿಯಾಗುವುದಿಲ್ಲ.  ಹಲವು ವಿಚಾರಗಳಲ್ಲಿ ಒಬೆನ್ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ.  

ಒಬೆನ್ ಎಲೆಕ್ಟ್ರಿಕ್ ಸ್ಕೂಟರ್ ಬೆಂಗಳೂರು ಸೇರಿದಂತೆ ಮಾರಾಟ ಜಾಲ ಹೊಂದಿರುವ ಕಡೆಗಳಲ್ಲಿ ಚಾರ್ಜಿಂಗ್ ಸ್ಟೇಶನ್ ಅಳವಡಿಕೆಯತ್ತ ಗಮನಹರಿಸಿದೆ. ಇದಕ್ಕಾಗಿ ಇತರ ಚಾರ್ಜಿಂಗ್ ಸ್ಟೇಶನ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಒಬೆನ್ ಎಲೆಕ್ಟ್ರಿಕ್  ಬೈಕ್ ದೇಶಾದ್ಯಂತ ಬಿಡುಗಡೆ ಮಾಡಲು ಕಂಪನಿ ಸಜ್ಜಾಗಿದೆ.  ಒಬೆನ್ ಎಲೆಕ್ಟ್ರಿಕ್ ಬೈಕ್ ವೇಗ 100 ಕಿ.ಮೀ ಪ್ರತಿ ಗಂಟೆಗೆ. 0-40 ಕಿ.ಮೀ ವೇಗವನ್ನು ಕೇವಲ 3 ಸೆಕೆಂಡ್‌ಗಳಲ್ಲಿ ತಲುಪಲಿದೆ. 

Electric Bike ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ದಾಖಲೆ, 350 ಕಿ.ಮೀ ಮೈಲೇಜ್!

ಒಬೆನ್ ಎಲೆಕ್ಟ್ರಿಕ್ ಬೈಕ್ ವಿನ್ಯಾಸವೂ ಆಕರ್ಷಕವಾಗಿದೆ. ನೋಟದಲ್ಲಿ ಸ್ಪೋರ್ಟ್ಸ್ ಬೈಕ್(Sports Bike) ರೀತಿ ಕಂಡರೂ ಇದು ಆರಾಮದಾಯಕ ರೈಡಿಂಗ್ ನೀಡಲಿದೆ. ಇದರ ಸೀಟು ಹಾಗೂ ಹ್ಯಾಂಡ್ಲ್‌ಬಾರ್, ಲೆಗ್ ಪೊಸಿಶನ್, ಸೀಟಿಂಗ್ ಪೊಸಿಶನ್ ಹೆಚ್ಚಿನ ಆರಾಮದಾಯಕ ರೈಡಿಂಗ್‌ಗೆ ಪುಷ್ಠಿ ನೀಡಲಿದೆ. 

ಒಬೆನ್ ಎಲೆಕ್ಟ್ರಿಕ್ ಬೈಕ್ ಬೆಲೆ:
ರೋಡ್ ಟೆಸ್ಟ್ ಸೇರಿದಂತೆ ಹಲವು ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿರುವ ಒಬೆನ್ ಎಲೆಕ್ಟ್ರಿಕ್ ಬೈಕ್ ಬಿಡುಗಡಗೆ ತಯಾರಿ ಮಾಡಿಕೊಳ್ಳುತ್ತಿದೆ. ಶೀಘ್ರದಲ್ಲೇ ಒಬೆನ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಲಿದೆ. ಇದರ ಬೆಲೆ(Bike Price ಕುರಿತು ಕಂಪನಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.  ಕೈಗೆಟುಕುವ ದರದಲ್ಲಿ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.

Electric Bike 100ಕಿ.ಮೀ ಮೈಲೇಜ್, ಮೇಡ್ ಇನ್ ಇಂಡಿಯಾ ಟಾರ್ಕ್ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್ ಜನವರಿ ಅಂತ್ಯಕ್ಕೆ ಲಾಂಚ್!

ಭಾರತದಲ್ಲಿ  ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಆಯ್ಕೆ ಹಲವಿದೆ. ವಿಶ್ವದಲ್ಲೇ ಭಾರತ(India) ಎಲೆಕ್ಟ್ರಿಕ್ ವಾಹನಗಳ ಹಬ್ ಆಗಿ ಮಾರ್ಪಡುತ್ತಿದೆ. ಅತೀ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. 200 ಕಿ.ಮೀ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳು, ಅತೀ ಕಡಿಮೆ ಬೆಲೆಯ ಸ್ಕೂಟರ್ ಸೇರಿದಂತೆ ಹಲವು ಭಿನ್ನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಬೈಕ್ ಭಾರತದಲ್ಲಿ ಲಭ್ಯವಿದೆ. 
 

click me!