ದೀಪಾವಳಿಯಂದು ಒಂದೇ ದಿನ 250 ವಾಹನ ವಿತರಿಸಿದ ಏಥರ್ ಎನರ್ಜಿ

By Suvarna NewsFirst Published Oct 27, 2022, 3:18 PM IST
Highlights

ಏಥರ್‌ ಕಂಪನಿ (Ather Company), ದೀಪಾವಳಿ ಹಬ್ಬದ ಸಮಯದಲ್ಲಿ ಒಂದೇ ದಿನದಲ್ಲಿ ಬೆಂಗಳೂರು ನಗರದಲ್ಲಿ 250 ವಾಹನಗಳನ್ನು ವಿತರಿಸಿದೆ

ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ವಲಯದಲ್ಲಿ ಮುಂಚೂಣಿಯಲ್ಲಿರುವ ಏಥರ್ ಕಂಪನಿ (Ather Company), ದೀಪಾವಳಿ ಹಬ್ಬದ ಸಮಯದಲ್ಲಿ ಒಂದೇ ದಿನದಲ್ಲಿ ಬೆಂಗಳೂರು ನಗರದಲ್ಲಿ 250 ವಾಹನಗಳನ್ನು ವಿತರಿಸಿದೆ. 2022ರ ಅಕ್ಟೋಬರ್ 23 ರಂದು ಏಥರ್ ಈ ಡೆಲಿವರಿಯನ್ನು ಪೂರ್ಣಗೊಳಿಸಿದೆ.
ಈ ಕುರಿತು ಏಥೆರ್ ಎನರ್ಜಿಯ (Ather energy) ಸಿಇಒ (CEO) ತರುಣ್ ಮೆಹ್ತಾ ಟ್ವೀಟ್ ಮಾಡಿದ್ದು, "ಈ ಧನ್ತೇರಸ್ ಹಬ್ಬದಂದು 450X ಅನ್ನು ಮನೆಗೆ ತೆಗೆದುಕೊಂಡು ಹೋದ ನಮ್ಮ ಪಾಲುದಾರ ಬಿಐಎ (BIA) ಉದ್ಯಮಗಳು, ಬೆಂಗಳೂರು ಮಾರಾಟ ತಂಡ ಮತ್ತು ಎಲ್ಲಾ ಗ್ರಾಹಕರಿಗೆ ಅಭಿನಂದನೆಗಳು" ಎಂದಿದ್ದಾರೆ. 
ಏಥರ್ ಎನರ್ಜಿ ಈ ವರ್ಷದ ಆರಂಭದಲ್ಲಿ ಏಥರ್ 450X 3ನೇ ಪೀಳಿಗೆಯ (Gen 3) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದು, ಆವೃತ್ತಿಯು ಕೆಲವು ಪ್ರಮುಖ ನವೀಕರಣಗಳನ್ನು ಪರಿಚಯಿಸಿತ್ತು. ಇದು ಈಗ 3.7 ಕೆಡಬ್ಲ್ಯುಎಚ್ (kWh) ಬ್ಯಾಟರಿ ಪವರ್ ಹೊಂದಿದೆ. ಇದು ಪ್ರತಿ ಚಾರ್ಜ್ಗೆ 105 ಕಿಮೀ ಚಾಲನೆಯ ಸಾಮರ್ಥ್ಯ ಹೊಂದಿದೆ. ಇದರಲ್ಲಿ 6.2 kW (8 bhp) ಮೋಟಾರ್ ಅಳವಡಿಸಲಾಗಿದೆ. ಇದರಿಂದ ಸ್ಕೂಟರ್ 3.3 ಸೆಕೆಂಡುಗಳಲ್ಲಿ 0-40 kmph ವೇಗ ಪಡೆದುಕೊಳ್ಳಬಹುದು. ಇದರ ಗರಿಷ್ಠ ವೇಗ 90 kmph. 

ಇದರ ಜೊತೆಗೆ, ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಕೂಡ ಏರಿಕೆಯಾಗಿದೆ. ಹೆಚ್ಚು ಹೆಚ್ಚು ಖರೀದಿದಾರರು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಖರೀದಿಸುತ್ತಿದ್ದಾರೆ.  ದೀಪಾವಳಿಯ (Deepavali) ಮೊದಲ ದಿನವಾದ ಧನ್ತೇರಸ್ ಅನ್ನು ಚಿನ್ನ ಅಥವಾ ಬೆಳ್ಳಿಯಂತಹ ದುಬಾರಿ ಅಥವಾ ವಾಹನವನ್ನು ಖರೀದಿಸಲು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಅದೇ ದಿನ ಏಥರ್ ಬ್ರ್ಯಾಂಡ್ ಏಕಕಾಲದಲ್ಲಿ 250 ಸ್ಕೂಟರ್ಗಳನ್ನು ವಿತರಿಸಿದೆ.

ಓಲಾ, ಸಿಂಪಲ್ ಒನ್‌ಗೆ ತೀವ್ರ ಸ್ಪರ್ಧೆ ಒಡ್ಡಲಿರುವ ಏಥರ್: 3ನೇ ಘಟಕ ಸ್ಥಾಪನೆಗೆ ಸಿದ್ಧತೆ

ಏಥರ್ ಎನರ್ಜಿ ಇತ್ತೀಚೆಗೆ ದೇಶದಲ್ಲಿ ತನ್ನ 580 ನೇ ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್ (Charging point) ಸ್ಥಾಪನೆಯನ್ನು ಘೋಷಿಸಿದೆ. ಪ್ರಸ್ತುತ, ಅಥರ್ ಭಾರತದ 56 ನಗರಗಳಲ್ಲಿ 500 ಅಥರ್ ಗ್ರಿಡ್ (Ather grid) ಪಾಯಿಂಟ್ಗಳನ್ನು ಹೊಂದಿದೆ ಮತ್ತು 2023 ರ ಅಂತ್ಯದ ವೇಳೆಗೆ ಚಾರ್ಜಿಂಗ್ ಪಾಯಿಂಟ್ಗಳ ಸಂಖ್ಯೆಯನ್ನು 1,400 ಕ್ಕೆ ಹೆಚ್ಚಿಸುವ ಗುರಿಯನ್ನು  ಹೊಂದಿದೆ. ಅದರಲ್ಲೂ ಇದರ ಶೇ. 60ರಷ್ಟು ಚಾರ್ಜಿಂಗ್ ಪಾಯಿಂಟ್ಗಳ ಸ್ಥಾಪನೆ ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಲ್ಲಿದೆ.
ಏಥರ್ ಗ್ರಿಡ್ ಎಲೆಕ್ಟ್ರಿಕ್ ವಾಹನಗಳ (EV) ಮಾಲೀಕರಿಗೆ ಪ್ರತಿ ನಿಮಿಷಕ್ಕೆ 1.5 ಕಿಮೀ ವೇಗದಲ್ಲಿ ತಮ್ಮ ವಾಹನಗಳನ್ನು ಶೇ. 80 ರಷ್ಟು ಚಾರ್ಜ್ ಮಾಡಲು ಅನುಮತಿಸುತ್ತದೆ. ವೇಗದ ಚಾರ್ಜಿಂಗ್ ನೆಟ್ವರ್ಕ್ ಅನ್ನು ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ಎಲೆಕ್ಟ್ರಿಕ್ ಫೋರ್-ವೀಲರ್ಗಳು ಬಳಸಬಹುದಾಗಿದೆ ಮತ್ತು ಈ ಸೌಲಭ್ಯವನ್ನು 2022ರ ಡಿಸೆಂಬರ್ ಅಂತ್ಯದವರೆಗೆ ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತಿದೆ.

ಏಥರ್ ಎನರ್ಜಿಯು ಪಾರ್ಕ್+, ಮೆಜೆಂಟಾ ಪವರ್ನಂತಹ ಬಹು ಆಟಗಾರರೊಂದಿಗೆ ಪಾಲುದಾರಿಕೆ ಹೊಂದಿದೆ ಮತ್ತು ವಿವಿಧ ನಗರಗಳಲ್ಲಿ ಇವಿ  (EV) ಚಾರ್ಜಿಂಗ್ ಸ್ಥಳಗಳನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರದೊಂದಿಗೆ ಎಂಒಯುಗೆ (MOU) ಸಹಿ ಹಾಕಿದೆ. ಜೊತೆಗೆ ಕಂಪನಿ ಸಹ-ಆಪರೇಟಿವ್ ಹೌಸಿಂಗ್ ಸೊಸೈಟಿಗಳು ಮತ್ತು ಮಾಲೀಕರ ಸಂಘಗಳೊಂದಿಗೆ ಕೆಲಸ ಮಾಡುತ್ತಿದೆ ಮತ್ತು ಏಥರ್ ಮಾಲೀಕರಿಗೆ ಅವರ ಅಪಾರ್ಟ್ಮೆಂಟ್ ಮತ್ತು ಕಟ್ಟಡಗಳಲ್ಲಿ ಹೋಮ್ ಚಾರ್ಜಿಂಗ್ ಪರಿಹಾರಗಳನ್ನು ಹೊಂದಿಸಲು ಸಹಾಯ ಮಾಡುತ್ತಿದೆ.ಏಥರ್ ಸ್ಕೂಟರ್ಗಳ ದರ 1,37,727 ರೂ.ಗಳಿಂದ ಆರಂಭವಾಗುತ್ತದೆ. 

Fire at Ather ಬೆಂಗಳೂರು ಮೂಲದ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಕೇಂದ್ರದಲ್ಲಿ ಬೆಂಕಿ!

click me!