ದೀಪಾವಳಿಗೆ ಭರ್ಜರಿ ಕೊಡುಗೆ 11 ಸಾವಿರಕ್ಕೆ ಮನೆಗೆ ತನ್ನಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350!

By Suvarna NewsFirst Published Oct 20, 2022, 6:43 PM IST
Highlights

ದೀಪಾವಳಿ ಹಬ್ಬಕ್ಕೆ ರಾಯಲ್ ಎನ್‌ಫೀಲ್ಡ್ ಭರ್ಜರಿ ಕೂಡುಗೆ ಘೋಷಿಸಿದೆ.  ಕೇವಲ 11,000 ರೂಪಾಯಿ ಪಾವತಿಸಿದರೆ ಸಾಕು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ನಿಮ್ಮದಾಗಲಿದೆ. ಈ ಕೊಡಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
 

ನವದೆಹಲಿ(ಅ.20): ದೀಪಾವಳಿ ಹಬ್ಬಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಈಗಾಗಲೇ ತಯಾರಿಗಳು ಆರಂಭಗೊಂಡಿದೆ, ಸಂಭ್ರಮ ಮನೆ ಮಾಡಿದೆ. ಇದರ ನಡುವೆ ರಾಯಲ್ ಎನ್‌ಫೀಲ್ಡ್ ದೀಪಾವಳಿ ಹಬ್ಬದ ಕೊಡುಗೆ ಘೋಷಿಸಿದೆ. ದೀಪಾವಳಿ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಬೈಕ್ ನೀಡಲು ರಾಯಲ್ ಎನ್‌ಫೀಲ್ಡ್ ಮುಂದಾಗಿದೆ.  ಇದಕ್ಕಾಗಿ ಡೌನ್ ಪೇಮೆಂಟ್ ಬೆಲೆಯಲ್ಲಿ ಭಾರಿ ಕಡಿತಗೊಳಿಸಲಾಗಿದೆ. ದೀಪಾವಳಿ ಹಬ್ಬದ ವಿಶೇಷ ಆಫರ್‌ನಲ್ಲಿ ಗ್ರಾಹಕರು ಕೇವಲ 11,000 ರೂಪಾಯಿ ನೀಡಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬುಕ್ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ ಗ್ರಾಹಕರಿಗೆ ಸುಲಭ ಕಂತು, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವೂ ಸಿಗಲಿದೆ. ಈ ಆಫರ್ ಮೂಲಕ ಕಳೆದ ತಿಂಗಳ ದಾಖಲೆಯ ಮಾರಾಟವನ್ನು ಬ್ರೇಕ್ ಮಾಡಲು ರಾಯಲ್ ಎನ್‌ಫೀಲ್ಡ್ ಮುಂದಾಗಿದೆ.

ದೀಪಾವಳಿ ಹಬ್ಬಕ್ಕೆ ಮನೆಗ ತನ್ನಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಅನ್ನೋ ಟ್ಯಾಗ್‌ಲೈನ್ ಮೂಲಕ ರಾಯಲ್ ಎನ್‌ಫೀಲ್ಡ್ ಆಫರ್ ಘೋಷಿಸಿದೆ. 11,000 ರೂಪಾಯಿ ಪಾವತಿಸಿದ ಗ್ರಾಹಕರಿಗೆ ಇನ್ನೂ ಕೆಲ ಕೊಡುಗೆಗಳನ್ನು ರಾಯಲ್ ಎನ್‌ಫೀಲ್ಡ್ ನೀಡಿದೆ. ತಿಂಗಳ ಕಂತು ಎಷ್ಟಿರಬೇಕು? ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ತಿಂಗಳ ಕಂತು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. 11,000 ರೂಪಾಯಿ ಡೌನ್ ಪೇಮೆಂಟ್ ಮಾಡಿ ಬೈಕ್ ಖರೀದಿಸುವ ಗ್ರಾಹಕರು 68 ತಿಂಗಳು, 60 ತಿಂಗಳು, 48 ತಿಂಗಳು ಹಾಗೂ 36 ತಿಂಗಳ ಇಎಮ್ಐ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

Royal Enfield Hunter 350: ಬೇರೆ ಬೈಕುಗಳಿಗಿಂತ ಹಗುರ, ಕಡಿಮೆ ಎತ್ತರದ ಸ್ಟೈಲಿಷ್‌ ಬೈಕು

60 ತಿಂಗಳ ಇಎಮ್ಐ ಆಯ್ಕೆ ಮಾಡುವ ಗ್ರಾಹಕರು ಪ್ರತಿ ತಿಂಗಳು 4,557 ರೂಪಾಯಿ ಪಾವತಿಸಬೇಕು. ಇನ್ನು 48 ತಿಂಗಳು ಕಂತು ಆಯ್ಕೆ ಮಾಡುವ ಗ್ರಾಹಕರು ಪ್ರತಿ ತಿಂಗಳು  5,341  ರೂಪಾಯಿ ಪಾವತಿಸಬೇಕು. ಇ್ನು 36 ತಿಂಗಳು ಆಯ್ಕೆ ಮಾಡುವ ಗ್ರಾಹಕರು ಪ್ರತಿ ತಿಂಗಳು 6,666 ರೂಪಾಯಿ ಪಾವತಿಸಬೇಕು. ಇದರೊಂದಿಗೆ ಮತ್ತಷ್ಟು ಕಂತುಗಳ ಆಯ್ಕೆಯೂ ಲಭ್ಯವಿದೆ. 

ನೂತನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬೈಲೆ1.90 ಲಕ್ಷ ರೂಪಾಯಿ(ಎಕ್ಸ್‌ಶೋ ರೂಂ), 2.21 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಕ್ಲಾಸಿಕ್ 350 ಬೈಕ್ ಜಾವಾ ಸ್ಟಾಂಡರ್ಡ್, ಹೊಂಡಾ ಹೈನೆಸ್ CB350, ಬೆನೆಲ್ಲಿ ಇಂಪೀರಿಯಲ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ.  

ಕೈಗೆಟುಕುವ ದರ, ಸಿಟಿ ಹಾಗೂ ಲಾಂಗ್ ರೈಡ್‌ಗೂ ಸೈ ಎನಿಸುವ ನೂತನ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್ ಲಾಂಚ್!

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಇತ್ತೀಚೆಗೆ ಅಪ್‌ಗ್ರೇಡ್ ವರ್ಶನ್ ಬಿಡುಗಡೆಯಾಗಿದೆ. ನೂತನ ಕ್ಲಾಸಿಕ್ ಬೈಕ್ 349 cc Jಸೀರಿಸ್ ಎಂಜಿನ್ ಹೊಂದಿದೆ.  20.2 Hp ಪವರ್ ಹಾಗೂ 27 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಬೈಕ್ ಕರ್ಬ್ ತೂಕ 195 kg.  

click me!