ದೇಶದಲ್ಲಿ ಬೆಂಕಿ ಅವಘಡಕ್ಕೆ ತುತ್ತಾಗಿರುವ ಪ್ರತಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತನಿಖೆ ನಡೆಸುವುದಾಗಿ ಸರ್ಕಾರದ ಹೇಳಿಕೆ
ದೇಶದಲ್ಲಿ ಬೆಂಕಿ ಅವಘಡಕ್ಕೆ ತುತ್ತಾಗಿರುವ ಪ್ರತಿ ಎಲೆಕ್ಟ್ರಿಕ್ ದ್ವಿಚಕ್ರ (Electric Vehicle) ವಾಹನಗಳ ಕುರಿತು ಪ್ರತಿಕ್ರಿಯಿಸಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಗಿರಿಧರ್ ಅರಮನೆ, ಪ್ರತಿಯೊಂದು ಘಟನೆಗಳನ್ನು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು, ಇತ್ತೀಚೆಗೆ, ಇವಿಗಳು ಬೆಂಕಿಗೆ ಆಹುತಿಯಾಗುವ ಹಲವಾರು ಘಟನೆಗಳು ಸಂಭವಿಸಿವೆ ಮತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ತೀವ್ರವಾಗಿ ಗಾಯಗೊಂಡಿದ್ದಾರೆ. "ಪ್ರತಿಯೊಂದು ಘಟನೆಯನ್ನು ತನಿಖೆ ನಡೆಸಲಾಗುವುದು” ಎಂದರು.
ಮುಂದಿನ ದಿನಗಳಲ್ಲಿ ಭಾರತೀಯ ಎಲೆಕ್ಟ್ರಿಕ್ ವಾಹನ ಉದ್ಯಮವು ನಮ್ಮ ಕಲ್ಪನೆಗೂ ಮೀರಿ ಅಭಿವೃದ್ಧಿ ಹೊಂದುವುದು ಮತ್ತು ಬೆಳೆಯುವುದು ನಿಶ್ಚಿತ. ಕೇಂದ್ರದ ರಾಷ್ಟ್ರೀಯ ಗಳಿಕೆ ಪೈಪ್ಲೈನ್ನ (National Monitisation Pipeline) ಭಾಗವಾಗಿ 2022ರಲ್ಲಿರಲ್ಲಿ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ [MoRTH] ಒಟ್ಟಾರೆ ಸುಮಾರು 21,000 ಕೋಟಿ ರೂ. ಆಸ್ತಿ ಗಳಿಕೆ ಮೌಲ್ಯವನ್ನು ಸಾಧಿಸಿದೆ ಎಂದು ಶ್ರೀ ಅರಮನೆ ಹೇಳಿದರು.
ಬ್ಯಾಟರಿ ಬೆಂಕಿ ಪ್ರಕರಣಗಳು ಉಲ್ಬಣವು EV ಕ್ಷೇತ್ರದಲ್ಲಿ ಮುಂಚೂಣಿ ಸಾಧಿಸುವ ಭಾರತದ ಪ್ರಯತ್ನವನ್ನು ದುರ್ಬಲಗೊಳಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ತಯಾರಕರು ಅಗತ್ಯವಾದ ಸುರಕ್ಷತಾ ಪ್ರೋಟೋಕಾಲ್ಗಳು, ಗುಣಮಟ್ಟ ನಿಯಂತ್ರಣ ಮತ್ತು ಗುಣಮಟ್ಟದ ಭರವಸೆ ವ್ಯವಸ್ಥೆಗಳನ್ನು ತ್ವರಿತವಾಗಿ ಅಳವಡಿಸಿಕೊಂಡರೆ ಚಿಂತೆಪಡುವ ಅಗತ್ಯವಿಲ್ಲ. ಭಾರತೀಯ ಇವಿ ಉದ್ಯಮವು ನಮ್ಮ ಕಲ್ಪನೆಯನ್ನು ಮೀರಿ ಏಳಿಗೆ ಮತ್ತು ಬೆಳೆಯಲು ಬದ್ಧವಾಗಿದೆ" ಎಂದು ಪ್ರತಿಪಾದಿಸಿದರು.
ಬೆಂಕಿ ಅವಘಡಗಳ ಕುರಿತು ತನಿಖೆ ನಡೆಸಲು ರಚಿಸಿರುವ ತಜ್ಞರ ಸಮಿತಿ ಇನ್ನೂ ವರದಿ ಸಲ್ಲಿಸಿಲ್ಲ. ಎಲ್ಲಾ ಸಮಸ್ಯೆಗಳು ಮತ್ತು ಸಂಗ್ರಹಣೆ, ವಿನ್ಯಾಸ, ನಿರ್ವಹಣೆ, ಕಾರ್ಯಾಚರಣೆಗಳು, ಬ್ಯಾಟರಿಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಪರಿಶೀಲಿಸಬೇಕಾಗಿದೆ. ಸಮಿತಿ ಸೂಕ್ತ ಶಿಫಾರಸುಗಳನ್ನು ನೀಡುವ ವಿಶ್ವಾಸವಿದೆ ಎಂದರು.
ಇತ್ತೀಚೆಗೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ನಿರ್ಲಕ್ಷ್ಯ ತೋರಿದ ಕಂಪನಿಗಳಿಗೆ ದಂಡ ವಿಧಿಸಲಾಗುವುದು ಮತ್ತು ತಜ್ಞರ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ ನಂತರ ಎಲ್ಲಾ ದೋಷಯುಕ್ತ ವಾಹನಗಳನ್ನು ಹಿಂಪಡೆಯಲು ಆದೇಶಿಸಲಾಗುವುದು ಎಂದು ಹೇಳಿದ್ದರು.
ಕಳೆದ ತಿಂಗಳು ಪುಣೆಯಲ್ಲಿ ಓಲಾ ಇ-ಸ್ಕೂಟರ್ಗೆ ಬೆಂಕಿ ಹೊತ್ತಿಕೊಂಡ ನಂತರ ಸರ್ಕಾರ ತನಿಖೆಗೆ ಆದೇಶಿಸಿತ್ತು.
ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ಘಟನೆಗೆ ಕಾರಣವಾದ ಸಂದರ್ಭಗಳನ್ನು ತನಿಖೆ ಮಾಡಲು ಮತ್ತು ಪರಿಹಾರ ಕ್ರಮಗಳನ್ನು ಸೂಚಿಸಲು ಬೆಂಕಿ ಸ್ಫೋಟಕ ಮತ್ತು ಪರಿಸರ ಸುರಕ್ಷತೆಯ ಕೇಂದ್ರ [CFEES] ಕ್ಕೆ ಸೂಚನೆ ನೀಡಲಾಗಿದೆ. ಜೊತೆಗೆ, ಅಂತಹ ಘಟನೆಗಳನ್ನು ತಡೆಗಟ್ಟುವ ಕ್ರಮಗಳ ಕುರಿತು ತನ್ನ ಸಲಹೆಗಳನ್ನು ನೀಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: Eelectric Scooter Fire ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ, ಬೆಂಗಳೂರಲ್ಲಿ ನಡೆಯಿತು ಘಟನೆ !
ಇಲ್ಲಿಯವರೆಗೆ, ಮೂರು ಪ್ಯೂರ್ ಇವಿ (Pure EV), ಒಂದು ಓಲಾ (Ola), ಎರಡು ಓಕಿನಾವಾ (Okinawa) ಮತ್ತು 20 ಜಿತೇಂದ್ರ ಇವಿ (Jitendra EV) ಸ್ಕೂಟರ್ಗಳು ಬೆಂಕಿಗೆ ಆಹುತಿಯಾಗಿವೆ. ಈ ಘಟನೆಗಳಲ್ಲಿ ಕೆಲವರು ಮೃತಪಟ್ಟಿದ್ದರೆ, ಮತ್ತೆ ಕೆಲವರಿಗೆ ಗಾಯಗಳಾಗಿವೆ. ದೇಶಾದ್ಯಂತ ಇಂತಹ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆಯೇ ಸರ್ಕಾರ ಅದರ ವಿರುದ್ಧ ತನಿಖೆಗೆ ಆದೇಶಿಸಿದೆ.
ಇದರ ಬೆನ್ನಲ್ಲೇ ಎಲ್ಲಾ ಪ್ರಮುಖ ಇವಿಗಳ ತಯಾರಕರು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಚಿವರ ಸಲಹೆ ಮೇರೆಗೆ ಇವಿಗಳನ್ನು ಹಿಂಪಡೆದಿರುವ ತಯಾರಕರು, ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವುದಾಗಿ ಕೂಡ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಬಿಡುಗಡೆ ತಡೆ ಹಿಡಿಯುವಂತೆ ತಯಾರಕರಿಗೆ ಸೂಚನೆ ನೀಡಿಲ್ಲ; ಸರ್ಕಾರ ಸ್ಪಷ್ಟನೆ
ಈ ನಡುವೆ, ಸಚಿವಾಲಯ, ಯಾವುದೇ ದೋಷಗಳು ಕಂಡುಬಂದಲ್ಲಿ ಓಲಾ ಸೇರಿದಂತೆ ಎಲ್ಲಾ ಪ್ರಮುಖ ತಯಾರಕರನ್ನು ವಿಚಾರಣೆಗೆ ಕರೆಸುವುದಾಗಿ ತಿಳಿಸಿದೆ.