ಡಿ.01ರಿಂದ ಹೀರೋ ಬೈಕ್ ಬೆಲೆ ಹೆಚ್ಚಳ, ಗರಿಷ್ಠ 1,500 ರೂಪಾಯಿ ಏರಿಕೆ!

By Suvarna News  |  First Published Dec 1, 2022, 6:51 PM IST

ಡಿಸೆಂಬರ್ ತಿಂಗಳ ಆರಂಭದಲ್ಲಿ ಹೀರೋ ಮೋಟಾಕಾರ್ಪ್ ಗ್ರಾಹಕರಿಗೆ ಶಾಕ್ ನೀಡಿದೆ. ಇಂದಿನಿಂದ ಎಲ್ಲಾ ಹಿರೋ ಬೈಕ್ ಬೆಲೆ ಹೆಚ್ಚಳ ಮಾಡಲಾಗಿದೆ. ಒಂದು ವರ್ಷದಲ್ಲಿ ಹೀರೋ ಇದೀಗ ನಾಲ್ಕನೇ ಬಾರಿಗೆ ಬೆಲೆ ಏರಿಕೆ ಮಾಡುತ್ತಿದೆ.


ನವದೆಹಲಿ(ಡಿ.01) ಪೆಟ್ರೋಲ್ ಬೆಲೆ ಏರಿಕೆ, ಹೊಸ ವಾಹನಗಳ ಬೆಲೆ ಏರಿಕೆಯಿಂದ ದುಬಾರಿಯಾಗಿರುವ ಈ ದುನಿಯಾದಲ್ಲಿ  ಹೀರೋ ಮೋಟಾರ್‌ಕಾರ್ಪ್ ಕೈಗೆಟುಕುವ ದರದಲ್ಲಿ ಬೈಕ್ ನೀಡುತ್ತಿದೆ. ಇಷ್ಟೇ ಅಲ್ಲ ಅತ್ಯುತ್ತಮ ಮೈಲೇಜ್ ಹಾಗೂ ಕಡಿಮೆ ನಿರ್ವಹಣಾ ವೆಚ್ಚದಿಂದ ಹೀರೋ ಬೈಕ್ ಬಳಕೆದಾರರ ಅಚ್ಚುಮೆಚ್ಚಿನ ಬೈಕ್ ಆಗಿದೆ. ಆದರೆ ಇದೀಗ ಹೀರೋಮೋಟಾರ್‌ಕಾರ್ಪ್ ಎಲ್ಲಾ ಬೈಕ್ ಬೆಲೆ ಹೆಚ್ಚಿಸಿದೆ. ಇದೀಗ ಹೀರೋ ಬೈಕ್ ಬೆಲೆ ಗರಿಷ್ಠ 1,500 ರೂಪಾಯಿ ಹೆಚ್ಚಾಗಲಿದೆ. ಡಿಸೆಂಬರ್ 1 ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ. ಇಂದಿನಿಂದ ಬೈಕ್ ಹೀರೋ ಬುಕ್ ಮಾಡುವ ಗ್ರಾಹಕರು ಹೆಚ್ಚುವರಿ ಬೆಲೆ ನೀಡಬೇಕು. ಆದರೆ ಈಗಾಗಲೇ ಬೈಕ್ ಬುಕ್ ಮಾಡಿ ಡೆಲಿವರಿಗಾಗಿ ಕಾಯುತ್ತಿರುವ ಗ್ರಾಹಕರಿಗೆ ಪರಿಷ್ಕೃತ ದರ ಅನ್ವಯವಾಗಲ್ಲ.

ಹೀರೋ ಡಿಲಕ್ಸ್, ಹೀರೋ ಸ್ಪ್ಲೆಂಡರ್, ಪ್ಯಾಶನ್ ಸೇರಿದಂತೆ ಹೀರೋ ಎಲ್ಲಾ ಬೈಕ್ ಬೆಲೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಸೆಪ್ಟಂಬರ್ ತಿಂಗಳಲ್ಲಿ ಹೀರೋ ಮೋಟಾರ್‌ಕಾರ್ಪ್ ಬೆಲೆ ಹೆಚ್ಚಳ ಮಾಡಿತು. ಅಂದು 1,000 ರೂಪಾಯಿಂದ ಗರಿಷ್ಠ 3,000 ರೂಪಾಯಿ ವರೆಗೆ ಬೆಲೆ ಹೆಚ್ಚಳ ಮಾಡಲಾಗಿತ್ತು. 2022ರಲ್ಲಿ ಹೀರೋ ಮೋಟಾರ್‌ಕಾರ್ಪ್ ಇದೀಗ ನಾಲ್ಕನೇ ಬೆಲೆ ಹೆಚ್ಚಳವಾಗಿದೆ. 

Latest Videos

undefined

ಬೆಂಗಳೂರಿನಲ್ಲಿ ಹೀರೋ ಮೋಟೋಕಾರ್ಪ್ Xpulse ಎಕ್ಸ್‌ಪೀರಿಯನ್ಸ್ ಸೆಂಟರ್ ಉದ್ಘಾಟನೆ!

ಹೀರೋ ಬೆನ್ನಲ್ಲೇ ಟಿವಿಎಸ್, ಬಜಾಜ್ ಸೇರಿದಂತೆ ಇತರ ಕೆಲ ಆಟೋಮೊಬೈಲ್ ಕಂಪನಿಗಳು ತಮ್ಮ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ ಮಾಡಲು ಮುಂದಾಗಿದೆ. ಜುಲೈ ತಿಂಗಳಲ್ಲಿ ಬಜಾಜ್, ಟಿವಿಎಸ್ ಬೆಲೆ ಏರಿಕೆ ಮಾಡಲಾಗಿತ್ತು ಕಚ್ಚಾವಸ್ತುಗಳ ಬೆಲೆ ಏರಿಕೆ, ಆಮದು ಸುಂಕಗಳಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ಆಟೋಮೊಬೈಲ್ ಕಂಪನಿಗಳು ಬೆಲೆ ಏರಿಕೆ ಕಸರತ್ತಿಗೆ ಮುಂದಾಗಿದೆ.

ಹೀರೋ ಕಂಪನಿಯ ಎಕ್ಸ್‌ಕ್ಲಾನ್‌ ಕ್ಲಬ್‌

ಹೀರೋ ಕಂಪನಿ ತನ್ನ ಎಕ್‌ಪಲ್ಸ್‌ ಬೈಕ್‌ ರೈಡರ್‌ಗಳನ್ನು ಒಗ್ಗೂಡಿಸುವ ಸಲುವಾಗಿ ಎಕ್ಸ್‌ಕ್ಲಾನ್‌ ಎಂಬ ರೈಡಿಂಗ್‌ ಕ್ಲಬ್‌ ಸ್ಥಾಪಿಸಿದೆ. ಎಕ್ಸ್‌ಪಲ್ಸ್‌ ಬೈಕ್‌ ಹೊಂದಿರುವವರು ಈ ಕ್ಲಬ್‌ ಅನ್ನು ಸೇರಿಕೊಳ್ಳಬಹುದಾಗಿದೆ. ಹೀರೋ ಮೋಟೋಕಾಪ್‌ರ್‍ ವೆಬ್‌ಸೈಟಿನಲ್ಲಿ ಸಂಪೂರ್ಣ ಮಾಹಿತಿ ಲಭ್ಯ.

ಕೈಗೆಟುಕುವ ದರದ ಹೀರೋ ಮೋಟೋಕಾರ್ಪ್ ಪ್ಯಾಶನ್ XTEC ಬೈಕ್ ಬಿಡುಗಡೆ!

ಹೀರೋ ಎಕ್ಸ್‌ಪಲ್ಸ್‌ 200 4ವಿ ರಾರ‍ಯಲಿ ಎಡಿಶನ್‌
ಹೀರೋ ಮೋಟೋಕಾಪ್‌ರ್‍ ಕಂಪನಿ ಎಕ್ಸ್‌ಪಲ್ಸ್‌ 200 4ವಿ ರಾರ‍ಯಲಿ ಬೈಕನ್ನು ಬಿಡುಗಡೆ ಮಾಡಿದೆ.  ಆನ್‌ ರೋಡ್‌ ಹಾಗೂ ಆಫ್‌ ರೋಡ್‌ ಎರಡೂ ಬಗೆಯ ರೈಡ್‌ಗೆ ಅನುಕೂಲಕರ ಎಂದು ಕಂಪನಿ ಹೇಳಿದೆ. 200 ಸಿಸಿ 4 ವಾಲ್‌್ವ ಆಯಿಲ್‌ ಕೂಲ್ಡ್‌ ಎಂಜಿನ್‌ ಹೊಂದಿದೆ. ಈ ಹೈಟೆಕ್‌ ಅಡ್ವೆಂಚರ್‌ ಬೈಕ್‌ ಅನ್ನು ಬ್ಲೂಟೂಥ್‌ ಬಳಸಿ ಆ್ಯಪ್‌ ಮೂಲಕ ಸ್ಮಾರ್ಚ್‌ಫೋನ್‌ಗೆ ಕನೆಕ್ಟ್ ಮಾಡಿಕೊಂಡರೆ ಕಾಲ್‌ ಬಂದಾಗ ಅಲರ್ಚ್‌ ಮಾಡುತ್ತೆ.

ಹೀರೋ ಎಕ್ಸ್‌ಪಲ್ಸ್‌ 200 ಬೈಕ್‌ ಬುಕಿಂಗ್‌ ಆರಂಭ
ಹೀರೋ ಮೋಟೋಕಾಪ್‌ರ್‍ ತನ್ನ ಎಕ್ಸ್‌ಪಲ್ಸ್‌ 200 4 ವಾಲ್‌್ವ ಬೈಕ್‌ನ ಎರಡನೇ ಬ್ಯಾಚ್‌ ಮಾರಾಟ ಆರಂಭಿಸುತ್ತಿದ್ದು, ಬುಕಿಂಗ್‌ ಆರಂಭಿಸಿದೆ. ಕಂಪನಿ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಬುಕ್ಕಿಂಗ್‌ ಮಾಡಬಹುದು. 10,000 ರು. ಮುಂಗಡ ಪಾವತಿ ಮಾಡಿದರೆ ಶೀಘ್ರ ಬೈಕ್‌ ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದಾಗಿ ಕಂಪನಿ ತಿಳಿಸಿದೆ. 200 ಸಿಸಿ ಸಾಮರ್ಥ್ಯದ ಈ ಬೈಕ್‌ ಬಿಎಸ್‌ 6, ಆಯಿಲ್‌ ಕೂಲ್ಡ್‌ ಎಂಜಿನ್‌ ಹೊಂದಿದೆ. 8500 ಆರ್‌ಪಿಎಂ ಇದ್ದು, 19.1 ಪಿಎಸ್‌ ಪವರ್‌ ಉತ್ಪಾದಿಸುತ್ತದೆ. ಟ್ರಯಲ್‌ ಬ್ಲೂ, ಬ್ಲಿಟ್‌್ಜ ಬ್ಲೂ ಮತ್ತು ರೆಡ್‌ ರೈಡ್‌ ಬಣ್ಣಗಳಲ್ಲ ಲಭ್ಯ.

click me!