ಔರಾದ್‌: ಆಸ್ಪತ್ರೆ ಆವರಣದಲ್ಲಿ ಬಿದ್ದಿದ್ದ ಕಸಕ್ಕೆ ಬೆಂಕಿ ಇಟ್ಟ ಸಚಿವ!

Published : Oct 28, 2019, 03:22 PM IST
ಔರಾದ್‌: ಆಸ್ಪತ್ರೆ ಆವರಣದಲ್ಲಿ ಬಿದ್ದಿದ್ದ ಕಸಕ್ಕೆ ಬೆಂಕಿ ಇಟ್ಟ ಸಚಿವ!

ಸಾರಾಂಶ

ಆಸ್ಪತ್ರೆ ಆವರಣದಲ್ಲಿ ಕಸ ಬಿದ್ದಿದ್ದ ಕಸಕ್ಕೆ ಬೆಂಕಿ ಹಚ್ಚಿ ಸ್ವಚ್ಛ ಮಾಡಿದ ಸಚಿವ ಪ್ರಭು ಚೌಹಾಣ್| ಔರಾದ್ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ನಡೆದ ಘಟನೆ| ಆಸ್ಪತ್ರೆಯ ಆವರಣದಲ್ಲಿ ಅವ್ಯವಸ್ಥೆ, ಗಲೀಜು ನೋಡಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಸಚಿವರು| ಆಸ್ಪತ್ರೆಯಲ್ಲಿದ್ದ ವೈದ್ಯೆ ಡಾ.ಗಾಯತ್ರಿ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು|

ಬೀದರ್‌(ಅ.28): ಆಸ್ಪತ್ರೆ ಆವರಣದಲ್ಲಿ ಕಸ ಬಿದ್ದಿದ್ದನ್ನು ಕಂಡು ಕಸಕ್ಕೆ ಖುದ್ದು ಸಚಿವರೇ ಬೆಂಕಿ ಇಟ್ಟ ಘಟನೆ ಜಿಲ್ಲೆಯ ಔರಾದ್ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ. 

ಇಂದು ಪಟ್ಟಣದ ತಾಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದ ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರು, ಈ ವೇಳೆ ಆಸ್ಪತ್ರೆಯ ಆವರಣದಲ್ಲಿ ಬಿಸಾಕಿದ್ದ ಕಸವನ್ನ ಒಂದು ಕಡೆ ಗೂಡಿಸಿ ಅದಕ್ಕೆ ಬೆಂಕಿ ಸ್ವಚ್ಛ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಮಾತನಾಡಿದ ಅವರು, ಆಸ್ಪತ್ರೆಯ ಆವರಣದಲ್ಲಿ ಅವ್ಯವಸ್ಥೆ, ಗಲೀಜು ನೋಡಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ಆಸ್ಪತ್ರೆಯಲ್ಲಿದ್ದ ವೈದ್ಯೆ ಡಾ.ಗಾಯತ್ರಿ ಹಾಗೂ ಸಿಬ್ಬಂದಿಯನ್ನು  ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆ ಆವರಣವನ್ನ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸಚಿವ ಪ್ರಭು ಚೌಹಾಣ್ ಖಡಕ್ ಸೂಚನೆ ನೀಡಿದ್ದಾರೆ. 
 

PREV
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ