ಬೀದರ್: ಪ್ರಧಾನಿ ಮೋದಿ ವಿರುದ್ಧ ಈಶ್ವರ್ ಖಂಡ್ರೆ ತೀವ್ರ ವಾಗ್ದಾಳಿ

By Web DeskFirst Published Oct 28, 2019, 3:03 PM IST
Highlights

ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಳಂಬ|  ಕೇಂದ್ರದ ನೀತಿ ಖಂಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ|  ನೆರೆ ಬಂದು ಇಷ್ಟು ದಿನ ಆದ್ರು ಕೇಂದ್ರ ಸರ್ಕಾರ ನಯಾ ಪೈಸಾ ಪರಿಹಾರ ಕೊಟ್ಟಿಲ್ಲ| ಕೇಂದ್ರ ಸರ್ಕಾರ ಬರಿ ಹೇಳಿಕೆ ಕೋಟ್ರೆ ಆಯ್ತಾ| ಕೊನೆಗೂ ಅತ್ತು ಕರೆದು ತುಟಿಗೆ ತುಪ್ಪ ಹಚ್ಚುವ ಹಾಗೆ 1200 ಕೋಟಿ ನೀಡಿ ಕೈತೊಳೆದುಕೊಂಡಿದೆ| 

ಬೀದರ್(ಅ.28): ಭೀಕರ ಪ್ರವಾಹದಿಂದ ತತ್ತರಿಸಿದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ನೀತಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಖಂಡಿಸಿದಿದ್ದಾರೆ. 

ಸೋಮವಾರ ನಗರದಲ್ಲಿ ಮಾತನಾಡಿದ ಅವರು, ನೆರೆ ಬಂದು ಇಷ್ಟು ದಿನ ಆದ್ರು ಕೇಂದ್ರ ಸರ್ಕಾರ ನಯಾ ಪೈಸಾ ಪರಿಹಾರ ಕೊಟ್ಟಿಲ್ಲ, ಕೇಂದ್ರ ಸರ್ಕಾರ ಬರಿ ಹೇಳಿಕೆ ಕೋಟ್ರೆ ಆಯ್ತಾ, ಕೊನೆಗೂ ಅತ್ತು ಕರೆದು ತುಟಿಗೆ ತುಪ್ಪ ಹಚ್ಚುವ ಹಾಗೆ 1200 ಕೋಟಿ ನೀಡಿ ಕೈತೊಳೆದುಕೊಂಡಿದೆ ಎಂದು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಅನುಮತಿ ಕೊಟ್ಟಿಲ್ಲ, ಈ ಮೂಲಕ 7 ಕೋಟಿ ಕನ್ನಡಿಗರಿಗೆ ಮೋದಿ ಅವಮಾನ ಮಾಡಿದ್ದಾರೆ‌. ಬಿಜೆಪಿಯವರು ನೂರು ಸಲ ಸುಳ್ಳನ್ನು ಹೇಳಿ ಸತ್ಯ ಎಂಬಂತ್ತೆ ಬಿಂಬಿಸುತ್ತಾರೆ‌‌‌‌. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 15 ಸೀಟು ಗೆಲ್ಲಿಸಿ ಕೊಡುವ ಮೂಲಕ ಪ್ರಧಾನಿ ಮೋದಿಗೆ ತಕ್ಕ ಪಾಠ ಕಲಿಸ್ತಾರೆ ಎಂದು ಹೇಳಿದ್ದಾರೆ. 
 

click me!