ಸರ್ಕಾರಿ ಕಚೇರಿಗಳಿಗೆ ಹಾಜರಾಗದ ಅಧಿಕಾರಿಗಳ ಮೈ ಚಳಿ ಬಿಡಿಸಿದ ಸಚಿವ ಚವ್ಹಾಣ

By Web DeskFirst Published Oct 28, 2019, 12:59 PM IST
Highlights

ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿದ ನೀಡಿದ ಸಚಿವ ಸಚಿವ ಪ್ರಭು ಚವ್ಹಾಣ| ಅಧಿಕಾರಿಗಳು ಕಚೇರಿಗೆ ಸಾಮೂಹಿಕ ಗೈರಾಗಿದ್ದನ್ನು ಕಂಡು ಅವರು ದಂಗಾದ ಸಚಿವ| ಕಚೇರಿಯಲ್ಲಿನ ಒಟ್ಟು 19 ಜನ ಅಧಿಕಾರಿಗಳ ಪೈಕಿ 9 ಜನರಿಗೆ ಕಾರಣ ಕೇಳಿ ನೋಟಿಸ್ ಕಳುಹಿಸಿದ್ದಾರೆ| ಅಧಿಕಾರಿಗಳು ಗೈರಾಗಿದ್ದಕ್ಕೆ ಕಾರಣ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಇದೇ ವೇಳೆ ಸೂಚನೆ|

ಬೀದರ್(ಅ.28): ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿದ ನೀಡಿದ ವೇಳೆ ಅಧಿಕಾರಿಗಳು ಕಚೇರಿಗೆ ಸಾಮೂಹಿಕ ಗೈರಾಗಿದ್ದನ್ನು ಕಂಡು ಸಚಿವ ಪ್ರಭು ಚವ್ಹಾಣ ಅವರು ದಂಗಾದ ಘಟನೆ ಜಿಲ್ಲೆಯ ಔರಾದ್‌ ನಗರದಲ್ಲಿ ಸೋಮವಾರ ನಡೆದಿದೆ. 

ಔರಾದ್ ಪಟ್ಟಣ ಪಂಚಾಯತ್‌ಗೆ ಇಂದು ಸಚಿವರು ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಕಚೇರಿಯಲ್ಲಿನ ಒಟ್ಟು 19 ಜನ ಅಧಿಕಾರಿಗಳ ಪೈಕಿ 9 ಜನರಿಗೆ ಕಾರಣ ಕೇಳಿ ನೋಟಿಸ್ ಕಳುಹಿಸಿದ್ದಾರೆ. ಅಧಿಕಾರಿಗಳು ಗೈರಾಗಿದ್ದಕ್ಕೆ ಕಾರಣ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಇದೇ ವೇಳೆ ಸೂಚನೆ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಚಿವ  ಚೌಹಾಣ್ ಕಚೇರಿಗೆ ಭೇಟಿ ನೀಡಿದ ಮುಖ್ಯಾಧಿಕಾರಿ, ಸಿಬ್ಬಂದಿಯ ಮೈ ಚಳಿ ಬಿಡಿಸಿದ್ದಾರೆ. ದಿಢೀರ್ ಭೇಟಿ ಮಾಡಿ ಹಾಜರಾತಿ ಮತ್ತು ದುರಾವಸ್ಥೆ ಬಗ್ಗೆ ಪರಿಶೀಲನೆ  ನಡೆಸಿದ್ದಾರೆ. 

ಸಾರ್ವಜನಿಕ ತಾಲೂಕು ಆಸ್ಪತ್ರೆಗೂ ಭೇಟಿ 

ನಗರದ ತಾಲೂಕಾ ಆಸ್ಪತ್ರಗೆ ಭೇಟಿ ನೀಡಿದ ಸಚಿವರು ಆಸ್ಪತ್ರೆಯ‌ ಅವ್ಯವಸ್ಥೆ ಕಂಡು ತಾಲೂಕು ವೈಧ್ಯಾಧಿಕಾರಿ ಡಾ.ಗಾಯತ್ರಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಂದು ವರ್ಷದಿಂದ ಗೈರು ಹಾಜರಾಗಿದ್ದ ದಂತ ವೈಧ್ಯ ಡಾ. ಮೆಹಬಿನ್ ಫೀರ್ದೊಸ್, ಡಾ.ಮೆಹಬಿನ್ ಫೀರ್ದೋಸ್, ಶಿಲ್ಪಾ ಸಿಂಧೆ ಇಬ್ಬರು ವೈದ್ಯರನ್ನು ಅಮಾನುತು ಮಾಡುವಂತೆ ಆದೇಶ ಮಾಡಿದ್ದಾರೆ. 
 

click me!