
ಬೀದರ್(ಡಿ.19) ಹಿಂದೂ ಬಾಲಕಿಯನ್ನ ಮುಸ್ಲಿಂ ಯುವಕ ಅಪಹರಣ ಮಾಡಿದ್ದಾನೆ ಎನ್ನಲಾದ ಪ್ರಕರಣದ ಪರಿಣಾಮ ಡೊಣಗಾಂವ್ ಗ್ರಾಮದಲ್ಲಿ ಪರಿಸ್ಥಿತಿ ಬೂದ೦ ಮುಚ್ಚಿದ ಕೆಂಡದಂತಾಗಿದೆ.
ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಡೊಣಗಾಂವ್ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಸಕಲ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ. ಒಂದು ವಾರದ ಹಿಂದೆ ಹಿಂದೂ ಹುಡುಗಿಯನ್ನ ಮುಸ್ಲಿಂ ಯುವಕ ಅಲಾವುದ್ದೀನ್ ಅಪಹರಿಸಿ ನಾಪತ್ತೆಯಾಗಿದ್ದಾನೆ ಎನ್ನುವುದು ಆರೋಪ.
ದೇಶ ನಡುಗಿಸಿದ್ದ ಮುಂಬೈ ದಾಳಿಯ ಹಿಂದಿದೆ ಲವ್ ಜಿಹಾದ್!
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಮಗಳನ್ನು ಹುಡುಕಿಕೊಡಿ ಎಂದು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಪೊಲೀಸರಿಗೆ ನಾಗರಿಕರು ಎರಡು ದಿನಗಳ ಗಡವು ನೀಡಿದ್ದಾರೆ. ಲವ್ ಜಿಹಾದ್ ಶಂಕೆ ವ್ಯಕ್ತವಾಗಿದ್ದು ಮುಸ್ಲಿಂ ಸಮುದಾಯದವರು ಮನೆ ಖಾಲಿ ಮಾಡುತ್ತಿದ್ದಾರೆ.