ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ್ರೆ ಹುಷಾರ್: ಕಾರಂಜಾ ಸಂತ್ರಸ್ತ ರೈತರಿಗೆ DC,SP ಎಚ್ಚರಿಕೆ

By Web Desk  |  First Published Apr 1, 2019, 10:02 PM IST

ಸಿಎಂ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದರೆ ಹುಷಾರ್| ಕಾರಂಜಾ ಸಂತ್ರಸ್ತ ರೈತರಿಗೆ ಬೀದರ್ ಜಿಲ್ಲಾಧಿಕಾರಿ, ಎಸ್ಪಿಯಿಂದ ತಾಕೀತು|. ನಾಳೆ ಕುಮಾರಸ್ವಾಮಿ ಬೀದರ್ ಆಗಮಿಸಿತ್ತಿರುವ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ಧಿಷ್ಠಾವದಿ ಧರಣಿ ಕೂಳಿತಿರುವ ಸಂತ್ರಸ್ತರಿಗೆ ಎಸ್ಪಿ ಎಚ್ಚರಿಕೆ.


ಬೀದರ್, [ಏ.01]: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರಂಜಾ ಸಂತ್ರಸ್ತರು ಅನಿರ್ಧಿಷ್ಟಾವದಿ ಧರಣಿ ನಡೆಸುತ್ತಿದ್ದಾರೆ.

ಕಾರಂಜಾ ಯೋಜನೆಯಲ್ಲಿ ಮುಳುಗಡೆಯಾದ 28 ಗ್ರಾಮಗಳ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ರೈತರು  ಬೀದರ್ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟಾವದಿ ಧರಣಿ ಕುಳಿತ್ತಿದ್ದಾರೆ. 

Latest Videos

undefined

ಈ ನಡುವೆ ನಾಳೆ ಅಂದ್ರೆ ಮಂಗಳವಾರ ಮೈತ್ರಿ ಅಭ್ಯರ್ಥಿಯಾಗಿ ಈಶ್ವರ್ ಖಂಡ್ರೆ ನಾಮಪತ್ರ ಸಲ್ಲಿಸುತ್ತಿದ್ದಾರೆ. ಇದಕ್ಕೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸಹ ಬರುತ್ತಿದ್ದಾರೆ. ಈ ವೇಳೆ ಯಾವುದೇ ಕಾರಣಕ್ಕೂ ಸಿಎಂ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದರೆ ಹುಷಾರ್ ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಧರಣಿ ನಡೆಸುತ್ತಿರುವ ಕಾರಂಜಾ ಸಂತ್ರಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

ಈಶ್ವರ್ ಖಂಡ್ರೆ ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ, ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಬರುತ್ತಿದ್ದಾರೆ. ಈ ವೇಳೆ ಘೇರಾವ್ ಹಾಕುವುದಾಗಲಿ ಅಥವಾ ಮೈತ್ರಿ ಸರ್ಕಾರದ ವಿರುದ್ಧ  ಘೋಷಣೆ ಕೂಗದಂತೆ ರೈತರಿಗೆ ತಾಕೀತು ಮಾಡಿದ್ದಾರೆ.

ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಿ 28 ಹಳ್ಳಿಗಳ ಕಾರಂಜಾ ಸಂತ್ರಸ್ತರು ಧರಣಿ ನಡೆಸುತ್ತಿದ್ದು, ನಾಳೆ ಬರುವ ರಾಜ್ಯ ಮತ್ತು ರಾಷ್ಟ್ರದ ನಾಯಕರು ಬೀದರ್ ಗೆ ಆಗಮಿಸಿದರೆ ಘೇರಾವ್ ಹಾಕುವ ಎಚ್ಚರಿಕೆ ನೀಡಿದ್ದಾರೆ. 

ಇದರ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಧರಣಿ ನಿರತರಿಗೆ ವಾರ್ನಿಂಗ್ ಮಾಡಿದ್ದಾರೆ. ಈ ರೀತಿ ರೈತರ ಮೇಲೆ ದರ್ಪ ತೋರುತ್ತಿರುವುದು ಎಷ್ಟು ಸರಿ..?

click me!