’ಆಪರೇಶನ್’ ಪಿತಾಮಹ ಬಿಎಸ್‌ವೈ: ನಾಡಗೌಡ

Published : Sep 24, 2018, 05:38 PM IST
’ಆಪರೇಶನ್’ ಪಿತಾಮಹ ಬಿಎಸ್‌ವೈ: ನಾಡಗೌಡ

ಸಾರಾಂಶ

ರಾಜಕೀಯದಲ್ಲಿ ’ಆಪರೇಶನ್’ ಪರಿಚಯಿಸಿದವರೇ ಬಿಎಸ್‌ವೈ | ಆಪರೇಶನ್ ಕಮಲ ವರ್ಕೌಟ್ ಆಗುವುದಿಲ್ಲ- ವೆಂಕಟರಾವ್ ನಾಡಗೌಡ | ಮೈತ್ರಿ ಸರ್ಕಾರ ಸುಭದ್ರವಾಗಿ ಉಳಿದುಕೊಳ್ಳುತ್ತದೆ 

ಬೀದರ್  (ಸೆ. 24): ರಾಜಕೀಯದಲ್ಲಿ ಆಪರೇಷನ್ ಹುಟ್ಟಿಹಾಕಿದವರೇ ಯಡಿಯೂರಪ್ಪ. ಆಪರೇಷನ್ ಕಮಲವನ್ನು ದೇಶಕ್ಕೆ ಪರಿಚಯಿಸಿದವರೇ ಬಿಎಸ್‌ವೈ ಎಂದು ಸಚಿವ ವೆಂಕಟರಾವ್ ನಾಡಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಾನು ಶಾಸಕನಿದ್ದಾಗ ಆಪರೇಷನ್ ಕಮಲ ಮಾಡಿ ರಾಜೀನಾಮೆ ಕೊಡಿಸಿ ಮಂತ್ರಿ ಮಾಡಿದರು. ರಾಜಕೀಯದಲ್ಲಿ ಹೀಗೂ ಮಾಡಬಹುದು ಎಂದು ತೋರಿಸಿ ಕೊಟ್ಟವರು ಬಿಎಸ್ ವೈ.  ಈಗ ಅವರಿಗೆ ಎಲ್ಲಿ ಅವರ ಎಂಎಲ್ಎಗಳಿಗೆ ಆಪರೇಷನ್ ಮಾಡುತ್ತಾರೊ ಹೇಗೊ ಅಂತ ಭಯ ಶುರುವಾಗಿದೆ ಎಂದು ವೆಂಕಟ ರಾವ್ ಟೀಕಿಸಿದ್ದಾರೆ. 

ಯಡಿಯೂರಪ್ಪ ಅವರು ಸಹಜವಾಗಿ ನಾನು ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಾಣುತ್ತಿದ್ದಾರೆ.  ಈಗಾಗಲೇ ಒಂದು ದಿನದ ಮುಖಮಂತ್ರಿ ಆಗಿ ಮುಗಿಯಿತು. ಮತ್ತೊಮ್ಮೆ ಪ್ರಯತ್ನ ಮಾಡುತ್ತಿದ್ದಾರೆ. ಪ್ರಯತ್ನ ಮಾಡುವುದಕ್ಕೆ ನಮ್ಮಲ್ಲಿ ಯಾರದೂ ತಕರಾರು ಇಲ್ಲ. ಆಪರೇಶನ್ ಕಮಲ ವರ್ಕೌಟ್ ಆಗುವುದಿಲ್ಲ. ನಮ್ಮ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸಚಿವ ವೆಂಕಟರಾವ್ ಹೇಳಿದ್ದಾರೆ. 
 

PREV
click me!

Recommended Stories

ರಾಜ್ಯದಲ್ಲಿ ವಿಪರೀತ ಚಳಿ ಹಲವು ದಿನ ಮುಂದುವರಿಕೆ, ಬೀದರ್‌ನಲ್ಲಿ ದಾಖಲೆಯ ತಾಪಮಾನ ಕುಸಿತ! 17 ಜಿಲ್ಲೆಗಳಿಗೆ ಎಚ್ಚರಿಕೆ
ನವೋದಯ ಪರೀಕ್ಷೆಯಲ್ಲಿ ಅಕ್ರಮ ಆರೋಪ; ಬೀದರ್‌ನಲ್ಲಿ ಬಿಇಓಗೆ ವಿದ್ಯಾರ್ಥಿ ಪೋಷಕರಿಂದ ತರಾಟೆ