ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಲವತ್ತು ವಿಮಾನ ಸೇವೆಯಲ್ಲಿ ವ್ಯತ್ಯಯ

Published : Jan 20, 2019, 07:39 AM IST
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಲವತ್ತು ವಿಮಾನ ಸೇವೆಯಲ್ಲಿ ವ್ಯತ್ಯಯ

ಸಾರಾಂಶ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆಐಎಎಲ್‌) ಶನಿವಾರವೂ ದಟ್ಟಮಂಜು ಕವಿದಿದ್ದರಿಂದ ವಿಮಾನ ಸಂಚಾರ ಸೇವೆಯಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿ ಸಾವಿರಾರು ಪ್ರಯಾಣಿಕರು ಪರದಾಡಿದರು.  

ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆಐಎಎಲ್‌) ಶನಿವಾರವೂ ದಟ್ಟಮಂಜು ಕವಿದಿದ್ದರಿಂದ ವಿಮಾನ ಸಂಚಾರ ಸೇವೆಯಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿ ಸಾವಿರಾರು ಪ್ರಯಾಣಿಕರು ಪರದಾಡಿದರು.

ಬೆಳಗ್ಗೆ 6.33ರಿಂದ ಬೆಳಗ್ಗೆ 9.22ರ ವರೆಗೂ ವಾತಾವರಣದಲ್ಲಿ ದಟ್ಟಮಂಜು ಆವರಿಸಿದ್ದರಿಂದ ವಿಮಾನಗಳ ಟೇಕಾಫ್‌ ಮತ್ತು ಲ್ಯಾಂಡಿಂಗ್‌ ಸಮಸ್ಯೆಯಾಯಿತು. ಇದರಿಂದ 28 ವಿಮಾನಗಳ ಟೇಕಾಫ್‌ ಹಾಗೂ 12 ವಿಮಾನಗಳ ಲ್ಯಾಂಡಿಂಗ್‌ ವಿಳಂಬವಾಯಿತು. 

ಈ ನಡುವೆ ಸುಮಾರು ಒಂದು ತಾಸಿಗೂ ಅಧಿಕ ಸಮಯ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. 7 ವಿಮಾನ ಚೆನ್ನೈ, 2 ಕೊಯಮತ್ತೂರು ಮತ್ತು 1 ವಿಮಾನವನ್ನು ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು. ವಿಮಾನ ಸಂಚಾರ ವಿಳಂಬವಾದ್ದರಿಂದ ಪ್ರಯಾಣಿಕರು ಪರದಾಡಿದರು.

PREV
click me!

Recommended Stories

Karnataka Covid-19 Cases: ಕರ್ನಾಟಕದಲ್ಲಿ Covid-19 ಮತ್ತೆ ಏರಿಕೆ; 5 ಹೊಸ ಕೇಸ್ ದಾಖಲು, ಬೆಂಗಳೂರಿನಲ್ಲಿ ಒಂದು ಸಾವು!
Marathahalli Incident: ದೇವರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್; ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ!