ಇಂದಿನಿಂದ ಫರ್ನಿಚರ್‌ ಎಕ್ಸ್‌ಪೋ ಆರಂಭ

Published : Jan 19, 2019, 10:02 AM ISTUpdated : Jan 19, 2019, 10:29 AM IST
ಇಂದಿನಿಂದ ಫರ್ನಿಚರ್‌ ಎಕ್ಸ್‌ಪೋ ಆರಂಭ

ಸಾರಾಂಶ

ಸುವರ್ಣ ನ್ಯೂಸ್‌’ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರ್‌ನಲ್ಲಿ ಇಂದಿನಿಂದ (ಜ.19) ಮೂರು ದಿನಗಳ ಕಾಲ ‘ಇಂಡಿಯನ್‌ ಫರ್ನಿಚರ್‌ ಆ್ಯಂಡ್‌ ಹೋಮ್‌ ಡೆಕೊರ್‌ ಎಕ್ಸ್‌ಪೋ’ನ ಮೂರನೇ ಆವೃತ್ತಿ ಪ್ರಾರಂಭವಾಗುತ್ತಿದೆ. 

ಬೆಂಗಳೂರು :  ‘ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ ಸಹಯೋಗದಲ್ಲಿ ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರ್‌ನಲ್ಲಿ ಶನಿವಾರದಿಂದ (ಜ.19) ಮೂರು ದಿನಗಳ ಕಾಲ ‘ಇಂಡಿಯನ್‌ ಫರ್ನಿಚರ್‌ ಆ್ಯಂಡ್‌ ಹೋಮ್‌ ಡೆಕೊರ್‌ ಎಕ್ಸ್‌ಪೋ’ನ ಮೂರನೇ ಆವೃತ್ತಿ ಪ್ರಾರಂಭವಾಗಲಿದೆ.

ಗ್ರಾಹಕರ ಒತ್ತಾಯದ ಮೇರೆಗೆ ಆಯೋಜಿಸಿರುವ ಎಕ್ಸ್‌ಪೋದಲ್ಲಿ ವೈವಿಧ್ಯಮಯ ಪೀಠೋಪಕರಣಗಳು ಮತ್ತು ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಈ ಎಕ್ಸ್‌ಪೋಗೆ ಭೇಟಿ ನೀಡುವವರು ಲಕ್ಕಿ ಡ್ರಾ ಮೂಲಕ ಪ್ರತಿ ಗಂಟೆಗೆ ಒಂದು ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ಈ ಪ್ರದರ್ಶನದಲ್ಲಿ ದೇಶದ ಅತ್ಯುತ್ತಮ ಪೀಠೋಪಕರಣ ಮತ್ತು ಗೃಹ ಅಲಂಕಾರಿಕ ಉತ್ಪನ್ನಗಳು ಲಭ್ಯವಿವೆ. ದೇಶ ವಿದೇಶಗಳ ಪೀಠೋಪಕರಣ ಮತ್ತು ಗೃಹ ಅಲಂಕಾರಿಕ ಉತ್ಪನ್ನಗಳ ಉತ್ಪಾದಕರು, ಡೀಲರ್ಸ್‌, ಸಗಟು ಮಾರಾಟಗಾರರು, ವಿನ್ಯಾಸಗಾರರು ಭಾಗವಹಿಸಲಿದ್ದಾರೆ.

ವಿದೇಶಿ ಪಿಠೋಪಕರಣಗಳು, ಗ್ರಾಹಕರಿಗೆ ಮೆಚ್ಚುಗೆಯಾಗುವಂತ ಪಿಠೋಪಕರಣಗಳು, ಲೆದರ್‌ ಪೀಠೋಪಕರಣಗಳು, ಆಕರ್ಷಕ ಹಾಸಿಗೆ ಮತ್ತು ಸೋಫಾಗಳು, ಡೈನಿಂಗ್‌ ಟೇಬಲ್‌ಗಳು, ದಿಂಬುಗಳು, ಕರಕುಶಲ ವಸ್ತುಗಳು, ಕಾರ್ಪೆಟ್ಸ್‌, ದೇಹದಾಢ್ರ್ಯ ವಸ್ತುಗಳು, ಆಧುನಿಕ ಕಿಚನ್‌ ವಸ್ತುಗಳು, ಗೋಡೆ ಗಡಿಯಾರಗಳು, ಹಸ್ತ ಕೃತಿಗಳು, ಕಲಾಕೃತಿಗಳು, ಕಚೇರಿ ಪೀಠೋಪಕರಣಗಳು ಸೇರಿದಂತೆ ವಿವಿಧ ಬಗೆಯ ಪೀಠೋಪಕರಣ ಹಾಗೂ ಗೃಹ ಅಲಂಕಾರಿಗಳ ವಸ್ತುಗಳು ಒಂದೇ ವೇದಿಕೆಯಲ್ಲಿ ಗ್ರಾಹಕರ ಕೈಗೆ ನಿಲುಕುವ ದರದಲ್ಲಿ ಲಭ್ಯ. ಅಲ್ಲದೇ, ಪ್ರತಿ ದಿನ ಒಬ್ಬರು ಸೆಲಿಬ್ರೆಟಿ ಭೇಟಿ ನೀಡುವುದು ಈ ಎಕ್ಸ್‌ಪೋ ವಿಶೇಷತೆಯಾಗಿದೆ.

ಎಕ್ಸ್‌ಪೋಗೆ ಶರಣ್‌ ಭೇಟಿ

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ‘ಇಂಡಿಯನ್‌ ಫರ್ನಿಚರ್‌ ಆ್ಯಂಡ್‌ ಹೋಮ್‌ ಡೆಕೊರ್‌ ಎಕ್ಸ್‌ಪೋ‘ಗೆ ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಚಿತ್ರನಟ ಶರಣ್‌ ಭೇಟಿ ನೀಡಲಿದ್ದಾರೆ.

PREV
click me!

Recommended Stories

Karnataka Covid-19 Cases: ಕರ್ನಾಟಕದಲ್ಲಿ Covid-19 ಮತ್ತೆ ಏರಿಕೆ; 5 ಹೊಸ ಕೇಸ್ ದಾಖಲು, ಬೆಂಗಳೂರಿನಲ್ಲಿ ಒಂದು ಸಾವು!
Marathahalli Incident: ದೇವರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್; ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ!