ಹೆಸರು ಬದಲಿಸುವಂತೆ ಕರಾಚಿ ಬೇಕರಿಗೆ ಬೆದರಿಕೆ ಕರೆ

By Web DeskFirst Published Feb 28, 2019, 4:11 PM IST
Highlights

ನಾಮಫಲಕದಿಂದಲೇ ವಿವಾದಕ್ಕೆ ಸಿಲುಕಿರುವ ಇಂದಿರಾ ನಗರದ ‘ಕರಾಚಿ ಬೇಕರಿ’ಯ ಹೆಸರು ಬದಲಾಯಿಸುವಂತೆ ಭೂಗತ ಪಾತಕಿ ಹೆಸರಿನಲ್ಲಿ ಬೆದರಿಕೆ ಕರೆ ಬಂದಿದೆ.

 ಬೆಂಗಳೂರು :  ತನ್ನ ನಾಮಫಲಕದಿಂದಲೇ ವಿವಾದಕ್ಕೆ ಸಿಲುಕಿರುವ ಇಂದಿರಾ ನಗರದ ‘ಕರಾಚಿ ಬೇಕರಿ’ಯ ಹೆಸರು ಬದಲಾಯಿಸುವಂತೆ ಭೂಗತ ಪಾತಕಿ ವಿಕ್ಕಿ ಶೆಟ್ಟಿಹೆಸರಿನಲ್ಲಿ ಬೆದರಿಕೆ ಕರೆ ಬಂದಿದೆ.

ಬೇಕರಿಯ ವ್ಯವಸ್ಥಾಪಕ ಪಿ.ಸುಕುಮಾರ್‌ ಅವರಿಗೆ ಸೋಮವಾರ ಕರೆ ಬಂದಿದ್ದು, ಈ ಸಂಬಂಧ ಇಂದಿರಾನಗರ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಸೈಬರ್‌ ಅಧಿಕಾರಿಗಳ ನೆರವು ಪಡೆದು ವಿಕ್ಕಿ ಶೆಟ್ಟಿತಂಡದ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಮಜ್ದಾರ್ ಅಲ್ಲ ಪಾಕಿಸ್ತಾನ: ಸಮ್ಜೋತಾ ರೈಲು ರದ್ದು!

‘ನನ್ನ ಮೊಬೈಲ್‌ಗೆ ಸೋಮವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ. ತನ್ನನ್ನು ವಿಕ್ಕಿ ಶೆಟ್ಟಿಎಂದು ಪರಿಚಯಿಸಿಕೊಂಡ. ಬಳಿಕ ನಿನ್ನ ಮಾಲೀಕನಿಗೆ ತಿಳಿಸು. ಇಲ್ಲಿ ಪಾಕಿಸ್ತಾನದ ಹೆಸರಿನಲ್ಲಿ ಯಾರೂ ಬ್ಯುಸಿನೆಸ್‌ ಮಾಡಕೂಡದು. ನೀವು ಕೂಡಲೇ ಬೇಕರಿ ಹೆಸರು ಬದಲಾಯಿಸದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ. ಹೀಗಾಗಿ ಆ ವ್ಯಕ್ತಿಯನ್ನು ಬಂಧಿಸಿ ನಮಗೆ ಸೂಕ್ತ ರಕ್ಷಣೆ ಕೊಡಿ’ ಎಂದು ಸುಕುಮಾರ್‌ ಮನವಿ ಮಾಡಿದ್ದಾರೆ.

ಈ ದೂರಿನನ್ವಯ ಮೊದಲು ಸಾಮಾನ್ಯ ಪ್ರಕರಣ ದಾಖಲಿಸಿಕೊಂಡಿದ್ದೆವು. ಕೋರ್ಟ್‌ ಆದೇಶದ ಮೇರೆಗೆ ಐಪಿಸಿ 507ರ (ಬೆದರಿಕೆ ಕರೆ) ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಕರಾವಳಿ ಭಾಗದ ವಿಕ್ಕಿ ಶೆಟ್ಟಿವಿರುದ್ಧ ಕೊಲೆ, ಕೊಲೆ ಯತ್ನ, ಜೀವ ಬೆದರಿಕೆ, ಅಪಹರಣ ಸೇರಿದಂತೆ 40ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಏಳೆಂಟು ವರ್ಷಗಳಿಂದ ಭೂಗತನಾಗಿರುವ ಆತ, ತನ್ನ ಸಹಚರರ ಮೂಲಕ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದಾನೆ. 2017ರಲ್ಲಿ ಬಂಟ್ವಾಳದಲ್ಲಿ ನಡೆದ ಗ್ರಾಪಂ ಉಪಾಧ್ಯಕ್ಷ ಎ.ಅಬ್ದುಲ್‌ ಜಲೀಲ್‌ ಕೊಲೆ ಪ್ರಕರಣದಲ್ಲಿ ಆತನ ಸಹಚರರನ್ನು ಸ್ಥಳೀಯ ಬಂಧಿಸಿ ಜೈಲಿಗೆ ಕಳುಹಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಭಿನಂದನ್ ಬಿಡುಗಡೆಗೆ ಪಾಕಿಸ್ತಾನದಲ್ಲೇ ಹೆಚ್ಚಿದ ಆಗ್ರಹ!

ಇತ್ತೀಚಿಗೆ ಪುಲ್ವಾಮಾದಲ್ಲಿ ಉಗ್ರರ ದಾಳಿ ಬಳಿಕ ಸ್ಥಳೀಯ ಹಿಂದೂ ಪರ ಸಂಘಟನೆಗಳ ಕೆಲ ಕಾರ್ಯಕರ್ತರು, ಪಾಕಿಸ್ತಾನದ ನಗರದ ಹೆಸರು ಹೊಂದಿರುವ ಇಂದಿರಾನಗರದ ಕರಾಚಿ ಬೇಕರಿ ಮೇಲೆ ದಾಳಿ ನಡೆಸಿದ್ದರು. ಅದರ ಹೆಸರು ಬದಲಿಸುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ಮಾಡಿದ್ದರು. ಈ ಘಟನೆ ಸಂಬಂಧ 9 ಮಂದಿಯನ್ನು ಇಂದಿರಾ ನಗರ ಪೊಲೀಸರು ಬಂಧಿಸಿದ್ದರು.

click me!