ರೈತರಿಗೆ ಗುಡ್ ನ್ಯೂಸ್ : ಹಾಲಿನ ದರದಲ್ಲಿ ಏರಿಕೆ

By Web DeskFirst Published Feb 26, 2019, 9:07 AM IST
Highlights

ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಬಮೂಲ್‌)  ಮಾ.1ರಿಂದ ಅನ್ವಯವಾಗುವಂತೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ 1ರು.  ಪ್ರೋತ್ಸಾಹ ಧನ ಹೆಚ್ಚಿಸಲು ತೀರ್ಮಾನಿಸಿದೆ.

ಬೆಂಗಳೂರು :  ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಬಮೂಲ್‌)  ಮಾ.1ರಿಂದ ಅನ್ವಯವಾಗುವಂತೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ 1ರು.  ಪ್ರೋತ್ಸಾಹ ಧನ ಹೆಚ್ಚಿಸಲು ತೀರ್ಮಾನಿಸಿದೆ.

ಪ್ರಸ್ತುತ ಒಕ್ಕೂಟ ಪ್ರತಿ ಲೀಟರ್‌ ಹಾಲಿಗೆ 25.30 ರು. ನೀಡುತ್ತಿದೆ. ಅದರಲ್ಲಿ 24 ರು. ಹಾಲು ಉತ್ಪಾದಕರಿಗೆ ಮತ್ತು 1.30 ರು. ಸೊಸೈಟಿ ಸಿಗುತ್ತಿದೆ. ಬಮೂಲ್‌ ಮಾ.1ರಿಂದ 1 ರು. ಹೆಚ್ಚಿಸಲು ನಿರ್ಧರಿಸಿದ್ದು, ಪ್ರತಿ ಲೀಟರ್‌ ಹಾಲಿಗೆ 26.30 ರು.  ಲಭ್ಯವಾಗಲಿದೆ. ಬೆಂಗಳೂರು ಡೈರಿ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ 12 ತಾಲೂಕುಗಳ 1.20 ಲಕ್ಷ ಹಾಲು ಉತ್ಪಾದಕರು ಇದರ ಲಾಭ ಪಡೆಯಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರತಿ ದಿನ ಸರಾಸರಿ 16 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದು, ದರ ಹೆಚ್ಚಳದಿಂದ ಪ್ರತಿ ದಿನ 16 ಲಕ್ಷ ಹೆಚ್ಚುವರಿಯಾಗಿ ಬಮೂಲ್‌ ರೈತರಿಗೆ ನೀಡಬೇಕಾಗುತ್ತದೆ. ಈ ದರವು ಆಡಳಿತ ಮಂಡಳಿಯ ಮುಂದಿನ ಆದೇಶದವರೆಗೂ ಮುಂದುವರಿಯಲಿದೆ ಎಂದು ಬಮೂಲ್‌ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ.ನಾಗರಾಜಯ್ಯ ಮಾಹಿತಿ ನೀಡಿದ್ದಾರೆ.

30 ಕೋಟಿ ಲಾಭ ನಿರೀಕ್ಷೆ:  2018-19ನೇ ಆರ್ಥಿಕ ವರ್ಷದಲ್ಲಿ ಬಮೂಲ್‌ ಸುಮಾರು .30 ಕೋಟಿ ಲಾಭದ ನಿರೀಕ್ಷೆಯಲ್ಲಿದೆ. ಪ್ರಸ್ತುತ ಬಮೂಲ್‌ನಲ್ಲಿ 3,500 ಟನ್‌ ಹಾಲಿನ ಪುಡಿ ಮತ್ತು 2,500 ಟನ್‌ ಬೆಣ್ಣೆ ದಾಸ್ತಾನು ಇದೆ. ಅಲ್ಲದೇ ಕನಕಪುರದಲ್ಲಿ ಸ್ಥಾಪಿಸಲಾಗಿರುವ ಮೆಗಾ ಡೈರಿಯಲ್ಲಿ ಪ್ರತಿ ದಿನ ನಾಲ್ಕು ಲಕ್ಷ ಲೀಟರ್‌ ಹಾಲನ್ನು ಪೌಡರ್‌ ಆಗಿ ಪರಿವರ್ತಿಸಲಾಗುತ್ತಿದೆ. ಈ ಹಿಂದೆ ಬೇರೆ ಕಡೆಗಳಲ್ಲಿ ಹಾಲನ್ನು ಪೌಡರ್‌ ಆಗಿ ಪರಿವರ್ತಿಸಲು ಪ್ರತಿ ಕೆಜಿಗೆ .25ಗಿಂತ ಹೆಚ್ಚು ಹಣವನ್ನು ಬಮೂಲ್‌ ಖರ್ಚು ಮಾಡಬೇಕಿತ್ತು. ಆದರೆ, ಇದೀಗ ಕೇವಲ .10ರಿಂದ 12 ರು.ಗಳಲ್ಲಿ 1 ಕೆ.ಜಿ. ಹಾಲಿನ ಪುಡಿ ತಯಾರಿಸುತ್ತಿದೆ. ಇದರಿಂದ ಲೀಟರ್‌ಗೆ 12 ರಿಂದ 13 ಉಳಿತಾಯವಾಗುತ್ತಿದ್ದು, ಒಕ್ಕೂಟಕ್ಕೆ ಲಾಭವಾಗಲಿದೆ ಎಂದು ಡಿ.ಸಿ.ನಾಗರಾಜಯ್ಯ ತಿಳಿಸಿದ್ದಾರೆ.

ಮಾಚ್‌ರ್‍ನಲ್ಲಿ ಆರಂಭ:  ಮೆಗಾ ಡೈರಿಯಲ್ಲಿ ಈಗಾಗಲೇ ಚೀಸ್‌ ಉತ್ಪಾದನೆಯನ್ನು ಪ್ರಾಯೋ​ಗಿ​ಕ​ವಾಗಿ ಆರಂಭಿಸಿದ್ದು, ಅದ​ರ​ಲ್ಲಿ ಯಶಸ್ವಿಯಾಗಿದೆ. ಮಾಚ್‌ರ್‍ನಲ್ಲಿ ಚೀಸ್‌ ವಾಣಿಜ್ಯ ಉತ್ಪಾದನೆಗೆ ಚಾಲನೆ ನೀಡುವ ಯೋಜನೆ ಇದೆ. ಗುಜರಾತ್‌ನ ಅಮೂಲ್‌ನಲ್ಲಿ ದಿನಕ್ಕೆ 70 ಟನ್‌ ಹಾಗೂ ಪುಣೆಯ ಗೋವರ್ಧನ್‌ ಖಾಸಗಿ ಕಂಪನಿಯಲ್ಲಿ 40 ಟನ್‌ ಚೀಸ್‌ ತಯಾರಿಸಲಾಗುತ್ತಿದೆ. ಮೆಗಾ ಉತ್ಪನ್ನ ಘಟಕ ಪ್ರಾರಂಭವಾದರೆ ದೇಶದಲ್ಲೇ ಅತಿ ಹೆಚ್ಚು ಚೀಸ್‌ ಉತ್ಪಾದಿಸುವ ಮೂರನೇ ಘಟಕವಾಗಲಿದೆ.

ಪ್ರಸ್ತುತ 16 ಲಕ್ಷ ಲೀಟರ್‌ಗೂ ಅಧಿಕ ಹಾಲು ಬಮೂಲ್‌ನಲ್ಲಿ ಸಂಗ್ರಹಿಸುತ್ತಿದ್ದು, 9 ಲಕ್ಷ ಲೀಟರ್‌ ಹಾಲು, 1 ಲಕ್ಷ ಲೀಟರ್‌ ಮೊಸರು, 1 ಲಕ್ಷ ಲೀಟರ್‌ ಇತರೆ ಉತ್ಪನ್ನಗಳಿಗೆ ಬಳಕೆ ಮಾಡಲಾಗುತ್ತಿದೆ. ಉಳಿದಂತೆ 4 ಲಕ್ಷ ಲೀಟರ್‌ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತನೆ ಮಾಡುತ್ತಿದೆ. ಹಾಲಿನ ಪುಡಿ ಮಾಡಲು ಪ್ರತಿ ಲೀಟರ್‌ ಹಾಲಿಗೆ 10ರು. ಗಿಂತ ಹೆಚ್ಚು ನಷ್ಟಉಂಟಾಗುತ್ತಿದ್ದು, ಮೆಗಾ ಡೈರಿ ಆರಂಭದಿಂದ ಆ ಹೊರೆ ಕಡಿಮೆಯಾಗಿದೆ. ಚೀಸ್‌ ಜತೆಗೆ ವೇಪೌಡರ್‌ ಉತ್ಪಾದಿಸುವ ಗುರಿ ಇದೆ ಎಂದು ಬಮೂಲ್‌ ಅಧ್ಯಕ್ಷ ಅಂಜನಪ್ಪ ಬಿದರಗುಪ್ಪೆ ತಿಳಿಸಿದ್ದಾರೆ.

0.1 ಕೊಬ್ಬಿನ ಅಂಶ ಹೆಚ್ಚಿದ್ದರೆ 30 ಪೈಸೆ

ಬಮೂಲ್‌ಗೆ ನೀಡುವ ಪ್ರತಿ ಲೀಟರ್‌ ಹಾಲಿನಲ್ಲಿ ಕನಿಷ್ಠ ಶೇ 3.5ರಷ್ಟುಕೊಬ್ಬಿನ ಅಂಶ ಇರಬೇಕು, 0.1ರಷ್ಟುಕೊಬ್ಬಿನ ಅಂಶ ಇರುವ ಪ್ರತಿ ಲೀಟರ್‌ ಹಾಲಿಗೆ ಹೆಚ್ಚುವರಿಯಾಗಿ 30 ಪೈಸೆ ನೀಡುತ್ತಿದೆ.  0.7ರಷ್ಟುಕೊಬ್ಬಿನ ಅಂಶಕ್ಕೆ 2.10 ರು. ಹಾಲು ಉತ್ಪಾದಕರಿಗೆ ಕೊಡಲಾಗುತ್ತಿದೆ. ಪ್ರಸ್ತುತ ಬಮೂಲ್‌ ಹಾಲಿನ ಗುಣಮಟ್ಟ4.2 ಕೊಬ್ಬಿನಾಂಶ ಮತ್ತು 8.5 ಎಸ್‌ಎನ್‌ಎಫ್‌ (ಸಾಲಿಡ್‌ ನಾಟ್‌ ಫ್ಯಾಟ್‌) ಇದೆ ಎಂದು ಎಂದು ಬಮೂಲ್‌ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ.ನಾಗರಾಜಯ್ಯ ತಿಳಿಸಿದ್ದಾರೆ.

click me!