ಬೆಂಗಳೂರಿಗರಿಗೆ ಕಾದಿದೆ ನೀರಿನ ಶಾಕ್ !

By Web DeskFirst Published Jan 10, 2019, 1:49 PM IST
Highlights

ಬೆಂಗಳೂರು ನಾಗರಿಕರಿಗೆ ಶೀಘ್ರವೇ ಶಾಕ್ ಎದುರಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ವಾಸವಾಗಿರುವವರು ಇನ್ನು ಮುಂದೆ ನೀರಿಗೆ ಹೆಚ್ಚಿನ ದರ ಪಾವತಿ ಮಾಡಬೇಕಿದೆ. 

ಬೆಂಗಳೂರು :  ಬೆಂಗಳೂರಿಗರಿಗೆ ಹೊಸ ವರ್ಷದ ಆರಂಭದಲ್ಲೇ ಬಿಗ್ ಶಾಕ್ ಎದುರಾಗುತ್ತಿದೆ. ಶೀಘ್ರದಲ್ಲೇ ನೀರಿನ ದರ ಏರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.  ಬೆಂಗಳೂರು ಜಲಮಂಡಳಿ ಶೀಘ್ರದಲ್ಲೇ  ನೀರಿನ ದರ ಪರಿಷ್ಕರಣೆ ಆದೇಶ ಹೊರಡಿಸಲು ಸಿದ್ಧತೆ ನಡೆಸಿದೆ.  ಜಲಮಂಡಳಿಯಲ್ಲಿ ನೀರಿನ ದರ ಹೆಚ್ಚಳದ ಕುರಿತು ಚರ್ಚೆ ನಡೆಯುತ್ತಿದೆ. 

"

ಆರ್ಥಿಕವಾಗಿ ತತ್ತರಿಸುತ್ತಿರುವ ಜಲಮಂಡಳಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಸಿದ್ಧವಾಗಿದೆ.  ನೀಡಿರನ ದರ ಏರಿಕೆ ಸಂಬಂಧ ಪ್ರಸ್ತಾವನೆ ಸಲ್ಲಿಕೆ ಮಾಡಲು ಚಿಂತನೆ ನಡೆಸಿದ್ದು. ಶೇ. 30ರಿಂದ 35ರಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ. 

ಇದರಿಂದ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ನೀರಿನ ಮೇಲೆ ಹೆಚ್ಚಿನ ದರ ಪಾವತಿ ಮಾಡಬೇಕಾಗುತ್ತದೆ. 

2014 ರಲ್ಲಿ ಬೆಂಗಳೂರು ಜಲಮಂಡಳಿ ನೀರಿನ ದರ ಏರಿಕೆ ಮಾಡಿತ್ತು. ಇದೀಗ ಮತ್ತೆ ಹೆಚ್ಚಳ ಮಾಡುವ ಚಿಂತನೆ ನಡೆಸಿರುವ ಬಗ್ಗೆ ಸುವರ್ಣ ನ್ಯೂಸ್.ಕಾಂ ಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ. 

click me!